ಶಿಘ್ರದಲ್ಲೇ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ XL 7-ಸೀಟರ್ ಬಿಡುಗಡೆ ಸಾಧ್ಯತೆ

ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಬ್ರ್ಯಾಂಡ್‌ನ ಭಾರತೀಯ ಶ್ರೇಣಿಯಲ್ಲಿನ ಮೊದಲ ಪ್ರಬಲ ಹೈಬ್ರಿಡ್ ಪೆಟ್ರೋಲ್ ಕಾರಾಗಿದ್ದು, ಮಾರುಕಟ್ಟೆಯಲ್ಲಿ ಈಗಾಗಲೇ ಈ ಕಾರಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಮುಂಬರುವ ದಿನಗಳಲ್ಲಿ ಮಾರುತಿ ಗ್ರ್ಯಾಂಡ್ ವಿಟಾರಾ 3-ಸಾಲು ಆವೃತ್ತಿಯನ್ನು ಸಹ ಪರಿಚಯಿಸಲಿದೆ ಎಂದು ತಿಳಿದುಬಂದಿದೆ.

ಶಿಘ್ರದಲ್ಲೇ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ XL 7-ಸೀಟರ್ ಬಿಡುಗಡೆ ಸಾಧ್ಯತೆ

ಮಾರುತಿ ಸುಜುಕಿ ಹೊಸ ಗ್ರಾಂಡ್ ವಿಟಾರಾ ಮಧ್ಯಮ ಗಾತ್ರದ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಕಾರು ಮಾರುಕಟ್ಟೆಗೆ ಲಗ್ಗೆಯಿಟ್ಟ ಬಳಿಕ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಫೋಕ್ಸ್ ವ್ಯಾಗನ್ ಟೈಗೂನ್, ಸ್ಕೋಡಾ ಕುಶಾಕ್ ಮತ್ತು ಮುಂಬರುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್‌ನಂತಹ ಪ್ರತಿಸ್ಪರ್ಧಿಗಳ ಪೈಪೋಟಿಯನ್ನು ಎದುರಿಸಲಿದೆ.

ಶಿಘ್ರದಲ್ಲೇ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ XL 7-ಸೀಟರ್ ಬಿಡುಗಡೆ ಸಾಧ್ಯತೆ

ಮಾರುತಿ ಸುಜುಕಿ ಹೊಸ ಗ್ರಾಂಡ್ ವಿಟಾರಾ ಕಾರು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಕಾರಣ ಭಾರತೀಯ ಕಾರು ತಯಾರಕರು ಗ್ರ್ಯಾಂಡ್ ವಿಟಾರಾದ ಏಳು-ಆಸನಗಳ ಆವೃತ್ತಿಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಇಲ್ಲಿಯವರೆಗೆ ತಿಳಿದಿರುವ ಪ್ರಕಾರ, ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಕ್ಸ್‌ಎಲ್ ತನ್ನ ಮೆಕ್ಯಾನಿಕಲ್‌ಗಳನ್ನು ಸ್ಟ್ಯಾಂಡರ್ಡ್ ಗ್ರ್ಯಾಂಡ್ ವಿಟಾರಾದೊಂದಿಗೆ ಹಂಚಿಕೊಳ್ಳಲಿದೆ.

ಶಿಘ್ರದಲ್ಲೇ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ XL 7-ಸೀಟರ್ ಬಿಡುಗಡೆ ಸಾಧ್ಯತೆ

ಅದೇ ವಿನ್ಯಾಸದೊಂದಿಗೆ ಗ್ರ್ಯಾಂಡ್ ವಿಟಾರಾ ಸುಜುಕಿಯ ಗ್ಲೋಬಲ್-ಸಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿಕೊಂಡು ಬಲವಾದ ಡೈನಾಮಿಕ್ಸ್‌ನೊಂದಿಗೆ ಬರಲಿದೆ. ವೀಲ್‌ಬೇಸ್ ಹೆಚ್ಚುವರಿ ಸಾಲಿನ ಆಸನಗಳನ್ನು ಸರಿಹೊಂದಿಸಲು ತುಸು ಉದ್ದವನ್ನು ಬೆಳಸಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಶಿಘ್ರದಲ್ಲೇ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ XL 7-ಸೀಟರ್ ಬಿಡುಗಡೆ ಸಾಧ್ಯತೆ

ಭಾರತದಲ್ಲಿ ಒಮ್ಮೆ ಬಿಡುಗಡೆಯಾದ ನಂತರ, ಗ್ರ್ಯಾಂಡ್ ವಿಟಾರಾ XL ಪ್ರತಿಸ್ಪರ್ಧಿಗಳಾದ ಹ್ಯುಂಡೈ ಅಲ್ಕಾಜರ್, ಟಾಟಾ ಸಫಾರಿ ಮತ್ತು MG ಹೆಕ್ಟರ್ ಪ್ಲಸ್ ಮಾದರಿಗಳನ್ನು ಎದುರಿಸಲಿದೆ. ಹೊಸ ಗ್ರ್ಯಾಂಡ್ ವಿಟಾರಾ XL 7-ಸೀಟರ್ SUV ಅದೇ ರೀತಿಯ ಡ್ಯಾಶ್‌ಬೋರ್ಡ್ ಲೇಔಟ್ ಮತ್ತು ವೈಶಿಷ್ಟ್ಯಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಶಿಘ್ರದಲ್ಲೇ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ XL 7-ಸೀಟರ್ ಬಿಡುಗಡೆ ಸಾಧ್ಯತೆ

ಕ್ಯಾಬಿನ್ ಮೂರು-ಸಾಲು ಆಸನ ವಿನ್ಯಾಸವನ್ನು ಪಡೆಯುವುದರಿಂದ ಹೆಚ್ಚು ಸೌಕರ್ಯದ ಮಟ್ಟವನ್ನು ಹೊಂದಿರಲಿದೆ. ಬೂಟ್‌ ಸ್ಪೇಸ್‌ನಲ್ಲಿ ಪ್ರಯಾಣಿಕರು ಆರಾಮದಾಯಕ ಪ್ರಯಾಣವನ್ನು ಮಾಡಬಹುದಾಗಿದ್ದು, ಮಧ್ಯಮ ಗಾತ್ರದ ಎಸ್‌ಯುವಿಗೆ ಹೋಲಿಸಿದರೆ XL 7-ಸೀಟರ್ ಹೆಚ್ಚು ಕಂಫರ್ಟ್ ಅನ್ನು ಒದಗಿಸಲಿದೆ.

ಶಿಘ್ರದಲ್ಲೇ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ XL 7-ಸೀಟರ್ ಬಿಡುಗಡೆ ಸಾಧ್ಯತೆ

ಒಂಬತ್ತು-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 360-ಡಿಗ್ರಿ ಕ್ಯಾಮೆರಾ ಸಿಸ್ಟಮ್, HUD, ಆರು ಏರ್‌ಬ್ಯಾಗ್‌ಗಳು, ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್ ಮತ್ತು ದೊಡ್ಡ ಪನಾರಮಿಕ್ ಸನ್‌ರೂಫ್‌ನಂತಹ ವೈಶಿಷ್ಟ್ಯಗಳನ್ನು ಈ ಏಳು ಆಸನಗಳ SUV ಯೊಂದಿಗೆ ನೀಡಲಾಗುವುದು.

ಶಿಘ್ರದಲ್ಲೇ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ XL 7-ಸೀಟರ್ ಬಿಡುಗಡೆ ಸಾಧ್ಯತೆ

ಇನ್ನು ಪವರ್‌ಟ್ರೇನ್ ಆಯ್ಕೆಗಳು ಒಂದೇ ರೀತಿ ಉಳಿಯುವ ಸಾಧ್ಯತೆಯಿದೆ. ಮುಂಬರುವ 7-ಆಸನಗಳ ಗ್ರಾಂಡ್ ವಿಟಾರಾವನ್ನು 1.5L ಪ್ರಬಲ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಮತ್ತು 1.5L K15C ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. 1.5L TNGA ಅಟ್ಕಿನ್ಸನ್ ಹೈಬ್ರಿಡ್ ಎಂಜಿನ್ 115 bhp ಯ ಸಂಯೋಜಿತ ಪವರ್ ಔಟ್‌ಪುಟ್ ಅನ್ನು ಹೊರಹಾಕುತ್ತದೆ ಮತ್ತು eCVT ಗೇರ್‌ಬಾಕ್ಸ್‌ಗೆ ಜೋಡಿಸಲಾಗಿರುತ್ತದೆ.

ಶಿಘ್ರದಲ್ಲೇ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ XL 7-ಸೀಟರ್ ಬಿಡುಗಡೆ ಸಾಧ್ಯತೆ

ಮತ್ತೊಂದೆಡೆ 1.5L K15C ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ 103 bhp ಮತ್ತು 117 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಅಥವಾ ಹೊಸ 6-ಸ್ಪೀಡ್ ಸ್ವಯಂಚಾಲಿತ ಟಾರ್ಕ್ ಪರಿವರ್ತಕ ಗೇರ್‌ಬಾಕ್ಸ್‌ನೊಂದಿಗೆ ನೀಡಲಾಗುವುದು.

ಶಿಘ್ರದಲ್ಲೇ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ XL 7-ಸೀಟರ್ ಬಿಡುಗಡೆ ಸಾಧ್ಯತೆ

ಮಾರುತಿ ಸುಜುಕಿ ಇಂಡಿಯಾ ಭಾರತದಲ್ಲಿ ಹೊಸ ಗ್ರ್ಯಾಂಡ್ ವಿಟಾರಾ XL ನ ಅಧಿಕೃತ ಬಿಡುಗಡೆಯ ಟೈಮ್‌ಲೈನ್ ಅನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಆರ್ಥಿಕ ವರ್ಷ 2024 ರಲ್ಲಿ ಅದರ ಬಿಡುಗಡೆಯನ್ನು ನಿರೀಕ್ಷಿಸಲಾಗಿದೆ.

ಶಿಘ್ರದಲ್ಲೇ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ XL 7-ಸೀಟರ್ ಬಿಡುಗಡೆ ಸಾಧ್ಯತೆ

ದಕ್ಷಿಣ ಆಫ್ರಿಕಾದಲ್ಲಿ ಅನಾವರಣ

ಮೇಡ್-ಇನ್-ಇಂಡಿಯಾ ಸುಜುಕಿ ಗ್ರಾಂಡ್ ವಿಟಾರಾವನ್ನು ಈಗ ದಕ್ಷಿಣ ಆಫ್ರಿಕಾದ ಸಾರ್ವಜನಿಕರಿಗೆ ಪ್ರದರ್ಶಿಸಲಾಗಿದೆ. ಇದನ್ನು ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಗೊಳಿಸಲಾಗುವುದು. ಗ್ರ್ಯಾಂಡ್ ವಿಟಾರಾ ದಕ್ಷಿಣ ಆಫ್ರಿಕಾದಲ್ಲಿ ಸುಜುಕಿಯ ಪ್ರಮುಖ ಮಾದರಿಯಾಗಿದೆ.

ಶಿಘ್ರದಲ್ಲೇ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ XL 7-ಸೀಟರ್ ಬಿಡುಗಡೆ ಸಾಧ್ಯತೆ

ಆಗಸ್ಟ್ 26-28 ರಂದು ನಡೆದ ಕಯಾಲಾಮಿಯಲ್ಲಿ ಮೋಟಾರಿಂಗ್ ಉತ್ಸವದಲ್ಲಿ ಎಸ್‌ಯುವಿಯನ್ನು ಪ್ರದರ್ಶಿಸಿದರು. ಈ ಹೊಸ ಮಾರುತಿ ಗ್ರಾಂಡ್ ವಿಟಾರಾವನ್ನು 3 ಗೇರ್‌ಬಾಕ್ಸ್ ಸಂಯೋಜನೆಯೊಂದಿಗೆ ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.

ಶಿಘ್ರದಲ್ಲೇ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ XL 7-ಸೀಟರ್ ಬಿಡುಗಡೆ ಸಾಧ್ಯತೆ

ಮಾರುತಿ ಗ್ರ್ಯಾಂಡ್ ವಿಟಾರಾ ಸ್ಮಾರ್ಟ್ ಹೈಬ್ರಿಡ್ ಸಿಸ್ಟಂನೊಂದಿಗೆ ಹೊಸ ಗ್ರಾಂಡ್ ವಿಟಾರಾ ಪೆಟ್ರೋಲ್ ಆವೃತ್ತಿಯು 4 ರೂಪಾಂತರಗಳಲ್ಲಿ ಲಭ್ಯವಿದೆ. ಇದು ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ ಆಗಿದೆ. ಈ ಎಲೆಕ್ಟ್ರಿಕ್ ಹೈಬ್ರಿಡ್ ಆವೃತ್ತಿಯು Zeta+ ಮತ್ತು Alpha ಎರಡು ಟ್ರಿಮ್‌ಗಳಲ್ಲಿ ಲಭ್ಯವಿದೆ. ಈ ಹೊಸ ಎಸ್‌ಯುವಿಯನ್ನು ಸುಜುಕಿಯ ಗ್ಲೋಬಲ್-ಸಿ ಪ್ಲಾಟ್‌ಫಾರ್ಮ್‌ ಅಢಿಯಲ್ಲಿ ಅಭಿವೃದ್ಧಿಪಡಿಸಿದೆ.

ಶಿಘ್ರದಲ್ಲೇ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ XL 7-ಸೀಟರ್ ಬಿಡುಗಡೆ ಸಾಧ್ಯತೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಬಿಡುಗಡೆಯಾಗಲಿರುವ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ XL 7-ಸೀಟರ್ ಎಸ್‍ಯುವಿಯು ಅಧಿಕ ಮೈಲೇಜ್, ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳೊಂದಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಈಗಾಗಲೇ ಮಧ್ಯ ಘಾತ್ರದ ಗ್ರಾಂಡ್‌ ವಿಟಾರಾ ಗ್ರಾಹಕರಲ್ಲಿ ಉತ್ತಮ ಬುಕಿಂಗ್ಸ್ ಪಡೆದುಕೊಂಡಿದೆ. ಹಾಗೆಯೇ XL 7-ಸೀಟರ್ ಮಾದರಿಯು ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವ ನಿರೀಕ್ಷೆಯಿದೆ.

Most Read Articles

Kannada
English summary
Maruti Suzuki Grand Vitara XL 7 seater likely to launch soon
Story first published: Saturday, September 3, 2022, 17:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X