ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಎಕ್ಸ್‌ಎಲ್6
ಜನಪ್ರಿಯ ಮತ್ತು ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿವೆ. ಇದರಲ್ಲಿ ಫೇಸ್‌ಲಿಫ್ಟ್‌ಗಳು, ಹೊಸ ತಲೆಮಾರಿನ ಆವೃತ್ತಿಗಳು ಮತ್ತು ಹೊಸ ಕಾರುಗಳನ್ನು ಒಳಗೊಂಡಿದೆ.

ಇದರಲ್ಲಿ ಎಕ್ಸ್‌ಎಲ್6 ಎಂಪಿವಿ ಮಾದರಿಯು ಕೂಡ ಒಳಗೊಂಡಿದೆ. ಈ ಮಾರುತಿ ಸುಜುಕಿ ಎಕ್ಸ್‌ಎಲ್6 ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಂಪಿವಿ ಮಾದರಿಗಳಲ್ಲಿ ಒಂದಾಗಿದೆ. ಹೊಸ ಮಾರುತಿ ಸುಜುಕಿ ಎಕ್ಸ್‌ಎಲ್6 ಕಾರನ್ನು 2022ರ ಏಪ್ರಿಲ್ ತಿಂಗಳ 3ನೇ ಅಥವಾ 4ನೇ ವಾರದಲ್ಲಿ ಬಿಡುಗಡೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ನವೀಕರಿಸಿದ ಮಾದರಿಯನ್ನು ನೆಕ್ಸಾ ಪ್ರೀಮಿಯಂ ಡೀಲರ್‌ಶಿಪ್ ನೆಟ್‌ವರ್ಕ್ ಮೂಲಕ ಮಾರಾಟ ಮಾಡುವುದನ್ನು ಮುಂದುವರಿಸಲಾಗುತ್ತದೆ.

ಸುಜುಕಿಯು 2019 ರಲ್ಲಿ ಹೊಸ ಎಕ್ಸ್‌ಎಲ್6 ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಿತ್ತು. ಇದು ಮೂಲತಃ ಎರ್ಟಿಗಾದ ಪ್ರೀಮಿಯಂ ಮತ್ತು ಹೆಚ್ಚು ಒರಟಾದ 6-ಸೀಟರ್ ಆವೃತ್ತಿಯಾಗಿದೆ. 2022ರ ಮಾರುತಿ ಸುಜುಕಿ ಎಕ್ಸ್‌ಎಲ್6 ಫೇಸ್‌ಲಿಫ್ಟ್ಸಣ್ಣ ನವೀಕರಣಗಳನ್ನು ಮಾತ್ರ ಹೊಂದಿದೆ. ಈ ನವೀಕರಣಗಳು ಹೊಸ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಸ್ವಲ್ಪ ರಿಫ್ರೆಶ್ ಮಾಡಿದ ಮುಂಭಾಗದ ಗ್ರಿಲ್ ಮತ್ತು ಹೊಸ ಅಲಾಯ್ ವ್ಹೀಲ್ ಗಳಿಗೆ ಸೀಮಿತವಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

ಕ್ಯಾಬಿನ್ ಒಳಗೆ, 2022ರ ಮಾರುತಿ ಸುಜುಕಿ ಎಕ್ಸ್‌ಎಲ್6 ಫೇಸ್‌ಲಿಫ್ಟ್ ಹೊಸ ಸೀಟ್ ಅಪ್ಹೋಲ್‌ಸ್ಟರಿ ಜೊತೆಗೆ ಹೊಸ ವೈಶಿಷ್ಟ್ಯಗಳೊಂದಿಗೆ ಬರುವ ಸಾಧ್ಯತೆಯಿದೆ. ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಟೋಮ್ಯಾಟಿಕ್ ಎಸಿ ಮತ್ತು ಲೆದರ್ ಸೀಟ್‌ಗಳನ್ನು ಹೊಂದಿದೆ.

ಇದರೊಂದಿಗೆ ಮರುವಿನ್ಯಾಸಗೊಳಿಸಲಾದ ಏರ್‌ಕಾನ್ ಕಂಟ್ರೋಲ್ ಗಳೊಂದಿಗೆ ದೊಡ್ಡ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುವ ನಿರೀಕ್ಷೆಯಿದೆ. ಇದು 360 ಡಿಗ್ರಿ ಕ್ಯಾಮೆರಾ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಸಹ ಪಡೆಯಬಹುದು.

ಹೊಸ ಮಾರುತಿ ಸುಜುಕಿ ಎಕ್ಸ್‌ಎಲ್6 ಎಂಪಿವಿಯಲ್ಲಿ ಅದೇ 1.5-ಲೀಟರ್ 4-ಸಿಲಿಂಡರ್ ನ್ಯಾಚುರಲ್ ಆಸ್ಪೈರಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 103 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸ್ಟ್ಯಾಂಡರ್ಡ್ ಆಗಿ ಬರಲಿದೆ. ಸುಜುಕಿಯು 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಬದಲಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

ಮಾರುತಿ ಸುಜುಕಿ ಮುಂಬರುವ ಆವೃತ್ತಿ ಎಕ್ಸ್‌ಎಲ್6 ಎಂಪಿವಿಯ ಸುರಕ್ಷತಾ ಮಾನದಂಡಗಳನ್ನು 6-ಏರ್‌ಬ್ಯಾಗ್‌ಗಳು, ಲೇನ್ ಕೀಪಿಂಗ್ ಅಸಿಸ್ಟ್, ಬ್ಲೈಂಡ್-ಸ್ಪಾಟ್ ಅಲರ್ಟ್, ಪಾರ್ಕಿಂಗ್ ಅಸಿಸ್ಟ್ ಮತ್ತು ಎ ಮುಂತಾದ ಕೆಲವು ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡುವ ಮೂಲಕ ನಾವು ನಿರೀಕ್ಷಿಸುತ್ತೇವೆ.

ಪ್ರಸ್ತುತ 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಅನ್ನು ಹೆಚ್ಚು ಆಧುನಿಕ ಮತ್ತು ಅತ್ಯಾಧುನಿಕ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನಿಂದ ಬದಲಾಯಿಸಲಾಗುವುದು ಎಂದು ವದಂತಿಗಳಿವೆ. ಇದು ಉತ್ತಮ ಇಂಧನ ದಕ್ಷತೆಯ ಅಂಕಿಅಂಶಗಳನ್ನು ನೀಡುವುದಲ್ಲದೆ, ಹೆಚ್ಚು ಸಂಸ್ಕರಿಸಿದ ಚಾಲನ ಅನುಭವ ನೀಡುತ್ತದೆ.

ನವೀಕರಸಿದ ಮಾರುತಿ ಸುಜುಕಿ ಎಕ್ಸ್‌ಎಲ್6 ಎಂಪಿವಿಯು ತುಸು ದುಬಾರಿಯಾಗಿರುತ್ತದೆ. ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಮಾರುತಿ ಸುಜುಕಿ ಎಕ್ಸ್‌ಎಲ್6 ಎಂಪಿವಿಯ ಬೆಲೆಯು ಭಾರತದ ಎಕ್ಶ್ ಶೋರೂಂ ಪ್ರಕಾರ ರೂ.12.02 ಲಕ್ಷವಾಗಿದೆ.

ಇನ್ನು ಮಾರುತಿ ಸುಜುಕಿ ಕಂಪನಿಯು ಎರ್ಟಿಗಾ ಎಂಪಿವಿಯಲ್ಲಿ ಕೆಲವು ಹೊಸ ನವೀಕರಣವನ್ನು ನಡೆಸಲು ಸಜ್ಜಾಗಿದೆ. ಪ್ರಸುತ ಮಾರುತಿ ಸುಜುಕಿ ಎರ್ಟಿಗಾ ಕಾರಿನಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, 15 ಇಂಚಿನ ವ್ಹೀಲ್ ಗಳು, ಆಂಡ್ರಾಯ್ಡ್ ಆಟೋ ಮತ್ತು ಕಾರ್‌ಪ್ಲೇಯೊಂದಿಗೆ 7 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದರೊಂದಿಗೆ ಈ ಎರ್ಟಿಗಾ ಎಂಪಿವಿಯೊಂದಿಗೆ ಪುಶ್-ಬಟನ್ ಸ್ಟಾರ್ಟ್-ಸ್ಟಾಪ್, ಹಿಂಭಾಗದ ಎಸಿಯೊಂದಿಗೆ ಆಟೋ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಕಪ್ ಹೋಲ್ಡರ್ಸ್ ಮತ್ತು ಸ್ಪೀಕರ್ ಆಡಿಯೊ ಸಿಸ್ಟಂ ಅನ್ನು ಒಳಗೊಂಡಿದೆ.

ಈ ಎರ್ಟಿಗಾ ಎಂಪಿವಿಯು ಅರೆನಾ ಡೀಲರುಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಂಪಿವಿಗಳ ಪಟ್ಟಿಯಲ್ಲಿ ಎರ್ಟಿಗಾ ನಂ.1 ಸ್ಥಾನದಲ್ಲಿದೆ. ಇತ್ತೀಚೆಗೆ ಎಂಪಿವಿಗಳ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ. ಇದರಿಂದ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿಯಲ್ಲಿ ಹಲವು ನವೀಕರಣಗಳನ್ನು ನಡೆಸುತ್ತಾ ಬಂದಿದೆ. ಈ ಹೊಸ ಮಾರುತಿ ಎರ್ಟಿಗಾ ಎಂಪಿವಿ ಮಾದರಿಯಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಹೆಚ್ಚು ಹೊಂದಿಲ್ಲ. ಈ ಎಂಪಿವಿಯ ಒಳಭಾಗದ ಚಿತ್ರಗಳನ್ನು ಇನ್ನೂ ಬಹಿರಂಗವಾಗಿಲ್ಲ. ಹೊಸ ಮಾರುತಿ ಸುಜುಕಿ ಎಕ್ಸ್‌ಎಲ್6 ಎಂಪಿವಿಯೊಂದಿಗೆ ಈ ಎರ್ಟಿಗಾ ಕೂಡ ಶೀಘ್ರದಲ್ಲೇ ಬಾರತೀಯ ಮಾರುಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ಮಾರುತಿ ಸುಜುಕಿ ಎಕ್ಸ್‌ಎಲ್6 2022 ರ ಮಧ್ಯದಲ್ಲಿ ಆರು ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಮಾರುತಿ ಸುಜುಕಿಯ ಯೋಜನೆಯ ಭಾಗವಾಗಿದೆ. ಇತ್ತೀಚಿನ ನವೀಕರಣವು ಮಾರುತಿ ಸುಜುಕಿ ಎಕ್ಸ್‌ಎಲ್6ಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಪ್ರತಿಸ್ಪರ್ಧಿಗಳ ವಿರುದ್ಧ ಉತ್ತಮ ಪೈಪೋಟಿ ನೀಡಲು ಅವಕಾಶವನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.


Click it and Unblock the Notifications