ಲಾಯಲ್ಟಿ ಕಾರ್ಯಕ್ರಮದಡಿಯಲ್ಲಿ ಗ್ರಾಹಕರಿಗೆ ಗರಿಷ್ಠ ಆಫರ್ ನೀಡಿದ ಮಾರುತಿ ಸುಜುಕಿ

ಪ್ರಯಾಣಿಕರ ಕಾರು ಮಾರಾಟದಲ್ಲಿ ಹಲವು ವರ್ಷಗಳಿಂದ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಕಂಪನಿಯು ಗ್ರಾಹಕರನ್ನು ಸೆಳೆಯುವತ್ತ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಕಂಪನಿಯು ವಿಶಿಷ್ಟ ಲಾಯಲ್ಟಿ ಕಾರ್ಯಕ್ರಮದ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಆಫರ್‌ಗಳನ್ನು ನೀಡುತ್ತಿದೆ.

ಲಾಯಲ್ಟಿ ಕಾರ್ಯಕ್ರಮದಡಿಯಲ್ಲಿ ಗ್ರಾಹಕರಿಗೆ ಗರಿಷ್ಠ ಲಾಭಾಂಶಗಳನ್ನು ಘೋಷಿಸಿದ ಮಾರುತಿ ಸುಜುಕಿ

ಗ್ರಾಹಕರಿಗೆ ಹೆಚ್ಚಿನ ಕೊಡುಗೆಗಳನ್ನು ನೀಡುವ ಉದ್ದೇಶದಿಂದ ಸಮಗ್ರ ಮತ್ತು ವಿಶಿಷ್ಟ ಲಾಯಲ್ಟಿ ಕಾರ್ಯಕ್ರಮವನ್ನು ಪರಿಚಯಿಸಿರುವ ಮಾರುತಿ ಸುಜುಕಿ ಕಂಪನಿಯು ಯಶಸ್ವಿಯಾಗಿ ಎರಡು ವರ್ಷ ಪೂರ್ಣಗೊಳಿಸಿದ್ದು, ಈ ರಿವಾರ್ಡ್ ಕಾರ್ಯಕ್ರಮದಡಿಯಲ್ಲಿ ಗ್ರಾಹಕರಿಗೆ ಹಲವಾರು ಪ್ರಯೋಜನಕಾರಿಯಾದ ಸೇವೆಗಳನ್ನು ನೀಡಲಾಗುತ್ತಿದೆ.

ಲಾಯಲ್ಟಿ ಕಾರ್ಯಕ್ರಮದಡಿಯಲ್ಲಿ ಗ್ರಾಹಕರಿಗೆ ಗರಿಷ್ಠ ಲಾಭಾಂಶಗಳನ್ನು ಘೋಷಿಸಿದ ಮಾರುತಿ ಸುಜುಕಿ

ಸಮಗ್ರ ಮತ್ತು ವಿಶಿಷ್ಟ ಲಾಯಲ್ಟಿ ಕಾರ್ಯಕ್ರಮದಡಿಯಲ್ಲಿ ಗ್ರಾಹಕರು ಹೊಸ ಕಾರುಗಳ ಖರೀದಿ, ಸೇವೆ, ವಿಮೆ, ನಿಜವಾದ ಪರಿಕರಗಳ ಖರೀದಿ ಮೇಲೆ ವಿಶೇಷ ರಿಯಾಯ್ತಿ ಪಡೆದುಕೊಳ್ಳುತ್ತಿದ್ದಾರೆ.

ಲಾಯಲ್ಟಿ ಕಾರ್ಯಕ್ರಮದಡಿಯಲ್ಲಿ ಗ್ರಾಹಕರಿಗೆ ಗರಿಷ್ಠ ಲಾಭಾಂಶಗಳನ್ನು ಘೋಷಿಸಿದ ಮಾರುತಿ ಸುಜುಕಿ

ರಿವಾರ್ಡ್ ಕಾರ್ಯಕ್ರಮದೊಂದಿಗೆ ಮಾರುತಿ ಸುಜುಕಿ ಕಂಪನಿಯು ಗ್ರಾಹಕರೊಂದಿಗೆ ನಿರಂತರವಾಗಿ ಬೆಳೆಯುತ್ತಿರುವ ಸಂಬಂಧವನ್ನು ಬಲಪಡಿಸುತ್ತಿದ್ದು, ಪ್ರೀಮಿಯಂ, ವಿಶ್ವಾಸಾರ್ಹ ಮತ್ತು ಲಾಭ-ಚಾಲಿತ ನಂತರದ ಖರೀದಿಯ ಅನುಭವದ ಮೂಲಕ ಗ್ರಾಹಕರೊಂದಿಗೆ ಭಾವನಾತ್ಮಕ ಸಂಪರ್ಕಗಳನ್ನ ಗಟ್ಟಿಗೊಳಿಸುವುದೇ ಈ ಬಹುಮಾನ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ.

ಲಾಯಲ್ಟಿ ಕಾರ್ಯಕ್ರಮದಡಿಯಲ್ಲಿ ಗ್ರಾಹಕರಿಗೆ ಗರಿಷ್ಠ ಲಾಭಾಂಶಗಳನ್ನು ಘೋಷಿಸಿದ ಮಾರುತಿ ಸುಜುಕಿ

ಹೊಸ ರಿವಾರ್ಡ್ ಕಾರ್ಯಕ್ರಮಡಿಯಲ್ಲಿ 10 ವರ್ಷಗಳ ಗರಿಷ್ಠ ಅಂಕಗಳ ಮಾನ್ಯತಾ ಅವಧಿಯೊಂದಿಗೆ ಜೀವಮಾನದ ಸದಸ್ಯತ್ವವನ್ನು ಒದಗಿಸಲಿದ್ದು, ರಿವಾರ್ಡ್ ಕಾರ್ಯಕ್ರಮವನ್ನು ಪ್ರಮುಖ ನಾಲ್ಕು ವಿಧಗಳಾಗಿ ವಿಂಗಡಿಸಲಾಗುತ್ತದೆ.

ಲಾಯಲ್ಟಿ ಕಾರ್ಯಕ್ರಮದಡಿಯಲ್ಲಿ ಗ್ರಾಹಕರಿಗೆ ಗರಿಷ್ಠ ಲಾಭಾಂಶಗಳನ್ನು ಘೋಷಿಸಿದ ಮಾರುತಿ ಸುಜುಕಿ

ಗ್ರಾಹಕರು ಮಾರುತಿ ಸುಜುಕಿ ಮಾರಾಟ ಮತ್ತು ಸೇವಾ ನೆಟ್‌ವರ್ಕ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿನ ವಹಿವಾಟುಗಳನ್ನು ಆಧರಿಸಿ ಮೆಂಬರ್, ಸಿಲ್ವರ್, ಗೋಲ್ಡ್ ಮತ್ತು ಪ್ಲಾಟಿನಂ ಬ್ಯಾಡ್ಜ್ ನೀಡಲಾಗುತ್ತದೆ.

ಲಾಯಲ್ಟಿ ಕಾರ್ಯಕ್ರಮದಡಿಯಲ್ಲಿ ಗ್ರಾಹಕರಿಗೆ ಗರಿಷ್ಠ ಲಾಭಾಂಶಗಳನ್ನು ಘೋಷಿಸಿದ ಮಾರುತಿ ಸುಜುಕಿ

ಹಾಗೆಯೇ ಮಾರುತಿ ಸುಜುಕಿಯು ಕಾರ್ಡ್-ಲೆಸ್ ಲಾಯಲ್ಟಿ ಪ್ರೋಗ್ರಾಂ ಮೂಲಕ ಗ್ರಾಹಕರಿಗೆ ಶೇ.100 ರಷ್ಟು ಡಿಜಿಟಲ್ ಅನುಭವವನ್ನು ನೀಡಲಿದ್ದು, ಅಲ್ಲಿ ಮಾಹಿತಿ ಮತ್ತು ವಹಿವಾಟು ಎಚ್ಚರಿಕೆಗಳನ್ನು ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಡಿಜಿಟಲ್ ಆಗಿ ಕಳುಹಿಸಲಾಗುತ್ತದೆ.

ಲಾಯಲ್ಟಿ ಕಾರ್ಯಕ್ರಮದಡಿಯಲ್ಲಿ ಗ್ರಾಹಕರಿಗೆ ಗರಿಷ್ಠ ಲಾಭಾಂಶಗಳನ್ನು ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ರಿವಾರ್ಡ್ಸ್ ಪ್ರೋಗ್ರಾಂ ಅನ್ನು ಮಾರುತಿ ಸುಜುಕಿ ರಿವಾರ್ಡ್‌ಗಳ ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ನಿರ್ವಹಿಸಬಹುದಲ್ಲದೆ ಹೊಸದಾಗಿ ನೋಂದಾಯಿಸಿಕೊಳ್ಳಬಹುದಾಗಿದ್ದು, ಹೀಗಾಗಿ ಮಾರುತಿ ಸುಜುಕಿ ರಿವಾರ್ಡ್ ಪ್ರೋಗ್ರಾಂ ಭಾರತದ ಅಗ್ರಗಣ್ಯ ಮತ್ತು ಹೆಚ್ಚು ಲಾಭದಾಯಕ ಲಾಯಲ್ಟಿ ಕಾರ್ಯಕ್ರಮಗಳಲ್ಲಿ ಒಂದಾಗಿದೆ.

ಲಾಯಲ್ಟಿ ಕಾರ್ಯಕ್ರಮದಡಿಯಲ್ಲಿ ಗ್ರಾಹಕರಿಗೆ ಗರಿಷ್ಠ ಲಾಭಾಂಶಗಳನ್ನು ಘೋಷಿಸಿದ ಮಾರುತಿ ಸುಜುಕಿ

70 ಲಕ್ಷಕ್ಕೂ ಹೆಚ್ಚು ಮಾರುತಿ ಸುಜುಕಿ ರಿವಾರ್ಡ್‌ಗಳನ್ನು ಈಗಾಗಲೇ ಗ್ರಾಹಕರಿಗೆ ಹಂಚಿಕೆ ಮಾಡಲಾಗಿದ್ದು, ರಿವಾರ್ಡ್ ಕಾರ್ಯಕ್ರಮದ 2 ನೇ ವಾರ್ಷಿಕೋತ್ಸವದಲ್ಲಿ ಇದೀಗ ಇನ್ನಷ್ಟು ಹೊಸ ಉಳಿತಾಯ ಯೋಜನೆಗಳನ್ನು ಪರಿಚಯಿಸಲಿದೆ.

ಲಾಯಲ್ಟಿ ಕಾರ್ಯಕ್ರಮದಡಿಯಲ್ಲಿ ಗ್ರಾಹಕರಿಗೆ ಗರಿಷ್ಠ ಲಾಭಾಂಶಗಳನ್ನು ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ರಿವಾರ್ಡ್ಸ್ ಕಾರ್ಯಕ್ರಮವು ಕಾರ್ಡ್ ಲೆಸ್ ಮತ್ತು ವಿಶಿಷ್ಟ ಶ್ರೇಣಿ-ಆಧಾರಿತ ಲಾಯಲ್ಟಿ ಕಾರ್ಯಕ್ರಮವಾಗಿದ್ದು, ಶ್ರೇಣಿ ಡೌನ್‌ಗ್ರೇಡ್‌ಗೆ ಯಾವುದೇ ದಂಡ ವಿಧಿಸದಿರುವುದು ಕೂಡಾ ಉತ್ತಮ ಆಯ್ಕೆಯಾಗಿದೆ ಎನ್ನಬಹುದು.

ಲಾಯಲ್ಟಿ ಕಾರ್ಯಕ್ರಮದಡಿಯಲ್ಲಿ ಗ್ರಾಹಕರಿಗೆ ಗರಿಷ್ಠ ಲಾಭಾಂಶಗಳನ್ನು ಘೋಷಿಸಿದ ಮಾರುತಿ ಸುಜುಕಿ

ಈ ಮೂಲಕ ಮಾರುತಿ ಸುಜುಕಿಯು ಹೊಸ ಕಾರು ಖರೀದಿಯ ಮೇಲೆ ಮತ್ತು ಖರೀದಿ ನಂತರದ ಸೇವೆಗಳ ಮೇಲೆ ಗರಿಷ್ಠ ಲಾಯಲ್ಟಿ ಘೋಷಣೆ ಮಾಡುತ್ತಿದ್ದು, ಗ್ರಾಹಕರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಲಾಯಲ್ಟಿ ಕಾರ್ಯಕ್ರಮದಡಿಯಲ್ಲಿ ಗ್ರಾಹಕರಿಗೆ ಗರಿಷ್ಠ ಲಾಭಾಂಶಗಳನ್ನು ಘೋಷಿಸಿದ ಮಾರುತಿ ಸುಜುಕಿ

ಇನ್ನು ಮಾರುತಿ ಸುಜುಕಿ ಇಂಡಿಯಾ ಕಂಪನಿಯು 2022ರ ಜುಲೈ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದ್ದು, ಮಾರಾಟ ವರದಿಯ ಪ್ರಕಾರ ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು ಕಳೆದ ತಿಂಗಳು 1,75,916 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಲಾಯಲ್ಟಿ ಕಾರ್ಯಕ್ರಮದಡಿಯಲ್ಲಿ ಗ್ರಾಹಕರಿಗೆ ಗರಿಷ್ಠ ಲಾಭಾಂಶಗಳನ್ನು ಘೋಷಿಸಿದ ಮಾರುತಿ ಸುಜುಕಿ

2021ರ ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 1,62,462 ಯುನಿಟ್‌ಗಳನ್ನು ಮಾರಾಟ ಮಾಡಿದ್ದರಿಂದ ವಾಹನ ತಯಾರಕರು ವರ್ಷದಿಂದ ವರ್ಷಕ್ಕೆ ಶೇಕಡಾ 8.3 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಮಾಸಿಕ ಮಾರಾಟಕ್ಕೆ ಸಂಬಂಧಿಸಿದಂತೆ ಕಂಪನಿಯು 2022ರ ಜೂನ್ ತಿಂಗಳಿನಲ್ಲಿ 1,55,857 ಯುನಿಟ್‌ಗಳು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 12.9 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

Most Read Articles

Kannada
English summary
Maruti suzuki rewards celebrates its 2nd anniversary full details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X