ಮಾರುತಿ ಸುಜುಕಿಯ ಬಹುನಿರೀಕ್ಷಿತ SUVಯಾದ ಜಿಮ್ನಿಯ ಬೆಲೆ, ವೈಶಿಷ್ಟ್ಯ, ವೇರಿಂಟ್‌ಗಳ ಕುರಿತ ಮಾಹಿತಿ
ದೇಶದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ, ತನ್ನ ಬಹುನಿರೀಕ್ಷಿತ ಎಸ್‌ಯುವಿಯಾದ ಸುಜುಕಿ ಜಿಮ್ನಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆದರೆ ಈ ಮಾದರಿಯ ರೂಪಾಂತರಗಳು ಮತ್ತು ಬೆಲೆಗಳ ಬಗ್ಗೆ ಯಾವುದೇ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

ಮಾರುತಿ ಸುಜುಕಿಯು ತನ್ನ ಉತ್ಪನ್ನದ ಪೋರ್ಟ್‌ಫೋಲಿಯೊದಲ್ಲಿ ಬಹಳ ಡಿಸೈರಬಲ್ (ಅಪೇಕ್ಷಣೀಯ) ಕಾರುಗಳನ್ನು ಹೊಂದಿದ್ದು, ಈ ಪಟ್ಟಿಯಲ್ಲಿ ಝೆನ್, ಎಸ್ಟೀಮ್, ಬಲೆನೊ ಸೆಡಾನ್, ಜಿಪ್ಸಿ, ಗ್ರ್ಯಾಂಡ್ ವಿಟಾರಾ XL7 ಮತ್ತು S-ಕ್ರಾಸ್ 1.6 ನಂತಹ ಮಾದರಿಗಳಾಗಿವೆ. ಬಲೆನೊ ಹ್ಯಾಚ್‌ಬ್ಯಾಕ್‌ನ ಆರ್‌ಎಸ್ ರೂಪಾಂತರವು ಸ್ವಲ್ಪಮಟ್ಟಿಗೆ ಅಪೇಕ್ಷಣೀಯ ಮಾದರಿ ಎಂದೇ ಹೇಳಬಹುದು.

ಜಿಮ್ನಿ ಡಿಸೈರಬಲಿಟಿ (ಅಪೇಕ್ಷಣೀಯತೆ) ಬಗ್ಗೆ ಮಾತನಾಡುವುದಾದರೆ, ಮಾರುತಿ ಸುಜುಕಿ ಈಗಾಗಲೇ ಭಾರತದಲ್ಲಿ ಸುಜುಕಿ ಜಿಮ್ನಿಯ 3-ಬಾಗಿಲಿನ ಆವೃತ್ತಿಯನ್ನು ತಯಾರಿಸುತ್ತಿದೆ, ಕಂಪನಿಯು ಜಿಮ್ನಿಯ 3-ಬಾಗಿಲಿನ ರೂಪಾಂತರವನ್ನು ಬಿಡುಗಡೆ ಮಾಡಿದಲ್ಲಿ ದೇಶದ ಬಹಳಷ್ಟು ಅಡ್ವೆಂಚರ್ ಉತ್ಸಾಹಿಗಳನ್ನು ಆಕರ್ಷಿಸಲಿದೆ.

ಮಾರುತಿ ಸುಜುಕಿ ಜಿಮ್ನಿಯ 3-ಡೋರ್ ಆವೃತ್ತಿಯು ಅದರ ಹೆಚ್ಚಿನ ಡಿಸೈರಬಲ್ ಅಂಶದಿಂದಾಗಿ ಆರಂಭಿಕ ತಿಂಗಳುಗಳಲ್ಲಿ ಯೋಗ್ಯವಾದ ಮಾರಾಟದ ಅಂಕಿಅಂಶಗಳನ್ನು ದಾಖಲಿಸುವ ನಿರೀಕ್ಷೆಯಿದೆ. ನಂತರ ಬರಲಿರುವ 5-ಡೋರ್ ಆವೃತ್ತಿಯ ಹೆಚ್ಚುವರಿ ಪ್ರಾಯೋಗಿಕತೆಯು ಶೀಘ್ರದಲ್ಲೇ ಭಾರತದಲ್ಲಿ 3-ಬಾಗಿಲಿನ ಆವೃತ್ತಿಯನ್ನು ಸೆಡ್ಡು ಹೊಡಿಯಬಹುದು.

ಸುಜುಕಿ ಜಿಮ್ನಿಯ 5-ಬಾಗಿಲಿನ ಆವೃತ್ತಿಯ ಬಗ್ಗೆ ಮಾತನಾಡುವುದಾದರೆ, ಇತ್ತೀಚಿನ ಸ್ಪೈ ಶಾಟ್‌ಗಳ ಪ್ರಕಾರ ಕಂಪನಿಯು ಪ್ರಿ-ಪ್ರೊಡಕ್ಷನ್ ಘಟಕವನ್ನು ಪರೀಕ್ಷಿಸುತ್ತಿದೆ. ಇಂಡೋ-ಜಪಾನೀಸ್ ವಾಹನ ತಯಾರಕರು 3-ಬಾಗಿಲಿನ ಆವೃತ್ತಿಗೆ 8.5 ಲಕ್ಷದಿಂದ 11 ಲಕ್ಷ ರೂಪಾಯಿಗಳವರೆಗೆ ಬೆಲೆಯನ್ನು ನಿಗಧಿಪಡಿಸಲಿದ್ದಾರೆ ಎನ್ನಲಾಗಿದೆ.

ಇನ್ನು 5-ಬಾಗಿಲಿನ ಆವೃತ್ತಿಯು 9.5 ಲಕ್ಷದಿಂದ 13 ಲಕ್ಷ ರೂಪಾಯಿಗಳ ನಡುವೆ ಬೆಲೆಯಿದ್ದರೆ ಮಾರುತಿ ಸುಜುಕಿ ಜಿಮ್ನಿ ಬಹಳ ಯಶಸ್ವಿಯಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸುಜುಕಿ ಜಿಮ್ನಿ ಅತ್ಯಂತ ಹಳೆಯ ಲ್ಯಾಡರ್ ಫ್ರೇಮ್ ಚಾಸಿಸ್ ಅನ್ನು ಬಳಸುತ್ತಿದೆ.

ಇದು SUV ಗೆ ತುಂಬಾ ಒರಟಾದ ಪಾತ್ರವನ್ನು ನೀಡುತ್ತದೆ. ಇದರ ಪರಿಣಾಮವಾಗಿ ರೈಡ್ ಗುಣಮಟ್ಟ ಮತ್ತು ನಿರ್ವಹಣೆಯು ವೆಚ್ಚವು ಕಡಿಮೆಯಾಗುವುದರಿಂದ ಹೆಚ್ಚು ಹಿಟ್ ಆಗುವ ಸಾಧ್ಯತೆಯಿದೆ. ಇದಲ್ಲದೆ, ಲ್ಯಾಡರ್ ಫ್ರೇಮ್ ಚಾಸಿಸ್ ಮತ್ತು 4WD ಸೆಟಪ್ ಕೂಡ ಪರ್ಫಾಮೆನ್ಸ್ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ.

4WD ಸಿಸ್ಟಮ್ ಬಗ್ಗೆ ಮಾತನಾಡುವುದಾದರೆ, ಮಾರುತಿ ಸುಜುಕಿ ಜಿಮ್ನಿ SUVನಲ್ಲಿ, ಸುಜುಕಿಯ ALLGRIP ಪ್ರೊ ಆಲ್-ವೀಲ್-ಡ್ರೈವ್ ಸಿಸ್ಟಮ್ ಅನ್ನು ಪ್ರಮಾಣಿತವಾಗಿ ಅಳವಡಿಸಲಾಗಿದೆ. ಈ ವ್ಯವಸ್ಥೆಯು 2H, 4H ಮತ್ತು 4L ಎಂಬ ಮೂರು ವಿಧಾನಗಳೊಂದಿಗೆ ಬರುತ್ತದೆ. 2H ಮೋಡ್ ಎಂಜಿನ್‌ನಿಂದ ಹಿಂದಿನ ಚಕ್ರಗಳಿಗೆ ಎಲ್ಲಾ ಪವರ್ ಮತ್ತು ಟಾರ್ಕ್ ಅನ್ನು ಕಳುಹಿಸುತ್ತದೆ. ಈ ಮೋಡ್ ಅನ್ನು ದೈನಂದಿನ ಚಾಲನೆಗಾಗಿ ಬಳಸಬಹುದಾಗಿದ್ದು, ಇದು ಯೋಗ್ಯವಾದ ಮೈಲೇಜ್ ನೀಡುತ್ತದೆ.

4H ಮೋಡ್ ಅನ್ನು ಹೆಚ್ಚುವರಿ ಪಿಕಪ್ ಅಗತ್ಯವಿರುವ ಆಫ್-ರೋಡ್‌ಗಾಗಿ ಬಳಸಲಾಗುತ್ತದೆ, ಆದರೆ 4L ಮೋಡ್ ಅನ್ನು ವಿಪರೀತ ಆಫ್-ರೋಡ್ ಪರಿಸ್ಥಿತಿಗಳಿಗೆ ಬಳಸಲಾಗುತ್ತದೆ. ಏಕೆಂದರೆ ಈ ಮೋಡ್ ಕಡಿಮೆ ಗೇರ್‌ಬಾಕ್ಸ್ ಅನ್ನು ಬಳಸಿಕೊಂಡು ಎಲ್ಲಾ ಚಕ್ರಗಳಿಗೆ ಕಳುಹಿಸಲಾದ ಟಾರ್ಕ್ ಅನ್ನು ಗುಣಿಸುತ್ತದೆ. ಮಾರುತಿ ಸುಜುಕಿ ಜಿಮ್ನಿಯು ಹೊಸ K15C 1.5-ಲೀಟರ್ ನ್ಯಾಚುರಲ್-ಆ್ಸ್ಪಿರೇಟೆಡ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ ಎಂಬ ನಿರೀಕ್ಷೆಯಿದೆ.

ಈ ಎಂಜಿನ್ ಗರಿಷ್ಠ 103 bhp ಮತ್ತು 136.8 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ಹೊಸ ಎಂಜಿನ್‌ಗೆ ಜೊತೆಗೆ ಗೇರ್‌ಬಾಕ್ಸ್ ಆಯ್ಕೆಗಳು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು ಅತ್ಯಾಧುನಿಕ 6-ಸ್ಪೀಡ್ ಟಾರ್ಕ್ ಪರಿವರ್ತಕ ಸ್ವಯಂಚಾಲಿತ ಪ್ರಸರಣವನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಮಾರುತಿ ಸುಜುಕಿ ಭಾರತದಲ್ಲಿ ಜಿಮ್ನಿಯನ್ನು ಬಿಡುಗಡೆ ಮಾಡಿದರೆ, ಮಾರುಕಟ್ಟೆಗೆ ವಿಶಿಷ್ಟ ಕೊಡುಗೆಯಾಗಲಿದೆ. ಈ ಎಸ್‌ಯುವಿ ದೇಶದ ಅನೇಕ ಉದಯೋನ್ಮುಖ ಅಡ್ವೆಂಚರ್ ಪ್ರಿಯರಿಗೆ ಉತ್ತಮ ಆಯ್ಕೆಯಾಗಲಿದೆ. ಅಲ್ಲದೇ ದೇಶೀಯ ಆಫ್‌ರೋಡ್ ಎಸ್‌ಯುವಿ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಮಹೀಂದ್ರಾ ಥಾರ್‌ನಂತಹ ಮಾದರಿಗಳೊಂದಿಗೆ ಸ್ಪರ್ಧಿಸಲಿದೆ.


Click it and Unblock the Notifications