100ಕ್ಕೂ ಹೆಚ್ಚು ನಗರಗಳಲ್ಲಿ ಮಾರುತಿ ಸುಜುಕಿ ಬಿಡಿಭಾಗಗಳ ಆನ್‌ಲೈನ್ ಸೇವೆ !

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ನೈಜ ಬಿಡಿಭಾಗಗಳ (genuine accessories) ಆನ್‌ಲೈನ್ ಮಾರಾಟವನ್ನು ದೇಶಾದ್ಯಂತ 100ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸುವುದಾಗಿ ಘೋಷಿಸಿದೆ. ಮಾರುತಿ ಸುಜುಕಿ ನೈಜ ಅಕ್ಸೆಸರಿಗಳ ಮಾರಾಟಕ್ಕಾಗಿ ಕಂಪನಿ (ಎಂಎಸ್‌ಜಿಎ) ಕಳೆದ ವರ್ಷವೇ ವೆಬ್‌ಸೈಟ್ ಅನ್ನು ಆರಂಭಿಸಿತ್ತು.

100ಕ್ಕೂ ಹೆಚ್ಚು ನಗರಗಳಲ್ಲಿ ಮಾರುತಿ ಸುಜುಕಿ ಬಿಡಿಭಾಗಗಳ ಆನ್‌ಲೈನ್ ಸೇವೆ !

ಆರಂಭದಲ್ಲಿ ಪರೀಕ್ಷಾ ಹಂತದಲ್ಲಿದ್ದ ಸಮಯದಲ್ಲಿ ದೆಹಲಿ ಮತ್ತು ಎನ್‌ಸಿಆರ್‌ನ ಗ್ರಾಹಕರು ಮಾತ್ರ ಆನ್‌ಲೈನ್‌ನಲ್ಲಿ ಅಕ್ಸೆಸರಿಗಳನ್ನು ಖರೀದಿಸಬಹುದಾಗಿತ್ತು. ಇದೀಗ ಕಂಪನಿಯು ಈ ಸೇವೆಯನ್ನು 100ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಿದೆ. ಬಳಕೆದಾರರು ವಾಹನ ಮಾದರಿ, ಪ್ರಕಾರ ಮತ್ತು ಉತ್ಪನ್ನ ವರ್ಗದ ಆಧಾರದ ಮೇಲೆ ಅಕ್ಸೆಸರಿಗಳನ್ನು ವಬ್‌ಸೈಟ್‌ನಲ್ಲಿ ಹುಡುಕಿ ಬೇಕಾದವನ್ನು ಕೊಳ್ಳಬಹುದು.

100ಕ್ಕೂ ಹೆಚ್ಚು ನಗರಗಳಲ್ಲಿ ಮಾರುತಿ ಸುಜುಕಿ ಬಿಡಿಭಾಗಗಳ ಆನ್‌ಲೈನ್ ಸೇವೆ !

ಕಂಪನಿಯು ಪ್ರಸ್ತುತ ಆನ್‌ಲೈನ್‌ನಲ್ಲಿ 2,000ಕ್ಕೂ ಹೆಚ್ಚು ಅಕ್ಸೆಸರಿಗಳನ್ನು ಒದಗಿಸುತ್ತಿದ್ದು, ಅದನ್ನು ಮತ್ತಷ್ಟು ಹೆಚ್ಚಿಸುವ ಗುರಿಯನ್ನು ಹೊಂದಿರುವುದಾಗಿ ಕಂಪನಿ ತಿಳಿಸಿದೆ. ಗ್ರಾಹಕರು ಯುಪಿಐ, ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ನಂತಹ ಆಯ್ಕೆಯ ಪಾವತಿ ವಿಧಾನಗಳೊಂದಿಗೆ ಡಿಜಿಟಲ್ ಪಾವತಿ ಗೇಟ್‌ವೇಗಳ ಮೂಲಕ ಖರೀದಿಸಬಹುದು.

100ಕ್ಕೂ ಹೆಚ್ಚು ನಗರಗಳಲ್ಲಿ ಮಾರುತಿ ಸುಜುಕಿ ಬಿಡಿಭಾಗಗಳ ಆನ್‌ಲೈನ್ ಸೇವೆ !

ಮಾರುತಿ ಸುಜುಕಿ ಜೆನುಯಿನ್ ಅಕ್ಸೆಸರಿಗಳ ಆನ್‌ಲೈನ್ ಲಭ್ಯತೆಯು ಗ್ರಾಹಕರಿಗೆ 'ಭೌತಿಕ' ಶಾಪಿಂಗ್ ಅನುಭವವನ್ನು ಒದಗಿಸುವ ನಮ್ಮ ಉದ್ದೇಶಕ್ಕೆ ಅನುಗುಣವಾಗಿದೆ. ಈ ವೆಬ್‌ಸೈಟ್ ಗ್ರಾಹಕರಿಗೆ ತಮ್ಮ ಮನೆಗಳಲ್ಲೇ ಖರೀದಿಸುವ ಅನುಭವವನ್ನು ಒದಗಿಸಲು ಸಮರ್ಥವಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆನಿಚಿ ಅಯುಕಾವಾ ತಿಳಿಸಿದರು.

100ಕ್ಕೂ ಹೆಚ್ಚು ನಗರಗಳಲ್ಲಿ ಮಾರುತಿ ಸುಜುಕಿ ಬಿಡಿಭಾಗಗಳ ಆನ್‌ಲೈನ್ ಸೇವೆ !

ಮಾರುತಿ ಸುಜುಕಿ ಇತ್ತೀಚೆಗೆ ಬಲೆನೊ ಫೇಸ್‌ಲಿಫ್ಟ್‌ ಅನ್ನು ಬಿಡುಗಡೆ ಮಾಡಿದೆ. 2022ರ ಮಾರುತಿ ಬಲೆನೊವನ್ನು ಅದರ ಹಳೆಯ ಮಾದರಿಗೆ ಹೋಲಿಸಿದರೆ ಅನೇಕ ಹೊಸ ವೈಶಿಷ್ಟ್ಯಗಳು ಮತ್ತು ಬದಲಾವಣೆಗಳೊಂದಿಗೆ ಪರಿಚಯಿಸಲಾಗಿದೆ. ಇದನ್ನು ಭಾರತದಲ್ಲಿ 6.35 ಲಕ್ಷದಿಂದ 6.99 ಲಕ್ಷ ರೂ.ಗಳ ನಡುವಿನ ಬೆಲೆಯಲ್ಲಿ ಪ್ರಾರಂಭಿಸಲಾಗಿದೆ. ಕಂಪನಿಯು ಹೊಸ ಬಲೆನೊವನ್ನು ಚಂದಾದಾರಿಕೆ ಆಧಾರಿತ ಯೋಜನೆಯಲ್ಲಿ ಲಭ್ಯವಾಗುವಂತೆ ಮಾಡಿದೆ. ಇದು ಮಾಸಿಕ ಶುಲ್ಕ 13,999 ರೂ.ಗಳಿಂದ ಪ್ರಾರಂಭವಾಗುತ್ತದೆ.

100ಕ್ಕೂ ಹೆಚ್ಚು ನಗರಗಳಲ್ಲಿ ಮಾರುತಿ ಸುಜುಕಿ ಬಿಡಿಭಾಗಗಳ ಆನ್‌ಲೈನ್ ಸೇವೆ !

ಹೊಸ ಬಾಹ್ಯ ಮತ್ತು ಇಂಟೀರಿಯರ್ ವಿನ್ಯಾಸದೊಂದಿಗೆ ಬಲೆನೊ ಫೇಸ್‌ಲಿಫ್ಟ್‌ ಅನ್ನು ಪರಿಚಯಿಸಲಾಗಿದೆ. 2022ರ ಬಲೆನೊ ಹೊಸ ವಿನ್ಯಾಸದ ಮುಂಭಾಗದ ಗ್ರಿಲ್, ಸ್ಲಿಮ್ ಎಲ್ಇಡಿ ಹೆಡ್‌ಲೈಟ್‌ಗಳು, ಬಂಪರ್‌ಗಳು, ಫಾಗ್ ಲ್ಯಾಂಪ್‌ಗಳು, ಬಾನೆಟ್‌ಗಳು ಮತ್ತು ಹೊಸ ವಿನ್ಯಾಸದ ಅಲಾಯ್ ವೀಲ್‌ಗಳನ್ನು ಮರುವಿನ್ಯಾಸಗೊಳಿಸಲಾಗವಿದೆ.

100ಕ್ಕೂ ಹೆಚ್ಚು ನಗರಗಳಲ್ಲಿ ಮಾರುತಿ ಸುಜುಕಿ ಬಿಡಿಭಾಗಗಳ ಆನ್‌ಲೈನ್ ಸೇವೆ !

ಮಾರುತಿ ಬಲೆನೊ ಫೇಸ್‌ಲಿಫ್ಟ್‌ನ ಎಂಜಿನ್‌ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದು 1.2 ಲೀಟರ್ ಪೆಟ್ರೋಲ್ ಎಂಜಿನ್‌ ಆಗಿದ್ದು, 83 ಬಿಎಚ್‌ಪಿ ಮತ್ತು ಗರಿಷ್ಠ 113 ಎನ್‌ಎಂ ಟಾರ್ಕ್ ಅನ್ನು ನೀಡುತ್ತದೆ. ಈ ಹೊಸ ಫೇಸ್‌ಲಿಫ್ಟ್‌ ವರ್ಣರಂಜಿತ ಹೆಡ್ಸ್‌ ಅಪ್ ಪ್ರದರ್ಶನವನ್ನು ಹೊಂದಿರುವ ತನ್ನ ವಿಭಾಗದಲ್ಲಿ ಮೊದಲ ಕಾರಾಗಿದೆ.

100ಕ್ಕೂ ಹೆಚ್ಚು ನಗರಗಳಲ್ಲಿ ಮಾರುತಿ ಸುಜುಕಿ ಬಿಡಿಭಾಗಗಳ ಆನ್‌ಲೈನ್ ಸೇವೆ !

ಈ ವೈಶಿಷ್ಟ್ಯವು ಈ ಹ್ಯಾಚ್‌ಬ್ಯಾಕ್ ಕಾರಿನ ಪ್ರೀಮಿಯಂ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹೆಡ್ಸಪ್ ಡಿಸ್ ಪ್ಲೇ ಪ್ರೀಮಿಯಂ ಕಾರುಗಳಲ್ಲಿ ಕಂಡುಬರುವ ವೈಶಿಷ್ಟ್ಯವಾಗಿದೆ, ಇದರಿಂದ ಕಾರಿನ ವಿಂಡ್ ಸ್ಕ್ರೀನ್‌ನಲ್ಲಿ ಮಾಡಿದ ಪ್ಯಾನೆಲ್‌ನಲ್ಲಿ ಚಾಲನೆ ಮಾಡುವಾಗ ಡ್ರೈವರ್ ವೇಗ, ಆರ್‌ಪಿಎಂ ಮತ್ತು ಮೈಲೇಜ್ ನಂತಹ ಇತರ ಮಾಹಿತಿಯನ್ನು ಪಡೆಯಬಹುದು.

100ಕ್ಕೂ ಹೆಚ್ಚು ನಗರಗಳಲ್ಲಿ ಮಾರುತಿ ಸುಜುಕಿ ಬಿಡಿಭಾಗಗಳ ಆನ್‌ಲೈನ್ ಸೇವೆ !

ಮಾರುತಿ ಬಾಲೆನೊ ಫೇಸ್‌ಲಿಫ್ಟ್‌ನಲ್ಲಿ ಲಭ್ಯವಿರುವ ಸೆಗ್ಮೆಂಟ್ ಮೊದಲ ವೈಶಿಷ್ಟ್ಯಗಳಲ್ಲಿ 360 ಡಿಗ್ರಿ ಕ್ಯಾಮೆರಾ ಕೂಡ ಒಂದು. ಈ ಕ್ಯಾಮೆರಾವು ಸಮೀಪಿಸುವ ಆಬ್ಜೆಕ್ಟ್‌ ಡಿಟೆಕ್ಷನ್ ತಂತ್ರಜ್ಞಾನವನ್ನು ಹೊಂದಿದ್ದು, ಕಾರಿನ ಮುಂಭಾಗದಿಂದ ಬರುವ ಯಾವುದೇ ಚಲಿಸುವ ವಸ್ತುವನ್ನು ಪತ್ತೆ ಹಚ್ಚಿ ಮಾಹಿತಿಯನ್ನು ಪ್ರದರ್ಶಿಸುತ್ತದೆ.

100ಕ್ಕೂ ಹೆಚ್ಚು ನಗರಗಳಲ್ಲಿ ಮಾರುತಿ ಸುಜುಕಿ ಬಿಡಿಭಾಗಗಳ ಆನ್‌ಲೈನ್ ಸೇವೆ !

2022ರ ಬಲೆನೊ ಹೊಸ ಪೀಳಿಗೆಯ ಸುಜುಕಿ ಕನೆಕ್ಟ್‌ನೊಂದಿಗೆ ಬರುತ್ತದೆ, ಇದು 40 ವೈಶಿಷ್ಟ್ಯಗಳನ್ನು ಹೊಂದಿದೆ. ಈ ವ್ಯವಸ್ಥೆಯು ಸುಜುಕಿ ಕನೆಕ್ಟ್‌ನ ಅಪ್ಲಿಕೇಶನ್ ಮೂಲಕ ವಾಹನ ಸುರಕ್ಷತೆ ಮತ್ತು ಭದ್ರತೆ, ಟ್ರಿಪ್‌ಗಳು, ಚಾಲನಾ ಮಾದರಿಗಳು, ಸ್ಥಿತಿ ಎಚ್ಚರಿಕೆಗಳು ಮತ್ತು ರಿಮೋಟ್ ಕಾರ್ಯಾಚರಣೆಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ.

100ಕ್ಕೂ ಹೆಚ್ಚು ನಗರಗಳಲ್ಲಿ ಮಾರುತಿ ಸುಜುಕಿ ಬಿಡಿಭಾಗಗಳ ಆನ್‌ಲೈನ್ ಸೇವೆ !

ಈ ವ್ಯವಸ್ಥೆಯನ್ನು ಸ್ಮಾರ್ಟ್ ವಾಚ್‌ಗೂ ಸಂಪರ್ಕಿಸಬಹುದು, ಇದರಿಂದ ಕಾರು ಮಾಲೀಕರು ಲಾಕಿಂಗ್ ಸಿಸ್ಟಂ, ಹೆಡ್‌ಲೈಟ್, ಅಪಾಯದ ಬೆಳಕು ಮತ್ತು ಕಾರಿನಿಂದ ದೂರವಿರುವಾಗಲೂ ಕಾರಿನ ಬಾಗಿಲುಗಳ ಅಲಾರಂನಂತಹ ವೈಶಿಷ್ಟ್ಯಗಳನ್ನು ನಿಯಂತ್ರಿಸಬಹುದು. ಧ್ವನಿ ಸಂಪರ್ಕಕ್ಕಾಗಿ, ಅಲೆಕ್ಸಾ ಕೌಶಲ್ಯವನ್ನು ಇದರಲ್ಲಿ ಬಳಸಲಾಗಿದೆ.

Most Read Articles

Kannada
English summary
Maruti suzuki online accessories now available in 100 cities
Story first published: Tuesday, March 1, 2022, 18:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X