ಮಾರುತಿ ಕಂಪನಿ ಜನರನ್ನು ಹಿಡಿದಿಟ್ಟುಕೊಂಡಿರುವುದೇ ಹೀಗೆ...ಇದುವರೆಗೆ ಬೇರೆ ಯಾರೂ ಮಾಡಿಲ್ಲ!

ಉತ್ತಮ ಮೈಲೇಜ್ ಮತ್ತು ಕಡಿಮೆ ಬೆಲೆಯ ಹೊರತಾಗಿ, ಜನರು ಮಾರುತಿ ಕಾರುಗಳನ್ನು ಇಷ್ಟಪಡಲು ಇನ್ನೊಂದು ಕಾರಣವಿದೆ. ಅದನ್ನು ತಿಳಿಯಬೇಕಾದರೆ ಕಂಡಿತ ಈ ಲೇಖನ ಓದಲೇಬೇಕು.

ಮಾರುತಿ ಸುಜುಕಿ ಭಾರತದ ನಂ.1 ಕಾರು ತಯಾರಕ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಏಕೆಂದರೆ ಮೈಲೇಜ್, ವಿನ್ಯಾಸ, ಸೌಕರ್ಯಗಳು, ಬೆಲೆ ಹೀಗೆ ಎಲ್ಲ ಅಂಶಗಳಲ್ಲೂ ಮಾರುತಿ ಸುಜುಕಿ ಕಾರುಗಳು ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುತ್ತವೆ.

ಆದರೆ ಗ್ರಾಹಕರು ಮಾರುತಿ ಸುಜುಕಿ ಕಾರುಗಳನ್ನು ಹೆಚ್ಚು ನಂಬಲು ಇನ್ನೊಂದು ಕಾರಣವಿದೆ. ಅದೇನೆಂದರೆ ದೊಡ್ಡ ಮಾರಾಟ ಮತ್ತು ಸೇವಾ ಜಾಲ. ಹೌದು, ನೀವು ಭಾರತದ ಸಣ್ಣ ಪಟ್ಟಣಗಳಲ್ಲಿಯೂ ಸಹ ಮಾರುತಿ ಸುಜುಕಿ ಶೋರೂಮ್‌ಗಳು ಮತ್ತು ಸೇವಾ ಕೇಂದ್ರಗಳನ್ನು ಕಾಣಬಹುದು. ಹಾಗಾಗಿ ಕಾರುಗಳನ್ನು ಖರೀದಿಸುವುದು ಮತ್ತು ಯಾವುದೇ ಸಮಸ್ಯೆ ಕಂಡುಬಂದರೆ ತಕ್ಷಣವೇ ಸರಿಪಡಿಸುವುದು ತುಂಬಾ ಸುಲಭ.

ಈ ಹಿನ್ನೆಲೆಯಲ್ಲಿ ಹೆಚ್ಚು ಗ್ರಾಹಕರನ್ನು ಸೆಳೆಯಲು ಮಾರುತಿ ಸುಜುಕಿ ತನ್ನ ಶೋರೂಂಗಳು ಮತ್ತು ಸೇವಾ ಕೇಂದ್ರಗಳ ಸಂಖ್ಯೆಯನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಈ ಚಟುವಟಿಕೆಗಳ ಫಲವಾಗಿ ಮಾರುತಿ ಸುಜುಕಿ ಬಹುದೊಡ್ಡ ಸಾಧನೆಯನ್ನು ಮಾಡಿದೆ. ಮಾರುತಿ ಸುಜುಕಿ ತನ್ನ 3,500 ನೇ ಶೋರೂಂ ಅನ್ನು ಹೈದರಾಬಾದ್‌ನಲ್ಲಿ ತೆರೆದಿದೆ. ಇದರೊಂದಿಗೆ ಮಾರುತಿ ಸುಜುಕಿ ಭಾರತದಲ್ಲಿ 3,500 ಶೋರೂಂಗಳನ್ನು ತೆರೆದ ಮೊದಲ ಮತ್ತು ಏಕೈಕ ಕಂಪನಿಯಾಗಿದೆ.

ಮಾರುತಿ ಸುಜುಕಿಯ 3,500ನೇ ಶೋರೂಂ ಉದ್ಘಾಟನೆ ನೆಕ್ಸಾ ಶೋರೂಂ ಆಗಿದೆ. ಮಾರುತಿ ಸುಜುಕಿ 2 ರೀತಿಯ ಶೋರೂಂಗಳ ಮೂಲಕ ಕಾರುಗಳನ್ನು ಮಾರಾಟ ಮಾಡುತ್ತದೆ. ಒಂದು ಅರೆನಾ ಹಾಗೂ ಇನ್ನೊಂದು ನೆಕ್ಸಾ. ಇವುಗಳಲ್ಲಿ ಸ್ವಲ್ಪ ಪ್ರೀಮಿಯಂ ಕಾರುಗಳು ನೆಕ್ಸಾ ಶೋರೂಂಗಳ ಮೂಲಕ ಮಾರಾಟವಾಗುತ್ತವೆ.

ಅಂದರೆ ಗ್ರ್ಯಾಂಡ್ ವಿಟಾರಾ, ಎಕ್ಸ್‌ಎಲ್ 6, ಸಿಯಾಜ್, ಬಲೆನೊ ಮತ್ತು ಇಗ್ನಿಸ್‌ನಂತಹ ಕಾರುಗಳನ್ನು ನೆಕ್ಸಾ ಶೋರೂಂಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಮತ್ತೊಂದೆಡೆ ಅರೆನಾ ಶೋರೂಂಗಳ ಮೂಲಕ ಮಾರಾಟವಾಗುವ ಕಾರುಗಳ ಸಂಖ್ಯೆ ತುಂಬಾ ಹೆಚ್ಚಾಗಿದೆ. ಆಲ್ಟೋ, ಆಲ್ಟೋ K10, ವ್ಯಾಗನ್-R, ಸೆಲೆರಿಯೋ, ಸ್ವಿಫ್ಟ್, ಡಿಜೈರ್, S-ಪ್ರೆಸ್ಸೋ, ಎರ್ಟಿಗಾ, ಬ್ರೆಜ್ಜಾ ಮತ್ತು ಇಕೋ ನಂತಹ ಕಾರುಗಳನ್ನು ಅರೆನಾ ಶೋರೂಮ್ ಮೂಲಕ ಮಾರಾಟ ಮಾಡಲಾಗುತ್ತಿದೆ.

ಇದಲ್ಲದೆ, ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ಚಾನೆಲ್ ಮೂಲಕ ಬಳಸಿದ ಕಾರುಗಳನ್ನು ಸಹ ಮಾರಾಟ ಮಾಡುತ್ತದೆ. ಪ್ರಸ್ತುತ, ಮಾರುತಿ ಸುಜುಕಿಯ ನೆಟ್‌ವರ್ಕ್ ಭಾರತದಾದ್ಯಂತ ಸುಮಾರು 2,250 ನಗರಗಳಲ್ಲಿ ಹರಡಿದೆ. ಮಾರುತಿ ಸುಜುಕಿ ಕಂಪನಿಯ ಕಾರುಗಳ ಮಾರಾಟವು ಉತ್ತಮವಾಗಿರಲು ಈ ಬೃಹತ್ ನೆಟ್‌ವರ್ಕ್ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.

ಹೀಗೆ ಮಾರುತಿ ಸುಜುಕಿಯು ದೇಶದಲ್ಲಿ ಉತ್ತಮ ಸೇವಾ ಕೇಂದ್ರಗಳ ಮೂಲಕ ಗ್ರಾಹಕರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಮೂಲಕ ಸದ್ಯ ದೇಶದಲ್ಲಿ ನಂ.1 ಸ್ಥಾನದಲ್ಲಿ ಮುಂದುವರಿಯುತ್ತಿದೆ. ಮುಂದಿನ ದಿನಗಳಲ್ಲಿ ತನ್ನ ಶೋರೂಂಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಆಟೋ ವಲಯದಲ್ಲಿ ಪ್ರತಿಸ್ಪರ್ಧಿಗಳನ್ನು ಹತ್ತಿರಕ್ಕೂ ಬಾರದಂತೆ ಯೋಜನೆ ರೂಪಿಸಿಕೊಂಡಿದೆ. ಪ್ರಸ್ತುತ ಕೂಡ ಗ್ರಾಹಕ ಸ್ನೇಹಿ ಕಂಪನಿಯಾಗಿ ದೇಶದಲ್ಲಿ ಮುಂದಿವರಿಯುತ್ತಿರುವ ಏಕೈಕ ಕಂಪನಿಯಾಗಿ ಗುರ್ತಿಸಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂ ಪುಟಗಳೊಂದಿಗೆ ಸಂಪರ್ಕದಲ್ಲಿರಿ.

Most Read Articles

Kannada
English summary
Maruti suzuki is the first and only company to open 3 500 showrooms in india
Story first published: Saturday, November 19, 2022, 16:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X