ಇನ್ನೋವಾ ಹೈಕ್ರಾಸ್‌ಗೆ ಸೆಡ್ಡುಹೊಡೆಯಲು ಹೊಸ ಹೈಬ್ರಿಡ್ MPV ಬಿಡುಗಡೆಗೆ ಸಜ್ಜಾಗುತ್ತಿದೆ ಮಾರುತಿ!
2023 ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ಜಿಮ್ನಿ 5-ಡೋರ್ ಮತ್ತು ಬಲೆನೊ ಆಧಾರಿತ ಕ್ರಾಸ್‌ಒವರ್‌ನ YTB ಅನ್ನು ಪ್ರದರ್ಶಿಸಲು ಕಂಪನಿ ಸಜ್ಜಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇದೀಗ ಕೆಲವು ವರದಿಗಳ ಪ್ರಕಾರ, ಮಾರುತಿ 2023 ರಲ್ಲಿ ಟೊಯೋಟಾ ಇನ್ನೋವಾ ಹೈಕ್ರಾಸ್ ಆಧಾರಿತ ಹೊಸ MPV ಅನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಮಾರುತಿ ಸುಜುಕಿ ತನ್ನ ಹೊಸ ಎಂಪಿವಿಯನ್ನು 2023 ರಲ್ಲಿ ಅನಾವರಣಗೊಳಿಸಿ ಅದೇ ವರ್ಷ ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ. ಹೊಸ ಮಾರುತಿ ಸುಜುಕಿ MPV ಮೂಲಭೂತವಾಗಿ ಟೊಯೊಟಾ ಇನ್ನೋವಾ ಹೈಕ್ರಾಸ್ ಅನ್ನು ಆಧರಿಸಿರುತ್ತದೆ. ಅಂದರೆ ಇತ್ತೀಚೆಗೆ ಬಿಡುಗಡೆಯಾಗಿರುವ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್‌ಗಳಂತೆಯೇ, ಮಾರುತಿ ಸುಜುಕಿಯ ಹೊಸ MPV ಟೊಯೊಟಾ ಹೈಕ್ರಾಸ್‌ನ ಎಲ್ಲಾ ತಂತ್ರಜ್ಞಾನ ಹಾಗೂ ಎಂಜಿನ್ ವಿಶೇಷತೆಗಳನ್ನು ಹಂಚಿಕೊಳ್ಳಲಿದೆ.

ಮಾರುತಿ ಹಾಗೂ ಟೊಯೊಟಾ ಕಂಪನಿಗಳು ಪಾಲುದಾರಿಕೆಯಲ್ಲಿ ಕಾರುಗಳನ್ನು ಅಭಿವೃದ್ಧಿಗೊಳಿಸಿದರೂ ಮಾರುಕಟ್ಟೆಯಲ್ಲಿ ಮಾತ್ರ ಪೈಪೋಟಿ ಎದುರಿಸಬೇಕಾಗುತ್ತದೆ. ಅಂದರೆ ಎರಡೂ ಕಂಪನಿಗಳು ತಮ್ಮ ಕಾರುಗಳನ್ನು ಪ್ರತ್ಯೇಕವಾಗಿ ತಮ್ಮ ಬ್ರಾಂಡ್‌ನ ಅಡಿ ಕಾರುಗಳನ್ನು ಮಾರಾಟ ಮಾಡುವುದರಿಂದ ಆಯಾ ಕಂಪನಿಗಳ ನಡುವೆ ಪೈಪೋಟಿ ಇರುತ್ತದೆ. ಈ ಮೂಲಕ ಒಂದೇ ಪ್ಲಾರ್ಟ್ ಫಾರ್ಮ್ ಅನ್ನು ಹಂಚಿಕೊಂಡರೂ ಕೊನೆಗೆ ಮಾರುಕಟ್ಟೆಯಲ್ಲಿ ಎಂಪಿವಿ ವಿಭಾಗದಲ್ಲಿ ಪ್ರತಿಸ್ಪರ್ಧಿಗಳಾಗುವುದರಿಂದ ಮುಂಬರಲಿರುವ ಮಾರುತಿ ಎಂಪಿವಿ ಟೊಯೊಟಾ ಹೈಕ್ರಾಸ್‌ಗೆ ಯಾವ ಮಟ್ಟಿಗೆ ಪೈಪೋಟಿ ನೀಡಲಿದೆ ಎಂಬುದನ್ನು ನೋಡಬೇಕಿದೆ.
ಟೊಯೊಟಾ ಕಂಪನಿಯ ಬಿಡದಿ ಮೂಲದ ಉತ್ಪಾದನಾ ಘಟಕದಲ್ಲಿ ಹೊಸ ವಾಹನವನ್ನು ತಯಾರಿಸುವ ಸಾಧ್ಯತೆಯಿದೆ. ಮಾರುತಿಯ ಹೊಸ MPV, ಟೊಯೊಟಾ ಹೈಕ್ರಾಸ್‌ನಂತೆಯೇ ಅದೇ ಪವರ್‌ಟ್ರೇನ್ ಮತ್ತು ಅಂಡರ್‌ಪಿನ್ನಿಂಗ್‌ಗಳನ್ನು ಬಳಸಿಕೊಂಡರೂ, ಎರಡೂ ಕಾರುಗಳ ಡಿಸೈನ್‌ನಲ್ಲಿ ಸೂಕ್ಷ್ಮ ಬದಲಾವಣೆಗಳು ಇರುತ್ತವೆ. ಸದ್ಯ ಇದೀಗ ಅನಾವರಣಗೊಂಡಿರುವ ಹೊಸ ಟೊಯೊಟಾ ಹೈಕ್ರಾಸ್ ಎಂಪಿವಿಗಿಂತಲೂ ಎಸ್‌ಯುವಿಯಂತೆ ಹೆಚ್ಚಾಗಿ ಕಾಣುತ್ತಿದೆ. ಈ ಮೂಲಕ ಮಾರುತಿ ಕೂಡ ಎಸ್‌ಯುವಿ ಡಿಸೈನ್ ಅನ್ನು ಹೊರತರಲಿದೆಯೇ ಕಾದು ನೋಡಬೇಕು.
ಮಾರುತಿ MPV ಯಲ್ಲಿ 10.1 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ, ಎಲೆಕ್ಟ್ರಿಫೈಡ್ ಡ್ರೈವರ್ ಸೀಟ್, ಮೆಮೊರಿ ಫಂಕ್ಷನ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್‌ನಂತಹ ಹೆಚ್ಚಿನ ವೈಶಿಷ್ಟ್ಯಗಳು ತುಂಬಿರುತ್ತವೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಕುತೂಹಲಕಾರಿಯಾಗಿ, ಹೊಸ MPV ಯ ಬಿಡುಗಡೆಯು 2023 ರ ಹಬ್ಬದ ಸೀಸನ್‌ನಲ್ಲಿ ನಡೆಯಲಿದೆ. ADAS ತಂತ್ರಜ್ಞಾನವನ್ನು ಪಡೆಯುವ ಬ್ರ್ಯಾಂಡ್‌ನ ಪೋರ್ಟ್‌ಫೋಲಿಯೊದಲ್ಲಿ ಇದು ಮೊದಲ ವಾಹನವಾಗಿದೆ ಎಂದು ಕೂಡ ಹೇಳಲಾಗುತ್ತಿದೆ.
ಜಿಮ್ನಿ 5-ಡೋರ್ ಮತ್ತು ಬಲೆನೊ ಆಧಾರಿತ ಕ್ರಾಸ್ಒವರ್ ಅನಾವರಣ ಯಾವಾಗ?
ಸ್ವದೇಶಿ ಕಾರು ತಯಾರಕ ಕಂಪನಿ ಮಾರುತಿ 2023 ಆಟೋ ಎಕ್ಸ್‌ಪೋದಲ್ಲಿ ಎರಡು ಹೊಸ ಉತ್ಪನ್ನಗಳನ್ನು ಅನಾವರಣಗೊಳಿಸಲಿದೆ. ಇದರಲ್ಲಿ ಮೊದಲನೆಯದು Baleno-ಆಧಾರಿತ ಕ್ರಾಸ್ಒವರ್ ಆಗಿರುತ್ತದೆ, ಆಂತರಿಕವಾಗಿ YTB ಎಂಬ ಸಂಕೇತನಾಮವನ್ನು ಈ ಕಾರು ಹೊಂದಿದೆ. ಇದು ಏಪ್ರಿಲ್ 2023 ರಲ್ಲಿ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಎರಡನೇ ಉತ್ಪನ್ನವು ಬಹುನಿರೀಕ್ಷಿತ ಜಿಮ್ನಿ 5-ಡೋರ್ ವರ್ಷನ್ ಆಗಿರುತ್ತದೆ. ಇದನ್ನು ಮಹೀಂದ್ರ ಥಾರ್ ವಿರುದ್ಧ ಸ್ಪರ್ಧಿಸಲು ಮಾರುಕಟ್ಟೆಗೆ ತರಲಾಗುತ್ತದೆ. ಆಗಸ್ಟ್ 2023 ರ ಸುಮಾರಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.
ಬಲೆನೊ ಕ್ರಾಸ್‌ಒವರ್ ಬಲೆನೊದಂತೆಯೇ ಅದೇ ಅಂಡರ್‌ಪಿನ್ನಿಂಗ್‌ಗಳನ್ನು (ವಿನ್ಯಾಸ, ವೈಶಿಷ್ಟ್ಯ) ಒಳಗೊಂಡು ಬರಲಿದೆ, ಆದರೆ ಎಂಜಿನ್ 1.0- ಲೀಟರ್ ಬೂಸ್ಟರ್‌ಜೆಟ್ ಘಟಕದಿಂದ ಮಾಡಲಾಗುತ್ತದೆ. ಜಿಮ್ನಿ- 5 ಡೋರ್ಸ್ ವರ್ಷನ್ ಸುಜುಕಿ ಆಲ್‌ಗ್ರಿಪ್ ಪ್ರೊ 4 ಡಬ್ಲ್ಯೂಡಿ ಸಿಸ್ಟಮ್‌ಗೆ ಜೋಡಿಸಲಾದ 1.5- ಲೀಟರ್ ಕೆ- 15 ಸಿ ಎಂಜಿನ್ ಅನ್ನು ಒಳಗೊಂಡಿರಲಿದೆ. ಮಾರುತಿಯು ಜಿಮ್ನಿ SUV ಯೊಂದಿಗೆ ಮೈಲ್ಡ್ ಹೈಬ್ರಿಡ್ ವ್ಯವಸ್ಥೆಯನ್ನು ನೀಡಬಹುದು ಎಂದು ಹೇಳಲಾಗುತ್ತಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಟೊಯೊಟಾ ಇನ್ನೋವಾ ಹೈಕ್ರಾಸ್ ಆಧಾರಿತ ಮಾರುತಿ ಸುಜುಕಿಯ ಹೊಸ MPV ಕಂಪನಿಯ ಮತ್ತು ಗ್ರಾಹಕರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ಮಾರುತಿ ಕಂಪನಿಯ ಮಾರಾಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇನ್ನೋವಾ ಹೈಕ್ರಾಸ್‌ನ ಬೆಲೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಅದು ಮಾರುಕಟ್ಟೆಯಲ್ಲಿ ಎರಡೂ ವಾಹನಗಳ ಕಾರ್ಯಕ್ಷಮತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಜೊತೆಗೆ ಈ ಎರಡೂ ವಾಹನಗಳು ಮುಂಬರು ದಿನಗಳಲ್ಲಿ ಎಂಪಿವಿ ವಿಭಾಗದಲ್ಲಿ ಹೊಸ ಕ್ರಾಂತಿ ತಂದರೂ ಆಶ್ಚರ್ಯ ಪಡಬೇಕಿಲ್ಲ.


Click it and Unblock the Notifications