ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಾರುತಿ ಸುಜುಕಿ ಎರ್ಟಿಗಾ ಕಾರು

ಬಹುಪಯೋಗಿ 7-ಸೀಟರ್ ವಾಹನಗಳ ಕನಸು ಕಾಣುವುದನ್ನು ಮಾರುತಿ ಸುಜುಯು ಎರ್ಟಿಗಾ ಮಾದರಿಯ ಮೂಲಕ ಸಾಮಾನ್ಯ ಜನರಿಗೆ ಕಲ್ಪಿಸಿತು. ಈ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿಯು ಭಾರತೀಯ ಮಾರುಕಟ್ಟೆಯಲ್ಲಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಾರುತಿ ಸುಜುಕಿ ಎರ್ಟಿಗಾ ಕಾರು

ಇದೀಗ ಮಾರುತಿ ಸುಜುಕಿ ಕಂಪನಿಯು ಎರ್ಟಿಗಾ ಎಂಪಿವಿಯ ಬೆಲೆಯನ್ನು 6000 ರೂ.ಗಳಷ್ಟು ಹೆಚ್ಚಿಸಿದೆ, ಈ ಎಂಪಿವಿಯ ಎಲ್ಲಾ ರೂಪಾಂತರಗಳ ಬೆಲೆಯನ್ನು ಹೆಚ್ಚಿಸಿದೆ. ಇದರೊಂದಿಗೆ, ಎರ್ಟಿಗಾದ ಎಲ್ಲಾ ರೂಪಾಂತರಗಳಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಅನ್ನು ಸ್ಟ್ಯಾಂಡರ್ಡ್ ಆಗಿ ಒದಗಿಸಲಾಗುವುದು ಎಂದು ತಿಳಿಸಲಾಗಿದೆ. ಇದೀಗ ಮಾರುತಿ ಎರ್ಟಿಗಾ ಎಂಪಿವಿಯ ಆರಂಭಿಕ ಬೆಲೆಯು ರೂ.8.41 ಲಕ್ಷವಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಾರುತಿ ಸುಜುಕಿ ಎರ್ಟಿಗಾ ಕಾರು

ಮೊದಲಿಗೆ ಎರ್ಟಿಗಾ ಎಂಪಿವಿ ಬಗ್ಗೆ ಹೇಳುವುದಾದರೆ, ಇತ್ತೀಚೆಗೆ ಅತ್ಯಾಧುನಿಕ ವೈಶಿಷ್ಟ್ಯ ವ್ಯವಸ್ಥೆಗಳೊಂದಿಗೆ ಕಿಯಾ ಕಾರೆನ್ಸ್‌ನ ಆಗಮನದೊಂದಿಗೆ ಕಾಂಪ್ಯಾಕ್ಟ್ ಎಂಪಿವಿ ವಿಭಾಗದಲ್ಲಿ ಈ ಸಾಧನೆಯನ್ನು ಸಾಧಿಸಿದೆ ಎಂಬುದು ಗಮನಿಸಬೇಕಾದ ಸಂಗತಿ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಾರುತಿ ಸುಜುಕಿ ಎರ್ಟಿಗಾ ಕಾರು

ಪರಿಷ್ಕೃತ ಮಾರುತಿ ಸುಜುಕಿ ಎರ್ಟಿಗಾ ದೇಶದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾಗುವ ಪ್ರಯಾಣಿಕ ಕಾರು ಎನಿಸಿಕೊಂಡಿದೆ. ಇದು ಟೊಯೊಟಾ ಇನೋವಾ ಕ್ರಿಸ್ಟಗಿಂತ ಸ್ಥಳೀಯವಾಗಿ ಹೆಚ್ಚು ಮಾರಾಟವಾಗುವ ಎಂಪಿವಿ ಆಗಿ ಗುರುತಿಸಿಕೊಂಡಿದೆ. ಎರ್ಟಿಗಾ ಕೆಲವು ಸೂಕ್ಷ್ಮ ಮಾರ್ಪಾಡುಗಳೊಂದಿಗೆ ಮಾರುಕಟ್ಟೆಗೆ ಬಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಾರುತಿ ಸುಜುಕಿ ಎರ್ಟಿಗಾ ಕಾರು

ಆದರೆ ಮೂಂದಿನ ಮಾದರಿಯಲ್ಲಿ ಮಾರುತಿ ಸುಜುಕಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಒಳಾಂಗಣಕ್ಕೆ ಪರಿಚಯಿಸುತ್ತಿದೆ. ಎಂಜಿನ್ ಆಯ್ಕೆಯಲ್ಲಿ ವಾಹನವು ನವೀಕರಣಗಳನ್ನು ಸಹ ಪಡೆಯುತ್ತದೆ. ಎರ್ಟಿಗಾ ಫೇಸ್‌ಲಿಫ್ಟ್ ಎಂಪಿವಿ ಪ್ರಗತಿಶೀಲ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಹೊಸ 1.5-ಲೀಟರ್ K15C ನಾಲ್ಕು ಸಿಲಿಂಡರ್ ಡ್ಯುಯಲ್-ಜೆಟ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಾರುತಿ ಸುಜುಕಿ ಎರ್ಟಿಗಾ ಕಾರು

ಈ ಎಂಜಿನ್ 103 ಬಿಹೆಚ್‍ಪಿ ಪವರ್ ಮತ್ತು 136 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಅಥವಾ ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಹೊಸ ಸಿಕ್ಸ್‌-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಇದನ್ನು ಆಯ್ಕೆ ಮಾಡಬಹುದು. ಮಾರುತಿ ಸುಜುಕಿಯು ಫೇಸ್‌ಲಿಫ್ಟ್ ಎರ್ಟಿಗಾದ ಪೆಟ್ರೋಲ್ ಆವೃತ್ತಿಗೆ 20.51 ಕಿ,ಮೀ ಮತ್ತು CNG ರೂಪಾಂತರಕ್ಕಾಗಿ 26.11 ಕಿ.ಮೀ ಎಂದು ಹೇಳಿಕೊಂಡಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಾರುತಿ ಸುಜುಕಿ ಎರ್ಟಿಗಾ ಕಾರು

ಈ ಮಾರುತಿ ಎರ್ಟಿಗಾ ಎಂಪಿವಿಯ ವೈಶಿಷ್ಟ್ಯಗಳಲ್ಲಿ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಹೊಸ ಎರಡು-ಟೋನ್ ಅಲಾಯ್ ವೀಲ್‌ಗಳು, ಮೆಟಾಲಿಕ್ ಟೀಕ್ ವುಡ್ ಡ್ಯಾಶ್‌ಬೋರ್ಡ್ ಫಿನಿಶ್, ಒನ್-ಟಚ್ ರಿಕಾಲ್ ಲೈನ್, ಸ್ಲೈಡ್ ಮೆಕಾನಿಸಂ, ನಾಲ್ಕು ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್ (ESP) ಮತ್ತು ಏಳು-ಇಂಚಿನ ಸ್ಮಾರ್ಟ್‌ ಸ್ಕ್ರೀನ್ ಅನ್ನು ಒಳಗೊಂಡಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಾರುತಿ ಸುಜುಕಿ ಎರ್ಟಿಗಾ ಕಾರು

ಈ ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್ ಎಂಪಿವಿಯಲ್ಲಿ ವಾಯ್ಸ್ ಅಸಿಸ್ಟ್ ಮತ್ತು ಸುಜುಕಿ ಕನೆಕ್ಟ್‌ನೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಸಹ ಹೊಂದಿದೆ. ಈ MPV ಪರ್ಲ್ ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮೆಟಾಲಿಕ್ ಆಬರ್ನ್ ರೆಡ್, ಪರ್ಲ್ ಮೆಟಾಲಿಕ್ ಆಕ್ಸ್‌ಫರ್ಡ್ ಬ್ಲೂ ಮತ್ತು ಡಿಗ್ನಿಟಿ ಬ್ರೌನ್ ಎಂಬ ಆರು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಾರುತಿ ಸುಜುಕಿ ಎರ್ಟಿಗಾ ಕಾರು

ಈ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿಯ ಮುಂಭಾಗದ ಗ್ರಿಲ್, ಹೊಸ ಎರಡು-ಟೋನ್ ಅಲಾಯ್ ವೀಲ್‌ಗಳು, ಮೆಟಾಲಿಕ್ ಟೀಕ್ ವುಡ್ ಡ್ಯಾಶ್‌ಬೋರ್ಡ್ ಫಿನಿಶ್, ಒನ್-ಟಚ್ ರಿಕಾಲ್ ಲೈನ್, ಸ್ಲೈಡ್ ಮೆಕಾನಿಸಂ, ನಾಲ್ಕು ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್ (ESP) ಮತ್ತು ಏಳು-ಇಂಚಿನ ಸ್ಮಾರ್ಟ್‌ ಸ್ಕ್ರೀನ್ ಅನ್ನು ಒಳಗೊಂಡಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಾರುತಿ ಸುಜುಕಿ ಎರ್ಟಿಗಾ ಕಾರು

ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್ ಎಂಪಿವಿಯು ವಾಯಿಸ್ ಅಸಿಸ್ಟ್ ಮತ್ತು ಸುಜುಕಿ ಕನೆಕ್ಟ್‌ನೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಸಹ ಹೊಂದಿದೆ. ಈ ಎಂಪಿವಿ ಪರ್ಲ್ ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮೆಟಾಲಿಕ್ ಆಬರ್ನ್ ರೆಡ್, ಪರ್ಲ್ ಮೆಟಾಲಿಕ್ ಆಕ್ಸ್‌ಫರ್ಡ್ ಬ್ಲೂ ಮತ್ತು ಡಿಗ್ನಿಟಿ ಬ್ರೌನ್ ಎಂಬ ಆರು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಾರುತಿ ಸುಜುಕಿ ಎರ್ಟಿಗಾ ಕಾರು

ಇನ್ನು ಭಾರತದ ಅತಿ ದೊಡ್ಡ ಮತ್ತು ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ಸರಣಿಯಲ್ಲಿ ಹಲವು ವೈವಿಧ್ಯಮಯ ಮಾದರಿಗಳನ್ನು ಹೊಂದಿದೆ. ಮಾರುತಿ ಸುಜುಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲಿವೆ. ತಲೆಮಾರಿನ ಆವೃತ್ತಿ ಮತ್ತು ಹೊಸ ಕಾರುಗಳನ್ನು ಒಳಗೊಂಡಿದೆ. ಮಾರುತಿ ಸುಜುಕಿಯು ಹೊಸ ವಿಟಾರಾ, ನವೀಕರಿಸಿದ ವ್ಯಾಗನ್‌ಆರ್ ಮತ್ತು ಎಲ್ಲಾ ಹೊಸ ಮಧ್ಯಮ ಗಾತ್ರದ ಎಸ್‌ಯುವಿ ಸೇರಿದಂತೆ ವ್ಯಾಪಕ ಶ್ರೇಣಿಯ ಹೊಸ ಮಾದರಿಗಳನ್ನು ಸಿದ್ಧಪಡಿಸುತ್ತಿದೆ. ಈ ಸಾಲಿನ ಜನಪ್ರಿಯ ಆಲ್ಟೋ ಕಾರು ಕೂಡ ಒಳಗೊಂಡಿದೆ, ಕಂಪನಿಯು ನ್ಯೂ ಜನರೇಷನ್ ಆಲ್ಟೋ ಹ್ಯಾಚ್‌ಬ್ಯಾಕ್ ಬಿಡುಗಡೆಗೆ ಸಜ್ಜಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಾರುತಿ ಸುಜುಕಿ ಎರ್ಟಿಗಾ ಕಾರು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಎರ್ಟಿಗಾ ಎಂಪಿವಿಯ ಬೆಲೆಯನ್ನು ಹೆಚ್ಚಿಸಿದೆ, ಇದರಿಂದ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿಯ ಮಾರಾಟದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ಆದರೆ ಸದ್ಯ ಮಾರುತಿ ಸುಜುಕಿ ಎರ್ಟಿಗಾ ಕಾರು ಉತ್ತಮವಾಗಿದೆ ಮಾರಾಟವಾಗುತ್ತಿದೆ.

Most Read Articles

Kannada
English summary
Maruti suzuki india hiked price of ertiga mpv details
Story first published: Saturday, July 23, 2022, 16:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X