ಭಾರತೀಯ ಮಾರುಕಟ್ಟೆಯಲ್ಲಿ ಮತ್ತೆ ಮಾರುತಿ ಸುಜುಕಿಯೇ ನಂಬರ್ 1

ದೇಶೀಯ ಕಾರು ಮಾರುಕಟ್ಟೆಯಲ್ಲಿ ಮತ್ತೆ ಮಾರುತಿ ಸುಜುಕಿಯೇ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಕಳೆದ ನವೆಂಬರ್ ತಿಂಗಳಲ್ಲಿ ಅತಿಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಮೂಲಕ ಈ ಸಾಧನೆ ಮಾಡಿದೆ. ಬರೋಬ್ಬರಿ 1.32 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ್ದು, ಭಾರತೀಯ ಪ್ರಯಾಣಿಕ ಕಾರು ವಿಭಾಗದಲ್ಲಿ ತನ್ನ ಪ್ರಾಬಲ್ಯ ಸಾಧಿಸಿದೆ ಎಂದು ಹೇಳಬಹುದು.

ನವೆಂಬರ್ 2022ರಲ್ಲಿ ಮಾರುತಿ ಸುಜುಕಿ ಮಾರಾಟ ಮಾಡಿದ ಟಾಪ್ 5 ಕಾರುಗಳ ವಿವರವಾದ ಮಾರಾಟದ ಮಾಹಿತಿ ಇಲ್ಲಿದೆ. ಬಲೆನೊ, ಆಲ್ಟೊ, ಸ್ವಿಫ್ಟ್, ವ್ಯಾಗನ್‌ಆರ್ ಹಾಗೂ ಡಿಜೈರ್ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದ್ದು, ಇದು ಕಂಪನಿಯ ಪ್ರಗತಿಗೆ ಕಾರಣವಾಗಿದೆ. ಬಹುತೇಕ ಮಾರುತಿ ಸುಜುಕಿ ಕಾರುಗಳ ಬೆಲೆ ಭಾರತದ ಮಧ್ಯಮ ವರ್ಗದ ಜನರ ಕೈಗೆಟುವ ರೀತಿ ಇರುತ್ತದೆ. ಆದ್ದರಿಂದಲೇ ಈ ಕಾರುಗಳನ್ನು ಖರೀದಿಸಲು ಹೆಚ್ಚು ಇಷ್ಟಪಡುತ್ತಾರೆ ಎಂದು ಹೇಳಬಹುದು.

ಮಾರುತಿ ಸುಜುಕಿ ಬಲೆನೊ (20,945 ಯುನಿಟ್‌ಗಳು):
ಭಾರತದಲ್ಲಿ ಬಲೆನೊ ಕಾರು, ಮಾರುತಿ ಸುಜುಕಿ ಕಂಪನಿಯನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದು, ಈ ಮಾದರಿಯು ದೇಶದಲ್ಲಿ ಹೆಚ್ಚು ಮಾರಾಟವಾಗುವ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿ ಮುಂದುವರಿದಿದೆ. ಕಂಪನಿಯು ನವೆಂಬರ್ ತಿಂಗಳಲ್ಲಿ 20,945 ಹ್ಯಾಚ್‌ಬ್ಯಾಕ್‌ಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದ್ದು, ವರ್ಷದಿಂದ ವರ್ಷಕ್ಕೆ ಮಾರಾಟ ಅಂಕಿಅಂಶಗಳನ್ನು ಗಮನಿಸಿದಾಗ ಕೇವಲ 110 ಪ್ರತಿಶತದಷ್ಟು ಸುಧಾರಿಸಿದೆ. ಅಲ್ಲದೆ, ತಿಂಗಳಿನಿಂದ ತಿಂಗಳ ಮಾರಾಟದ ಅಂಕಿಅಂಶಗಳು ಶೇಕಡ 22 ಹೆಚ್ಚು ಸುಧಾರಿಸಿದೆ. ಏಕೆಂದರೆ, ಕಂಪನಿಯು ಅಕ್ಟೋಬರ್ ತಿಂಗಳಿಗಿಂತ ನವೆಂಬರ್ ತಿಂಗಳಲ್ಲಿ 3,796 ಯುನಿಟ್‌ಗಳನ್ನು ಹೆಚ್ಚು ಮಾರಾಟ ಮಾಡಿದೆ.

ಮಾರುತಿ ಸುಜುಕಿ ಆಲ್ಟೊ (15,663 ಯುನಿಟ್‌ಗಳು):
ದೇಶದಲ್ಲಿ ಕೇವಲ 15,663 ಯುನಿಟ್‌ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್‌ಗಳನ್ನು ಮಾರಾಟ ಮಾಡಲು ಮಾತ್ರ ಕಂಪನಿ ಯಶಸ್ವಿಯಾಗಿದ್ದರಿಂದ ಮಾರುತಿ ಸುಜುಕಿ ಆಲ್ಟೊ ತನ್ನ ಮಾರಾಟದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ವರ್ಷದಿಂದ ವರ್ಷದ ಮಾರಾಟ ಅಂಕಿ-ಅಂಶಗಳನ್ನು ಗಮನಿಸಿದಾಗ ಮಾರುತಿ ಸುಜುಕಿ ಆಲ್ಟೊ ಶೇಕಡ 13ರಷ್ಟು ಬೆಳವಣಿಗೆಯನ್ನು ಕಂಡಿದೆ. ಮತ್ತೊಂದೆಡೆ, ಆಲ್ಟೊ ಹ್ಯಾಚ್‌ಬ್ಯಾಕ್‌ನ ತಿಂಗಳಿನಿಂದ ತಿಂಗಳ ಮಾರಾಟ ಅಂಕಿಅಂಶಗಳು ನವೆಂಬರ್ 2022ರಲ್ಲಿ ಶೇಕಡ 26ಕ್ಕಿಂತ ಹೆಚ್ಚು ಕುಸಿತ ದಾಖಲಿಸಿದೆ. ದಸರಾ, ದೀಪಾವಳಿ ಹಿನ್ನೆಲೆ, ಕಂಪನಿಯು ಅಕ್ಟೋಬರ್ ನಲ್ಲಿ 21,260 ಆಲ್ಟೋ ಯುನಿಟ್ ಗಳನ್ನು ಮಾರಾಟ ಮಾಡಿತ್ತು.

ಮಾರುತಿ ಸುಜುಕಿ ಸ್ವಿಫ್ಟ್ (15,153 ಯುನಿಟ್‌ಗಳು):
ನವೆಂಬರ್ 2022ರಲ್ಲಿ ಮಾರುತಿ ಸುಜುಕಿ ಕಂಪನಿಯು 15,153 ಯುನಿಟ್‌ ಸ್ವಿಫ್ಟ್ ಕಾರು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದು, ಈ ಕಾರಿನ ಮಾರಾಟ ಪ್ರಮಾಣದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದು, ವರ್ಷದಿಂದ ವರ್ಷದ ಮಾರಾಟವು ಶೇಕಡ 4ಕ್ಕಿಂತ ಹೆಚ್ಚು ಸುಧಾರಿಸಿದೆ. ಮತ್ತೊಂದೆಡೆ, ತಿಂಗಳಿಂದ ತಿಂಗಳ ಮಾರಾಟದ ಅಂಕಿಅಂಶಗಳನ್ನು ನೋಡಿದಾಗ ಅದು 12 ಪ್ರತಿಶತದಷ್ಟು ಕಡಿಮೆಯಾಗಿದೆ. ಏಕೆಂದರೆ, ಕಂಪನಿಯು ಅಕ್ಟೋಬರ್ ತಿಂಗಳಲ್ಲಿ 2,078 ಯುನಿಟ್‌ಗಳನ್ನು ಹೆಚ್ಚುವರಿಯಾಗಿ ಮಾರಾಟ ಮಾಡಿತ್ತು.

ಮಾರುತಿ ಸುಜುಕಿ ವ್ಯಾಗನ್‌ಆರ್ (14,720 ಯುನಿಟ್‌ಗಳು):
ಭಾರತದಲ್ಲಿ ಮಾರುತಿ ಸುಜುಕಿ ವ್ಯಾಗನ್‌ಆರ್ ಇಂಡೋ-ಜಪಾನೀಸ್ ವಾಹನ ತಯಾರಕರಿಗೆ ಸ್ಥಿರವಾದ ಮಾರಾಟ ಅಂಕಿಅಂಶ ದಾಖಲಿಸುವುದನ್ನು ಸಾಧ್ಯವಾಗುವಂತೆ ಮಾಡುತ್ತಿದೆ. ಕಂಪನಿಯು 14,720 ಯುನಿಟ್ ವ್ಯಾಗನ್‌ಆರ್ ಹ್ಯಾಚ್‌ಬ್ಯಾಕ್‌ಗಳನ್ನು ನವೆಂಬರ್ ತಿಂಗಳಿನಲ್ಲಿ ಮಾರಾಟ ಮಾಡಲು ಯಶಸ್ವಿಯಾಗಿದೆ. ಆದರೂ ವರ್ಷದಿಂದ ವರ್ಷಕ್ಕೆ ಮಾರಾಟವು ಶೇಕಡ 12ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಇದಲ್ಲದೆ, ತಿಂಗಳಿನಿಂದ ತಿಂಗಳ ಮಾರಾಟವು ಸುಮಾರು 18 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಹೇಳಬಹುದು.

ಮಾರುತಿ ಸುಜುಕಿ ಡಿಜೈರ್ (12,321 ಯುನಿಟ್‌ಗಳು):
ಮಾರುತಿ ಸುಜುಕಿ ವ್ಯಾಗನ್‌ಆರ್‌ನಂತೆ, ಡಿಜೈರ್ ಕಾರನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಲು ಕಂಪನಿಗೆ ಸಾಧ್ಯವಾಗಿಲ್ಲ. ಆದರೆ, ಸಬ್-4m ಸೆಡಾನ್ ಹೆಚ್ಚಾಗಿ ಮಾರಾಟವಾದ್ದರಿಂದ ವರ್ಷದಿಂದ ವರ್ಷದ ಮಾರಾಟದಲ್ಲಿ ಶೇಕಡ 76ಕ್ಕಿಂತ ಹೆಚ್ಚಿನ ಪ್ರಗತಿಯನ್ನು ಕಂಡಿದೆ. ಅಕ್ಟೋಬರ್ 2022ರಲ್ಲಿ ಕಂಪನಿಯು ಮಾರಾಟ ಮಾಡಲು ಇಟ್ಟುಕೊಂಡಿದ್ದ ಗುರಿಗಿಂತ 2,135 ಯುನಿಟ್‌ಗಳನ್ನು ಹೆಚ್ಚುವರಿಯಾಗಿ ಮಾರಾಟ ಮಾಡಲು ಯಶಸ್ವಿಯಾಗಿದೆ. ಇದರಿಂದ ತಿಂಗಳಿಂದ ತಿಂಗಳ ಮಾರಾಟದ ಅಂಕಿಅಂಶಗಳು ಶೇಕಡ 17.3ರಷ್ಟು ಹೆಚ್ಚಾಗಿದೆ.

ಮಾರುತಿ ಸುಜುಕಿ ಬಲೆನೊ, ಆಲ್ಟೊ, ಸ್ವಿಫ್ಟ್, ವ್ಯಾಗನ್ಆರ್ ಮತ್ತು ಡಿಜೈರ್ ದೇಶದಲ್ಲಿ ಹೆಚ್ಚು ಮಾರಾಟವಾದ ಕೆಲವು ಕಾರುಗಳಾಗಿವೆ. ಇದಲ್ಲದೆ, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಈ ಕಾರುಗಳ ಯಶಸ್ಸು ಇಂಡೋ-ಜಪಾನೀಸ್ ವಾಹನ ತಯಾರಕ ಮಾರುತಿ ಸುಜುಕಿಗೆ ಮಾರುಕಟ್ಟೆಯಲ್ಲಿ ಮೇಲುಗೈ ಸಾಧಿಸಲು ಕಾರಣವಾಗಿದೆ. ಏಕೆಂದರೆ, ಈ 5 ಮಾದರಿಗಳು ನವೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿಯ ಒಟ್ಟು ಮಾರಾಟದ ಪ್ರಮಾಣದಲ್ಲಿ ಶೇಕಡ 61ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿವೆ ಎಂದು ಹೇಳಬಹುದು.

Most Read Articles

Kannada
English summary
Maruti suzuki again number one in the indian market
Story first published: Thursday, December 8, 2022, 18:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X