ಅತಿ ಹೆಚ್ಚು ಮೈಲೇಜ್ ನೀಡುವ ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಅನಾವರಣಗೊಳಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ತನ್ನ ಬಹುನೀರಿಕ್ಷಿತ ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ್ದು, ಹೊಸ ಕಾರು ಮಾದರಿಯು ಟೊಯೊಟಾ ಹೊಸ ಹೈರೈಡರ್ ಎಸ್‌ಯುವಿ ಮಾದರಿಯನ್ನು ಆಧರಿಸಿ ಬಿಡುಗಡೆಯಾಗಲಿದೆ.

ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಅನಾವರಣಗೊಳಿಸಿದ ಮಾರುತಿ ಸುಜುಕಿ

ಗ್ರ್ಯಾಂಡ್ ವಿಟಾರಾ ಮೂಲಕ ಜಾಗತಿಕವಾಗಿ ಮಹತ್ವದ ಬೆಳವಣಿಗೆ ಸಾಧಿಸುತ್ತಿರುವ ಸುಜುಕಿ ಕಂಪನಿಯು ಇದೀಗ ಐದನೇ ತಲೆಮಾರಿನ ಮಾದರಿಯನ್ನು ಹೈಬ್ರಿಡ್ ಮಾದರಿಯೊಂದಿಗೆ ಭಾರತದಲ್ಲಿ ತನ್ನ ಸಹಭಾಗಿತ್ವ ಕಂಪನಿಯ ಮಾರುತಿಯೊಂದಿಗೆ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಮಾದರಿಯಲ್ಲಿ ಮಾರುತಿ ಸುಜುಕಿ ಕಂಪನಿಯು ಟೊಯೊಟಾ ಹೈರೈಡರ್ ಮಾದರಿಯಲ್ಲಿ ಎಂಜಿನ್ ಆಯ್ಕೆಯನ್ನು ಎರವಲು ಪಡೆದುಕೊಳ್ಳಲಿದೆ.

ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಅನಾವರಣಗೊಳಿಸಿದ ಮಾರುತಿ ಸುಜುಕಿ

ರೀಬ್ಯಾಡ್ಜ್ ಆವೃತ್ತಿಗಳಿಗಾಗಿ ಭಾರತದಲ್ಲಿ ಹೊಸ ಯೋಜನೆ ರೂಪಿಸುತ್ತಿರುವ ಮಾರುತಿ ಸುಜುಕಿ ಮತ್ತು ಟೊಯೊಟಾ ಕಂಪನಿಗಳು ಇದೀಗ ಗ್ರ್ಯಾಂಡ್ ವಿಟಾರಾ ಹೊಸ ಹೈಬ್ರಿಡ್ ಮಾದರಿಗಾಗಿ ಟೊಯೊಟಾ ಅಭಿವೃದ್ದಿಪಡಿಸಿದ ಹೈಬ್ರಿಡ್ ಎಂಜಿನ್ ಬಳಕೆಗೆ ನಿರ್ಧರಿಸಿದೆ.

ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಅನಾವರಣಗೊಳಿಸಿದ ಮಾರುತಿ ಸುಜುಕಿ

ಪೆಟ್ರೋಲ್ ಹೈಬ್ರಿಡ್ ಎಂಜಿನ್ ಅಭಿವೃದ್ದಿಯಲ್ಲಿ ಈಗಾಗಲೇ ಸಾಕಷ್ಟು ಮುನ್ನಡೆ ಸಾಧಿಸಿರುವ ಟೊಯೊಟಾ ಕಂಪನಿಯು ಇದೀಗ ಹೈರೈಡರ್ ಮತ್ತು ಗ್ರಾಂಡ್ ವಿಟಾರಾ ಮಾದರಿಗಳಾಗಿ ವಿವಿಧ ಟ್ಯೂನ್ ಹೊಂದಿರುವ 1.5 ಲೀಟರ್ ಟಿಎನ್‌ಜಿಎ ಅಟ್ಕಿನ್ಸನ್ ಸೈಕಲ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ.

ಇದು ಸ್ವಯಂ ಚಾರ್ಜಿಂಗ್ ವೈಶಿಷ್ಟ್ಯತೆಯ ಪ್ರಬಲ ಹೈಬ್ರಿಡ್ ಎಂಜಿನ್ ಆಯ್ಕೆಯಾಗಿದ್ದು, ಇದು 115.56 ಬಿಎಚ್‌ಪಿ ಮತ್ತು 122 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಮೂಲಕ ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ 27.97 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಅನಾವರಣಗೊಳಿಸಿದ ಮಾರುತಿ ಸುಜುಕಿ

ಹೊಸ ಕಾರಿನಲ್ಲಿ ಇ-ಸಿವಿಟಿ ಗೇರ್‌ಬಾಕ್ಸ್‌ ಜೋಡಿಸಲಾಗಿದ್ದು, ಹೊಸ ಕಾರನ್ನು ಇವಿ, ಇಕೋ, ಪವರ್ ಮತ್ತು ನಾರ್ಮಲ್ ಡ್ರೈವ್ ಮೋಡ್‌ಗಳೊಂದಿಗೆ ಚಾಲನೆ ಮಾಡಬಹದು. ಇದರೊಂದಿಗೆ ಕಂಪನಿಯು ಹೊಸ ಗ್ರ್ಯಾಂಡ್ ವಿಟಾರಾದಲ್ಲಿ ತನ್ನ ಹೊಸ 1.5 ಲೀಟರ್ ಕೆ15ಸಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ನೀಡುತ್ತಿದೆ.

ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಅನಾವರಣಗೊಳಿಸಿದ ಮಾರುತಿ ಸುಜುಕಿ

ಇತ್ತೀಚೆಗೆ ಬಿಡುಗಡೆಯಾಗಿರುವ 2022ರ ಎರ್ಟಿಗಾ, ಎಕ್ಸ್ಎಲ್ ಮತ್ತು ಬ್ರೆಝಾ ಕಾರುಗಳಲ್ಲಿ ನೀಡಲಾಗಿರುವ 1.5-ಲೀಟರ್ ಕೆ15ಸಿ ಪೆಟ್ರೋಲ್ ಎಂಜಿನ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮೂಲಕ 103 ಬಿಎಚ್‌ಪಿ ಮತ್ತು 117 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಅನಾವರಣಗೊಳಿಸಿದ ಮಾರುತಿ ಸುಜುಕಿ

ಹೀಗಾಗಿ ಹೊಸ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು ಗ್ರಾಹಕರು ಸ್ಟ್ರಾಂಗ್ ಹೈಬ್ರಿಡ್ ಮತ್ತು ಮೈಲ್ಡ್ ಹೈಬ್ರಿಡ್ ವಿಭಾಗದಲ್ಲಿ ಆಯ್ಕೆ ಮಾಡಬಹುದಾಗಿದ್ದು, ಸ್ಟ್ರಾಂಡ್ ಹೈಬ್ರಿಡ್ ಎಂಜಿನ್ ಹೊಂದಿರುವ ಮಾದರಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 27.97 ಕಿ.ಮೀ ಮೈಲೇಜ್ ಹೊಂದಿದ್ದರೆ ಮೈಲ್ಡ್ ಹೈಬ್ರಿಡ್ ಮಾದರಿಯು ಪ್ರತಿ ಲೀಟರ್‌ಗೆ ಗರಿಷ್ಠ 21.11 ಕಿ.ಮೀ ಮೈಲೇಜ್ ನೀಡುತ್ತದೆ.

ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಅನಾವರಣಗೊಳಿಸಿದ ಮಾರುತಿ ಸುಜುಕಿ

ಮೈಲ್ಡ್ ಹೈಬ್ರಿಡ್ ಎಂಜಿನ್ ಮಾದರಿಯಲ್ಲಿ ಮಾರುತಿ ಸುಜುಕಿ ಕಂಪನಿಯು ಹೆಚ್ಚುವರಿಯಾಗಿ ಪ್ಯಾಡಲ್ ಶಿಫ್ಟರ್ ಜೊತೆಗೆ ಆಲ್-ಗ್ರಿಪ್ ಆಲ್ ವ್ಹೀಲ್ ಡ್ರೈವ್ ಟೆಕ್ನಾಲಜಿ ಜೋಡಣೆ ಮಾಡಲಿದ್ದು, ಇದರಲ್ಲಿ ಫ್ರಂಟ್ ವ್ಹೀಲ್ ಡ್ರೈವ್ ಮಾದರಿಯು ಮ್ಯಾನುವಲ್ ಆಯ್ಕೆಯೊಂದಿಗೆ ಪ್ರತಿ ಲೀಟರ್‌ಗೆ 21.11 ಕಿ.ಮೀ ಮೈಲೇಜ್ ಹೊಂದಿದ್ದರೆ ಆಲ್-ಗ್ರಿಪ್ ಆಲ್ ವ್ಹೀಲ್ ಡ್ರೈವ್ ಟೆಕ್ನಾಲಜಿ ಹೊಂದಿರುವ ಮಾದರಿಯು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ 19.38 ಕಿ.ಮೀ ಮೈಲೇಜ್ ನೀಡಲಿದೆ.

ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಅನಾವರಣಗೊಳಿಸಿದ ಮಾರುತಿ ಸುಜುಕಿ

ಇದರಲ್ಲಿ ಮೈಲ್ಡ್ ಹೈಬ್ರಿಡ್ ಮಾದರಿಗಿಂತ ಸ್ಟ್ರಾಂಗ್ ಹೈಬ್ರಿಡ್ ಹೊಂದಿರುವ ಮಾದರಿಯು ತುಸು ಹೆಚ್ಚಿನ ಮಟ್ಟದ ಫೀಚರ್ಸ್‌ಗಳೊಂದಿಗೆ ದುಬಾರಿ ಬೆಲೆ ಹೊಂದಿರಲಿದ್ದರೆ ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆ ಹೊಂದಿರುವ ಮಾದರಿಯು ಸಾಮಾನ್ಯ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಾದ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಮಾದರಿಗಳ ಪೆಟ್ರೋಲ್ ಮಾದರಿಗಳ ಬೆಲೆಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ.

ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಅನಾವರಣಗೊಳಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿಯು ಹೊಸ ಕಾರು ಮಾದರಿಯನ್ನು ಟೊಯೊಟಾ ಹೈರೈಡರ್ ಬಿಡುಗಡೆಯ ನಂತರವಷ್ಟೇ ಬಿಡುಗಡೆ ಮಾಡಲಿದ್ದು, ಹೊಸ ಕಾರು ಮಾದರಿಯು ಮುಂಬರುವ ದಸರಾ ವೇಳೆಗೆ ಗ್ರಾಹಕರ ಕೈತಲುಪುವ ನೀರಿಕ್ಷೆಯಿದೆ. ಹೊಸ ಕಾರು ಮಾದರಿಯ ಖರೀದಿಗಾಗಿ ಮಾರುತಿ ಸುಜುಕಿ ಕಂಪನಿಯು ಈಗಾಗಲೇ ರೂ. 11 ಸಾವಿರ ಮುಂಗಡದೊಂದಿಗೆ ಬುಕಿಂಗ್ ಆರಂಭಿಸಿದ್ದು, ಡೀಸೆಲ್ ಕಾರುಗಳ ಆಯ್ಕೆಯನ್ನು ಕೈಬಿಟ್ಟ ನಂತರ ಕಂಪನಿಯು ಇದೀಗ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್, ಸಿಎನ್‌ಜಿ ಕಾರುಗಳ ಮಾತ್ರ ಗಮನಹರಿಸುತ್ತಿದೆ.

ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಅನಾವರಣಗೊಳಿಸಿದ ಮಾರುತಿ ಸುಜುಕಿ

ಮುಂಬರುವ ದಿನಗಳಲ್ಲಿ ಕಂಪನಿಯು ಮತ್ತಷ್ಟು ಹೊಸ ಹೈಬ್ರಿಡ್ ಕಾರುಗಳ ಜೊತಗೆ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿಗಾಗಿ ಎದುರುನೋಡುತ್ತಿದ್ದು, ಹೊಸ ಗ್ರ್ಯಾಂಡ್ ವಿಟಾರಾ ಮಾದರಿಯು ಆಕರ್ಷಕ ಮೈಲೇಜ್‌ನೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಅನಾವರಣಗೊಳಿಸಿದ ಮಾರುತಿ ಸುಜುಕಿ

ಹೊಸ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ಹೊಸ ವಿನ್ಯಾಸದ ನೆಕ್ಸ್‌ವೇವ್ ಗ್ರಿಲ್ ನೀಡಿದ್ದು, ಇದು ಟೊಯೊಟಾದ ಹೈರೈಡರ್‌ಗಿಂತಲೂ ಭಿನ್ನವಾಗಿದೆ. ಇದನ್ನು ಹೊಳಪು ತುಂಬಿರುವ ಕಪ್ಪು ಬಣ್ಣದಲ್ಲಿ ಇರಿಸಲಾಗಿದ್ದು, ಡಾರ್ಕ್ ಕ್ರೋಮ್ ನೀಡಲಾಗಿದೆ. ಇದು 3-ಎಲಿಮೆಂಟ್ ಎಲ್ಇಡಿ ಡಿಆರ್‌ಎಲ್‌ಗಳನ್ನು ಒಳಗೊಂಡಿದ್ದು, ಎರಡೂ ಬದಿಗಳಲ್ಲಿ ಇಂಟಿಗ್ರೇಟೆಡ್ ಟರ್ನ್ ಲೈಟ್‌ಗಳು ಮತ್ತು 3-ಎಲಿಮೆಂಟ್ ಎಲ್ಇಡಿ ಟೈಲ್ ಲೈಟ್ ಅನ್ನು ಸಹ ನೀಡಲಾಗಿದೆ

ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಅನಾವರಣಗೊಳಿಸಿದ ಮಾರುತಿ ಸುಜುಕಿ

ಸ್ಟ್ರಾಂಗ್ ಹೈಬ್ರಿಡ್‌ ಮಾದರಿಯನ್ನು ಮೈಲ್ಡ್ ಹೈಬ್ರಿಡ್ ಮಾದರಿಗಿಂತ ವಿಭಿನ್ನ ಕಾಣಲು ಡಾರ್ಕ್ ಕ್ರೋಮ್ ನೀಡಲಾಗಿದ್ದರೆ ಮೈಲ್ಡ್ ಹೈಬ್ರಿಡ್ ರೂಪಾಂತರದಲ್ಲಿ ರಿಚ್ ಕ್ರೋಮ್ ನೀಡಲಾಗಿದ್ದು, ಮಸ್ಕ್ಯೂಲರ್ ವ್ಹೀಲ್ ಆರ್ಚ್, 17-ಇಂಚಿನ ಅಲಾಯ್ ಚಕ್ರಗಳು, ಹಿಂಭಾಗದಲ್ಲಿ ಎಲ್ಇಡಿ ಸ್ಟ್ರಿಪ್ ಆಕರ್ಷಕ ನೋಟವನ್ನು ನೀಡುತ್ತದೆ.

ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಅನಾವರಣಗೊಳಿಸಿದ ಮಾರುತಿ ಸುಜುಕಿ

ಇನ್ನು ಹೊಸ ಕಾರಿನ ಒಳಾಂಗಣದಲ್ಲಿ ಸಾಕಷ್ಟು ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ನೀಡಲಾಗಿದ್ದು, ಸ್ಟ್ರಾಂಗ್ ಹೈಬ್ರಿಡ್‌ ಮಾದರಿಯಲ್ಲಿ ಷಾಂಪೇನ್ ಗೋಲ್ಡನ್ ಆಕ್ಸೆಂಟ್ ಹೊಂದಿರುವ ಕಪ್ಪು ಫಕ್ಸ್ ಲೆದರ್ ಹೊಂದಿದ್ದರೆ ಮೈಲ್ಡ್ ಹೈಬ್ರಿಡ್ ಮಾದರಿಯಲ್ಲಿ ಸಿಲ್ವರ್ ಆಕ್ಸೆಂಟ್ ಹೊಂದಿರುವ ಬೋರ್ಡೆಕ್ಸ್ ಫಕ್ಸ್ ಲೆದರ್ ಹೊಂದಿದೆ.

ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಅನಾವರಣಗೊಳಿಸಿದ ಮಾರುತಿ ಸುಜುಕಿ

ಇದರಲ್ಲಿ ಫಕ್ಸ್ ಲೆದರ್ ಮತ್ತು ಡೋರ್‌ಗಳಲ್ಲಿ ಮ್ಯಾಚಿಂಗ್ ಆಕ್ಸೆಂಟ್‌ಗಳನ್ನು ನೀಡಲಾಗಿದ್ದು, ಕಪ್ಪು ಫಿನಿಶ್ ಅನ್ನು ಒಳಾಂಗಣದಲ್ಲಿ ಬಹುತೇಕ ಕಡೆಗಳಲ್ಲಿ ನೀಡಲಾಗಿರುವುದರಿಂದ ಕಾರಿನ ಪ್ರೀಮಿಯಂ ನೋಟವನ್ನು ಹೆಚ್ಚಿಸಲಿದೆ.

ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಅನಾವರಣಗೊಳಿಸಿದ ಮಾರುತಿ ಸುಜುಕಿ

ಹಾಗೆಯೇ ಹೊಸ ಕಾರಿನ ಮುಂಭಾಗದ ಆಸನಗಳಲ್ಲಿ ಚಾಲಕ ಮತ್ತು ಸಹ-ಚಾಲಕನಿಗೆ ವೆಂಟಿಲೇಷನ್ ವೈಶಿಷ್ಟ್ಯತೆಯ ಆಸನಗಳಿದ್ದು, ಹೆಡ್ಸ್-ಅಪ್ ಡಿಸ್ಪ್ಲೇ, 9-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ + ಇನ್ಫೋಟೈನ್‌ಮೆಂಟ್ ಸಿಸ್ಟಂ, ಪ್ರೀಮಿಯಂ ಸೌಂಡ್ ಸಿಸ್ಟಂ, ವಾಯ್ಸ್ ಅಸಿಸ್ಟ್ ಸಿಸ್ಟಂ, ವೈರ್‌ಲೆಸ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 360 ವ್ಯೂ ಕ್ಯಾಮೆರಾ, ಎಲ್‌ಇಡಿ ಇಂಡಿಕೇಟರ್ ಹೊಂದಿರುವ ವೈರ್‌ಲೆಸ್ ಚಾರ್ಜರ್, ಆಂಬಿಯೆಂಟ್ ಲೈಟಿಂಗ್, ಪನೋರಮಿಕ್ ಸನ್‌ರೂಫ್ ಸೌಲಭ್ಯಗಳಿವೆ.

ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಅನಾವರಣಗೊಳಿಸಿದ ಮಾರುತಿ ಸುಜುಕಿ

ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಹೊಸ ಪೀಳಿಗೆಯ ಸುಜುಕಿ ಕನೆಕ್ಟ್ ತಂತ್ರಜ್ಞಾನವನ್ನು ನೀಡಲಾಗಿದ್ದು, ಇದು ಸುಜುಕಿ ಕನೆಕ್ಟ್ ಅಪ್ಲಿಕೇಶನ್ ಮೂಲಕ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಅಲೆಕ್ಸಾ ಸ್ಕಿಲ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಅನಾವರಣಗೊಳಿಸಿದ ಮಾರುತಿ ಸುಜುಕಿ

ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇಎಸ್‌ಪಿ, ಹಿಲ್-ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು ಆರು ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ.

ಗ್ರ್ಯಾಂಡ್ ವಿಟಾರಾ ಮಾದರಿಯು ಮಾರುತಿ ಸುಜುಕಿಯ ಇದುವರೆಗಿನ ಕಾರುಗಳಲ್ಲಿ ವಿಭಿನ್ನವಾದ ಮಾದರಿಯಾಗಲಿದ್ದು, ಇದು 4345 ಎಂಎಂ ಉದ್ದಳತೆಯೊಂದಿಗೆ 1645 ಎಂಎಂ ಅಗಲ, 1795 ಎಂಎಂ ಎತ್ತರ ಮತ್ತು 2600 ಎಂಎಂ ವ್ಹೀಲ್‌ಬೆಸ್ ಮೂಲಕ ಉತ್ತಮ ಕ್ಯಾಬಿನ್ ಸೌಲಭ್ಯದೊಂದಿಗೆ ಹೆಚ್ಚಿನ ಗಾತ್ರದ ಬೂಟ್‌ಸ್ಪೆಸ್ ಒದಗಿಸುತ್ತದೆ.

Most Read Articles

Kannada
English summary
Maruti suzuki grand vitara unveiled in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X