ಮಹೀಂದ್ರಾ ಥಾರ್‌ಗೆ ಪ್ರತಿಸ್ಪರ್ಧಿಯಾಗಲು ಸಜ್ಜಾಗುತ್ತಿದೆ ಮಾರುತಿ ಸುಜುಕಿ ಜಿಮ್ನಿ ಎಸ್‌ಯುವಿ
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ, ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಪರೀಕ್ಷಿಸಲು ಮುಂದಾಗಿದೆ. ಕಡಿಮೆ ಅವಧಿಯಲ್ಲೇ ದೇಶದಲ್ಲಿ ಭಾರೀ ಜನಪ್ರಿಯವಾಗಿರುವ ಮಹೀಂದ್ರಾ ಥಾರ್‌ಗೆ ಪ್ರತಿಸ್ಪರ್ಧಿಯಾಗಿ ಮಾರುತಿ ಜಿಮ್ನಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಮಹೀಂದ್ರಾ ಎರಡನೇ ತಲೆಮಾರಿನ ಥಾರ್ ಎಸ್‌ಯುವಿಯನ್ನು ಅಕ್ಟೋಬರ್ 2020ರಲ್ಲಿ ಬಿಡುಗಡೆ ಮಾಡಲಾಗಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರು ಈ ಮಾದರಿಯನ್ನು ಉತ್ತಮವಾಗಿ ಸ್ವೀಕರಿಸುವ ಮೂಲಕ ಭಾರೀ ಹಿಟ್ ಆಗಿತ್ತು. ಗ್ರಾಹಕರು ಈಗಲೂ ಕೂಡ ಹೊಸ ತಲೆಮಾರಿನ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಪಡೆಯಲು ಕಾತುರದಿಂದ ಕಾಯುತ್ತಿದ್ದಾರೆ.

ಗ್ರಾಹಕರಿಂದ ವ್ಯಕ್ತವಾದ ಅಭೂತಪೂರ್ವ ಪ್ರತಿಕ್ರಿಯೆಯಿಂದಾಗಿ, ಮಹೀಂದ್ರಾ ಥಾರ್ ಎಸ್‌ಯುವಿಯ ಕಾಯುವ ಅವಧಿಯನ್ನು 1 ವರ್ಷದವರೆಗೆ ವಿಸ್ತರಿಸಲಾಗಿದೆ. ಆದ್ದರಿಂದ ಮಹೀಂದ್ರಾ ಗ್ರಾಹಕರಿಗೆ ತ್ವರಿತ ವಿತರಣೆಗಾಗಿ ಹೊಸ ತಲೆಮಾರಿನ ಥಾರ್ ಎಸ್‌ಯುವಿಯ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

ಮಹೀಂದ್ರಾ 2021ರ ಫೆಬ್ರವರಿಯಲ್ಲಿ ಕೇವಲ 2,842 ಥಾರ್ ಎಸ್‌ಯುವಿಗಳನ್ನು ಮಾತ್ರ ಮಾರಾಟ ಮಾಡಿತ್ತು. ನಂತರ ಫೆಬ್ರವರಿ 2022 ರಲ್ಲಿ ಮಹೀಂದ್ರಾದ ಥಾರ್ ಎಸ್‌ಯುವಿಗಳ ಮಾರಾಟದ ಸಂಖ್ಯೆ 5,072 ಯುನಿಟ್‌ಳಿಗೆ ಏರಿಕೆಯಾಗಿದೆ. ಈ ಮೂಲಕ ಥಾರ್‌ನ ಮಾರಾಟವು ಶೇಕಡಾ 78.47 ರಷ್ಟು ಹೆಚ್ಚಾಗಿದೆ.

ಮಹೀಂದ್ರಾ ಥಾರ್ ವಾರ್ಷಿಕ ಮಾರಾಟದಲ್ಲಿ ಮಾತ್ರವಲ್ಲದೆ ಮಾಸಿಕ ಮಾರಾಟದಲ್ಲಿಯೂ ಬೆಳವಣಿಗೆಯನ್ನು ಸಾಧಿಸಿದೆ. ಮಹೀಂದ್ರಾ 2022ರ ಜನವರಿಯಲ್ಲಿ ಕೇವಲ 4,646 ಥಾರ್ ಎಸ್‌ಯುವಿಗಳನ್ನು ಮಾತ್ರ ಮಾರಾಟ ಮಾಡಿತ್ತು. ಫೆಬ್ರವರಿಯಲ್ಲಿ ಈ ಸಂಖ್ಯೆ 5,072ಕ್ಕೆ ಏರಿದೆ. ಈ ಮೂಲಕ ಶೇಕಡಾ 9.17 ರಷ್ಟು ಬೆಳವಣಿಗೆ ಸಾಧಿಸಿದೆ.

ಇನ್ನು ಫೋರ್ಸ್ ಮೋಟಾರ್ಸ್ (Force Motors)ನ ಫೋರ್ಸ್ ಗೂರ್ಖಾ ಮಾದರಿಯು ಮಹೀಂದ್ರಾ ಥಾರ್ ಎಸ್‌ಯುವಿಗೆ ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತವಿರುವ ನೇರ ಪ್ರತಿಸ್ಪರ್ಧಿಯಾಗಿದೆ. ಫೋರ್ಸ್ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಆಫ್ ರೋಡ್ ಎಸ್‌ಯುವಿ ಮಾದರಿಯಾದ ಗೂರ್ಖಾ(Gurkha) ಮಾದರಿಯನ್ನು ಹೊಸ ಆವೃತ್ತಿಯೊಂದಿಗೆ ಉನ್ನತೀಕರಿಸಿ 2022ರ ಮಾದರಿಯಲ್ಲಿ ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದೆ.

ಅದರೆ ಫೋರ್ಸ್ ಗೂರ್ಖಾದ ಮಾರಾಟ ಸಂಖ್ಯೆಗಳ ಬಗ್ಗೆ ಯಾವುದೇ ಸಾರ್ವಜನಿಕ ಮಾಹಿತಿ ಇಲ್ಲ. ಆದ್ದರಿಂದ ಮಹೀಂದ್ರಾ ಥಾರ್‌ನೊಂದಿಗೆ ಪ್ರತಿಸ್ಪರ್ಧಿಸಲು ಫೋರ್ಸ್ ಗೂರ್ಖಾ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ. ಇದೀಗ ಮಾರುತಿ ಸುಜುಕಿ ತನ್ನ ಹೊಸ ಮಾದರಿಯಾದ ಜಿಮ್ನಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ.

ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಮಾರುತಿ ಸುಜುಕಿ ಜಿಮ್ನಿ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಒಂದು ವೇಳೆ ಇದು ಸಂಭವಿಸಿದರೆ, ಮಾರುತಿ ಸುಜುಕಿ ಜಿಮ್ನಿ ಮಹೀಂದ್ರಾ ಥಾರ್ ಎಸ್‌ಯುವಿಗೆ ಮತ್ತೊಂದು ಪ್ರತಿಸ್ಪರ್ಧಿಯಾಗಲಿದೆ. ಜಿಮ್ನಿ ಕಾರುಗಳ ಇತಿಹಾಸದತ್ತ ಕಣ್ಣಾಯಿಸಿದಾಗ 1970ರ ಸಾಲಿನಲ್ಲಿ ಮೊದಲ ಹಗುರ ಜೀಪ್ ಮಾದರಿ ಎಲ್‌ಜೆ10 ಮಾರುಕಟ್ಟೆಗೆ ಪರಿಚಯವಾಗಿತ್ತು.

ತದನಂತರ ಜಿಮ್ನಿ ಎರಡನೇ ತಲೆಮಾರಿನ ಆವೃತ್ತಿಯಾಗಿರುವ ಜಿಪ್ಸಿ 1981 ರಿಂದ 1998ರ ಅವಧಿಯಲ್ಲಿ ಮಾರಾಟವಾಗಿತ್ತು. ತದನಂತರ ಮೂರನೇ ತಲೆಮಾರಿನ ಆವೃತ್ತಿಯು ಜನಪ್ರಿಯಗೊಂಡು ಇದೀಗ ನಾಲ್ಕನೇ ತಲೆಮಾರಿನ ಜಿಮ್ನಿ ಕಾರುಗಳು ಮಾರಾಟ ಅಣಿಯಾಗುತ್ತಿವೆ.

ಜೊತೆಗೆ ಆಪ್ ರೋಡ್, ಸರ್ವಿಯಲ್ ಮತ್ತು ರೆವಿವಲ್ ಎನ್ನುವ ವಿವಿಧ ಚಾಲನಾ ಕಿಟ್ ಒದಗಿಸಲಾಗಿದ್ದು, ಬಾಡಿ ಡಿಕಾಲ್ಸ್, ಲೆದರ್ ಕವರ್ ಪ್ರೇರಿತ ಡೋರ್ ಹ್ಯಾಂಡಲ್, ಕಾರಿನ ಸ್ಟೈಲಿಶ್ ಹೆಚ್ಚಿಸಲು ರೂಫ್ ಟಾಪ್ ಕ್ಯಾರಿಯರ್, ಅಲಾಯ್ ವೀಲ್ಹ್‌ಗಳು ಮತ್ತು ಕಾರಿನ ಕೆಳ ಭಾಗದಲ್ಲಿ ಹೆಚ್ಚುವರಿ ಟೈರ್ ಕ್ಯಾರಿ ಮಾಡುವ ಸೌಲಭ್ಯವಿದೆ.

ಜಪಾನ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಜಿಮ್ನಿ ಕಾರುಗಳು 660ಸಿಸಿ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಟಾಪ್ ಎಂಡ್ ಮಾದರಿಯಲ್ಲಿ 1.5-ಲೀಟರ್(1500 ಸಿಸಿ) ಪೆಟ್ರೋಲ್ ಎಂಜಿನ್ ಜೊತೆಗೆ 63-ಬಿಎಚ್‌ಪಿ ಉತ್ಪಾದನೆ ಮಾಡಿದಲ್ಲಿ ಟಾಪ್ ಮಾದರಿಯು 100-ಬಿಎಚ್‌ಪಿ ಉತ್ಪಾದನಾ ಗುಣ ಹೊಂದಿವೆ. ಇದರೊಂದಿಗೆ ಪ್ರತಿ ಕಾರು ಮಾದರಿಯಲ್ಲೂ 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಒದಗಿಸಲಾಗಿದೆ.

ಇನ್ನು ಮಹೀಂದ್ರಾ ಥಾರ್ ಎಸ್‌ಯುವಿಯು ಒಟ್ಟು 2 ಎಂಜಿನ್ ಆಯ್ಕೆಗಳನ್ನು ನೀಡುತ್ತದೆ. ಇದು 2.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ ಗರಿಷ್ಠ 150 ಪಿಎಸ್ ಪವರ್ ಮತ್ತು 320 ಎನ್ಎಂ ಟಾರ್ಕ್ (ಮ್ಯಾನುವಲ್ ರೂಪಾಂತರಗಳಲ್ಲಿ 300 ಎನ್ಎಂ) ಉತ್ಪಾದಿಸುತ್ತದೆ.

ಜೊತೆಗೆ 2.2-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಅನ್ನು ಸಹ ಹೊಂದಿದೆ. ಈ ಎಂಜಿನ್ ಗರಿಷ್ಠ 130 ಪಿಎಸ್ ಪವರ್ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪ್ರಸರಣ ಕಾರ್ಯಗಳಿಗೆ ಸಂಬಂಧಿಸಿದಂತೆ, ಮಹೀಂದ್ರಾ ಥಾರ್ ಎಸ್‌ಯುವಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಡಾರ್ಕ್ ಕನ್ವರ್ಟಿಬಲ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿದೆ.

ಹೊಸ ತಲೆಮಾರಿನ ಥಾರ್ ಎಸ್‌ಯುವಿ ನಂತರ, ಮಹೀಂದ್ರಾದ ಎಕ್ಸ್‌ಯುವಿ 700 ಸಹ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. 'ಇಂಡಿಯನ್ ಕಾರ್ ಆಫ್ ದಿ ಇಯರ್ 2022' ಪ್ರಶಸ್ತಿಯನ್ನು ಗೆದ್ದಿರುವ ಮಹೀಂದ್ರಾ ಎಕ್ಸ್‌ಯುವಿ 700, 1 ಲಕ್ಷಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದಿದೆ.

ಮಹೀಂದ್ರಾ ಥಾರ್ ಎಸ್‌ಯುವಿಯಂತೆ, ಎಕ್ಸ್‌ಯುವಿ 700 ಅನ್ನು ಡೆಲಿವರಿ ಪಡೆಯಲು ದೀರ್ಘ ಕಾಲ ಕಾಯಬೇಕು. ವರದಿಗಳ ಪ್ರಕಾರ, ಎಸ್‌ಯುವಿ ಒಂದೂವರೆ ವರ್ಷಗಳ ಕಾಯುವ ಅವಧಿಯನ್ನು ಹೊಂದಿದೆ. ಈ ಕಾರಣದಿಂದಾಗಿ ಮಹೀಂದ್ರಾ ಗ್ರಾಹಕರಿಗೆ ತ್ವರಿತವಾಗಿ ತಲುಪಿಸುವ ಸಲುವಾಗಿ ಎಕ್ಸ್‌ಯುವಿ 700ನ ಉತ್ಪಾದನಾ ಕಾರ್ಯಾಚರಣೆಗಳನ್ನು ಹೆಚ್ಚಿಸಿದೆ.

ಉತ್ತಮ ಬೇಡಿಕೆಯ ನಡುವೆಯೂ ಒಂದೇ ಸಮಯದಲ್ಲಿ 2 ಎಸ್‌ಯುವಿಗಳ ಉತ್ಪಾದನೆಯಲ್ಲಿ ಮಹೀಂದ್ರಾ ಹೆಣಗಾಡುತ್ತಿದೆ ಎಂದು ವರದಿಯಾಗಿದೆ. ಇದಕ್ಕೆ ಕಾರಣ ಸೆಮಿ-ಕಂಡಕ್ಟರ್ ಚಿಪ್‌ನ ಕೊರತೆ ಎಂದು ಹೇಳಲಾಗುತ್ತಿದೆ. ಮಹೀಂದ್ರಾ ಮಾತ್ರವಲ್ಲ, ವಿಶ್ವದ ಪ್ರಮುಖ ಕಾರು ಕಂಪನಿಗಳು ಸಹ ಇದೇ ಸಮಸ್ಯೆಯನ್ನು ಎದುರಿಸುತ್ತಿವೆ.


Click it and Unblock the Notifications