ಪ್ರವೇಶ ಮಟ್ಟದ ಕಾರುಗಳನ್ನು ಸ್ಥಗಿತಗೊಳಿಸಲು ಮಾರುತಿ ಸುಜುಕಿ ಚಿಂತನೆ: ಕಾರಣ ಇಲ್ಲಿದೆ

ಭಾರತದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಮಾರುತಿ ಸುಜುಕಿ ದೇಶದಲ್ಲಿ ವಾಹನ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಮುಂಬರುವ ದಿನಗಳಲ್ಲಿ ಕಂಪನಿಯು ತನಗೆ ಹೆಚ್ಚು ಲಾಭ ತಂದುಕೊಡುತ್ತಿರುವ ಸಣ್ಣ ವಾಹನಗಳನ್ನು ಸ್ಥಗಿತಗೊಳಿಸಲು ಯೋಜಿಸುತ್ತಿದೆ.

ಪ್ರವೇಶ ಮಟ್ಟದ ಕಾರುಗಳನ್ನು ಸ್ಥಗಿತಗೊಳಿಸಲು ಮಾರುತಿ ಸುಜುಕಿ ಚಿಂತನೆ: ಕಾರಣ ಇಲ್ಲಿದೆ

ಸಾಮಾನ್ಯ ಜನರಿಗೆ ಕೈಗೆಟುಕುವ ಬೆಲೆಗೆ ವಾಹನಗಳನ್ನು ತಯಾರಿಸುವ ಉದ್ದೇಶದಿಂದ ಕಂಪನಿಯು ಸಣ್ಣ ವಾಹನಗಳನ್ನು ತಯಾರಿಸಿದೆ. ಆದರೆ ಕೇಂದ್ರ ಸರ್ಕಾರದ ಹೊಸ ನೀತಿಗಳಿಂದಾಗಿ ಸಣ್ಣ ವಾಹನಗಳು ದುಬಾರಿಯಾಗುತ್ತಿವೆ. ಇದರಿಂದ ವಾಹನಗಳಿಗೆ ಬೇಡಿಕೆ ಕಡಿಮೆಯಾಗಿ ಕಂಪನಿಗೆ ನಷ್ಟವಾಗುತ್ತದೆ ಎಂದು ಮಾರುತಿ ಸುಜುಕಿ ಅಧ್ಯಕ್ಷ ಆರ್‌ಸಿ ಭಾರ್ಗವ ಹೇಳಿದ್ದಾರೆ.

ಪ್ರವೇಶ ಮಟ್ಟದ ಕಾರುಗಳನ್ನು ಸ್ಥಗಿತಗೊಳಿಸಲು ಮಾರುತಿ ಸುಜುಕಿ ಚಿಂತನೆ: ಕಾರಣ ಇಲ್ಲಿದೆ

ಮುಂದಿರುವ ಸಮಸ್ಯೆಗಳು

ಕೊರೊನಾದಿಂದಾಗಿ ಸೆಮಿಕಂಡಕ್ಟರ್ ಕೊರತೆ ಮತ್ತು ಪೂರೈಕೆ ಸರಪಳಿಯ ಅಡಚಣೆಗಳು ವಾಹನಗಳ ಉತ್ಪಾದನೆ ಮತ್ತು ಮಾರಾಟದ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಇದು ಕೂಡ ಎಲ್ಲಾ ಮಾದರಿಯ ವಾಹನಗಳ ಬೆಲೆಯಲ್ಲಿ ಅನಿರೀಕ್ಷಿತ ಏರಿಕೆಗೆ ಕಾರಣವಾಗಿದೆ. ಈಗ ಕಾರುಗಳಿಗೆ 6 ಏರ್‌ಬ್ಯಾಗ್ ನಿಯಮ ತಂದಿರುವುದರಿಂದ ಎಲ್ಲಾ ಪ್ರವೇಶ ಮಟ್ಟದ ಕಾರುಗಳು ದುಬಾರಿಯಾಗಲಿವೆ.

ಪ್ರವೇಶ ಮಟ್ಟದ ಕಾರುಗಳನ್ನು ಸ್ಥಗಿತಗೊಳಿಸಲು ಮಾರುತಿ ಸುಜುಕಿ ಚಿಂತನೆ: ಕಾರಣ ಇಲ್ಲಿದೆ

ದ್ವಿಚಕ್ರ ವಾಹನದ ಬೆಲೆಯಲ್ಲಿ ಎಂಟ್ರಿ ಲೆವಲ್ ಕಾರು ಖರೀದಿಸಬಹುದು ಎಂದುಕೊಳ್ಳುವ ಗ್ರಾಹಕರಿಗೆ ನಿರಾಸೆಯಾಗುತ್ತದೆ. ಈ ವರ್ಷದ ಆರಂಭದಲ್ಲಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಅಕ್ಟೋಬರ್‌ನಿಂದ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳ ನಿಯಮವನ್ನು ಕಡ್ಡಾಯಗೊಳಿಸುವುದಾಗಿ ಹೇಳಿದ್ದರು.

ಪ್ರವೇಶ ಮಟ್ಟದ ಕಾರುಗಳನ್ನು ಸ್ಥಗಿತಗೊಳಿಸಲು ಮಾರುತಿ ಸುಜುಕಿ ಚಿಂತನೆ: ಕಾರಣ ಇಲ್ಲಿದೆ

ಕನಿಷ್ಠ 8 ಜನರು ಪ್ರಯಾಣಿಸುವ ಸಾಮರ್ಥ್ಯ ಹೊಂದಿರುವ ಕಾರುಗಳಿಗೆ ಹೊಸ ನಿಯಮ ಅನ್ವಯಿಸುತ್ತದೆ. ಪ್ರಯಾಣಿಕರ ಸುರಕ್ಷತೆಗಾಗಿ ಈ ನಿಯಮ ತರಲಾಗುತ್ತಿದೆ ಎಂದು ಗಡ್ಕರಿ ಹೇಳಿದ್ದರು. ಕಾರುಗಳಲ್ಲಿ ಏರ್‌ಬ್ಯಾಗ್ ಇಲ್ಲದಿರುವುದೇ ರಸ್ತೆ ಅಪಘಾತಗಳಲ್ಲಿ ಪ್ರಯಾಣಿಕರಿಗೆ ಭೀಕರ ಗಾಯಗಳು ಮತ್ತು ಸಾವಿಗೆ ಮುಖ್ಯ ಕಾರಣ ಎಂದು ಹೇಳಿದ್ದರು.

ಪ್ರವೇಶ ಮಟ್ಟದ ಕಾರುಗಳನ್ನು ಸ್ಥಗಿತಗೊಳಿಸಲು ಮಾರುತಿ ಸುಜುಕಿ ಚಿಂತನೆ: ಕಾರಣ ಇಲ್ಲಿದೆ

ಹೊಸ ನೀತಿಗಳು

ಕಳೆದ ಎರಡು ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ BS6 ಹೊರಸೂಸುವಿಕೆ ಮಾನದಂಡವನ್ನು ಅಳವಡಿಸಲಾಗಿದೆ, ಇದು ಸಾಲದೆಂಬಂತೆ ಕರೋನಾದಿಂದಾಗಿ ಕಚ್ಛಾ ವಸ್ತುಗಳು ದುಬಾರಿಯಾಗಿವೆ. ಇದರಿಂದಾಗಿ ಮಾರುತಿ ಸುಜುಕಿ ಈಗಾಗಲೇ 2021 ರಲ್ಲಿ 4 ಬಾರಿ ಮತ್ತು 2022 ರಲ್ಲಿ 3 ಬಾರಿ ಕಾರಿನ ಬೆಲೆಯನ್ನು ಹೆಚ್ಚಿಸಿದೆ.

ಪ್ರವೇಶ ಮಟ್ಟದ ಕಾರುಗಳನ್ನು ಸ್ಥಗಿತಗೊಳಿಸಲು ಮಾರುತಿ ಸುಜುಕಿ ಚಿಂತನೆ: ಕಾರಣ ಇಲ್ಲಿದೆ

ಪರಿಣಾಮ ಕಂಪನಿಯ ಎಂಟ್ರಿ ಲೆವೆಲ್ ಮಾಡೆಲ್‌ಗಳು ತುಂಬಾ ದುಬಾರಿಯಾಗಿದ್ದು, ಇದೀಗ 6 ಏರ್‌ಬ್ಯಾಗ್ ಬೇಕು ಎಂಬ ನಿಯಮವನ್ನು ಸರ್ಕಾರ ತರಲು ಹೊರಟಿರುವುದು ಕಾರುಗಳ ಬೆಲೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರ್ಗವ ಅವರು, ಇದು ಕೇವಲ ಕಾರುಗಳ ಬೆಲೆಯನ್ನು ಹೆಚ್ಚಿಸುತ್ತದೆಯೇ ಹೊರತು ಅಪಘಾತಗಳನ್ನು ಕಡಿಮೆ ಮಾಡುವುದಿಲ್ಲ ಎಂದಿದ್ದಾರೆ.

ಪ್ರವೇಶ ಮಟ್ಟದ ಕಾರುಗಳನ್ನು ಸ್ಥಗಿತಗೊಳಿಸಲು ಮಾರುತಿ ಸುಜುಕಿ ಚಿಂತನೆ: ಕಾರಣ ಇಲ್ಲಿದೆ

ಕಾಂಪ್ಯಾಕ್ಟ್ ವಾಹನಗಳನ್ನು ಮಾರಾಟ ಮಾಡುವುದರಿಂದ ಕಂಪನಿಯು ಹೆಚ್ಚು ಲಾಭ ಗಳಿಸುವುದಿಲ್ಲ. ಕಂಪನಿಯು ಪ್ರಸ್ತುತ ಏಕಪಕ್ಷೀಯವಾಗಿ ಸಣ್ಣ ಕಾರುಗಳನ್ನು ನಿಯಂತ್ರಿಸುತ್ತದೆ. ಆಲ್ಟೊ ಮತ್ತು ಎಸ್-ಪ್ರೆಸ್ಸೊದಂತಹ ಮಾದರಿಗಳೊಂದಿಗೆ ಸ್ಪರ್ಧಿಸಲು ಇತರ ಯಾವುದೇ ಮಾದರಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಹಾಗಾಗಿ ಕಂಪನಿಯು ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು.

ಪ್ರವೇಶ ಮಟ್ಟದ ಕಾರುಗಳನ್ನು ಸ್ಥಗಿತಗೊಳಿಸಲು ಮಾರುತಿ ಸುಜುಕಿ ಚಿಂತನೆ: ಕಾರಣ ಇಲ್ಲಿದೆ

ಈ ನಿಯಮದಿಂದಾಗಿ ಕೈಗೆಟಕುವ ದರದ ಕಾರುಗಳ ಬೆಲೆ ಗಣನೀಯವಾಗಿ ಏರಿಕೆಯಾಗಲಿದ್ದು, ಇದು ಕಾರುಗಳ ಮಾರಾಟದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಕಾರು ಕಂಪನಿಗಳು ಆತಂಕ ವ್ಯಕ್ತಪಡಿಸಿದ್ದವು. ಈಗಾಗಲೇ ಭಾರತದಲ್ಲಿ ಆಟೋಮೊಬೈಲ್ ಉದ್ಯಮವು ಕಳೆದ ಮೂರು ವರ್ಷಗಳಿಂದ ನಷ್ಟವನ್ನು ಎದುರಿಸಿವೆ ಎಂದು ಹೇಳಿಕೊಂಡಿವೆ.

ಪ್ರವೇಶ ಮಟ್ಟದ ಕಾರುಗಳನ್ನು ಸ್ಥಗಿತಗೊಳಿಸಲು ಮಾರುತಿ ಸುಜುಕಿ ಚಿಂತನೆ: ಕಾರಣ ಇಲ್ಲಿದೆ

ಮುಂದಿರುವ ಸವಾಲುಗಳು

ಈ ನಿಯಮದಿಂದಾಗಿ ಅಗ್ಗದ ಕಾರುಗಳು ದುಬಾರಿಯಾಗಲಿವೆ. ಪ್ರಸ್ತುತ 10 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಕಾರುಗಳಿಗೆ ಮಾತ್ರ ಆರು ಏರ್‌ಬ್ಯಾಗ್‌ಗಳನ್ನು ನೀಡಲಾಗುತ್ತಿದೆ. ಈ ಕಾರುಗಳು ಎರಡು ಮುಂಭಾಗದ ಏರ್‌ಬ್ಯಾಗ್‌ಗಳ ಜೊತೆಗೆ ಎರಡು ಬದಿ ಮತ್ತು ಎರಡು ಕರ್ಟನ್ ಏರ್ ಬ್ಯಾಗ್‌ಗಳನ್ನು ಹೊಂದಿವೆ.

ಪ್ರವೇಶ ಮಟ್ಟದ ಕಾರುಗಳನ್ನು ಸ್ಥಗಿತಗೊಳಿಸಲು ಮಾರುತಿ ಸುಜುಕಿ ಚಿಂತನೆ: ಕಾರಣ ಇಲ್ಲಿದೆ

ಅಗ್ಗದ ಕಾರುಗಳಲ್ಲಿ ಹೆಚ್ಚುವರಿ ಏರ್‌ಬ್ಯಾಗ್‌ಗಳನ್ನು ಸೇರಿಸುವುದರಿಂದ ಬೆಲೆಯನ್ನು 20,000 ರಿಂದ 25,000 ರೂ. ಹೆಚ್ಚಾಗುತ್ತದೆ. ಇದು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಅಗ್ಗದ ಕಾರುಗಳ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ, ಇದು ಮಾರಾಟದ ಮೇಲೆ ಪರಿಣಾಮ ಬೀರಬಹುದು ಎಂದು ಕಾರು ತಯಾರಕರು ಹೇಳಿದ್ದಾರೆ.

ಪ್ರವೇಶ ಮಟ್ಟದ ಕಾರುಗಳನ್ನು ಸ್ಥಗಿತಗೊಳಿಸಲು ಮಾರುತಿ ಸುಜುಕಿ ಚಿಂತನೆ: ಕಾರಣ ಇಲ್ಲಿದೆ

ಡ್ಯುಯಲ್ ಏರ್‌ಬ್ಯಾಗ್‌ಗಳು, ಎಬಿಎಸ್, ಸೆಂಟ್ರಲ್ ಲಾಕಿಂಗ್ ಸಿಸ್ಟಮ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಕಾರು ಗ್ರಾಹಕರು ಹೆಚ್ಚು ಗಮನ ಹರಿಸುತ್ತಾರೆ ಎಂದು ಸುರಕ್ಷತಾ ತಜ್ಞರು ಹೇಳುತ್ತಾರೆ. ಕಾರು ತಯಾರಕರು ಈಗ ಈ ಆಯ್ಕೆಗಳನ್ನು ಪ್ರವೇಶ ಮಟ್ಟದ ಕಾರುಗಳಲ್ಲಿಯೂ ನೀಡುತ್ತಿದ್ದಾರೆ. ಇದರ ಹೊರತಾಗಿ, ಇತರ ವೈಶಿಷ್ಟ್ಯಗಳನ್ನು ಸೇರಿಸುವುದರಿಂದ ಕಾರು 1 ಲಕ್ಷದಿಂದ 1.20 ರೂ.ಗಳಷ್ಟು ದುಬಾರಿಯಾಗುತ್ತದೆ. ಇದು ಈಗಾಗಲೇ ಭಾರತದಲ್ಲಿ ಮಾರಾಟಕ್ಕೆ ಸ್ಪರ್ಧಿಸುತ್ತಿರುವ ಪ್ರವೇಶ ಮಟ್ಟದ ಸಣ್ಣ ಕಾರುಗಳನ್ನು ಹೆಚ್ಚು ದುಬಾರಿಯಾಗಿಸುತ್ತದೆ.

ಪ್ರವೇಶ ಮಟ್ಟದ ಕಾರುಗಳನ್ನು ಸ್ಥಗಿತಗೊಳಿಸಲು ಮಾರುತಿ ಸುಜುಕಿ ಚಿಂತನೆ: ಕಾರಣ ಇಲ್ಲಿದೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಆಟೋ ಉದ್ಯಮವು ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಲು ಸಾಲು ಸವಾಲುಗಳನ್ನು ಎದುರಿಸುತ್ತಿದೆ. ಇದು ಸಾಲದೆಂಬಂತೆ ಸರ್ಕಾರದ ಹೊಸ ನೀತಿಗಳು ವಾಹನ ಬೆಲೆಯನ್ನು ದುಬಾರಿಯಾಗಿಸುವುದರಿಂದ ಬೇಡಿಕೆ ಕಡಿಮೆಯಾಗಿ ಕಂಪನಿಗಳಿಗೆ ನಷ್ಟವಾಗುವ ಭಿತಿ ತಯಾರಕರದ್ದಾಗಿದೆ. ವಾಹನ ತಯಾರಕ ಕಂಪನಿಗಳು ಒಟ್ಟುಗೂಡಿ ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಬೇಕಿದೆ.

Most Read Articles

Kannada
English summary
Maruti Suzuki plans to shut down entry level vehicles Heres the reason
Story first published: Wednesday, June 29, 2022, 11:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X