ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಕಾರುಗಳ ಮಾರಾಟವನ್ನು ಹೆಚ್ಚಿಸಲು ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ ಘೋಷಣೆ ಮಾಡಿದೆ. ಈ ಹೊಸ ಆಫರ್‌ಗಳೊಂದಿಗೆ ರೆನಾಲ್ಟ್ ಕಾರುಗಳಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಈ ತಿಂಗಳು ಮಾರುತಿ ಸುಜುಕಿ ನೀಡುವ ರಿಯಾಯಿತಿಗಳ ಬಗ್ಗೆ ಮಾಹಿತಿ ಇಲ್ಲಿದೆ.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಮಾರುತಿ ಆಲ್ಟೋ

ಮಾರುತಿಯು ಆಲ್ಟೋದ ಸಾಮಾನ್ಯ ಆವೃತ್ತಿಗಳ ಮೇಲೆ ರೂ.31,000 ವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ. ಇದು ರೂ. 10,000 ಮೌಲ್ಯದ ಗ್ರಾಹಕ ಕೊಡುಗೆಗಳು, ರೂ. 15,000 ವರೆಗಿನ ವಿನಿಮಯ ಬೋನಸ್‌ಗಳು ಮತ್ತು ಆಲ್ಟೊದ ಹೈ ಟೂರ್ ಆವೃತ್ತಿಗೆ ಕಾರ್ಪೊರೇಟ್ ರಿಯಾಯಿತಿಗಳು ರೂ 9,000 ಇದೆ. ಗರಿಷ್ಠ ಉಳಿತಾಯವನ್ನು ರೂ.34,000ಗೆ ವರೆಗಿದೆ. ಮಾರುತಿ ಆಲ್ಟೋ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಅಲ್ಲದೇ ಕೈಗೆಟುಕುವ ಮಾದರಿಯಾಗಿದೆ.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಮಾರುತಿ ವ್ಯಾಗನ್ಆರ್

ಈ ಮಾರುತಿ ವ್ಯಾಗನ್ಆರ್ 1.2-ಲೀಟರ್ ಆವೃತ್ತಿಗಳ ಮೇಲೆ ರೂ.26,000 ಮೌಲ್ಯದ ರಿಯಾಯಿತಿಗಳೊಂದಿಗೆ ನೀಡಲಾಗುತ್ತಿದೆ. ಇವುಗಳಲ್ಲಿ ಗ್ರಾಹಕ ಕೊಡುಗೆಗಳು ಮತ್ತು ತಲಾ ರೂ.10 ಸಾವಿರವರೆಗೆ ಮೌಲ್ಯದ ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ಕೊಡುಗೆಯು ರೂ.6,000 ಆಗಿದೆ,

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಮಾರುತಿ ವ್ಯಾಗನ್ಆರ್ 1.0-ಲೀಟರ್ ಆವೃತ್ತಿಗಳ ಮೇಲೆ ರೂ,51,000 ವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ. ರೂ.30,000 ಮೌಲ್ಯದ ಗ್ರಾಹಕ ಕೊಡುಗೆಗಳೊಂದಿಗೆ ರೂ. 15,000 ಮೌಲ್ಯದ ವಿನಿಮಯ ಬೋನಸ್‌ಗಳು ಮತ್ತು ವಾಣಿಜ್ಯ ಟೂರ್ H3 ಆವೃತ್ತಿಯು ಕಾರ್ಪೊರೇಟ್ ಬೋನಸ್‌ಗಳನ್ನು ರೂ 29,000 ಕ್ಕೆ ಹೆಚ್ಚಿಸಿ ಒಟ್ಟು ಉಳಿತಾಯವನ್ನು ರೂ 74,000 ವರೆಗಿದೆ.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಮಾರುತಿ ಸ್ವಿಫ್ಟ್

ಸ್ವಿಫ್ಟ್‌ನ ಎಲ್ಲಾ ಆವೃತ್ತಿಗಳನ್ನು ಈ ತಿಂಗಳು ರೂ.32,000 ವರೆಗೆ ಉಳಿತಾಯದೊಂದಿಗೆ ನೀಡಲಾಗುತ್ತಿದೆ. ಈ ಉಳಿತಾಯವು ರೂ. 15,000 ಮೌಲ್ಯದ ಗ್ರಾಹಕ ಕೊಡುಗೆಗಳು, ರೂ. 10,000 ವಿನಿಮಯ ಬೋನಸ್ ಮತ್ತು ರೂ. 7,000 ಮೌಲ್ಯದ ಕಾರ್ಪೊರೇಟ್ ಕೊಡುಗೆಗಳನ್ನು ಒಳಗೊಂಡಿದೆ.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ದೇಶಿಯ ಮಾರುಕಟ್ಟೆಯಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಬಿಡುಗಡೆಯಾದರೂ ಮಾರುತಿ ಸ್ವಿಫ್ಟ್ ಕಳೆದ 15 ವರ್ಷದಿಂದ ದೇಶಿಯ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯೊಂದಿಗೆ ದಾಖಲೆಯ ಮಟ್ಟದಲ್ಲಿ ಜನಪ್ರಿಯ ಸ್ವಿಫ್ಟ್ ಕಾರು ಮಾರಾಟವಾಗುತ್ತಿದೆ. ಅಲ್ಲದೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯು ಕೂಡ ಸ್ವಿಫ್ಟ್ ಕಾರು ಉತ್ತಮವಾಗಿ ಮಾರಾಟವಾಗುತ್ತಿದೆ. ಈ ಮಾರುತಿ ಸ್ವಿಫ್ಟ್ ಕಾರಿನಲ್ಲಿ 1.2 ಎಲ್ ಡ್ಯುಯಲ್‌ಜೆಟ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 89 ಬಿಹೆಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಮಾರುತಿ ಇಕೋ

ಮಾರುತಿ ಇಕೋನ ಸಾಮಾನ್ಯ ಪೆಟ್ರೋಲ್ ಆವೃತ್ತಿಗಳನ್ನು ಈ ತಿಂಗಳು 24,000 ರೂ ಮೌಲ್ಯದ ರಿಯಾಯಿತಿಗಳೊಂದಿಗೆ ನೀಡಲಾಗುತ್ತಿದೆ. ಇವುಗಳಲ್ಲಿ ಗ್ರಾಹಕ ಕೊಡುಗೆಗಳು ಮತ್ತು ತಲಾ 10 ಸಾವಿರ ಮೌಲ್ಯದ ವಿನಿಮಯ ಬೋನಸ್ ಮತ್ತು ರೂ 4,000 ಮೌಲ್ಯದ ಕಾರ್ಪೊರೇಟ್ ಕೊಡುಗೆಗಳು ಸೇರಿವೆ. ಇಕೋನ ಕಮರ್ಷಿಯಲ್ ಟೂರ್ ವಿ ಆವೃತ್ತಿಯು ಕಾರ್ಪೊರೇಟ್ ಬೋನಸ್ ಅನ್ನು ರೂ.16,500 ರೂ.ಗೆ ಹೆಚ್ಚಿಸಿ ಒಟ್ಟು ಉಳಿತಾಯಯು ರೂ.36,500ಗ್ ಇದೆ.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಈ ಮಾರುತಿ ಸುಜುಕಿ ಇಕೋ ಮಾದರಿಯಲ್ಲಿ 5 ರಿಂದ 7 ಸೀಟುಗಳನ್ನು ಹೊಂದಿದೆ. ಈ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 73 ಬಿಹೆಚ್‌ಪಿ ಮತ್ತು 101 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನಲ್ಲಿ 5 ಸ್ಪೀಡಿನ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ ಜೋಡಿಸಲಾಗಿದೆ. ಮಾರುತಿ ಸುಜುಕಿ ಇಕೋ ಸಿಎನ್‌ಜಿ ಮಾದರಿಯು ಪ್ರತಿ ಲೀಟರ್‌ಗೆ 21.8 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಮಾರುತಿ ಎರ್ಟಿಗಾ

ಎರ್ಟಿಗಾದ ಟೂರ್ ಎಂ ಕಮರ್ಷಿಯಲ್ ಆವೃತ್ತಿಯನ್ನು ಈ ತಿಂಗಳು ರೂ,4,000 ಮೌಲ್ಯದ ಕಾರ್ಪೊರೇಟ್ ಪ್ರಯೋಜನಗಳೊಂದಿಗೆ ನೀಡಲಾಗುತ್ತಿದೆ. ಮಾರುತಿ ಎರ್ಟಿಗಾ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಜನಪ್ರಿಯ ಎಂಪಿವಿಗಳಲ್ಲಿ ಒಂದಾಗಿದೆ.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಮಾರುತಿ ಸೆಲೆರಿಯೊ

ಮಾರುತಿ ಸುಜುಕಿ ಕಂಪನಿಯು ಸೆಲೆರಿಯೊ ಕಾರಿನ ಮೇಲೆ ರೂ,51,000 ವರೆಗಿನ ರಿಯಾಯಿತಿಯನ್ನು ಘೋಷಿಸಿದೆ. ಸೆಲೆರಿಯೊ ಕಾರಿನ ಎಲ್‌ಎಕ್ಸ್‌ಐ ಮತ್ತು ವಿಎಕ್ಸ್‌ಐ ಪೆಟ್ರೋಲ್ ಆವೃತ್ತಿಗಳ ಮೇಲೆ ರೂ 51,000 ವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ. ಇನ್ನು ರೂ.30,000 ಮೌಲ್ಯದ ಗ್ರಾಹಕ ಕೊಡುಗೆಗಳು, ರೂ 15,000 ಮೌಲ್ಯದ ವಿನಿಮಯ ಬೋನಸ್ ಮತ್ತು ರೂ 6,000 ಮೌಲ್ಯದ ಕಾರ್ಪೊರೇಟ್ ರಿಯಾಯಿತಿಗಳನ್ನು ಒಳಗೊಂಡಿದೆ.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಮಾರುತಿ ಎಸ್-ಪ್ರೆಸ್ಸೊ

ಈ ಮಾರುತಿ ಎಸ್-ಪ್ರೆಸ್ಸೊ ಕಾರಿನ CNG ಹೊರತುಪಡಿಸಿ ಉಳಿದ ಎಲ್ಲಾ ರೂಪಾಂತರಗಳ ಮೇಲೆ ರೂ.31,000 ಮೌಲ್ಯದ ರಿಯಾಯಿತಿಗಳನ್ನು ನೀಡಲಾಗಿದೆ .ಈ ರಿಯಾಯಿತಿಗಳು ರೂ.10,000 ಮೌಲ್ಯದ ಗ್ರಾಹಕ ಕೊಡುಗೆಗಳು, ರೂ 15,000 ಮೌಲ್ಯದ ವಿನಿಮಯ ಬೋನಸ್ ಮತ್ತು ರೂ 6,000 ಮೌಲ್ಯದ ಕಾರ್ಪೊರೇಟ್ ರಿಯಾಯಿತಿಗಳನ್ನು ಒಳಗೊಂಡಿವೆ.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಮಾರುತಿ ಡಿಜೈರ್

ಡಿಜೈರ್‌ನ ಎಲ್ಲಾ ಪೆಟ್ರೋಲ್ ರೂಪಾಂತರಗಳನ್ನು ಈ ತಿಂಗಳು ರೂ. 22,000 ಮೌಲ್ಯದ ರಿಯಾಯಿತಿಗಳೊಂದಿಗೆ ನೀಡಲಾಗುತ್ತಿದ್ದು, ಇದನ್ನು ಟೂರ್ ಎಸ್ ಕಮರ್ಷಿಯಲ್ ಆವೃತ್ತಿಗೆ ರೂ.34,000 ಕ್ಕೆ ಹೆಚ್ಚಿಸಲಾಗಿದೆ. ಖಾಸಗಿ ಖರೀದಿದಾರರು ರೂ 5,000 ಮೌಲ್ಯದ ಗ್ರಾಹಕ ಕೊಡುಗೆಗಳು, ರೂ 10,000 ಮೌಲ್ಯದ ವಿನಿಮಯ ಬೋನಸ್ ಮತ್ತು ರೂ 7,000 ಮೌಲ್ಯದ ಕಾರ್ಪೊರೇಟ್ ರಿಯಾಯಿತಿಗಳನ್ನು ಒಳಗೊಂಡಿರುವ ಉಳಿತಾಯವನ್ನು ಆನಂದಿಸಬಹುದು. ಟೂರ್ ಎಸ್ ಮಾದರಿಗಳು ಗ್ರಾಹಕರು ರೂ.10,000 ವರೆಗೆ ಕೊಡುಗೆಗಳನ್ನು ನೀಡಿದರೆ, ಕಾರ್ಪೊರೇಟ್ ಪ್ರಯೋಜನಗಳು ರೂ.14,000 ವರೆಗೆ ಇದೆ.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ಈ ಜುಲೈನಲ್ಲಿ ತನ್ನ ಹೆಚ್ಚಿನ ಕಾರುಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ಮಾರುತಿ ಸುಜುಕಿ ಕಂಪನಿಯು ತನ್ನ ಕಾರುಗಳ ಮಾರಾಟವನ್ನು ಹೆಚ್ಚಿಸಲು ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ ಘೋಷಣೆ ಮಾಡಿದೆ

Article Published On: Wednesday, July 6, 2022, 19:25 [IST]
English summary
Maruti suzuki july 2022 discounts up to 74000 rupees details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+