ಎಕ್ಸ್‌ಯುವಿ700 ಎಸ್‌ಯುವಿ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಪ್ರಾಬಲ್ಯ ಮುಂದುವರೆಸಿದ್ದು, ಕಂಪನಿಯು ಪ್ರಮುಖ ಎಸ್‌ಯುವಿ ಕಾರುಗಳಿಗಾಗಿ ಕಂಪನಿಯು 2.50 ಲಕ್ಷಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿದೆ.

ಎಕ್ಸ್‌ಯುವಿ700 ಎಸ್‌ಯುವಿ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಹೀಂದ್ರಾ

ಎಸ್‌ಯುವಿ ಕಾರುಗಳ ವಿಭಾಗದಲ್ಲಿ ಸದ್ಯ ಎಕ್ಸ್‌ಯುವಿ700 ಮಾದರಿಗಾಗಿ ಹೆಚ್ಚಿನ ಬುಕಿಂಗ್ ಹೊಂದಿರುವ ಮಹೀಂದ್ರಾ ಕಂಪನಿಯು 1.50 ಲಕ್ಷಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿದ್ದು, ಕಾರು ವಿತರಣೆಗೆ ಹೆಚ್ಚಿನ ಕಾಯುವಿಕೆ ಅವಧಿಯನ್ನು ನಿಗದಿಪಡಿಸಿದೆ. ಆದರೆ ಧೀರ್ಘ ಕಾಲದ ಕಾಯುವಿಕೆ ಅವಧಿಯು ಮಾರಾಟ ಮೇಲೆ ಪರಿಣಾಮ ಬೀರುತ್ತಿದ್ದು, ಕಾಯುವಿಕೆಯ ಅವಧಿಯನ್ನು ತಗ್ಗಿಸಲು ಹೊಸ ಯೋಜನೆ ರೂಪಿಸಿದೆ.

ಎಕ್ಸ್‌ಯುವಿ700 ಎಸ್‌ಯುವಿ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಹೀಂದ್ರಾ

ಕಾರು ಉತ್ಪಾದನಾ ಸಾಮರ್ಥ್ಯವನ್ನು ಆಧರಿಸಿ ಮಹೀಂದ್ರಾ ಕಂಪನಿಯು ಇದೀಗ ಎಸ್‌ಯುವಿ ಮಾದರಿಗಳ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದ್ದು, ಹೊಸ ಯೋಜನೆಯಿಂದ ಎಕ್ಸ್‌ಯುವಿ700 ಕಾಯುವಿಕೆ ಅವಧಿಯು ಮುಂದಿನ ದಿನಗಳಲ್ಲಿ ತುಸು ತಗ್ಗುವ ಸಾಧ್ಯತೆಗಳಿವೆ.

ಎಕ್ಸ್‌ಯುವಿ700 ಎಸ್‌ಯುವಿ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಹೀಂದ್ರಾ

ಎಕ್ಸ್‌ಯುವಿ700 ಬಿಡುಗಡೆಯ ನಂತರ ಇದುವರೆಗೆ ಕಂಪನಿಯು 1.50 ಲಕ್ಷ ಬುಕಿಂಗ್‌ನಲ್ಲಿ ಸುಮಾರು 40 ಸಾವಿರ ಯುನಿಟ್ ಮಾತ್ರ ವಿತರಿಸಿದ್ದು, ಇನ್ನುಳಿದ ಬುಕಿಂಗ್ ಪೂರ್ಣಗೊಳಿಸಲು ಕನಿಷ್ಠ 2 ವರ್ಷಗಳು ಬೇಕಾಬಹುದು. ಹೀಗಾಗಿ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಲು ಮುಂದಾಗಿರುವ ಕಂಪನಿಯು ಸದ್ಯ ಉತ್ಪಾದನೆ ಕೈಗೊಳ್ಳುತ್ತಿರುವ 4,500 ಯುನಿಟ್ ಅನ್ನು 6 ಸಾವಿರ ಯುನಿಟ್‌ಗೆ ಹೆಚ್ಚಿಸಲಾಗುತ್ತಿದೆ.

ಎಕ್ಸ್‌ಯುವಿ700 ಎಸ್‌ಯುವಿ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಹೀಂದ್ರಾ

ಹೀಗಾಗಿ ಎಕ್ಸ್‌ಯುವಿ700 ಕಾರಿಗೆ ಬುಕಿಂಗ್ ಮಾಡಿ ಕಾಯುತ್ತಿರುವ ಗ್ರಾಹಕರಿಗೆ ನಿಗದಿತ ಅವಧಿಗಿಂತ ಮುಂಚಿತವಾಗಿ ಕಾರು ವಿತರಣೆಯಾಗಲಿದ್ದು, ಹೊಸ ಕಾರಿನ ಟಾಪ್ ವೆರಿಯೆಂಟ್‌ಗಳ ವಿತರಣೆಗೆ ಕಂಪನಿಯು ಹೆಚ್ಚಿನ ಆದ್ಯತೆ ನೀಡುತ್ತಿದೆ.

ಎಕ್ಸ್‌ಯುವಿ700 ಎಸ್‌ಯುವಿ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಹೀಂದ್ರಾ

ಜೊತೆಗೆ ಎಕ್ಸ್‌ಯುವಿ700 ಎಸ್‌ಯುವಿಯಲ್ಲಿ ಕಂಪನಿಯು ಕೆಲವು ಹೊಸ ಬದಲಾವಣೆಗಳೊಂದಿಗೆ ಬೆಲೆ ಇಳಿಕೆ ಘೋಷಣೆ ಮಾಡಿದ್ದು, ಹೊಸ ಕಾರಿಗೆ ಹೆಚ್ಚಿನ ಬೇಡಿಕೆಯಿದ್ದರೂ ಸೆಮಿಕಂಡಕ್ಟರ್ ಕೊರತೆಯು ಉತ್ಪಾದನಾ ಪ್ರಮಾಣ ಹೆಚ್ಚಳಕ್ಕೆ ಅಡ್ಡಿಯಾಗುತ್ತಿರುವುದರಿಂದ ವಿತರಣೆ ಹೆಚ್ಚಿಸುವುದಕ್ಕಾಗಿ ಸೆಮಿಕಂಡಕ್ಟರ್ ಆಧರಿಸಿದ ಕೆಲವು ಫೀಚರ್ಸ್ ಕೈಬಿಡಲಾಗಿದೆ.

ಎಕ್ಸ್‌ಯುವಿ700 ಎಸ್‌ಯುವಿ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಹೀಂದ್ರಾ

ಫೀಚರ್ಸ್ ಕಡಿತದಿಂದಾಗಿ ಹೊಸ ಎಕ್ಸ್‌ಯುವಿ700 ಪ್ರಮುಖ ವೆರಿಯೆಂಟ್‌ಗಳ ಉತ್ಪಾದನೆಯು ವೇಗ ಪಡೆದುಕೊಳ್ಳುತ್ತಿದ್ದು, ಉತ್ಪಾದನೆ ಹೆಚ್ಚಳ ನಂತರ ಕಂಪನಿಯು ಹೊಸ ಕಾರಿನ ಬೆಲೆಯಲ್ಲಿ ಇಳಿಕೆ ಮಾಡಿರುವುದಾಗಿ ಹೇಳಿಕೊಂಡಿದೆ.

ಎಕ್ಸ್‌ಯುವಿ700 ಎಸ್‌ಯುವಿ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಹೀಂದ್ರಾ

ಎಕ್ಸ್‌ಯುವಿ700 ಎಸ್‌ಯುವಿಯ ಪ್ರಮುಖ ವೆರಿಯೆಂಟ್‌ಗಳ ಬೆಲೆಯಲ್ಲಿ ಕಂಪನಿಯು ಎಕ್ಸ್‌ಶೋರೂಂ ದರದಲ್ಲಿ ಸುಮಾರು ರೂ. 6 ಸಾವಿರದಷ್ಟು ಬೆಲೆ ಇಳಿಕೆ ಮಾಡಿದ್ದು, ಹೊಸ ದರಪಟ್ಟಿಯಲ್ಲಿ ಇದೀಗ ಆರಂಭಿಕ ಮಾದರಿಯು 13.18 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 24.58 ಲಕ್ಷ ಬೆಲೆ ಹೊಂದಿದೆ.

ಎಕ್ಸ್‌ಯುವಿ700 ಎಸ್‌ಯುವಿ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಹೀಂದ್ರಾ

ಹೊಸ ಎಕ್ಸ್‌ಯುವಿ700 ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದೆ.

ಎಕ್ಸ್‌ಯುವಿ700 ಎಸ್‌ಯುವಿ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಹೀಂದ್ರಾ

2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(6-ಸ್ಪೀಡ್ ಎಂಟಿ),450-ಎನ್ಎಂ ಟಾರ್ಕ್(6-ಸ್ಪೀಡ್ ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

ಎಕ್ಸ್‌ಯುವಿ700 ಎಸ್‌ಯುವಿ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಹೀಂದ್ರಾ

ಎಕ್ಸ್‌ಯುವಿ700 ಮಾದರಿಯಲ್ಲಿ ಎಂಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7 ಮತ್ತು ಎಎಕ್ಸ್7 ಲಗ್ಷುರಿ ವೆರಿಯೆಂಟ್‌ ಖರೀದಿಗೆ ಲಭ್ಯವಿದ್ದು, ಆಕರ್ಷಕ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿವೆ. ಕಂಪನಿಯೇ ಜೋಡಣೆ ಮಾಡುವ 7 ಸೀಟರ್ ಮಾದರಿಗಳನ್ನು ಹೊರತುಪಡಿಸಿ 5 ಸೀಟರ್ ಹೊಂದಿರುವ ಮಾದರಿಗಳಲ್ಲಿ 7 ಸೀಟರ್ ಬಯಸುವ ಗ್ರಾಹಕರು ಹೆಚ್ಚುವರಿ ರೂ. 70 ಸಾವಿರ ಪಾವತಿ ಮಾಡಬೇಕಾಗುತ್ತದೆ.

ಎಕ್ಸ್‌ಯುವಿ700 ಎಸ್‌ಯುವಿ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಹೀಂದ್ರಾ

ಇದರೊಂದಿಗೆ ಹೊಸ ಕಾರು ಸುರಕ್ಷಾ ವಿಚಾರವಾಗಿ ಭಾರತದಲ್ಲಿ 'ಸೇಫರ್ ಛಾಯ್ಸ್' ಪ್ರಶಸ್ತಿ ಪಡೆದ ಮೊದಲ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಹೊಸ ಕಾರಿನಲ್ಲಿ ಪ್ರಯಾಣಿಕರ ಗರಿಷ್ಠ ಸುರಕ್ಷತೆಗಾಗಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ.

ಎಕ್ಸ್‌ಯುವಿ700 ಎಸ್‌ಯುವಿ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಹೀಂದ್ರಾ

ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್‌ಟೆಸ್ಟಿಂಗ್‌ನಲ್ಲಿ ಎಕ್ಸ್‌ಯುವಿ700 ಮಾದರಿಯು ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ ನೀಡುವ 17 ಅಂಕಗಳಲ್ಲಿ 16.03 ಅಂಕಗಳನ್ನು ಮತ್ತು ಮಕ್ಕಳ ಸುರಕ್ಷತೆಗಾಗಿ ನೀಡಲಾಗುವ 49 ಅಂಕಗಳಲ್ಲಿ 41.66 ಅಂಕಗಳೊಂದಿಗೆ ಗರಿಷ್ಠ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದ್ದು, ಇದೀಗ ಹೊಸ ಕಾರಿನ ಸುರಕ್ಷಾ ಸೌಲಭ್ಯಗಳನ್ನು ಆಧರಿಸಿ ಗ್ಲೊಬಲ್ ಎನ್‌ಸಿಎಪಿ ಸಂಸ್ಥೆಯು ಮತ್ತೊಂದು ಅತ್ಯುನ್ನತ ಪ್ರಶಸ್ತಿ ನೀಡಿದೆ.

ಎಕ್ಸ್‌ಯುವಿ700 ಎಸ್‌ಯುವಿ ಕಾಯುವಿಕೆ ಅವಧಿಯನ್ನು ತಗ್ಗಿಸಿದ ಮಹೀಂದ್ರಾ

ಹೊಸ ಕಾರಿನಲ್ಲಿರುವ ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟಂ ಸಿಸ್ಟಂ ಸೌಲಭ್ಯವನ್ನು ಪ್ರತ್ಯೇಕವಾಗಿ ಪರೀಕ್ಷಿಸಿರುವ ಗ್ಲೊಬಲ್ ಎನ್‌ಸಿಎಪಿ ಸಂಸ್ಥೆಯು ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್ ಮತ್ತು ಪೆಡೆಟ್ರೆಷಿಯನ್ ಪ್ರೊಟೆಕ್ಷನ್ ಸೌಲಭ್ಯಗಳಿಗೆಗಾಗಿ 'ಸೇಫರ್ ಛಾಯ್ಸ್' ಪ್ರಶಸ್ತಿ ನೀಡಿದೆ.

Article Published On: Wednesday, September 14, 2022, 13:45 [IST]
English summary
Mahindra xuv700 suv waiting periods down by 3 months soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+