ಕೇವಲ ಎಲೆಕ್ಟ್ರಿಕ್ ವಾಹನಗಳಿಂದ ದೇಶವನ್ನು ಕಾರ್ಬನ್ ಮುಕ್ತಗೊಳಿಸುವುದು ಅಸಾಧ್ಯ: ಮಾರುತಿ ಸುಜುಕಿ

ಭಾರತದಲ್ಲಿ ಆಟೋ ಉದ್ಯಮವು ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಯಲ್ಲಿ ತೊಡಗಿದ್ದರೆ, ಮಾರುತಿ ಸುಜುಕಿ ಮಾತ್ರ ಈ ವರೆಗೆ ಎಲೆಕ್ಟ್ರಿಕ್ ವಾಹನಗಳ ನಿರ್ಮಾಣಕ್ಕೆ ಉತ್ಸಾಹ ತೋರುತ್ತಿಲ್ಲ. ಬದಲಾಗಿ ಮಾಲಿನ್ಯವನ್ನು ಕಡಿಮೆ ಮಾಡಲು ಎಲೆಕ್ಟ್ರಿಕ್ ವಾಹನಗಳೊಂದೇ ಸಾಧನವಲ್ಲ ಎಂದು ಕಂಪನಿ ಹೇಳಿಕೆ ನೀಡಿದೆ.

ಕೇವಲ ಎಲೆಕ್ಟ್ರಿಕ್ ವಾಹನಗಳಿಂದ ದೇಶವನ್ನು ಕಾರ್ಬನ್ ಮುಕ್ತಗೊಳಿಸುವುದು ಅಸಾಧ್ಯ: ಮಾರುತಿ ಸುಜುಕಿ

ದೇಶದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ ಇವಿ ವಾಹನ ತಯಾರಿಯ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ಈ ಹಿಂದಿನಿಂದಲೂ ಹೇಳುತ್ತಲೇ ಬಂದಿದೆ. ಇದೀಗ ಮತ್ತೊಂದು ಹೇಳಿಕೆ ನೀಡಿದ್ದು, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಪರ್ಯಾಯವಾಗಿ ಹಲವು ಮೂಲಗಳಿವೆ ಎಂದು ಹೇಳಿದೆ.

ಕೇವಲ ಎಲೆಕ್ಟ್ರಿಕ್ ವಾಹನಗಳಿಂದ ದೇಶವನ್ನು ಕಾರ್ಬನ್ ಮುಕ್ತಗೊಳಿಸುವುದು ಅಸಾಧ್ಯ: ಮಾರುತಿ ಸುಜುಕಿ

ಹಿಂದೂಸ್ತಾನ್ ಟೈಮ್ಸ್ ಆಟೋ ವರದಿಯ ಪ್ರಕಾರ, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಅಧ್ಯಕ್ಷ ಆರ್‌ಸಿ ಭಾರ್ಗವ ಅವರು ಹೈಬ್ರಿಡ್, ಸಿಎನ್‌ಜಿ ಮತ್ತು ಎಥೆನಾಲ್ ಚಾಲಿತ ವಾಹನಗಳು ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಪರ್ಯಾಯವೆಂದು ಸಾಬೀತುಪಡಿಸಬಹುದು ಎಂದಿದ್ದಾರೆ.

ಕೇವಲ ಎಲೆಕ್ಟ್ರಿಕ್ ವಾಹನಗಳಿಂದ ದೇಶವನ್ನು ಕಾರ್ಬನ್ ಮುಕ್ತಗೊಳಿಸುವುದು ಅಸಾಧ್ಯ: ಮಾರುತಿ ಸುಜುಕಿ

ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳ ಮೇಲೆ ಭಾರತದ ಅವಲಂಬನೆ ಕುರಿತು ಮಾತನಾಡಿ, ಪ್ರಸ್ತುತ ಭಾರತವು ತನ್ನ ಶೇಕಡಾ 75 ರಷ್ಟು ವಿದ್ಯುತ್ ಅಗತ್ಯವನ್ನು ಕಲ್ಲಿದ್ದಲಿನಿಂದ ಉತ್ಪಾದಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಹೆಚ್ಚು ವಿದ್ಯುತ್ ವ್ಯಯವಾಗುತ್ತದೆ. ಇದು ಕಲ್ಲಿದ್ದಲಿನ ಬಳಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದರಿಂದ ಮಾಲಿನ್ಯವೂ ಹೆಚ್ಚಾಗಲಿದೆ.

ಕೇವಲ ಎಲೆಕ್ಟ್ರಿಕ್ ವಾಹನಗಳಿಂದ ದೇಶವನ್ನು ಕಾರ್ಬನ್ ಮುಕ್ತಗೊಳಿಸುವುದು ಅಸಾಧ್ಯ: ಮಾರುತಿ ಸುಜುಕಿ

ಮುಂದಿನ ದಿನಗಳಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಿಂದ ಭಾರತವು ವಿದ್ಯುತ್ ಅನ್ನು ಪೂರೈಸಲು ಸಾಧ್ಯವಾಗದಿದ್ದಾಗ, ಎಲೆಕ್ಟ್ರಿಕ್ ವಾಹನಗಳ ಚಾರ್ಜ್‌ಗೆ ವಿದ್ಯುತ್‌ ಉತ್ಪಾದನೆಗಾಗಿ ಹೆಚ್ಚಿನ ಕಲ್ಲಿದ್ದಲಿನ ಅಗತ್ಯವೇರ್ಪಡುತ್ತದೆ. ಇದರಿಂದ ಇಂಗಾಲದ ಹೊರಸೂಸುವಿಕೆಯನ್ನು ಹೆಚ್ಚಿಸುವ ಅಪಾಯ ಯಾವಾಗಲೂ ಇದ್ದೇ ಇದೆ ಎಂದು ಹೇಳಿದರು.

ಕೇವಲ ಎಲೆಕ್ಟ್ರಿಕ್ ವಾಹನಗಳಿಂದ ದೇಶವನ್ನು ಕಾರ್ಬನ್ ಮುಕ್ತಗೊಳಿಸುವುದು ಅಸಾಧ್ಯ: ಮಾರುತಿ ಸುಜುಕಿ

ಭವಿಷ್ಯದಲ್ಲಿ ಭಾರತವು ಕೇವಲ ಎಲೆಕ್ಟ್ರಿಕ್ ವಾಹನಗಳ ಮೇಲೆ ಅವಲಂಬಿತವಾಗದೆ, ಈಗಾಗಲೇ ಲಭ್ಯವಿರುವ ಹೈಬ್ರಿಡ್, ಸಿಎನ್‌ಜಿ, ಬಯೋಗ್ಯಾಸ್ ಮತ್ತು ಎಥೆನಾಲ್‌ನಂತಹ ತಂತ್ರಜ್ಞಾನಗಳನ್ನು ಸುಧಾರಿಸುವ ಕೆಲಸ ಮಾಡಬೇಕು ಎಂದು ಭಾರ್ಗವ ಹೇಳಿದರು.

ಕೇವಲ ಎಲೆಕ್ಟ್ರಿಕ್ ವಾಹನಗಳಿಂದ ದೇಶವನ್ನು ಕಾರ್ಬನ್ ಮುಕ್ತಗೊಳಿಸುವುದು ಅಸಾಧ್ಯ: ಮಾರುತಿ ಸುಜುಕಿ

ಮಾರುತಿ ಮುಂದಿನ 12 ತಿಂಗಳೊಳಗೆ ಭಾರತದಲ್ಲಿ ಸಂಪೂರ್ಣ ಹೈಬ್ರಿಡ್ ಕಾರನ್ನು ಬಿಡುಗಡೆ ಮಾಡಲಿದೆ ಎಂದು ಮತ್ತೊಂದು ವರದಿ ತಿಳಿಸಿದೆ. ಸಂಪೂರ್ಣ ಎಲೆಕ್ಟ್ರಿಕ್ ಕಾರುಗಳಿಗಿಂತ ಹೈಬ್ರಿಡ್ ಕಾರು ಉತ್ತಮವಾಗಿರುತ್ತದೆ ಎಂದ ಅವರು, ಇದು ಎಲೆಕ್ಟ್ರಿಕ್ ಕಾರಿನಂತೆ ಆಗಾಗ್ಗೆ ಚಾರ್ಜ್ ಮಾಡುವ ಅಗತ್ಯವಿಲ್ಲ. ಜೊತೆಗೆ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.

ಕೇವಲ ಎಲೆಕ್ಟ್ರಿಕ್ ವಾಹನಗಳಿಂದ ದೇಶವನ್ನು ಕಾರ್ಬನ್ ಮುಕ್ತಗೊಳಿಸುವುದು ಅಸಾಧ್ಯ: ಮಾರುತಿ ಸುಜುಕಿ

ಮೂಲಸೌಕರ್ಯವನ್ನು ಚಾರ್ಜ್ ಮಾಡದೆ, ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ದೊಡ್ಡ ಪ್ರಮಾಣದಲ್ಲಿ ಯಶಸ್ವಿಯಾಗುವುದು ಕಷ್ಟ. ಭಾರತದ ಸಾರಿಗೆಯು ಹಸಿರು ವಾಹನಗಳಿಗೆ ಪರಿವರ್ತನೆಗೊಳ್ಳಲು ಬಹಳ ಸಮಯ ತೆಗೆದುಕೊಳ್ಳಬಹುದು. ಈ ವರ್ಷದ ಏಪ್ರಿಲ್‌ನಲ್ಲಿ ಮಾರುತಿ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರಿನ ಯೋಜನೆಯಲ್ಲಿ ಕೆಲಸ ಮಾಡುತ್ತಿದೆ ಎಂಬ ಮಾಹಿತಿ ಕೂಡ ಹೊರಬಿದ್ದಿದೆ.

ಕೇವಲ ಎಲೆಕ್ಟ್ರಿಕ್ ವಾಹನಗಳಿಂದ ದೇಶವನ್ನು ಕಾರ್ಬನ್ ಮುಕ್ತಗೊಳಿಸುವುದು ಅಸಾಧ್ಯ: ಮಾರುತಿ ಸುಜುಕಿ

ಇದು 2025ರ ವೇಳೆಗೆ ಸಿದ್ಧವಾಗಲಿದೆ. ಆದರೆ, ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಉತ್ತಮ ಬೇಡಿಕೆ ಬಂದಾಗ ಮಾತ್ರ ಈ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವುದಾಗಿ ಕಂಪನಿಯ ಮೂಲಗಳಿಂದ ತಿಳಿದುಬಂದಿದೆ. ತನ್ನ ಗುಜರಾತ್ ಸ್ಥಾವರದಲ್ಲಿ ಎಲೆಕ್ಟ್ರಿಕ್ ಕಾರು ಉತ್ಪಾದನೆ ಮಾಡಲು ಯೋಜಿಸಲಾಗಿದೆ.

ಕೇವಲ ಎಲೆಕ್ಟ್ರಿಕ್ ವಾಹನಗಳಿಂದ ದೇಶವನ್ನು ಕಾರ್ಬನ್ ಮುಕ್ತಗೊಳಿಸುವುದು ಅಸಾಧ್ಯ: ಮಾರುತಿ ಸುಜುಕಿ

ಪ್ರಸ್ತುತ, ಮಾರುತಿ ಸುಜುಕಿ ಹೊಸ ಬ್ರೆಝಾವನ್ನು ಜೂನ್ 30 ರಂದು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಹೊಸ ಬ್ರೆಝಾವು ಹೊಸ ವಿನ್ಯಾಸದೊಂದಿಗೆ ಅನೇಕ ಹೊಸ ಮೊದಲ-ಇನ್-ಸೆಗ್ಮೆಂಟ್ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಬಿಡುಗಡೆಯಾದ ನಂತರ, ಹೊಸ ಬ್ರೆಝಾ ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಟಾಟಾ ನೆಕ್ಸಾನ್‌ನೊಂದಿಗೆ ಸ್ಪರ್ಧಿಸಲಿದೆ.

ಕೇವಲ ಎಲೆಕ್ಟ್ರಿಕ್ ವಾಹನಗಳಿಂದ ದೇಶವನ್ನು ಕಾರ್ಬನ್ ಮುಕ್ತಗೊಳಿಸುವುದು ಅಸಾಧ್ಯ: ಮಾರುತಿ ಸುಜುಕಿ

ಹೊಸ ಮಾರುತಿ ಬ್ರೆಝಾ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಹೊಸ ಎಲ್‌ಇಡಿ ಡಿಆರ್‌ಎಲ್‌ಗಳು, ಫಾಗ್ ಲೈಟ್‌ಗಳು, ಹೊಸ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಹೊಸ ಗ್ರಿಲ್, ಹೊಸ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು, ಹೊಸ ಎಲ್‌ಇಡಿ ಟೈಲ್‌ಲೈಟ್‌ಗಳು, ಬೂಟ್ ಲಿಡ್ ಮತ್ತು ಕಾಂಟ್ರಾಸ್ಟ್ ಬಣ್ಣದ ಸ್ಕಿಡ್ ಪ್ಲೇಟ್‌ಗಳಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದುಕೊಂಡಿದೆ.

ಕೇವಲ ಎಲೆಕ್ಟ್ರಿಕ್ ವಾಹನಗಳಿಂದ ದೇಶವನ್ನು ಕಾರ್ಬನ್ ಮುಕ್ತಗೊಳಿಸುವುದು ಅಸಾಧ್ಯ: ಮಾರುತಿ ಸುಜುಕಿ

ಇದರ ವಿಭಾಗದ ಮೊದಲ ವೈಶಿಷ್ಟ್ಯಗಳಲ್ಲಿ ವರ್ಣರಂಜಿತ ಹೆಡ್ಸ್-ಅಪ್ ಡಿಸ್ಪ್ಲೇ, 360-ಡಿಗ್ರಿ ಕ್ಯಾಮೆರಾ ಮತ್ತು ಎಲೆಕ್ಟ್ರಿಕ್ ಸನ್‌ರೂಫ್, 6-ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ. ಮುಂಬರುವ ದಿನಗಳಲ್ಲಿ ಈ ಮಾದರಿಯು ಹೆಚ್ಚು ಜನಪ್ರಿಯವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಕೇವಲ ಎಲೆಕ್ಟ್ರಿಕ್ ವಾಹನಗಳಿಂದ ದೇಶವನ್ನು ಕಾರ್ಬನ್ ಮುಕ್ತಗೊಳಿಸುವುದು ಅಸಾಧ್ಯ: ಮಾರುತಿ ಸುಜುಕಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಎಲೆಕ್ಟ್ರಿಕ್ ವಾಹನಗಳ ಕುರಿತು ಮಾರುತಿ ಕಂಪನಿ ಹೊಂದಿರುವ ನಿಲುವು ಹಲವರನ್ನು ಗೊಂದಲಕ್ಕೆ ತಳ್ಳಬಹುದು. ಆದರೆ ಕಂಪನಿಯ ಹೇಳಿಕೆಯು ಒಂದಷ್ಟು ಸತ್ಯಾ ಸತ್ಯತೆಯನ್ನು ಒಳಗೊಂಡಿದ್ದರೂ, ಪೂರ್ಣ ಪ್ರಮಾಣದಲ್ಲಿ ಇದನ್ನು ಪರಿಗಣನೆಗೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಏಕೆಂದರೆ ವಿದ್ಯುತ್ ಉತ್ಪಾದನೆಗೆ ದೇಶದಲ್ಲಿ ಉತ್ತಮ ಮೂಲ ಸೌಕರ್ಯಗಳಿರುವುದರಿಂದಲೇ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಸ್ವತಃ ಸರ್ಕಾರಗಳೇ ಉತ್ತೇಜಿಸುತ್ತಿವೆ.

Most Read Articles

Kannada
English summary
Maruti Suzuki says it is impossible to liberate the country from electric vehicles
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X