ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್‌

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳನ್ನು ಬಿಡುಗಡೆಗೊಳಿಲು ಸಜ್ಜಾಗುತ್ತಿದೆ. ಇದರಲ್ಲಿ ಫೇಸ್‌ಲಿಫ್ಟ್‌ಗಳು, ನ್ಯೂ ಜನರೇಷನ್ ಆವೃತ್ತಿಗಳು ಮತ್ತು ಹೊಸ ಕಾರುಗಳನ್ನು ಒಳಗೊಂಡಿವೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್‌

ಮಾರುತಿ ಸುಜುಕಿಯ ಹೆಚ್ಚು ಜನಪ್ರಿಯವಾದ ವ್ಯಾಗನ್ಆರ್ ಹ್ಯಾಚ್‌ಬ್ಯಾಕ್ ಮಿಡ್-ಲೈಫ್ ನವೀಕರಣವನ್ನು ಸ್ವೀಕರಿಸುತ್ತಿದೆ. ಈ ಹೊಸ ಮಾದರಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವ್ಯಾಗನ್‍ಆರ್ ಸುಮಾರು ಎರಡು ದಶಕಗಳಿಂದ ಮಾರಾಟದಲ್ಲಿದೆ. ಈ ವ್ಯಾಗನ್‍ಆರ್ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ ದೇಶದಲ್ಲಿ ಪ್ರಾರಂಭಿಸಿದಾಗಿನಿಂದಲೂ ಕೂಡ ಉತ್ತಮ ಬೇಡಿಕೆಯಿಂದ ಮಾರಾಟವಾಗುತ್ತಿದೆ. ಈಗ ಮೂರನೇ ತಲೆಮಾರಿನ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್‌

2022ರ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್ ಅನ್ನು ಮುಂದಿನ ತಿಂಗಳ ಕೊನೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ, ಏಕೆಂದರೆ ನವೀಕರಿಸಿದ ಮಾದರಿಯು ಟಿವಿ ಜಾಹೀರಾತು ಚಿತ್ರಿಕರಣದ(ಟಿವಿಸಿ) ವೇಳೆ ಇತ್ತೀಚೆಗೆ ಕಾಣಿಸಿಕೊಂಡಿದೆ.ಈ 2022ರ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್ ಪ್ರಮುಖ ವಿನ್ಯಾಸ ಬದಲಾವಣೆಗಳನ್ನು ಸ್ವೀಕರಿಸುವುದಿಲ್ಲ ಎಂದು ಸ್ಪೈ ಚಿತ್ರಗಳು ಬಹಿರಂಗಪಡಿಸಲಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್‌

ನವೀಕರಿಸಿದ ಮಾದರಿಯಲ್ಲಿ ಗೋಚರಿಸುವ ಏಕೈಕ ಸೇರ್ಪಡೆಗಳೆಂದರೆ ಬ್ಲ್ಯಾಕ್ ರೂಫ್ ಮತ್ತು ಹೊಸ ಬ್ಲ್ಯಾಕ್ ಅಲಾಯ್ ವ್ಹೀಲ್ ಗಳು ಮತ್ತು ಮಾರುತಿ ಟಾಲ್-ಬಾಯ್ ಹ್ಯಾಚ್‌ಬ್ಯಾಕ್‌ಗೆ ಹೊಸ ಬಣ್ಣದ ಆಯ್ಕೆಗಳನ್ನು ಸೇರಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್‌

ಹ್ಯಾಚ್‌ಬ್ಯಾಕ್ ಕ್ಯಾಬಿನ್ ಚಿತ್ರಗಳು ಇನ್ನೂ ಬಹಿರಂಗಗೊಳ್ಳಬೇಕಿದೆ. 2022ರ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್ ಹೊಸ ಅಪ್ಹೋಲ್ಸ್ಟರಿಯನ್ನು ಪಡೆಯುವ ನಿರೀಕ್ಷೆಯಿದೆ. ಆದರೆ ಅದರ ಡ್ಯಾಶ್‌ಬೋರ್ಡ್ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯಿಲ್ಲ. ವಾಹನವು AMT ರೂಪಾಂತರಗಳೊಂದಿಗೆ ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಎಂಜಿನ್ ಐಡಲ್ ಸ್ಟಾರ್ಟ್ ಸ್ಟಾಪ್ ಸಿಸ್ಟಮ್ ಅನ್ನು ನೀಡಬಹುದು.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್‌

ಇನ್ನು ಈ ವ್ಯಾಗನ್ಆರ್ ಫೇಸ್‌ಲಿಫ್ಟ್ ಕಾರಿನಲ್ಲಿ Apple CarPlay ಮತ್ತು Android Auto ಬೆಂಬಲದೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಮುಂದುವರಿಸಬಹುದು. ಉಳಿದಂತೆ ವ್ಯಾಗನ್ಆರ್ ಫೇಸ್‌ಲಿಫ್ಟ್‌ ಮಾದರಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗಗೊಂಡಿಲ್ಲ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್‌

ಈ ಹೊಸ ಮಾದರಿಯ ಎಂಜಿನ್ ನಲ್ಲಿ ಯಾವುದೇ ರೀತಿಯ ಬದಲಾವಣೆಗಳಾಗುವುದಿಲ್ಲ. ಮಾರುತಿ ಸುಜುಕಿ ವ್ಯಾಗನ್ಆರ್ ಕಾರನ್ನು ಅದೇ 1.0-ಲೀಟರ್ ಮತ್ತು 1.2-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಗಳ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತದೆ. ಎಸ್-ಸಿಎನ್‌ಜಿ ಮಾದರಿಯಲ್ಲಿ 1.0-ಲೀಟರ್ 3-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್‌

ಇದು 58 ಬಿಹೆಚ್‌ಪಿ ಮತ್ತು 78 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ ಜೋಡಿಸಲಾಗಿದೆ. ವ್ಯಾಗನ್ಆರ್ ಅನ್ನು ಎಲ್ಎಕ್ಸ್ಐ ಮತ್ತು ಎಲ್ಎಕ್ಸ್ಐ(ಒ) ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್‌

ಈ ಮಾರುತಿ ಸುಜುಕಿ ವ್ಯಾಗನ್ಆರ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದರಲ್ಲಿ ಸುರಕ್ಷತೆಗಾಗಿ ಡ್ರೈವರ್-ಸೈಡ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ಹೈಸ್ಪೀಡ್ ಅಲರ್ಟ್, ಸೀಟ್‌ಬೆಲ್ಟ್ ರಿಮೈಂಡರ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಇತರ ಪೀಚರ್ ಗಳನ್ನು ಕೂಡ ಒಳಗೊಂಡಿವೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್‌

ಇನ್ನು ಎಲ್‌ಎಕ್ಸ್‌ಐ(ಒ) ರೂಪಾಂತರದಲ್ಲಿ ಪ್ರಯಾಣಿಕರ ಬದಿಯ ಏರ್‌ಬ್ಯಾಗ್ ಮತ್ತು ಹೊಸ ಪೀಚರ್ಸ್ ಗಳನ್ನು ಹೊಂದಿದೆ. ಇನ್ನು ಮಾರುತಿ ಸುಜುಕಿ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿಯು 33.54 ಕಿಮೀ ಮೈಲೇಜ್ ಅನ್ನು ನೀಡುತ್ತದೆ. ಈ ವ್ಯಾಗನ್ಆರ್ ಸಿಎನ್‌ಜಿ ಆವೃತ್ತಿಯಲ್ಲಿ ಇಂಟೆಲಿಜೆಂಟ್ ಇಂಜೆಕ್ಷನ್ ಸಿಸ್ಟಂನೊಂದಿಗೆ ಡ್ಯುಯಲ್ ಇಸಿಯುಗಳನ್ನು ಒಳಗೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಸಿಎನ್‌ಜಿ ಮಾದರಿಗಳಲ್ಲಿ ವ್ಯಾಗನ್ಆರ್ ಸಿಎನ್‌ಜಿ ಮಾದರಿಯು ಅಗ್ರಸ್ಥಾನದಲ್ಲಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್‌

ಇನ್ನು ಮಾರುತಿ ಸುಜುಕಿ ತನ್ನ ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಮಾದರಿಯನ್ನು ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಮಾದರಿಯು ವ್ಯಾಗನಾರ್ ಕಾರಿನ ಸ್ಪೆಷಲ್ ಎಡಿಷನ್ ಆಗಿದೆ. ಹೊಸ ಮಾರುತಿ ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಮುಂಭಾಗ ಮತ್ತು ಹಿಂಭಾಗದ ಬಂಪರ್ ಪ್ರೊಟೆಕ್ಟರ್‌ಗಳು, ವ್ಹೀಲ್ ಆರ್ಚ್ ಕ್ಲಾಡಿಂಗ್, ಸೈಡ್ ಸ್ಕರ್ಟ್‌ಗಳು, ಬಾಡಿ ಸೈಡ್ ಮೋಲ್ಡಿಂಗ್‌ಗಳು ಮತ್ತು ಕ್ರೋಮ್ ಅಲಂಕಾರವನ್ನು ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಂದಿದ್ದು, ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್‌

ಈ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್ ಮಾದರಿಯ ಒಳಭಾಗದಲ್ಲಿ ಕಾರ್ ಚಾರ್ಜರ್ ಎಕ್ಸ್‌ಟೆಂಡರ್, ಟ್ರಂಕ್ ಆರ್ಗನೈಸರ್ ಮತ್ತು ಡಿಜಿಟಲ್ ಏರ್ ಇನ್ಫ್ಲೇಟರ್ ಅನ್ನು ಹೊಂದಿರುತ್ತದೆ. ಇದರಲ್ಲಿ ಕಪ್ಪು ಬಣ್ಣದ ಬಿ-ಪಿಲ್ಲರ್, ಬಾಡಿ ಕಲರ್ ವಿಂಗ್ ಮಿರರ್ ಮತ್ತು ಡೋರ್ ಹ್ಯಾಂಡಲ್, ವೀಲ್ ಕವರ್, ಟಿಲ್ಟ್ ಅಡ್ಜಸ್ಟಬಲ್ ಸ್ಟೀರಿಂಗ್, ಪವರ್ ಅಡ್ಜಸ್ಟಬಲ್ ವಿಂಗ್ ಮಿರರ್, ಫ್ರಂಟ್ ಮತ್ತು ರಿಯರ್ ಪವರ್ ವಿಂಡೋಸ್, ಕೀಲೆಸ್ ಎಂಟ್ರಿ, 60:40 ಸ್ಪ್ಲಿಟ್ ಫೋಲ್ಡಿಂಗ್ ರಿಯರ್ ಸೀಟುಗಳು, ಬ್ಲೂಟೂತ್ ಮತ್ತು ಯುಎಸ್‌ಬಿ ಕನೆಕ್ಟಿವಿಟಿಯೊಂದಿಗೆ ರಿಯರ್ ವ್ಯೂ ಮಿರರ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು ಮತ್ತು ಆಡಿಯೋ ಸಿಸ್ಟಂ ಪೀಚರ್ಸ್ ಗಳನ್ನು ಹೊಂದಿವೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್‌

ಜನಪ್ರಿಯ ಮಾರುತಿ ಸುಜುಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲಿವೆ. ಇದರಲ್ಲಿ ಫೇಸ್‌ಲಿಫ್ಟ್‌ಗಳು, ಹೊಸ ತಲೆಮಾರಿನ ಆವೃತ್ತಿಗಳು ಮತ್ತು ಹೊಸ ಕಾರುಗಳನ್ನು ಒಳಗೊಂಡಿದೆ. ಮಾರುತಿ ಸುಜುಕಿಯು ಹೊಸ ಬಲೆನೊ, ಹೊಸ ಬ್ರೆಝಾ, ನವೀಕರಿಸಿದ ವ್ಯಾಗನ್‌ಆರ್ ಮತ್ತು ಎರ್ಟಿಗಾ ಮತ್ತು ಎಲ್ಲಾ ಹೊಸ ಮಧ್ಯಮ ಗಾತ್ರದ ಎಸ್‌ಯುವಿ ಸೇರಿದಂತೆ ವ್ಯಾಪಕ ಶ್ರೇಣಿಯ ಹೊಸ ಮಾದರಿಗಳನ್ನು ಸಿದ್ಧಪಡಿಸುತ್ತಿದೆ. ಈ ಸಾಲಿನ ಜನಪ್ರಿಯ ಆಲ್ಟೋ ಕಾರು ಕೂಡ ಒಳಗೊಂಡಿದೆ, ಮಾರುತಿ ಸುಜುಕಿ ಕಂಪನಿಯು ಹೊಸ ತಲೆಮಾರಿನ ಆಲ್ಟೋ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಅನ್ನು ಸಹ ಪರೀಕ್ಷಿಸುತ್ತಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್‌

ಮಾರುತಿ ಸುಜುಕಿ ವ್ಯಾಗನಾರ್ ಕೇವಲ 30 ತಿಂಗಳಲ್ಲಿ 4 ಲಕ್ಷ ಯೂನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಲಾಗಿದೆ.. ಈ ಮಾರಾಟದ ಅಂಕಿಅಂಶಗಳು ಕೇವಲ ಮೂರನೇ ತಲೆಮಾರಿನ ಮಾದರಿಯನ್ನು ಮಾತ್ರ ಒಳಗೊಂಡಿವೆ. ಇದರ ಪರಿಣಾಮವಾಗಿ, ವ್ಯಾಗನಾರ್ ಭಾರತೀಯ ಮಾರುಕಟ್ಟೆಯಲ್ಲಿ ಬ್ರಾಂಡ್‌ನ ಎರಡನೇ ಅತಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ. ಹೊಸ ನವೀಕರಣಗಳೊಂದಿಗೆ ಮಾರುತಿ ಸುಜುಕಿ ವ್ಯಾಗನಾರ್ ಫೇಸ್‌ಲಿಫ್ಟ್ ಕಾರು ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆಗಳಿದೆ.

Most Read Articles

Kannada
English summary
Maruti suzuki facelifted tall boy wagonr hatch might be launched by march details
Story first published: Thursday, February 24, 2022, 12:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X