'ಮಾರುತಿ ಸುಜುಕಿ ಬ್ರೆಝಾ' ಅಪ್‌ಡೇಟ್: ಇಲ್ಲಿದೆ ಹೆಚ್ಚಿನ ವಿವರ

ಭಾರತದಲ್ಲಿ 'ಮಾರುತಿ ಸುಜುಕಿ' ಬ್ರೆಝಾ ಎಸ್‌ಯುವಿಯಲ್ಲಿ ಹೊಸದಾಗಿ ಓವರ್-ದಿ-ಏರ್ (OTA) ಅಪ್‌ಡೇಟ್ ನವೀಕರಣಗಳನ್ನು ಮಾಡಿದೆ. ಇತ್ತೀಚಿನ OTA ಅಪ್‌ಡೇಟ್ ಬಳಕೆದಾರರಿಗೆ ವೈರ್‌ಲೆಸ್ Apple CarPlay ಮತ್ತು Android Auto ಬಳಸಲು ಅನುವು ಮಾಡಿಕೊಡುತ್ತದೆ. SmartPlay Pro+ ಇನ್ಫೋಟೈನ್‌ಮೆಂಟ್ ಸಿಸ್ಟಂ ಹೊಂದಿರುವ ಬ್ರೆಝಾ ಬ್ರೆಝಾಗಳಲ್ಲಿ ಈ ಅಪ್‌ಡೇಟ್ ಲಭ್ಯವಿದೆ.

ಬ್ರೆಝಾ ಎಸ್‌ಯುವಿಯಲ್ಲಿ ಮಾಡಿರುವ ಹೊಸ ಅಪ್‌ಡೇಟ್ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ. ಇಂಡೋ-ಜಪಾನೀಸ್ ವಾಹನ ತಯಾರಕ ಕಂಪನಿ ಮಾರುತಿ ಸುಜುಕಿಯ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದ 2022ರ ಬ್ರೆಝಾ ಎಸ್‌ಯುವಿಯ ಮಾಲೀಕರು, ತಮ್ಮ ಕಾರಿನಲ್ಲಿ ಈಗಾಗಲೇ ಇರುವ ಒಟಿಎ ಅಪ್‌ಡೇಟ್‌ ವೈಶಿಷ್ಟ್ಯವನ್ನು ಸ್ಮಾರ್ಟ್‌ಫೋನ್ ಅಪ್‌ಡೇಟ್‌ ಮೂಲಕ ಸ್ವೀಕರಿಸಬಹುದು ಅಥವಾ ಇದನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಡೌನ್‌ಲೋಡ್ ಮಾಡಿಕೊಳ್ಳಬಹುದು.

ಮಾರುತಿ ಸುಜುಕಿ ಬ್ರೆಝಾ ಅಪ್‌ಡೇಟ್: ಇಲ್ಲಿದೆ ಹೆಚ್ಚಿನ ವಿವರ

ಮಾರುತಿ ಸುಜುಕಿ, ಬ್ರೆಝಾವನ್ನು ಜೂನ್ 2022ರಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಈ ಎಸ್‌ಯುವಿ ಸತತ ಎರಡು ತಿಂಗಳುಗಳವರೆಗೆ ಮಾರಾಟದ ವಿಚಾರದದಲ್ಲಿ ತನ್ನ ಪ್ರತಿಸ್ಪರ್ಧಿ ಟಾಟಾ ನೆಕ್ಸಾನ್ ಅನ್ನು ಮೀರಿಸಿದೆ. ಇಷ್ಟೇ ಅಲ್ಲದೆ, ಬ್ರೆಝಾವು ಎಲೆಕ್ಟ್ರಿಕ್ ಸನ್‌ರೂಫ್, ನವೀಕರಿಸಿದ MID ಡಿಸ್ಪ್ಲೇ, ದೊಡ್ಡ 9.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, ಹೆಡ್ಸ್-ಅಪ್ ಡಿಸ್ಪ್ಲೇ (HUD) ನಂತಹ ಹಲವು ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.

ಅಲೆಕ್ಸಾ ಹೊಂದಾಣಿಕೆ, ಕ್ರೂಸ್ ಕಂಟ್ರೋಲ್, ಕನೆಕ್ಟ್ದ್ ಕಾರ್ ಟೆಕ್, ರೇರ್ ಎಸಿ ವೆಂಟ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್, ಆರ್ಕಮಿಸ್ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ. ಇದಲ್ಲದೆ, 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), 360-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ, ಹಿಲ್-ಹೋಲ್ಡ್ ಅಸಿಸ್ಟ್‌ನಂತಹ ಸುರಕ್ಷತಾ ವ್ಯವಸ್ಥೆಗಳನ್ನು ಹೊಂದಿದ್ದು, ಹೀಗಾಗಿ, ನೂತನ ಬ್ರೆಜ್ಜಾದಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಬಹುದು. ಅಲ್ಲದೆ, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, ಸೀಟ್ ಬೆಲ್ಟ್ ಪ್ರಿ-ಟೆನ್ಷನರ್‌ಗಳು, ISOFIX ಆಂಕರ್ರಿಂಗ್ ಪಾಯಿಂಟ್‌ಗಳನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಪ್ರಸ್ತುತ ಆಟೋಮೆಟಿಕ್ ಗೇರ್‌ಬಾಕ್ಸ್‌ನೊಂದಿಗೆ ಬ್ರೆಝಾ ಎಸ್‌ಯುವಿಯ CNG ರೂಪಾಂತರವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಅಲ್ಲದೆ, ಆಟೋಮೆಟಿಕ್ ಟ್ರಾನ್ಸ್ಮಿಷನ್ ಹೊಂದಿದ ಮಾರುತಿ ಸುಜುಕಿ ಬ್ರೆಝಾ ಎಸ್‌ಯುವಿಯ ಸಿಎನ್‌ಜಿ ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಮಯದ ಕುರಿತಾದ ಮಾಹಿತಿಯು ಸ್ವಯಂ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಸೋರಿಕೆಯಾಗಿದೆ. ಅಲ್ಲಿ ಬ್ರೆಜ್ಜಾ ಎಸ್‌ಯುವಿಯ ಮುಂಬರುವ ಸಿಎನ್‌ಜಿ ಆವೃತ್ತಿಯು 6-ಸ್ವೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಹೊಂದಿರುವ ಬಗ್ಗೆ ಸುಳಿವು ಲಭ್ಯವಾಗಿದೆ.

ಅದರ ಹೊರತಾಗಿ, ಮಾರುತಿ ಸುಜುಕಿ ಬ್ರೆಜ್ಜಾದ ಸಿಎನ್‌ಜಿ ಆವೃತ್ತಿಯು ಮಾರುತಿ ಸುಜುಕಿ ಎರ್ಟಿಗಾ ಎಂಯುವಿಯ ಸಿಎನ್‌ಜಿ ಆವೃತ್ತಿಯಂತೆಯೇ ಇರಲಿದೆ ಎಂದು ಹೇಳಲಾಗಿದೆ. ಅದರ ಎಂಜಿನ್ ಬಗ್ಗೆ ಹೇಳುವುದಾದರೆ ಅದೇ 1.5-ಲೀಟರ್, ನ್ಯಾಚುರಲಿ-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಬಳಸುವ ನಿರೀಕ್ಷೆಯಿದ್ದು, ಅದರಂತೆ, ಈ ಎಂಜಿನ್ ಸಿಎನ್‌ಜಿಯನ್ನು ಇಂಧನವಾಗಿ ಉಪಯೋಗಿಸಿಕೊಂಡು, ಸುಮಾರು 90 bhp ಗರಿಷ್ಠ ಪವರ್ ಮತ್ತು 122 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಇದಕ್ಕೆ ಹೋಲಿಕೆ ಮಾಡಿದರೆ, ಮಾರುತಿ ಸುಜುಕಿ ಬ್ರೆಝಾ ಎಸ್‌ಯುವಿಯ ಸ್ಟ್ಯಾಂಡರ್ಡ್ ವೆರಿಯಂಟ್ 103 bhp ಗರಿಷ್ಠ ಪವರ್ ಮತ್ತು 138 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದಾಗ್ಯೂ, ಎಸ್‌ಯುವಿಯ CNG ಆವೃತ್ತಿಯನ್ನು ಖರೀದಿಯಿಂದ ಇಂಧನ ಹೆಚ್ಚವು ಕಡಿಮೆಯಾಗಲಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬ್ರೆಝಾ ಆರಂಭಿಕ ಬೆಲೆಯು ರೂ.7.99 ಲಕ್ಷದಿಂದ ಆರಂಭವಾಗಿ ಟಾಪ್-ಎಂಡ್ ಮಾದರಿ ಬೆಲೆ ರೂ.10.97 ಲಕ್ಷ ಇದೆ.

ಮಾರುತಿ ಸುಜುಕಿ ಬ್ರೆಝಾ ಎಸ್‌ಯುವಿ ಬಗ್ಗೆ ಆಲೋಚನೆಗಳು
ಬೇರೆ ಎಸ್‌ಯುವಿಗಳ ಮಾರಾಟಕ್ಕೆ ಹೋಲಿಕೆ ಮಾಡಿದರೆ ಮಾರುತಿ ಸುಜುಕಿ ಬ್ರೆಝಾ ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ ಎಸ್‌ಯುವಿಗಳಲ್ಲಿ ಒಂದಾಗಿದೆ. ಇತ್ತೀಚಿನ ಅಪ್‌ಡೇಟ್ ಬ್ರೆಝಾ ಎಸ್‌ಯುವಿಯನ್ನು ಮೊದಲಿಗಿಂತ ಹೆಚ್ಚು ಗ್ರಾಹರನ್ನು ತನ್ನತ್ತ ಸೆಳೆಯಲಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೊಸ ವೈಶಿಷ್ಟ್ಯವು ಅದರ ಮಾಲೀಕರಿಗೆ ಸಾಕಷ್ಟು ಅನುಕೂಲತೆಯನ್ನು ಒದಗಿಸಲಿದ್ದು, ಇದರಿಂದ ಅವರಿಗೆ ಆರಾಮದಾಯಕ ಪ್ರಯಾಣವನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಬಹುದು.

Article Published On: Monday, December 12, 2022, 11:00 [IST]
English summary
Maruti suzuki brezza update here more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+