ಎಕ್ಸ್‌ಯುವಿ700 ಎಸ್‌ಯುವಿ ಫೀಚರ್ಸ್‌ಗಳಲ್ಲಿ ಕೆಲವು ಹೊಸ ಬದಲಾವಣೆ ಪರಿಚಯಿಸಿದ ಮಹೀಂದ್ರಾ
ಹೊಸ ಎಕ್ಸ್‌ಯುವಿ700 ಮೂಲಕ ಎಸ್‌ಯುವಿ ಕಾರು ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಮಹೀಂದ್ರಾ ಕಂಪನಿಯು ಗ್ರಾಹಕರ ಬೇಡಿಕೆ ಪೂರೈಕೆಯನ್ನು ಸರಳಗೊಳಿಸಲು ಹೊಸ ಕಾರಿನಲ್ಲಿ ಕೆಲವು ಫೀಚರ್ಸ್‌ಗಳನ್ನು ಬದಲಾವಣೆಗೊಳಿಸಿದ್ದು, ಹೊಸ ಬದಲಾವಣೆಯಲ್ಲಿ ಕೆಲವು ವೆರಿಯೆಂಟ್‌ಗಳಲ್ಲಿ ಪ್ರಮುಖ ಫೀಚರ್ಸ್ ಕಳೆದುಕೊಳ್ಳಲಿದ್ದರೆ ಇನ್ನು ಕೆಲವು ವೆರಿಯೆಂಟ್‌ಗಳಲ್ಲಿ ಹೊಸ ಫೀಚರ್ಸ್ ಸೇರಿಸಲಾಗಿದೆ.

ಹೊಸ ಕಾರು ಬಿಡುಗಡೆಯ ನಂತರ ಇದುವರೆಗೆ ಬರೋಬ್ಬರಿ 1.50 ಲಕ್ಷಕ್ಕೂ ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಂಡಿದ್ದು, ಕಾಯುವಿಕೆ ಅವಧಿಯ ವಿವಿಧ ವೆರಿಯೆಂಟ್ ಆಧರಿಸಿ ಗರಿಷ್ಠ ಎರಡು ವರ್ಷಗಳಿಗೆ ನಿಗದಿಪಡಿಸಲಾಗಿದೆ. ಆದರೆ ಹೊಸ ಕಾರಿಗೆ ಭಾರೀ ಪ್ರಮಾಣದ ಬೇಡಿಕೆ ನಡುವೆ ಸೆಮಿಕಂಡಕ್ಟರ್ ಕೊರತೆಯು ಇನ್ನು ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗದ ಕಾರಣಕ್ಕೆ ಉತ್ಪಾದನೆಯು ಕುಂಠಿತಗೊಳ್ಳುತ್ತಿದೆ.

ಸೆಮಿಕಂಡಕ್ಟರ್ ಕೊರತೆಯಿಂದಾಗಿ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ700 ಮಾದರಿಯ ಕೆಲವು ವೆರಿಯೆಂಟ್‌ಗಳಲ್ಲಿ ಸೆಮಿಕಂಡಕ್ಟರ್ ಆಧರಿತ ಕೆಲವು ಫೀಚರ್ಸ್‌ಗಳನ್ನು ಕೈಬಿಡಲಾಗಿದ್ದು, ಹೈ ಎಂಡ್ ಮಾದರಿಯಲ್ಲಿ ಕೆಲವು ಸ್ಟ್ಯಾಂಡರ್ಡ್ ಫೀಚರ್ಸ್ ಸೇರಿಸಲಾಗಿದೆ.

ಮಾಹಿತಿಗಳ ಪ್ರಕಾರ, ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ700 ಕಾರಿನ ಎಂಎಕ್ಸ್ ವೆರಿಯೆಂಟ್‌ನಲ್ಲಿ ರಿಯರ್ ಪಾರ್ಕಿಂಗ್ ಸೆನ್ಸಾರ್, ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ರಿಯರ್ ಸ್ಲಾಯ್ಲರ್ ಮತ್ತು ಫಾಲೋ ಮೀ ಹೆಡ್‌ಲ್ಯಾಂಪ್ ತೆಗೆದುಹಾಕಲಾಗಿದೆ.

ಹಾಗೆಯೇ ಎಎಕ್ಸ್3 ವೆರಿಯೆಂಟ್‌ನಲ್ಲಿ ರಿಯರ್ ವೈಪರ್, ಡಿಫಾಗರ್, ಸೆಲೆಕ್ಟಿವ್ ಡೋರ್ ಲಾಕ್/ಅನ್‌ಲಾಕ್ ಆಯ್ಕೆಗಳನ್ನು ತೆಗೆದುಹಾಕಿದ್ದು, ಎಎಕ್ಸ್5 ಮತ್ತು ಎಎಕ್ಸ್7 ವೆರಿಯೆಂಟ್‌ಗಳಲ್ಲಿ ಕಂಪನಿಯು ಸ್ಟೈಲಿಶ್ ಎಲ್ಇಡಿ ಸೀಕ್ವೆನ್ಶಿಯಲ್ ಟರ್ನ್ ಇಂಡಿಕೇಟರ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ವೈಶಿಷ್ಟ್ಯವನ್ನು ತೆಗೆದುಹಾಕಿದೆ.

ಆದರೆ ಟಾಪ್ ಎಂಡ್ ವೆರಿಯೆಂಟ್ ಆದ ಎಎಕ್ಸ್7ಎಲ್ ಆಟೋಮ್ಯಾಟಿಕ್ ವೆರಿಯೆಂಟ್‌ನಲ್ಲಿ ಮಾತ್ರ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಸ್ಟಾರ್ಟ್/ಸ್ಟಾಪ್ ಫಂಕ್ಷನ್ ಮತ್ತು ಸೀಕ್ವೆನ್ಶಿಯಲ್ ಟರ್ನ್ ಇಂಡಿಕೇಟರ್‌ಗಳನ್ನು ನೀಡಲಾಗಿದ್ದು, ಎಎಕ್ಸ್5 ಮತ್ತು ಎಎಕ್ಸ್7 ವೆರಿಯೆಂಟ್‌ಗಳಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ವೈಶಿಷ್ಟ್ಯವನ್ನು ತೆಗೆದುಹಾಕಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸೆಮಿಕಂಡಕ್ಟ್ ಕೊರತೆಯ ಪರಿಣಾಮ ಕುಂಠಿತಗೊಳ್ಳುತ್ತಿರುವ ಕಾರು ಉತ್ಪಾದನೆ ಹೆಚ್ಚಿಸಲು ಈ ಕ್ರಮಕೈಗೊಂಡಿರುವುದಾಗಿ ಕಂಪನಿಯು ಹೇಳಿಕೊಂಡಿದ್ದು, 1.50 ಲಕ್ಷ ಬುಕಿಂಗ್‌ನಲ್ಲಿ ಕಂಪನಿಯು ಇದುವರೆಗೆ 35 ಸಾವಿರ ಯುನಿಟ್‌ಗಳನ್ನು ಮಾತ್ರ ವಿತರಣೆ ಮಾಡಿದೆ.

ಹೀಗಾಗಿ ಸೆಮಿಕಂಡಕ್ಟರ್ ಲಭ್ಯತೆ ಆಧರಿಸಿ ವಿವಿಧ ವೆರಿಯೆಂಟ್‌ಗಳ ಫೀಚರ್ಸ್ ನಿರ್ಧರಿಸಿರುವ ಕಂಪನಿಯು ಶೀಘ್ರದಲ್ಲಿಯೇ ಉತ್ಪಾದನೆ ಹೆಚ್ಚಿಸುವ ಯೋಜನೆಯಲ್ಲಿದ್ದು, ಹೊಸ ಫೀಚರ್ಸ್ ಬದಲಾವಣೆ ನಂತರ ಬೆಲೆಯಲ್ಲಿ ಯಾವುದೇ ಏರಿಳಿತ ಮಾಡಲಾಗಿಲ್ಲ.

ಹೊಸ ಎಕ್ಸ್‌ಯುವಿ700 ಕಾರು ಸದ್ಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.88 ಲಕ್ಷಕ್ಕೆ ಮತ್ತು ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿರುವ ಟಾಪ್ ಎಂಡ್ ಮಾದರಿಯನ್ನು ರೂ. 24.58 ಲಕ್ಷ ಬೆಲೆ ಹೊಂದಿದೆ.

ಹೊಸ ಕಾರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರಿನಲ್ಲಿ ಕಂಪನಿಯು 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ.

2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(6-ಸ್ಪೀಡ್ ಎಂಟಿ),450-ಎನ್ಎಂ ಟಾರ್ಕ್(6-ಸ್ಪೀಡ್ ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

ಎಕ್ಸ್‌ಯುವಿ700 ಮಾದರಿಯಲ್ಲಿ ಎಂಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7 ಮತ್ತು ಎಎಕ್ಸ್7 ಲಗ್ಷುರಿ ವೆರಿಯೆಂಟ್ ಖರೀದಿಗೆ ಲಭ್ಯವಿದ್ದು, ಆಕರ್ಷಕ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿವೆ. ಕಂಪನಿಯೇ ಜೋಡಣೆ ಮಾಡುವ 7 ಸೀಟರ್ ಮಾದರಿಗಳನ್ನು ಹೊರತುಪಡಿಸಿ 5 ಸೀಟರ್ ಹೊಂದಿರುವ ಮಾದರಿಗಳಲ್ಲಿ 7 ಸೀಟರ್ ಬಯಸುವ ಗ್ರಾಹಕರು ಹೆಚ್ಚುವರಿ ರೂ. 70 ಸಾವಿರ ಪಾವತಿ ಮಾಡಬೇಕಾಗುತ್ತದೆ.

ಹೊಸ ಕಾರಿನಲ್ಲಿ ಹೈ ಎಂಡ್ ಮಾದರಿಯಲ್ಲಿ ಹೆಚ್ಚಿನ ಫೀಚರ್ಸ್‌ಗಳಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನ್ವಯಿಸುವಂಕೆ ಫ್ರಂಟ್ ಫಾಸಿಯಾದೊಂದಿಗೆ ಸಂಯೋಜನೆಗೊಂಡಿರುವ ಎಲ್ಇಡಿ ಹೆಡ್‌ಲ್ಯಾಂಪ್ಸ್, ಸಿ ಆಕಾರದಲ್ಲಿರುವ ಎಲ್ಇಡಿ ಡಿಆರ್‌ಎಲ್ಎಸ್, ಸಿಲ್ವರ್ ಕೋಟಿಂಗ್ ಹೊಂದಿರುವ ಫ್ಲಕ್ಸ್ ಸ್ಕೀಡ್ ಪ್ಲೇಟ್, 18-ಇಂಚಿನ ಡ್ಯುಯಲ್ ಟೋನ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಪಡೆದುಕೊಳ್ಳುತ್ತವೆ.

ಎಕ್ಸ್‌ಯುವಿ700 ಮಾದರಿಯ ಸೈಡ್ ಪ್ರೋಫೈಲ್ ಮತ್ತು ಹಿಂಬದಿಯ ವಿನ್ಯಾಸವು ಕೂಡಾ ಸಾಕಷ್ಟು ಹೊಸತನದಿಂದ ಕೂಡಿದ್ದು, ಹಿಂಬದಿಯ ಫೆಂಡರ್‌ನೊಂದಿಗೆ ಹರಡಿಕೊಂಡಿರುವ ವಿಭಜಿತ ಟೈಲ್‌ಲ್ಯಾಂಪ್, ವಿನೂತನ ವಿನ್ಯಾಸದ ಬಂಪರ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ರೂಫ್ ರೈಲ್ಸ್, ಶಾರ್ಕ್ ಫಿನ್ ಆಂಟೆನಾ, ರೂಫ್ ಸ್ಪಾಯ್ಲರ್ ಪಡೆದುಕೊಂಡಿದೆ.

ಹಾಗೆಯೇ ಹೊಸ ಕಾರಿನಲ್ಲಿ 10.25 ಇಂಚಿನ ಡಿಜಿಟಲ್ ಮತ್ತು ಇನ್ಪೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ, ಅಮೆಜಾನ್ ಅಲೆಕ್ಸಾ, 60 ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದಾದ ಕಾರ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಅಸಿಸ್ಟೆನ್ಸ್, ಆ್ಯಂಬಿಯೆಂಟ್ ಲೈಟಿಂಗ್ಸ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, 2 ಮತ್ತು 3ನೇ ಸಾಲಿನಲ್ಲೂ ಎಸಿ ವೆಂಟ್ಸ್, ಪನೋರಮಿಕ್ ಸನ್‌ರೂಫ್ ಮತ್ತು ಏರ್ ಪ್ಯೂರಿಫ್ಲೈರ್ ಸೌಲಭ್ಯಗಳಿವೆ.

ಅಡ್ವಾನ್ಸ್ ಡ್ರೈವರ್ ಅಸಿಸ್ಟೆಡ್ ಸಿಸ್ಟಂ ಸೌಲಭ್ಯವು ಹೊಸ ಕಾರಿನ ಪ್ರಮುಖ ಸುರಕ್ಷಾ ಸೌಲಭ್ಯವಾಗಿದ್ದು, ಇದರ ಜೊತೆಗೆ 7-ಏರ್‌ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಲಾಕಿಂಗ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್ ಬೂಸ್ಟರ್, ವ್ಯಯಕ್ತಿಕರಣಗೊಳಿಸಿದ ಸೇಫ್ಟಿ ಅಲರ್ಟ್, ಡ್ರೈವರ್ ಡ್ರಾಸಿನೆಸ್ ಅಲರ್ಟ್, ಲೆನ್ ಕಿಪ್ ಅಸಿಸ್ಟ್ ಸೌಲಭ್ಯ ಹೊಂದಿದೆ.


Click it and Unblock the Notifications