ಆಂಬ್ಯುಲೆನ್ಸ್ ಸೇರಿದಂತೆ 13 ರೂಪಾಂತರಗಳಲ್ಲಿ ಬಿಡುಗಡೆಗೊಂಡ ಮಾರುತಿ ಇಕೋ ವ್ಯಾನ್

ಮಾರುತಿ ಸುಜುಕಿ ಕಂಪನಿಯು ತನ್ನ 2022ರ ಇಕೋ ವ್ಯಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಈ ಮಾರುತಿ ಇಕೋ ವ್ಯಾನ್ ಆರಂಭಿಕ ಬೆಲೆಯು ರೂ.5.49 ಲಕ್ಷವಾಗಿದೆ.

ಹೊಸ 2022 ಮಾರುತಿ ಸುಜುಕಿ ಇಕೋ ವ್ಯಾನ್ ಹೆಚ್ಚಿನ ಮೈಲೇಜ್ ನೊಂದಿಗೆ ಮತ್ತು ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ ಬರುತ್ತದೆ. ಇದು ಹೊಸ ಎಂಜಿನ್ ನೊಂದಿಗೆ ಸುಧಾರಿತ ಒಳಾಂಗಣ ಮತ್ತು ವರ್ಧಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

2022 ಮಾರುತಿ ಸುಜುಕಿ ಇಕೋ ವ್ಯಾನ್ 5-ಆಸನಗಳು, 7-ಆಸನಗಳು, ಕಾರ್ಗೋ, ಟೂರ್ ಮತ್ತು ಆಂಬ್ಯುಲೆನ್ಸ್ ಸೇರಿದಂತೆ 13 ರೂಪಾಂತರಗಳಲ್ಲಿ ಲಭ್ಯವಿದೆ.ಮೂಲ ರೂಪಾಂತರದ ಬೆಲೆ ರೂ.5.49 ಲಕ್ಷ ರೂಪಾಯಿಗಳಾಗಿದ್ದು, ಟಾಪ್-ಸ್ಪೆಕ್ ಮಾಡೆಲ್ ಬೆಲೆಯು ರೂ.8.13 ಲಕ್ಷವಾಗಿದೆ. ಈ ಹೊಸ ಮಾರುತಿ ಇಕೋ ವ್ಯಾನ್ ನಲ್ಲಿ ಹೊಸ 1.2-ಲೀಟರ್ ಸುಧಾರಿತ ಕೆ-ಸೀರಿಸ್ ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ,

ಅದು ಹೆಚ್ಚು ಶಕ್ತಿಶಾಲಿ ಮತ್ತು ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಎಂಜಿನ್ 10% ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಈ ಎಂಜಿನ್ 6,000rpm ನಲ್ಲಿ 80.76 ಬಿಹೆಚ್‍ಪಿ ಪವರ್ ಮತ್ತು 3,000rpm ನಲ್ಲಿ 104.4 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮಾರುತಿ ವ್ಯಾನ್ ಫ್ಯಾಕ್ಟರಿ ಅಳವಡಿಸಲಾಗಿರುವ CNG ಕಿಟ್‌ನೊಂದಿಗೆ ಲಭ್ಯವಿದೆ.

CNG ಮೋಡ್‌ನಲ್ಲಿ, ಈ ಎಂಜಿನ್ 6000rpm ನಲ್ಲಿ 71.65 ಬಿಹೆಚ್‍ಪಿ ಪವರ್ ಮತ್ತು 3,000rpm ನಲ್ಲಿ 95 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಮೂಲಕ ಮುಂಭಾಗದ ಚಕ್ರಗಳಿಗೆ ಪವರ್ ರವಾನೆಯಾಗುತ್ತದೆ. ಮಾರುತಿ ಸುಜುಕಿ ಇಕೋ ವ್ಯಾನ್ ಮಾದರಿಯ ಟೂರ್ ರೂಪಾಂತರವು ARAI ಪ್ರಮಾಣೀಕೃತ ಪೆಟ್ರೋಲ್‌ನೊಂದಿಗೆ 20.20 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

CNG ಮಾದರಿಯು 27.05 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಪ್ಯಾಸೆಂಜರ್ ರೂಪಾಂತರವು ಪೆಟ್ರೋಲ್ ಮತ್ತು CNG ಯೊಂದಿಗೆ ಅನುಕ್ರಮವಾಗಿ 19.7 ಕಿ,ಮೀ ಮತ್ತು 26.78 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಆಯಾಮಗಳ ವಿಷಯದಲ್ಲಿ, ಹೊಸ ಮಾರುತಿ ಇಕೋ 3675 ಎಂಎಂ ಉದ್ದ, 1825 ಎಂಎಂ ಎತ್ತರ ಮತ್ತು 1475 ಎಂಎಂ ಅಗಲವನ್ನು ಹೊಂದಿದೆ. ಇದರೊಂದಿಗೆ 2350 ಎಂಎಂ ವ್ಹೀಲ್‌ಬೇಸ್ ಹೊಂದಿದೆ.

ಇನ್ನು ಆಂಬ್ಯುಲೆನ್ಸ್ ರೂಪಾಂತರದ ಎತ್ತರವು 1930 ಎಂಂಗೆ ಹೆಚ್ಚಿಸಲಾಗಿದೆ. ಈ ಹೊಸ ಮಾರುತಿ ವ್ಯಾನ್ ಸಾಲಿಡ್ ವೈಟ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಪರ್ಲ್ ಮಿಡ್ನೈಟ್ ಬ್ಲಾಕ್, ಮೆಟಾಲಿಕ್ ಗ್ಲಿಸ್ಟೆನಿಂಗ್ ಗ್ರೇ ಮತ್ತು ಹೊಸ ಮೆಟಾಲಿಕ್ ಬ್ರಿಸ್ಕ್ ಬ್ಲೂ ಎಂಬ ಐದು ಬಣ್ಣಗಳ ಆಯ್ಜೆಯಲ್ಲಿ ಬಿಡುಗಡೆಗೊಳಿಸಿದೆ. ಈ ಇಕೋ ವ್ಯಾನ್ ನಲ್ಲಿ ಕ್ಯಾಬಿನ್ ಏರ್-ಫಿಲ್ಟರ್ ಮತ್ತು ಬ್ಯಾಟರಿ ಸೇವರ್ ಕಾರ್ಯದೊಂದಿಗೆ ಡೋಮ್ ಲ್ಯಾಂಪ್‌ನೊಂದಿಗೆ ಬರುತ್ತದೆ.

ಇದರೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಹೊಸ ಸ್ಟೀರಿಂಗ್ ವೀಲ್, ಎಸಿ ಮತ್ತು ಹೀಟರ್‌ಗಾಗಿ ರೋಟರಿ ಕಂಟ್ರೋಲ್ ಗಳನ್ನು ಹೊಂದಿದೆ. ಸುರಕ್ಷತೆ ಮತ್ತು ಭದ್ರತೆಗಾಗಿ, 2022ರ ಮಾರುತಿ ಇಕೋ ಎಂಜಿನ್ ಇಮೊಬಿಲೈಜರ್, ಇಲೆಮೊಟೈಡ್ ಹಝರ್ಡ್ ಸ್ವಿಚ್, ಡ್ಯುಯಲ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಸ್ಲೈಡಿಂಗ್ ಡೋರುಗಳು ಮತ್ತು ವಿಂಡೋಗಳನ್ನು ಚೈಲ್ಡ್ ಲಾಕ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಇತರವುಗಳನ್ನು ಪಡೆಯುತ್ತದೆ.

Most Read Articles

Kannada
English summary
Maruti suzuki launched new 2022 eeco van in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X