ಸೇನೆಯಿಂದ ನಿವೃತ್ತಿಯಾಗಲಿದೆ ಮಾರುತಿ ಜಿಪ್ಸಿ: ಶೀಘ್ರದಲ್ಲೇ ಭೂಪಡೆಗೆ ಸೇರಲಿವೆ 4X4 ಮಾದರಿಗಳು

1984 ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಮಾರುತಿ ಸುಜುಕಿ ಜಿಪ್ಸಿ ಸುಮಾರು ಎರಡು ದಶಕಗಳಿಂದ ಭಾರತೀಯ ಸೇನೆಯ ಹೆಮ್ಮೆಯ ವಾಹನವಾಗಿದೆ. ಪ್ರಸ್ತುತ ಸಶಸ್ತ್ರ ಪಡೆಗಳು ಈ ವಾಹನವನ್ನು ಹಲವಾರು ಬ್ಯಾಚ್‌ಗಳಲ್ಲಿ ಬಳಸುತ್ತಿದ್ದು, ಇದರ ಕೆಲವು ಅಂತಿಮ ಘಟಕಗಳನ್ನು ಒಪ್ಪಂದದಂತೆ 2020ರ ಅಂತ್ಯದ ವೇಳೆಗೆ ತಲುಪಿಸಲಾಗಿದೆ.

ಸೇನೆಯಿಂದ ನಿವೃತ್ತಿಯಾಗಲಿದೆ ಮಾರುತಿ ಜಿಪ್ಸಿ: ಶೀಘ್ರದಲ್ಲೇ ಭೂಪಡೆಗೆ ಸೇರಲಿವೆ 4X4 ಮಾದರಿಗಳು

ಹಾಗಾಗಿ ಭಾರತೀಯ ಸೇನೆಯು ಜಿಪ್ಸಿಗೆ ಬದಲಿ ವಾಹನವನ್ನು ಹುಡುಕಲು ಪ್ರಾರಂಭಿಸಿದೆ. ಕಳೆದ ವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ ಸಭೆಯಲ್ಲಿ ಜಿಎಸ್ (ಜನರಲ್ ಸರ್ವೀಸ್)ಗಾಗಿ ಲಘು ವಾಹನ (ಡಿಎಸಿ) 4×4 ಅನ್ನು ಖರೀದಿಸುವ ಸೇನೆಯ ಪ್ರಸ್ತಾಪಕ್ಕೆ ಹಸಿರು ನಿಶಾನೆ ತೋರಲಾಗಿದೆ. ಸಾಫ್ಟ್ ಟಾಪ್ ಹೊಂದಿರುವ ಹೊಸ 4×4 ವಾಹನಗಳಿಗೆ ಭಾರತೀಯ ಸೇನೆಯಿಂದ ಮುಂಬರುವ ತಿಂಗಳುಗಳಲ್ಲಿ ಬೇಡಿಕೆ ಬರಬಹುದು ಎಂದು ಹೇಳಲಾಗುತ್ತಿದೆ.

ಸೇನೆಯಿಂದ ನಿವೃತ್ತಿಯಾಗಲಿದೆ ಮಾರುತಿ ಜಿಪ್ಸಿ: ಶೀಘ್ರದಲ್ಲೇ ಭೂಪಡೆಗೆ ಸೇರಲಿವೆ 4X4 ಮಾದರಿಗಳು

ಮಾರುತಿ ಜಿಪ್ಸಿಯನ್ನು 1984 ರಲ್ಲಿ ಮಾರುತಿ 800 (ಎಸ್ಎಸ್ 80) ಮತ್ತು ಮಾರುತಿ ಓಮ್ನಿಯೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿತ್ತು. ಪ್ರಸ್ತುತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ 35,000ಕ್ಕೂ ಹೆಚ್ಚು ಮಾರುತಿ ಜಿಪ್ಸಿ ವಾಹನಗಳನ್ನು ಹಂತ ಹಂತವಾಗಿ ಬದಲಾಯಿಸಲಾಗುವುದು.

ಸೇನೆಯಿಂದ ನಿವೃತ್ತಿಯಾಗಲಿದೆ ಮಾರುತಿ ಜಿಪ್ಸಿ: ಶೀಘ್ರದಲ್ಲೇ ಭೂಪಡೆಗೆ ಸೇರಲಿವೆ 4X4 ಮಾದರಿಗಳು

ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಜಿಪ್ಸಿಯನ್ನು ಬಹಳ ವರ್ಷಗಳ ಹಿಂದೆಯೇ ನಿಲ್ಲಿಸಲಾಗಿದ್ದರೂ, ಇಂಡೋ-ಜಪಾನಿನ ತಯಾರಕ ಕಂಪನಿಯು ಭಾರತೀಯ ಸಶಸ್ತ್ರ ಪಡೆಗಳ ಅಗತ್ಯಗಳನ್ನು ಪೂರೈಸಲು ಮಾರುತಿ ಸುಜುಕಿ ಜಿಪ್ಸಿ ಉತ್ಪಾದನೆಯನ್ನು ಮುಂದುವರಿಸಿತ್ತು. ಈ ಎಸ್‌ಯುವಿಯ ಬಲವಾದ ಕಾರ್ಯಕ್ಷಮತೆ ಮತ್ತು ಎಲ್ಲಿಗಾದರೂ ಹೋಗುವ ಸಾಮರ್ಥ್ಯವು ಭಾರತೀಯ ಸೇನೆಗೆ ಉತ್ತಮ ಆಯ್ಕೆಯಾಗಿತ್ತು.

ಸೇನೆಯಿಂದ ನಿವೃತ್ತಿಯಾಗಲಿದೆ ಮಾರುತಿ ಜಿಪ್ಸಿ: ಶೀಘ್ರದಲ್ಲೇ ಭೂಪಡೆಗೆ ಸೇರಲಿವೆ 4X4 ಮಾದರಿಗಳು

ಸಶಸ್ತ್ರ ಪಡೆಗಳ ಹೆಚ್ಚಿನ ಬೇಡಿಕೆ ಮತ್ತು ಅದನ್ನು ಸೈನ್ಯದಲ್ಲಿ ಬಳಸಲು ಮತ್ತೊಮ್ಮೆ ಆದೇಶಗಳು ಬಂದ ಹಿನ್ನೆಲೆ ಮಾರುತಿ ಸುಜುಕಿಯನ್ನು 2020ರ ವರೆಗೆ ಪೂರೈಸಲಾಗಿದೆ. ಈಗ ಭಾರತೀಯ ಸೇನೆಯಲ್ಲಿ ಸುದೀರ್ಘ ಸೇವೆಯ ನಂತರ, ಮಾರುತಿ ಸುಜುಕಿ ಜಿಪ್ಸಿ ನಿವೃತ್ತಿ ಹೊಂದುವ ಮತ್ತು ಭಾರತೀಯ ಸೇನೆಯ ಹೊಸ ಅಗತ್ಯಗಳನ್ನು ಪೂರೈಸುವ ಹೆಚ್ಚು ಸುಧಾರಿತ 4X4 ಗಳಿಗೆ ದಾರಿ ಮಾಡಿಕೊಡುವ ಸಮಯ ಬಂದಿದೆ.

ಸೇನೆಯಿಂದ ನಿವೃತ್ತಿಯಾಗಲಿದೆ ಮಾರುತಿ ಜಿಪ್ಸಿ: ಶೀಘ್ರದಲ್ಲೇ ಭೂಪಡೆಗೆ ಸೇರಲಿವೆ 4X4 ಮಾದರಿಗಳು

ಈ ಪ್ರಕ್ರಿಯೆಯ ಭಾಗವಾಗಿ ಭಾರತೀಯ ಸೇನೆಯಲ್ಲಿರುವ ಮಾರುತಿ ಸುಜುಕಿ ಜಿಪ್ಸಿಯ ಎಲ್ಲಾ 35,000 ಯುನಿಟ್‌ಗಳನ್ನು ಮಾರಾಟ ಮಾಡಿ, ಅದರ ಸ್ಥಾನಕ್ಕೆ ಹೊಸ 4X4 ಮಾದರಿಗಳನ್ನು ಬದಲಾಯಿಸಲಾಗುವುದು. ಲಘು ವಾಹನಗಳ ಜಿಎಸ್ 4×4 ಖರೀದಿಸುವ ಭಾರತೀಯ ಸೇನೆಯ ಪ್ರಸ್ತಾಪಕ್ಕೆ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಅನುಮೋದನೆ ನೀಡಿರುವುದರಿಂದ ಇದನ್ನು ಹಂತ ಹಂತವಾಗಿ ಮಾಡಲಾಗುವುದು.

ಸೇನೆಯಿಂದ ನಿವೃತ್ತಿಯಾಗಲಿದೆ ಮಾರುತಿ ಜಿಪ್ಸಿ: ಶೀಘ್ರದಲ್ಲೇ ಭೂಪಡೆಗೆ ಸೇರಲಿವೆ 4X4 ಮಾದರಿಗಳು

ಮಾರುತಿ ತನ್ನ ಜಿಪ್ಸಿ ಕಾರನ್ನು ಪರಿಷ್ಕರಿಸದೇ ಇರುವುದು ಅಥವಾ ಆಧುನಿಕಗೊಳಿಸದೇ ಇರುವುದು ಭಾರತೀಯ ಸೈನ್ಯ ಈ ನಿರ್ಧಾರ ಕೈಗೊಳ್ಳಲು ಮುಖ್ಯ ಕಾರಣ ಎನ್ನಲಾಗಿದೆ. ಅತಿ ಹೆಚ್ಚಿನ ಮಟ್ಟದ ಆದ್ಯತೆಗಳನ್ನು ಪೂರೈಸಲು ಮಾರುತಿ ಕಂಪನಿ ವಿಫಲಗೊಂಡ ಕಾರಣ ಈ ಹಿಂದೆ ಭಾರತೀಯ ಸೈನ್ಯ ಈ ಹಿಂದೆ ಸಫಾರಿ ಸ್ಟಾರ್ಮ್ ಮೊರೆ ಹೋಗಿತ್ತು. ಪ್ರಸ್ತುತ ಟಾಟಾ ಸಫಾರಿ ಸ್ಟಾರ್ಮ್ ಭಾರತೀಯ ಸೇನೆಯೊಂದಿಗೆ ಸಂಬಂಧ ಹೊಂದಿದೆ.

ಸೇನೆಯಿಂದ ನಿವೃತ್ತಿಯಾಗಲಿದೆ ಮಾರುತಿ ಜಿಪ್ಸಿ: ಶೀಘ್ರದಲ್ಲೇ ಭೂಪಡೆಗೆ ಸೇರಲಿವೆ 4X4 ಮಾದರಿಗಳು

ಪ್ರಸ್ತುತ ಟಾಟಾ ಸಫಾರಿ ಸ್ಟಾರ್ಮ್ ಅನ್ನು ಮಾರುಕಟ್ಟೆಯಲ್ಲಿ ಉತ್ಪಾದನೆಯನ್ನು ನಿಲ್ಲಿಸಿದ್ದರೂ ಸಹ ಭಾರತೀಯ ಸೇನೆಗೆ ಸೇವೆ ಸಲ್ಲಿಸುತ್ತಿದೆ. ಇದಲ್ಲದೆ, ಭಾರತೀಯ ಸೇನೆಯು 2017 ರಲ್ಲಿ ಟಾಟಾ ಮೋಟಾರ್ಸ್‌ನೊಂದಿಗೆ 3,000ಕ್ಕೂ ಹೆಚ್ಚು ಟಾಟಾ ಸಫಾರಿ ಸ್ಟಾರ್ಮ್ ಎಸ್‌ಯುವಿಗಳನ್ನು ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿದೆ. ಟಾಟಾ ಮೋಟಾರ್ಸ್ ಕೂಡ ಚೆನ್ನೈನಲ್ಲಿ ನಡೆದ 2018ರ ಡಿಫೆನ್ಸ್ ಎಕ್ಸ್ಪೋದಲ್ಲಿ ಸ್ಟಾರ್ಮ್‌ನ 3-ಡೋರ್ ಸಾಫ್ಟ್-ಟಾಪ್ ಆವೃತ್ತಿಯನ್ನು ಸಹ ಪ್ರದರ್ಶಿಸಿತ್ತು.

ಸೇನೆಯಿಂದ ನಿವೃತ್ತಿಯಾಗಲಿದೆ ಮಾರುತಿ ಜಿಪ್ಸಿ: ಶೀಘ್ರದಲ್ಲೇ ಭೂಪಡೆಗೆ ಸೇರಲಿವೆ 4X4 ಮಾದರಿಗಳು

ಪರ್ವತಗಳಂತಹ ಒರಟಾದ ಭೂಪ್ರದೇಶಗಳಲ್ಲಿ ಬಳಸಬಹುದಾದ ಸಾಫ್ಟ್-ಟಾಪ್ 4×4 ವಾಹನವನ್ನು ಭಾರತೀಯ ಸೇನೆ ಸದ್ಯ ಹುಡುಕುತ್ತಿದೆ. ಸಾಫ್ಟ್-ಟಾಪ್ ವಾಹನವು ಹೆಚ್ಚು ಬಹುಮುಖವಾಗಿರಲಿದೆ. ಏಕೆಂದರೆ ಇದು ಸೈನಿಕರಿಗೆ ರೈಫಲ್‌ಗಳು, ಬಂದೂಕುಗಳು ಮತ್ತು ಮೊಬೈಲ್ ಸಂವಹನ ವ್ಯವಸ್ಥೆಗಳಿಗೆ ಅನುವು ಮಾಡಿಕೊಡುತ್ತದೆ.

ಸೇನೆಯಿಂದ ನಿವೃತ್ತಿಯಾಗಲಿದೆ ಮಾರುತಿ ಜಿಪ್ಸಿ: ಶೀಘ್ರದಲ್ಲೇ ಭೂಪಡೆಗೆ ಸೇರಲಿವೆ 4X4 ಮಾದರಿಗಳು

ಹಾಗಾಗಿ ಇತ್ತೀಚಿನ ಅವಶ್ಯಕತೆಗಳಿಗೆ ಅನುಗುಣವಾಗಿ ಭಾರತೀಯ ಸೇನೆಯು 4,964 ಹೊಸ 4X4 ಗಳ ಖರೀದಿಗೆ ಅನುಮತಿ ಪಡೆದಿದೆ ಎಂದು ವರದಿಯಾಗಿದೆ. ಇದು ಸರ್ಕಾರದ ಅವಶ್ಯಕತೆಯಾಗಿರುವುದರಿಂದ ವಿವಿಧ ಮಾರಾಟಗಾರರಿಂದ 4X4 ಗಳನ್ನು ಮೌಲ್ಯಮಾಪನ ಮಾಡಲು ಒಂದು ಪ್ರಯೋಗವನ್ನು ನಡೆಸಲಾಗುವುದು.

ಸೇನೆಯಿಂದ ನಿವೃತ್ತಿಯಾಗಲಿದೆ ಮಾರುತಿ ಜಿಪ್ಸಿ: ಶೀಘ್ರದಲ್ಲೇ ಭೂಪಡೆಗೆ ಸೇರಲಿವೆ 4X4 ಮಾದರಿಗಳು

ಈ ಪ್ರಯೋಗದ ಬಳಿಕ ಭಾರತೀಯ ಸೇನೆಯು ಶೀಘ್ರದಲ್ಲೇ ಟೆಂಡರ್ ಕರೆಯುವ ನಿರೀಕ್ಷೆಯಿದೆ. ಇತ್ತೀಚಿನ ಅವಶ್ಯಕತೆಗಳ ಪ್ರಕಾರ, ಡಿಎಸಿ ಕನಿಷ್ಠ ಕೆರ್ಬ್ ತೂಕವನ್ನು 500 ಕೆಜಿಯಿಂದ 800 ಕೆಜಿಗೆ ಹೆಚ್ಚಿಸಿದೆ. ಪ್ರಸ್ತುತ ಈ ಸೌಲಭ್ಯಗಳನ್ನೊಳಗೊಂಡು ಅಸ್ತಿತ್ವದಲ್ಲಿರುವ ಕಂಪನಿಗಳ ಪ್ಲಾಟ್ಫಾರ್ಮ್ ಆಧಾರದ ಮೇಲೆ ಹೊಸ ವಾಹನವನ್ನು ಪರಿಚಯಿಸಬಹುದು.

ಸೇನೆಯಿಂದ ನಿವೃತ್ತಿಯಾಗಲಿದೆ ಮಾರುತಿ ಜಿಪ್ಸಿ: ಶೀಘ್ರದಲ್ಲೇ ಭೂಪಡೆಗೆ ಸೇರಲಿವೆ 4X4 ಮಾದರಿಗಳು

ಮಾರುತಿ ಸುಜುಕಿ ಜಿಪ್ಸಿ ಬದಲಿ ಆಯ್ಕೆಗೆ ಮಹೀಂದ್ರಾ ಮತ್ತು ಫೋರ್ಸ್ ಮೋಟಾರಸ್‌ನ 4X4ಗಳು ಮೌಲ್ಯಮಾಪನ ಮತ್ತು ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಭಾರವಾದ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊತ್ತೊಯಲು ಬಲವಾದ ವಾಹನ ಬೇಕಿದ್ದು, ಜಿಪ್ಸಿಯನ್ನು ಬದಲಾಯಿಸಲು ಇದು ಸರಿಯಾದ ಸಮಯ ಎಂದೇ ಹೇಳಬಹುದು.

Most Read Articles

Kannada
English summary
Maruti suzuki gypsy to retire from indian army new 4x4s will soon join the fleet
Story first published: Thursday, March 31, 2022, 12:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X