ಹೊಸ ಕಾರು ಉತ್ಪಾದನಾ ಘಟಕದ ಜೊತೆ ಇವಿ ಬ್ಯಾಟರಿ ಉತ್ಪಾದನಾ ಘಟಕ ಆರಂಭಿಸಿದ ಮಾರುತಿ ಸುಜುಕಿ

ದೇಶಿಯ ಮಾರುಕಟ್ಟೆಯಲ್ಲಿನ ಆಟೋಉತ್ಪಾದನೆಯಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿ ಕಂಪನಿಯು ತನ್ನ ಕಾರ್ಯಚರಣೆ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ.

ಕಂಪನಿಯು ಹೊಸ ಕಾರು ಉತ್ಪಾದನಾ ಘಟಕದ ಜೊತೆಗೆ ಇವಿ ವಾಹನಗಳಿಗಾಗಿ ಬ್ಯಾಟರಿ ಉತ್ಪಾದನಾ ಘಟಕ ಆರಂಭಿಸಿದೆ.

ಹೊಸ ಕಾರು ಉತ್ಪಾದನಾ ಘಟಕದ ಜೊತೆ ಇವಿ ಬ್ಯಾಟರಿ ಉತ್ಪಾದನಾ ಘಟಕ ಆರಂಭಿಸಿದ ಮಾರುತಿ ಸುಜುಕಿ

ಸುಜುಕಿ ಮೋಟಾರ್ ಕಾರ್ಪೊರೇಷನ್ ತನ್ನ 40 ವರ್ಷಗಳ ಕಾರ್ಯಾಚರಣೆಯ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಹಂಸಲ್‌ಪುರದಲ್ಲಿ ಆರಂಭವಾಗಿರುವ ಮಾರುತಿ ಸುಜುಕಿಯ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಉತ್ಪಾದನಾ ಘಟಕ ಮತ್ತು ಹರಿಯಾಣದ ಖಾರ್ಖೋಡಾದಲ್ಲಿ ಆರಂಭವಾಗಿರುವ ಪ್ರಯಾಣಿಕ ವಾಹನ ಘಟಕಕ್ಕೆ ಶಂಕುಸ್ಥಾಪನೆ ಮಾಡಿದರು.

ಹೊಸ ಕಾರು ಉತ್ಪಾದನಾ ಘಟಕದ ಜೊತೆ ಇವಿ ಬ್ಯಾಟರಿ ಉತ್ಪಾದನಾ ಘಟಕ ಆರಂಭಿಸಿದ ಮಾರುತಿ ಸುಜುಕಿ

ಹೊಸ ಇವಿ ಬ್ಯಾಟರಿ ಉತ್ಪಾದನಾ ಘಟಕಕ್ಕಾಗಿ ಮಾರುತಿ ಸುಜುಕಿ ಕಂಪನಿಯು ಸುಮಾರು ರೂ. 7,300 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಹೊಸ ಉದ್ಯಮ ಕಾರ್ಯಾಚರಣೆ ಆರಂಭಿಸಿದೆ.

ಹೊಸ ಕಾರು ಉತ್ಪಾದನಾ ಘಟಕದ ಜೊತೆ ಇವಿ ಬ್ಯಾಟರಿ ಉತ್ಪಾದನಾ ಘಟಕ ಆರಂಭಿಸಿದ ಮಾರುತಿ ಸುಜುಕಿ

ಹಾಗೆಯೇ ಹರಿಯಾಣದಲ್ಲಿ ನಿರ್ಮಾಣವಾಗಿರುವ ಹೊಸ ವಾಹನ ತಯಾರಿಕಾ ಘಟಕದ ಆರಂಭಕ್ಕಾಗಿ ಮೊದಲ ಹಂತದ ಕಾರ್ಯಾಚರಣೆಗಾಗಿ ರೂ. 11,000 ಕೋಟಿ ಹೂಡಿಕೆಯೊಂದಿಗೆ ಆರಂಭಗೊಳಿಸಿತು.

ಹೊಸ ಕಾರು ಉತ್ಪಾದನಾ ಘಟಕದ ಜೊತೆ ಇವಿ ಬ್ಯಾಟರಿ ಉತ್ಪಾದನಾ ಘಟಕ ಆರಂಭಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿಯ ಎರಡು ಹೊಸ ಉತ್ಪಾದನಾ ಸ್ಥಾವರಗಳನ್ನು ಉದ್ಘಾಟಿಸಿದ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು 'ನಾನು ಸುಜುಕಿ ಮೋಟಾರ್ ಕಾರ್ಪೊರೇಶನ್ ಅನ್ನು ವಿಶೇಷವಾಗಿ ಒಸಾಮು ಸುಜುಕಿ ಮತ್ತು ಟಿ ಸುಜುಕಿಯನ್ನು ಅಭಿನಂದಿಸುತ್ತೇನೆ. ಯಶಸ್ವಿ ಮಾರುತಿ ಸುಜುಕಿ ಮೈತ್ರಿಯು ಭಾರತ-ಜಪಾನ್ ಬಾಂಧವ್ಯವನ್ನು ದೃಢವಾಗಿ ಸೂಚಿಸುತ್ತದೆ' ಎಂದಿದ್ದಾರೆ.

ಹೊಸ ಕಾರು ಉತ್ಪಾದನಾ ಘಟಕದ ಜೊತೆ ಇವಿ ಬ್ಯಾಟರಿ ಉತ್ಪಾದನಾ ಘಟಕ ಆರಂಭಿಸಿದ ಮಾರುತಿ ಸುಜುಕಿ

ಗುಜರಾತ್‌ನಲ್ಲಿ ಈಗಾಗಲೇ ಜಪಾನ್ ಮೂಲದ 125ಕ್ಕೂ ಹೆಚ್ಚು ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಆಟೋಮೊಬೈಲ್ ಕ್ಷೇತ್ರದಿಂದ ಜೈವಿಕ ಇಂಧನ ವಲಯದವರೆಗೆ ಕಾರ್ಯನಿರ್ವಹಿಸುತ್ತಿವೆ ಎಂದು ಮೋದಿಯವರು ರಾಷ್ಟ್ರ ನಿರ್ಮಾಣದಲ್ಲಿ ಉಭಯ ದೇಶಗಳ(ಭಾರತ ಮತ್ತು ಜಪಾನ್) ಪರಸ್ಪರ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಹೊಸ ಕಾರು ಉತ್ಪಾದನಾ ಘಟಕದ ಜೊತೆ ಇವಿ ಬ್ಯಾಟರಿ ಉತ್ಪಾದನಾ ಘಟಕ ಆರಂಭಿಸಿದ ಮಾರುತಿ ಸುಜುಕಿ

ಇನ್ನು ಹರಿಯಾಣದ ಸೋನಿಪತ್ ಜಿಲ್ಲೆಯ ಖಾರ್ಖೋಡಾದಲ್ಲಿ ಮಾರುತಿ ಸುಜುಕಿ ಕಂಪನಿಯು ಹೊಸ ವಾಹನ ತಯಾರಿಕಾ ಘಟಕವು ತೆರೆದಿದ್ದು, ಇದು ಹರಿಯಾಣ ರಾಜ್ಯದಲ್ಲಿ ಮಾರುತಿ ಸುಜುಕಿ ಕಂಪನಿಯು ತೆರೆಯುತ್ತಿರುವ ಮೂರನೇ ಘಟಕವಾಗಿದೆ.

ಹೊಸ ಕಾರು ಉತ್ಪಾದನಾ ಘಟಕದ ಜೊತೆ ಇವಿ ಬ್ಯಾಟರಿ ಉತ್ಪಾದನಾ ಘಟಕ ಆರಂಭಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯ ಇತರೆ ಎರಡು ಸ್ಥಾವರಗಳು ಗುರುಗ್ರಾಮ್ ಮತ್ತು ಮನೇಸರ್‌ನಲ್ಲಿದ್ದು, ಹರ್ಯಾಣ ಸರ್ಕಾರ ಮತ್ತು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿಯಾಗಿ 2022 ರ ಮೇ ತಿಂಗಳಲ್ಲಿ ಭೂಮಿ ಮಂಜೂರು ಮಾಡಿ ಹೊಸ ಒಪ್ಪಂದಕ್ಕೆ ಸಹಿ ಹಾಕಿತ್ತು.

ಹೊಸ ಕಾರು ಉತ್ಪಾದನಾ ಘಟಕದ ಜೊತೆ ಇವಿ ಬ್ಯಾಟರಿ ಉತ್ಪಾದನಾ ಘಟಕ ಆರಂಭಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿಯು ಹೊಸ ಘಟಕದೊಂದಿಗೆ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಪ್ರಸ್ತುತ ಕಂಪನಿಯು ಸುಮಾರು 4 ಲಕ್ಷ ಕಾರುಗಳ ಬುಕಿಂಗ್ ಅನ್ನು ಬಾಕಿ ಉಳಿಸಿಕೊಂಡಿದೆ.

ಹೊಸ ಕಾರು ಉತ್ಪಾದನಾ ಘಟಕದ ಜೊತೆ ಇವಿ ಬ್ಯಾಟರಿ ಉತ್ಪಾದನಾ ಘಟಕ ಆರಂಭಿಸಿದ ಮಾರುತಿ ಸುಜುಕಿ

ಹೀಗಾಗಿ ಮಾರುತಿ ಈಗಾಗಲೇ ತಡವಾಗಿ ಕಾರುಗಳ ವಿತರಣೆ ಸಮಸ್ಯೆಯನ್ನು ಎದುರಿಸುತ್ತಿದ್ದು, ಹೊಸ ಬ್ರೆಝಾ ಮತ್ತು ಗ್ರ್ಯಾಂಡ್ ವಿಟಾರಾ ಬಿಡುಗಡೆಯಾದ ನಂತರ ಕಂಪನಿಯ ಮಾರಾಟವು ಸಾಕಷ್ಟು ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಹೊಸ ಕಾರು ಉತ್ಪಾದನಾ ಘಟಕದ ಜೊತೆ ಇವಿ ಬ್ಯಾಟರಿ ಉತ್ಪಾದನಾ ಘಟಕ ಆರಂಭಿಸಿದ ಮಾರುತಿ ಸುಜುಕಿ

ಇನ್ನು ಮಾರುತಿ ಸುಜುಕಿ ಕಂಪನಿಯು ಸದ್ಯ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದು, ಹೊಸ ಎಮಿಷನ್ ಜಾರಿ ನಂತರ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿ ಪೆಟ್ರೋಲ್ ಮತ್ತು ಸಿಎನ್‌ಜಿ ಆವೃತ್ತಿಗಳನ್ನು ಮಾತ್ರವೇ ಮಾರಾಟ ಮಾಡುತ್ತಿದೆ.

ಹೊಸ ಕಾರು ಉತ್ಪಾದನಾ ಘಟಕದ ಜೊತೆ ಇವಿ ಬ್ಯಾಟರಿ ಉತ್ಪಾದನಾ ಘಟಕ ಆರಂಭಿಸಿದ ಮಾರುತಿ ಸುಜುಕಿ

ಜನಪ್ರಿಯ ಕಾರು ಮಾದರಿಗಳಾದ ಆಲ್ಟೊ, ವ್ಯಾಗನ್‌ಆರ್, ಸೆಲೆರಿಯೊ, ಎಸ್ ಪ್ರೆಸ್ಸೊ, ಇಕೋ, ಡಿಜೈರ್, ಎರ್ಟಿಗಾ ಮಾದರಿಯಲ್ಲಿ ಸಿಎನ್‌ಜಿ ಮಾದರಿಗಳನ್ನು ಮಾರಾಟ ಮಾಡುತ್ತಿರುವ ಮಾರುತಿ ಸುಜುಕಿ ಕಂಪನಿಯು ಮೊದಲ ಬಾರಿಗೆ ಸಿಎನ್‌ಸಿ ಕಾರುಗಳ ಮಾರಾಟದಲ್ಲಿ ದೊಡ್ಡ ಮಟ್ಟದ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, 2020-21ರ ಅವಧಿಯ ಒಟ್ಟು ಕಾರು ಮಾರಾಟ ಪ್ರಮಾಣದಲ್ಲಿ ಸಿಎನ್‌ಜಿ ಕಾರುಗಳನ್ನು ಮಾರಾಟವು ಶೇ.30ರಷ್ಟು ಮುನ್ನಡೆ ಸಾಧಿಸಿದೆ.

ಹೊಸ ಕಾರು ಉತ್ಪಾದನಾ ಘಟಕದ ಜೊತೆ ಇವಿ ಬ್ಯಾಟರಿ ಉತ್ಪಾದನಾ ಘಟಕ ಆರಂಭಿಸಿದ ಮಾರುತಿ ಸುಜುಕಿ

ಸಿಎನ್‌ಜಿ ಕಾರುಗಳ ಮಾರಾಟದಲ್ಲಿ ವ್ಯಾಗನ್ಆರ್ ಸಿಎನ್‌ಜಿ ಮಾದರಿಯು ಅಗ್ರಸ್ಥಾನದಲ್ಲಿದ್ದು, ವ್ಯಾಗನ್ಆರ್ ನಂತರ ಸೆಲೆರಿಯೊ, ಆಲ್ಟೊ, ಎಸ್‌ಪ್ರೆಸ್ಸೊ, ಇಕೋ, ಡಿಜೈರ್, ಎರ್ಟಿಗಾ ಕಾರುಗಳ ಉತ್ತಮ ಬೇಡಿಕೆ ಪಡೆದುಕೊಂಡಿವೆ.

ಹೊಸ ಕಾರು ಉತ್ಪಾದನಾ ಘಟಕದ ಜೊತೆ ಇವಿ ಬ್ಯಾಟರಿ ಉತ್ಪಾದನಾ ಘಟಕ ಆರಂಭಿಸಿದ ಮಾರುತಿ ಸುಜುಕಿ

ಸದ್ಯ ಮಾರುತಿ ಸುಜುಕಿ ಕಂಪನಿಯು 4 ಲಕ್ಷ ಕಾರುಗಳಿಗೆ ಬುಕಿಂಗ್ ಸ್ವಿಕರಿಸಿದ್ದು, ಇದರಲ್ಲಿ 1.50 ಲಕ್ಷಕ್ಕೂ ಗ್ರಾಹಕರು ಸಿಎನ್‌ಜಿ ಮಾದರಿಗಳ ಆಯ್ಕೆ ಮಾಡಿದ್ದಾರೆ. ಆದರೆ ಸೆಮಿಕಂಡಕ್ಟರ್ ಕೊರತೆಯ ನಡುವೆಯೂ ಬೇಡಿಕೆ ಪೂರೈಕೆಯನ್ನು ಸಮರ್ಪಕವಾಗಿ ಪೂರೈಸುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಕಾರು ಮಾದರಿಗಳಲ್ಲಿ ಸಿಎನ್‌ಜಿ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಹೊಸ ಕಾರು ಉತ್ಪಾದನಾ ಘಟಕದ ಜೊತೆ ಇವಿ ಬ್ಯಾಟರಿ ಉತ್ಪಾದನಾ ಘಟಕ ಆರಂಭಿಸಿದ ಮಾರುತಿ ಸುಜುಕಿ

ಮಾಲಿನ್ಯ ತಗ್ಗಿಸುವ ಉದ್ದೇಶದಿಂದಾಗಿ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟವನ್ನು ತಗ್ಗಿಸಲಾಗುತ್ತಿದ್ದು, ಪರಿಸರಕ್ಕೆ ಪೂರಕರವಾದ ಸಿಎನ್‌ಜಿ, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಹೆಚ್ಚು ಅಭಿವೃದ್ದಿಗೊಳಿಸಲಾಗುತ್ತಿದೆ.

Most Read Articles

Kannada
English summary
Maruti suzuki s inaugurated new facility and ev battery plant details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X