ಗ್ರ್ಯಾಂಡ್ ವಿಟಾರಾ ಎಸ್‌ಯುವಿ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ತನ್ನ ಬಹುನೀರಿಕ್ಷಿತ ಗ್ರ್ಯಾಂಡ್ ವಿಟಾರಾ ಎಸ್‌ಯುವಿ ಮಾದರಿಯನ್ನು ಅನಾವರಣಗೊಳಿಸಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಕಂಪನಿಯು ಹೊಸ ಕಾರು ಬಿಡುಗಡೆಗೂ ಮುನ್ನ ಹೊಸ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಹಿರಂಗಪಡಿಸಿದೆ.

ಗ್ರ್ಯಾಂಡ್ ವಿಟಾರಾ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಿದ ಮಾರುತಿ ಸುಜುಕಿ

ಗ್ರ್ಯಾಂಡ್ ವಿಟಾರಾ ಎಸ್‌ಯುವಿಯು ಮಾರುತಿ ಸುಜುಕಿ ಕಂಪನಿಯ ಇದುವರೆಗಿನ ಕಾರು ಮಾದರಿಗಳಲ್ಲಿಯೇ ಹಲವು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಹೊಸ ಕಾರಿಗೆ ಮತ್ತಷ್ಟು ಐಷಾರಾಮಿ ಲುಕ್ ನೀಡಲು ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡ ಆಕ್ಸೆಸರಿಸ್ ಪ್ಯಾಕೇಜ್ ಸಿದ್ದಪಡಿಸಿದೆ.

ಗ್ರ್ಯಾಂಡ್ ವಿಟಾರಾ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಿದ ಮಾರುತಿ ಸುಜುಕಿ

ಹೊಸ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ಹಲವಾರು ಹೊಸ ಸ್ಟ್ಯಾಂಡರ್ಡ್ ವೈಷಿಶಿಷ್ಟ್ಯತೆಗಳೊಂದಿಗೆ ಎನಿಗ್ಮ್ಯಾಕ್ಸ್ ಎಕ್ಸ್ ಮತ್ತು ಎನಿಗ್ನ್ಯಾಕ್ಸ್ ಕಲೆಕ್ಷನ್ ಎನ್ನುವ ಎರಡು ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸುತ್ತಿದ್ದು, ಹೊಸ ಕಾರು ಮುಂಬರುವ ಸೆಪ್ಟೆಂಬರ್ ಕೊನೆಯಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಗ್ರ್ಯಾಂಡ್ ವಿಟಾರಾ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಿದ ಮಾರುತಿ ಸುಜುಕಿ

ಎನಿಗ್ನ್ಯಾಕ್ಸ್ ಕಲೆಕ್ಷನ್ ಆಕ್ಸೆಸರಿಸ್‌ನಲ್ಲಿ ಹೆಡ್‌ಲೈಟ್ ಸರೌಂಡ್‌ಗಳು, ಸೈಡ್ ಮೋಲ್ಡಿಂಗ್‌ಗಳು, ಫ್ರಂಟ್ ಮತ್ತು ರಿಯರ್ ಬಂಪರ್ ಗಾರ್ನಿಶ್‌ಗಳು, ರಿಯರ್ ಸ್ಕಿಡ್ ಪ್ಲೇಟ್ ಮತ್ತು ಡೋರ್ ವೈಸರ್‌ಳಲ್ಲಿ ಸ್ಮೊಕ್ಡ್-ಎಫೆಕ್ಟ್ ಕ್ರೋಮ್ ಟ್ರಿಮ್, ಮುಂಭಾಗದ ಸ್ಕೀಡ್ ಪ್ಲೇಟ್, ಎಲ್ಲಾ ಹವಾಮಾನಕ್ಕೂ ಒದಗಿಕೊಳ್ಳುವ 3ಡಿ ಮ್ಯಾಟ್‌ಗಳು, ರಿಫ್ಲೆಕ್ಟರ್ ಡೋರ್ ಸಿಲ್ ಗಾರ್ಡ್‌ಗಳು, ಪ್ರೀಮಿಯಂ ಕಾಪರ್ ಫಿನಿಶ್ ಸೀಟ್ ಕವರ್‌ಗಳು ಮತ್ತು ಮಾರ್ಬಲ್-ಟೆಕ್ಸ್ಚರ್ಡ್ ಡ್ಯಾಶ್‌ಬೋರ್ಡ್ ಟ್ರಿಮ್ ನೀಡಲಾಗುತ್ತದೆ.

ಗ್ರ್ಯಾಂಡ್ ವಿಟಾರಾ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಿದ ಮಾರುತಿ ಸುಜುಕಿ

ಎನಿಗ್ಮ್ಯಾಕ್ಸ್ ಎಕ್ಸ್ ಆಕ್ಸೆಸರಿಸ್‌ನಲ್ಲಿ ಕಪ್ಪು ಮತ್ತು ಕ್ರೋಮ್ ಸೈಡ್ ಮೋಲ್ಡಿಂಗ್‌ಗಳು ಮತ್ತು ರಿಯರ್ ಫಾಕ್ಸ್ ಸ್ಕಿಡ್ ಪ್ಲೇಟ್, ಕ್ರೋಮ್ ಟೈಲ್‌ಗೇಟ್ ಗಾರ್ನಿಶ್ ಮತ್ತು ಹೆಡ್‌ಲೈಟ್‌ಗಳು ಮತ್ತು ಹಿಂಭಾಗದ ಬಂಪರ್ ಲೈಟ್‌ಗಳಿಗಾಗಿ ಬ್ಲ್ಯಾಕ್ ಸರೌಂಡ್ ನೀಡಲಾಗಿದ್ದು, ಡೋರ್ ವೈಸರ್‌ಗಳು, ಕಪ್ಪು ಬಣ್ಣದ ರಿಯರ್ ವ್ಯೂ ಮಿರರ್ ಗಾರ್ನಿಶ್, ಕಪ್ಪು/ಕಂದು ಬಣ್ಣದ ಲೆಥೆರೆಟ್ ಸೀಟ್ ಕವರ್‌ಗಳು, ಕಾರ್ಪೆಟ್ ಮ್ಯಾಟ್ಸ್, ಡೋರ್ ಸಿಲ್ ಗಾರ್ಡ್‌ಗಳು ಮತ್ತು ಡ್ಯಾಶ್‌ಬೋರ್ಡ್ ಟ್ರಿಮ್ ಪೀಸ್‌ಗಳಲ್ಲಿ ಲಕ್ಸ್ ಡಾನ್ ವುಡ್ ಫಿನಿಶ್ ಅನ್ನು ಒಳಗೊಂಡಿರುತ್ತದೆ.

ಗ್ರ್ಯಾಂಡ್ ವಿಟಾರಾ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಿದ ಮಾರುತಿ ಸುಜುಕಿ

ಇನ್ನು ವಿಟಾರಾ ಎಸ್‌ಯುವಿ ಮೂಲಕ ಈಗಾಗಲೇ ಜಾಗತಿಕವಾಗಿ ಮಹತ್ವದ ಬೆಳವಣಿಗೆ ಸಾಧಿಸುತ್ತಿರುವ ಸುಜುಕಿ ಕಂಪನಿಯು ಇದೀಗ ಐದನೇ ತಲೆಮಾರಿನ ಮಾದರಿಯನ್ನು ಹೈಬ್ರಿಡ್ ಮಾದರಿಯೊಂದಿಗೆ ಭಾರತದಲ್ಲಿ ತನ್ನ ಸಹಭಾಗಿತ್ವ ಕಂಪನಿಯಾಗಿರುವ ಮಾರುತಿಯೊಂದಿಗೆ ಗ್ರ್ಯಾಂಡ್ ವಿಟಾರಾ ಹೆಸರಿನಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಮಾದರಿಯಲ್ಲಿ ಮಾರುತಿ ಸುಜುಕಿ ಕಂಪನಿಯು ಟೊಯೊಟಾ ಹೈರೈಡರ್ ಮಾದರಿಯಲ್ಲಿ ಎಂಜಿನ್ ಆಯ್ಕೆಯನ್ನು ಪರಿಚಯಿಸುತ್ತಿದೆ.

ಗ್ರ್ಯಾಂಡ್ ವಿಟಾರಾ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಿದ ಮಾರುತಿ ಸುಜುಕಿ

ಪೆಟ್ರೋಲ್ ಹೈಬ್ರಿಡ್ ಎಂಜಿನ್ ಅಭಿವೃದ್ದಿಯಲ್ಲಿ ಈಗಾಗಲೇ ಸಾಕಷ್ಟು ಮುನ್ನಡೆ ಸಾಧಿಸಿರುವ ಟೊಯೊಟಾ ಕಂಪನಿಯು ಇದೀಗ ಹೈರೈಡರ್ ಮತ್ತು ಗ್ರಾಂಡ್ ವಿಟಾರಾ ಮಾದರಿಗಳಾಗಿ ವಿವಿಧ ಟ್ಯೂನ್ ಹೊಂದಿರುವ 1.5 ಲೀಟರ್ ಟಿಎನ್‌ಜಿಎ ಅಟ್ಕಿನ್ಸನ್ ಸೈಕಲ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ.

ಗ್ರ್ಯಾಂಡ್ ವಿಟಾರಾ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಿದ ಮಾರುತಿ ಸುಜುಕಿ

ಇದು ಸ್ವಯಂ ಚಾರ್ಜಿಂಗ್ ವೈಶಿಷ್ಟ್ಯತೆಯ ಪ್ರಬಲ ಹೈಬ್ರಿಡ್ ಎಂಜಿನ್ ಆಯ್ಕೆಯಾಗಿದ್ದು, ಇದು 115.56 ಬಿಎಚ್‌ಪಿ ಮತ್ತು 122 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಮೂಲಕ ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ 27.97 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಗ್ರ್ಯಾಂಡ್ ವಿಟಾರಾ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಿದ ಮಾರುತಿ ಸುಜುಕಿ

ಹೊಸ ಕಾರಿನಲ್ಲಿ ಇ-ಸಿವಿಟಿ ಗೇರ್‌ಬಾಕ್ಸ್‌ ಜೋಡಿಸಲಾಗಿದ್ದು, ಹೊಸ ಕಾರನ್ನು ಇವಿ, ಇಕೋ, ಪವರ್ ಮತ್ತು ನಾರ್ಮಲ್ ಡ್ರೈವ್ ಮೋಡ್‌ಗಳೊಂದಿಗೆ ಚಾಲನೆ ಮಾಡಬಹದು. ಇದರೊಂದಿಗೆ ಕಂಪನಿಯು ಹೊಸ ಗ್ರ್ಯಾಂಡ್ ವಿಟಾರಾದಲ್ಲಿ ತನ್ನ ಹೊಸ 1.5 ಲೀಟರ್ ಕೆ15ಸಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ನೀಡುತ್ತಿದೆ.

ಗ್ರ್ಯಾಂಡ್ ವಿಟಾರಾ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಿದ ಮಾರುತಿ ಸುಜುಕಿ

ಇತ್ತೀಚೆಗೆ ಬಿಡುಗಡೆಯಾಗಿರುವ 2022ರ ಎರ್ಟಿಗಾ, ಎಕ್ಸ್ಎಲ್ ಮತ್ತು ಬ್ರೆಝಾ ಕಾರುಗಳಲ್ಲಿ ನೀಡಲಾಗಿರುವ 1.5-ಲೀಟರ್ ಕೆ15ಸಿ ಪೆಟ್ರೋಲ್ ಎಂಜಿನ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮೂಲಕ 103 ಬಿಎಚ್‌ಪಿ ಮತ್ತು 117 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಗ್ರ್ಯಾಂಡ್ ವಿಟಾರಾ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಿದ ಮಾರುತಿ ಸುಜುಕಿ

ಹೀಗಾಗಿ ಹೊಸ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು ಗ್ರಾಹಕರು ಸ್ಟ್ರಾಂಗ್ ಹೈಬ್ರಿಡ್ ಮತ್ತು ಮೈಲ್ಡ್ ಹೈಬ್ರಿಡ್ ವಿಭಾಗದಲ್ಲಿ ಆಯ್ಕೆ ಮಾಡಬಹುದಾಗಿದ್ದು, ಸ್ಟ್ರಾಂಡ್ ಹೈಬ್ರಿಡ್ ಎಂಜಿನ್ ಹೊಂದಿರುವ ಮಾದರಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 27.97 ಕಿ.ಮೀ ಮೈಲೇಜ್ ಹೊಂದಿದ್ದರೆ ಮೈಲ್ಡ್ ಹೈಬ್ರಿಡ್ ಮಾದರಿಯು ಪ್ರತಿ ಲೀಟರ್‌ಗೆ ಗರಿಷ್ಠ 21.11 ಕಿ.ಮೀ ಮೈಲೇಜ್ ನೀಡುತ್ತದೆ.

ಗ್ರ್ಯಾಂಡ್ ವಿಟಾರಾ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಿದ ಮಾರುತಿ ಸುಜುಕಿ

ಮೈಲ್ಡ್ ಹೈಬ್ರಿಡ್ ಎಂಜಿನ್ ಮಾದರಿಯಲ್ಲಿ ಮಾರುತಿ ಸುಜುಕಿ ಕಂಪನಿಯು ಹೆಚ್ಚುವರಿಯಾಗಿ ಪ್ಯಾಡಲ್ ಶಿಫ್ಟರ್ ಜೊತೆಗೆ ಆಲ್-ಗ್ರಿಪ್ ಆಲ್ ವ್ಹೀಲ್ ಡ್ರೈವ್ ಟೆಕ್ನಾಲಜಿ ಜೋಡಣೆ ಮಾಡಲಿದ್ದು, ಇದರಲ್ಲಿ ಫ್ರಂಟ್ ವ್ಹೀಲ್ ಡ್ರೈವ್ ಮಾದರಿಯು ಮ್ಯಾನುವಲ್ ಆಯ್ಕೆಯೊಂದಿಗೆ ಪ್ರತಿ ಲೀಟರ್‌ಗೆ 21.11 ಕಿ.ಮೀ ಮೈಲೇಜ್ ಹೊಂದಿದ್ದರೆ ಆಲ್-ಗ್ರಿಪ್ ಆಲ್ ವ್ಹೀಲ್ ಡ್ರೈವ್ ಟೆಕ್ನಾಲಜಿ ಹೊಂದಿರುವ ಮಾದರಿಯು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ 19.38 ಕಿ.ಮೀ ಮೈಲೇಜ್ ನೀಡಲಿದೆ.

ಗ್ರ್ಯಾಂಡ್ ವಿಟಾರಾ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಿದ ಮಾರುತಿ ಸುಜುಕಿ

ಇದರಲ್ಲಿ ಮೈಲ್ಡ್ ಹೈಬ್ರಿಡ್ ಮಾದರಿಗಿಂತ ಸ್ಟ್ರಾಂಗ್ ಹೈಬ್ರಿಡ್ ಹೊಂದಿರುವ ಮಾದರಿಯು ತುಸು ಹೆಚ್ಚಿನ ಮಟ್ಟದ ಫೀಚರ್ಸ್‌ಗಳೊಂದಿಗೆ ದುಬಾರಿ ಬೆಲೆ ಹೊಂದಿರಲಿದ್ದರೆ ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆ ಹೊಂದಿರುವ ಮಾದರಿಯು ಸಾಮಾನ್ಯ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಾದ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಮಾದರಿಗಳ ಪೆಟ್ರೋಲ್ ಮಾದರಿಗಳ ಬೆಲೆಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ.

ಗ್ರ್ಯಾಂಡ್ ವಿಟಾರಾ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಿದ ಮಾರುತಿ ಸುಜುಕಿ

ಗ್ರ್ಯಾಂಡ್ ವಿಟಾರಾ ಮಾದರಿಯು ಮಾರುತಿ ಸುಜುಕಿಯ ಇದುವರೆಗಿನ ಕಾರುಗಳಲ್ಲಿ ವಿಭಿನ್ನವಾದ ಮಾದರಿಯಾಗಲಿದ್ದು, ಇದು 4345 ಎಂಎಂ ಉದ್ದಳತೆಯೊಂದಿಗೆ 1645 ಎಂಎಂ ಅಗಲ, 1795 ಎಂಎಂ ಎತ್ತರ ಮತ್ತು 2600 ಎಂಎಂ ವ್ಹೀಲ್‌ಬೆಸ್ ಮೂಲಕ ಉತ್ತಮ ಕ್ಯಾಬಿನ್ ಸೌಲಭ್ಯದೊಂದಿಗೆ ಹೆಚ್ಚಿನ ಗಾತ್ರದ ಬೂಟ್‌ಸ್ಪೆಸ್ ಒದಗಿಸುತ್ತದೆ.

ಗ್ರ್ಯಾಂಡ್ ವಿಟಾರಾ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಿದ ಮಾರುತಿ ಸುಜುಕಿ

ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಆಕರ್ಷಕ ಮೈಲೇಜ್‌ನೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

Most Read Articles

Kannada
English summary
Maruti suzuki revealed grand vitara acceossories details
Story first published: Thursday, July 28, 2022, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X