ಮುಂದಿನ 3-4 ದಿನಗಳಲ್ಲಿ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಬೆಲೆ, ಡೆಲಿವರಿ ಮಾಹಿತಿ ಪ್ರಕಟಣೆ

ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಬೆಲೆಯನ್ನು ಮುಂದಿನ 3-4 ದಿನಗಳಲ್ಲಿ ಘೋಷಿಸುವ ಸಾಧ್ಯತೆಯಿದೆ. ಮಾರುತಿ ಸುಜುಕಿಯ ಮಾರಾಟ ಮತ್ತು ಮಾರುಕಟ್ಟೆಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ, ಡೆಲಿವರಿ ಯಾವಾಗ ಪ್ರಾರಂಭವಾಗಲಿದೆ ಎಂಬುದರೊಂದಿಗೆ ಬೆಲೆ ಘೋಷಣೆಯ ಬಗ್ಗೆಯು ಮಾಹಿತಿ ನೀಡಿದ್ದಾರೆ.

ಮುಂದಿನ 3-4 ದಿನಗಳಲ್ಲಿ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಬೆಲೆ, ಡೆಲಿವರಿ ಮಾಹಿತಿ ಪ್ರಕಟಣೆ

ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಇದುವರೆಗೆ 50,000 ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ. ನವರಾತ್ರಿಯಿಂದ ಗ್ರ್ಯಾಂಡ್ ವಿಟಾರಾ ಡೆಲಿವರಿ ಪ್ರಾರಂಭವಾಗಲಿದೆ ಎಂದ ಶಶಾಂಕ್ ಶ್ರೀವಾಸ್ತವ ಅವರು, ಬೆಲೆಯನ್ನು ಶೀಘ್ರದಲ್ಲೇ ಬಹಿರಂಗಪಡಿಸುವುದಾಗಿ ಹೇಳಿದರು.

ಮುಂದಿನ 3-4 ದಿನಗಳಲ್ಲಿ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಬೆಲೆ, ಡೆಲಿವರಿ ಮಾಹಿತಿ ಪ್ರಕಟಣೆ

ನವರಾತ್ರಿ ಸೆಪ್ಟೆಂಬರ್ 26 ರಿಂದ ಪ್ರಾರಂಭವಾಗಲಿದೆ. ಆ ವೇಳೆ ಕಂಪನಿಯು ಬೆಲೆಯ ಘೋಷಣೆಯ ನಂತರ ಶೀಘ್ರದಲ್ಲೇ ವಿತರಣೆಯನ್ನು ಪ್ರಾರಂಭಿಸಲಿದೆ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮಾರಾಟವನ್ನು ಪ್ರಾರಂಭಿಸಲು ಕಂಪನಿಯು ಕಾತರದಿಂದ ಕಾಯುತ್ತಿದೆ ಎಂದರು.

ಮುಂದಿನ 3-4 ದಿನಗಳಲ್ಲಿ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಬೆಲೆ, ಡೆಲಿವರಿ ಮಾಹಿತಿ ಪ್ರಕಟಣೆ

ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಬುಕಿಂಗ್ ಬಗ್ಗೆ ಮಾತನಾಡುವುದಾದರೆ, ಅದರ ಪ್ರಬಲ ಹೈಬ್ರಿಡ್ ರೂಪಾಂತರವು ಶೇ 40 ರಷ್ಟು ಬುಕಿಂಗ್ ಅನ್ನು ಪಡೆದುಕೊಂಡಿದೆ. ಆಲ್ ವೀಲ್ ಡ್ರೈವ್ ಮಾದರಿಯು ಶೇ 7 ರಷ್ಟು ಬುಕಿಂಗ್ ಅನ್ನು ಪಡೆದುಕೊಂಡಿದೆ. ಉಳಿದಂತೆ ಮೈಲ್ಡ್ ಹೈಬ್ರಿಡ್ ಉಳಿದ ಬುಕಿಂಗ್‌ಗಳನ್ನು ಪಡೆದುಕೊಂಡಿದೆ.

ಮುಂದಿನ 3-4 ದಿನಗಳಲ್ಲಿ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಬೆಲೆ, ಡೆಲಿವರಿ ಮಾಹಿತಿ ಪ್ರಕಟಣೆ

ಪ್ರಬಲವಾದ ಹೈಬ್ರಿಡ್ ಎಂಜಿನ್‌ನೊಂದಿಗೆ ತರಲಾಗುತ್ತಿರುವ ಮೊದಲ ಮಾಡೆಲ್ ಇದಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ SUV 10 ರೂಪಾಂತರಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಇದು 8 ಮೈಲ್ಡ್ ಹೈಬ್ರಿಡ್ ಮತ್ತು 2 ಸ್ಟ್ರಾಂಗ್ ಹೈಬ್ರಿಡ್ ಅನ್ನು ಒಳಗೊಂಡಿದೆ.

ಮುಂದಿನ 3-4 ದಿನಗಳಲ್ಲಿ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಬೆಲೆ, ಡೆಲಿವರಿ ಮಾಹಿತಿ ಪ್ರಕಟಣೆ

ಮೈಲ್ಡ್ ಹೈಬ್ರಿಡ್ ಬಗ್ಗೆ ಮಾತನಾಡುವುದಾದರೆ, ಇದು ಸಿಗ್ಮಾ ಮ್ಯಾನುಯಲ್, ಡೆಲ್ಟಾ ಮ್ಯಾನುಯಲ್, ಝೀಟಾ ಮ್ಯಾನುಯಲ್, ಆಲ್ಫಾ ಮ್ಯಾನುಯಲ್, ಆಲ್ಫಾ 4WD ಮ್ಯಾನುಯಲ್, ಡೆಲ್ಟಾ ಆಟೋಮ್ಯಾಟಿಕ್, ಝೀಟಾ ಆಟೋಮ್ಯಾಟಿಕ್ ಮತ್ತು ಆಲ್ಫಾ ಆಟೋಮ್ಯಾಟಿಕ್ ಅನ್ನು ಒಳಗೊಂಡಿದೆ. ಮತ್ತೊಂದೆಡೆ, ಸ್ಟ್ರಾಂಗ್ ಹೈಬ್ರಿಡ್ Zeta + CVT ಮತ್ತು ಆಲ್ಫಾ + CVT ಅನ್ನು ಒಳಗೊಂಡಿದೆ.

ಮುಂದಿನ 3-4 ದಿನಗಳಲ್ಲಿ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಬೆಲೆ, ಡೆಲಿವರಿ ಮಾಹಿತಿ ಪ್ರಕಟಣೆ

ಮೈಲ್ಡ್ ಹೈಬ್ರಿಡ್ ಆಯ್ಕೆಯನ್ನು ಮಾರುತಿ ಗ್ರ್ಯಾಂಡ್ ವಿಟಾರಾದ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುವುದು, ಈ ಎಂಜಿನ್ 103 ಎಚ್‌ಪಿ ಪವರ್ ಮತ್ತು 137 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಒದಗಿಸುತ್ತದೆ. ಈ ಎಂಜಿನ್ ಸುಮಾರು 20-21 kmpl ಮೈಲೇಜ್ ನೀಡಬಲ್ಲದು.

ಮುಂದಿನ 3-4 ದಿನಗಳಲ್ಲಿ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಬೆಲೆ, ಡೆಲಿವರಿ ಮಾಹಿತಿ ಪ್ರಕಟಣೆ

5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆ ಇರುತ್ತದೆ. ಇದರಲ್ಲಿ ಆಲ್ ವೀಲ್ ಡ್ರೈವ್ ಅನ್ನು ಮ್ಯಾನುವಲ್‌ನೊಂದಿಗೆ ಮಾತ್ರ ನೀಡಲಾಗುವುದು. ಇದರ ಸ್ಟ್ರಾಂಗ್ ಹೈಬ್ರಿಡ್ ಬಗ್ಗೆ ಮಾತನಾಡುವುದಾದರೆ, ಇದು 1.5-ಲೀಟರ್ TNGA ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುವುದು.

ಮುಂದಿನ 3-4 ದಿನಗಳಲ್ಲಿ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಬೆಲೆ, ಡೆಲಿವರಿ ಮಾಹಿತಿ ಪ್ರಕಟಣೆ

ಇದನ್ನು ಟೊಯೋಟಾ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು 92.4 ಎಚ್‌ಪಿ ಪವರ್ ಮತ್ತು 122 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಒದಗಿಸುತ್ತದೆ. ಇದರ ಎಲೆಕ್ಟ್ರಿಕ್ ಮೋಟಾರ್ 80.2 ಎಚ್‌ಪಿ ಪವರ್ ಮತ್ತು 122 ನ್ಯೂಟನ್ ಮೀಟರ್‌ ಟಾರ್ಕ್ ಅನ್ನು ಒದಗಿಸುತ್ತದೆ. ಒಟ್ಟಾರೆಯಾಗಿ, ಈ ಎಂಜಿನ್ 115.56 ಎಚ್‌ಪಿ ಪವರ್‌ಅನ್ನು ಒದಗಿಸುತ್ತದೆ. ಜೊತೆಗೆ ಇಸಿವಿಟಿ ಗೇರ್‌ಬಾಕ್ಸ್ ಅನ್ನು ನೀಡಲಾಗುತ್ತದೆ.

ಮುಂದಿನ 3-4 ದಿನಗಳಲ್ಲಿ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಬೆಲೆ, ಡೆಲಿವರಿ ಮಾಹಿತಿ ಪ್ರಕಟಣೆ

ಮಾರುತಿ ಗ್ರಾಂಡ್ ವಿಟಾರಾ ತೂಕದ ಬಗ್ಗೆ ಮಾತನಾಡುವುದಾದರೆ, ಇದರ 2 ವೀಲ್ ಡ್ರೈವ್‌ ಮಾದರಿ 1645 ಕೆ.ಜಿ, 4 ವೀಲ್ ಡ್ರೈವ್‌ ಮಾದರಿ 1720 ಕೆ.ಜಿ ಮತ್ತು ಆಟೋಮ್ಯಾಟಿಕ್ ರೂಪಾಂತರ 1755 ಕೆ.ಜಿ ತೂಗುತ್ತದೆ. ಇದರ ಮೈಲೇಜ್ 27.97 kmpl ಆಗಿದೆ. ಗ್ರ್ಯಾಂಡ್ ವಿಟಾರಾ ಮ್ಯಾನುವಲ್ ಮಾದರಿ 21.11 kmpl, ಆಟೋಮ್ಯಾಟಿಕ್ 20.58 kmpl ಮತ್ತು AllGrip Manual 19.38 kmpl ಮೈಲೇಜ್ ನೀಡುತ್ತದೆ.

ಮುಂದಿನ 3-4 ದಿನಗಳಲ್ಲಿ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಬೆಲೆ, ಡೆಲಿವರಿ ಮಾಹಿತಿ ಪ್ರಕಟಣೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಆದರೆ ಇನ್ನೂ ಅನೇಕ ಗ್ರಾಹಕರು ಬೆಲೆ ಘೋಷಣೆಗಾಗಿ ಕಾಯುತ್ತಿದ್ದಾರೆ. ಕಂಪನಿಯು ಬೆಲೆಯ ವಿಷಯದಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ, ಆಗ ಮಾತ್ರ ಈ SUV ಖರೀದಿಯು ಉತ್ತಮವಾಗಿರುತ್ತದೆ. ನಾವು ಅದರ ಆರಂಭಿಕ ಬೆಲೆಯನ್ನು 11 ಲಕ್ಷ ರೂ. ಎಂದು ಅಂದಾಜಿಸಿದ್ದು, ಇದರ ಉನ್ನತ ರೂಪಾಂತರ 18 ಲಕ್ಷ ರೂ.ವರೆಗೆ ಇರಬಹುದು.

Most Read Articles

Kannada
English summary
Maruti Suzuki Grand Vitara price delivery information announcement in next 3 4 days
Story first published: Saturday, September 17, 2022, 17:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X