ಹೆಚ್ಚುವರಿ ಏರ್‌ಬ್ಯಾಗ್‌ಗಳ ನಿಯಮ: ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆಯಾಗುವ ಸಾಧ್ಯತೆ

ವಿಶ್ವದಾದ್ಯಂತ ಸೆಮಿಕಂಡಕ್ಟರ್ ಕೊರತೆ ಒಂದೆಡೆಯಾದರೆ, ಕಚ್ಚಾ ವಸ್ತುಗಳ ಬೆಲೆಯ ನಿರಂತರ ಏರಿಕೆ ಆಟೋಮೊಬೈಲ್‌ ವಲಯವನ್ನು ತೀರ್ವವಾಗಿ ಕಾಡುತ್ತಿದೆ. ಇದಲ್ಲದೇ ಕೇಂದ್ರ ಸರ್ಕಾರದ ಎಲ್ಲಾ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳ ಕಡ್ಡಾಯ ನೀತಿಯಿಂದಾಗಿ ಕಾರು ತಯಾರಕ ಕಂಪನಿಗಳು ಬೆಲೆ ಏರಿಕೆಗೆ ಚಿಂತನೆ ನಡೆಸಿವೆ.

ಹೆಚ್ಚುವರಿ ಏರ್‌ಬ್ಯಾಗ್‌ಗಳ ನಿಯಮ: ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆಯಾಗುವ ಸಾಧ್ಯತೆ

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಕೂಡ ಬೆಲೆ ಏರಿಕೆ ಮಾಡಲು ಆಲೋಚಿಸುತ್ತಿದೆ. ಕಳೆದ ಒಂದೂವರೆ ವರ್ಷಗಳಿಂದ ಕಚ್ಚಾ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದರಿಂದಾಗಿ ವಾಹನಗಳ ತಯಾರಿಕಾ ವೆಚ್ಚ ಹೆಚ್ಚಾಗಿದೆ ಎಂದು ಕಂಪನಿ ಹೇಳಿದೆ. ಮಾರುತಿ ಸುಜುಕಿ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಅವರು ಈ ಬಗ್ಗೆ ಮಾತನಾಡಿ, ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಹೊಂದಿರುವ ನಿಯಮದಿಂದಾಗಿ ವಾಹನಗಳ ಬೆಲೆ ಹೆಚ್ಚಾಗಬಹುದು ಎಂದು ಹೇಳಿದ್ದಾರೆ.

ಹೆಚ್ಚುವರಿ ಏರ್‌ಬ್ಯಾಗ್‌ಗಳ ನಿಯಮ: ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆಯಾಗುವ ಸಾಧ್ಯತೆ

ಪ್ರಸ್ತುತ ನಮ್ಮ ಸಾಮಾನ್ಯ ಮಾದರಿಗಳಲ್ಲಿ ಎರಡು ಏರ್ ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ನೀಡಲಾಗಿದೆ ಎಂದು ಹೇಳಿದ ಅವರು, ನಾಲ್ಕು ಹೊಸ ಏರ್ ಬ್ಯಾಗ್‌ಗಳ ಸೇರ್ಪಡೆಯಿಂದ ಕಾರಿನ ಬೆಲೆ 12,000 ರೂ.ದಿಂದ 13,000 ರೂ.ವರೆಗು ಹೆಚ್ಚಾಗಬಹುದು. ಜನವರಿ 2021 ರಿಂದ ಮಾರುತಿ ಸುಜುಕಿ, ವಾಹನಗಳ ಬೆಲೆಯನ್ನು ನಾಲ್ಕು ಬಾರಿ ಹೆಚ್ಚಿಸಿದೆ. ಈ ಅವಧಿಯಲ್ಲಿ ಮಾರುತಿ ಸುಜುಕಿ ವಾಹನಗಳು ಶೇ 9 ರಷ್ಟು ದುಬಾರಿಯಾಗಿವೆ. ಕಂಪನಿಯು ಲಾಭ ಮತ್ತು ಪರಿಮಾಣದ ಪ್ರಜ್ಞೆ ಎರಡನ್ನೂ ಹೊಂದಿದ್ದು, ಶೀಘ್ರದಲ್ಲೇ ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಶ್ರೀವಾಸ್ತವ ಹೇಳಿದರು.

ಹೆಚ್ಚುವರಿ ಏರ್‌ಬ್ಯಾಗ್‌ಗಳ ನಿಯಮ: ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆಯಾಗುವ ಸಾಧ್ಯತೆ

ಮಾರುತಿ ಸುಜುಕಿ ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಬಹುದು. ಕಂಪನಿಯು ಎಲೆಕ್ಟ್ರಿಕ್ ವಾಹನ ವ್ಯವಹಾರಕ್ಕಾಗಿ 10,000 ಕೋಟಿ ರೂ. ಹೂಡಿಕೆಯನ್ನು ಘೋಷಿಸಿದೆ, ಜೊತೆಗೆ 'ಎಲೆಕ್ಟ್ರಿಕ್ ವೆಹಿಕಲ್ ಡಿವಿಷನ್' ಅನ್ನು ಸ್ಥಾಪಿಸುತ್ತಿದೆ. ಮಾರುತಿ ಎಲೆಕ್ಟ್ರಿಕ್ ವೆಹಿಕಲ್ ವಿಭಾಗವನ್ನು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಅವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಗಿದೆ.

ಹೆಚ್ಚುವರಿ ಏರ್‌ಬ್ಯಾಗ್‌ಗಳ ನಿಯಮ: ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆಯಾಗುವ ಸಾಧ್ಯತೆ

ಮಾರುತಿ ಸುಜುಕಿಯ ಮಾತೃಸಂಸ್ಥೆ ಸುಜುಕಿ ಲಿಮಿಟೆಡ್ ಈ ಹೂಡಿಕೆಯ ಮೂಲಕ ಗುಜರಾತ್‌ನಲ್ಲಿ ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದನಾ ಘಟಕವನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಕಂಪನಿಯು ಈ ಯೋಜನೆಯ ಕೆಲಸವನ್ನು ಈಗಾಗಲೇ ಪ್ರಾರಂಭಿಸಿದ್ದು, ಇದು 2024-25ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಹೆಚ್ಚುವರಿ ಏರ್‌ಬ್ಯಾಗ್‌ಗಳ ನಿಯಮ: ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆಯಾಗುವ ಸಾಧ್ಯತೆ

ಮಾರುತಿ ಸುಜುಕಿ ಈಗಾಗಲೇ ಎಲೆಕ್ಟ್ರಿಕ್ ವಾಹನಗಳಿಗಾಗಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಪ್ರಾರಂಭಿಸಿದೆ. ಕಂಪನಿಯು ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಪ್ರವೇಶಿಸಲು ತನ್ನ ಮಾರಾಟ ಮತ್ತು ವಿತರಣಾ ಜಾಲವನ್ನು ಹೆಚ್ಚಿಸುತ್ತಿದೆ. ಭಾರತದಲ್ಲಿ, ಮಾರುತಿ ಸುಜುಕಿಯ ಎಲೆಕ್ಟ್ರಿಕ್ ವಾಹನಗಳು ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಎಂಜಿಯ ಎಲೆಕ್ಟ್ರಿಕ್ ವಾಹನಗಳೊಂದಿಗೆ ಸ್ಪರ್ಧಿಸಲಿವೆ. ಮಾಧ್ಯಮ ವರದಿಗಳ ಪ್ರಕಾರ, ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಉತ್ಪನ್ನವು ಎಲೆಕ್ಟ್ರಿಕ್ SUV ಆಗಿರಬಹುದು. ಕಂಪನಿಯು ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಕೈಗೆಟುಕುವ ಬೆಲೆಯ ಶ್ರೇಣಿಯಲ್ಲಿ ಬಿಡುಗಡೆ ಮಾಡಲಿದ್ದು, ರೂ. 8 ಲಕ್ಷದಿಂದ ರೂ 20 ಲಕ್ಷದವರೆಗೆ ಇರಬಹುದು.

ಹೆಚ್ಚುವರಿ ಏರ್‌ಬ್ಯಾಗ್‌ಗಳ ನಿಯಮ: ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆಯಾಗುವ ಸಾಧ್ಯತೆ

ಕಳೆದ ವರ್ಷ, ಮಾರುತಿ ಸುಜುಕಿಯ ಅಧ್ಯಕ್ಷ ಆರ್‌ಸಿ ಭಾರ್ಗವ ಅವರು 2025 ರಲ್ಲಿ ಮೊದಲ ಎಲೆಕ್ಟ್ರಿಕ್ ಕಾರಿನ ಪರಿಚಯವನ್ನು ಬಹಿರಂಗಪಡಿಸಿದ್ದರು. ಕಂಪನಿಯು ಬ್ಯಾಟರಿ, ಚಾರ್ಜಿಂಗ್ ಮೂಲಸೌಕರ್ಯ ಮತ್ತು ವಿದ್ಯುತ್ ಪೂರೈಕೆಯಲ್ಲಿ ಹೆಚ್ಚು ಹೂಡಿಕೆ ಮಾಡಲು ಯೋಜಿಸುತ್ತಿದೆ ಎಂದು ಅವರು ಹೇಳಿದ್ದರು.

ಹೆಚ್ಚುವರಿ ಏರ್‌ಬ್ಯಾಗ್‌ಗಳ ನಿಯಮ: ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆಯಾಗುವ ಸಾಧ್ಯತೆ

ಇನ್ನು ಕಂಪನಿಯು ಇತ್ತೀಚೆಗೆ ಮಾರುತಿ ವ್ಯಾಗನ್ ಆರ್ ಅನ್ನು ವ್ಯಾಗನ್ಆರ್ ಟೂರ್ ಹೆಚ್ (3 WagonR Tour H3) ಹೆಸರಿನಲ್ಲಿ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಜನಪ್ರಿಯ ಟೋಲ್ ಬಾಯ್ ಕಾರ್ "ವ್ಯಾಗನ್ಆರ್"ನ ಹೊಸ ರೂಪಾಂತರವನ್ನು ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು CNG ಇಂಧನ ಆಯ್ಕೆಗಳೊಂದಿಗೆ ಈ ಕಾರನ್ನು ಪರಿಚಯಿಸಿದೆ.

ಹೆಚ್ಚುವರಿ ಏರ್‌ಬ್ಯಾಗ್‌ಗಳ ನಿಯಮ: ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆಯಾಗುವ ಸಾಧ್ಯತೆ

ವ್ಯಾಗನ್ಆರ್ ಟೂರ್ ಹೆಚ್3 ಪೆಟ್ರೋಲ್ ಆವೃತ್ತಿಯ ಬೆಲೆ ರೂ 5.39 ಲಕ್ಷ (ಎಕ್ಸ್ ಶೋ ರೂಂ) ಆದರೆ ಸಿಎನ್‌ಜಿ ಆವೃತ್ತಿಯ ಬೆಲೆ 6.34 ಲಕ್ಷ ರೂ. (ಎಕ್ಸ್ ಶೋ ರೂಂ, ದೆಹಲಿ) ಇದೆ. ಮಾರುತಿ ಸುಜುಕಿ ವ್ಯಾಗನ್ಆರ್ ಇದುವರೆಗೆ ವೈಯಕ್ತಿಕ ಬಳಕೆಗೆ ಮಾತ್ರ ಲಭ್ಯವಿತ್ತು. ಕಂಪನಿಯು ಈಗ ಫ್ಲೀಟ್ ಆಪರೇಟರ್‌ಗಳಿಗಾಗಿ (ಟ್ಯಾಕ್ಸಿಗಳಂತಹ ವಾಣಿಜ್ಯ ಉದ್ದೇಶಗಳಿಗಾಗಿ) ಟೂರ್ H3ನ ವಾಣಿಜ್ಯ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಹೆಚ್ಚುವರಿ ಏರ್‌ಬ್ಯಾಗ್‌ಗಳ ನಿಯಮ: ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆಯಾಗುವ ಸಾಧ್ಯತೆ

ಇದು ವಾಣಿಜ್ಯ ಆವೃತ್ತಿಯಾಗಿರುವುದರಿಂದ ಕಂಪನಿಯು ಹೆಚ್ಚಿನ ರೂಪಾಂತರಗಳನ್ನು ಲಭ್ಯವಾಗುವಂತೆ ಮಾಡಿಲ್ಲ. ಚಾಲಕರಿಗೆ ಅನುಕೂಲವಾಗುವಂತೆ ಕಂಪನಿಯು ಕಡಿಮೆ ವೈಶಿಷ್ಟ್ಯಗಳೊಂದಿಗೆ ಪೆಟ್ರೋಲ್ ಮತ್ತು CNG ಇಂಧನ ಆಯ್ಕೆಗಳೊಂದಿಗೆ ಸಮಂಜಸವಾದ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಿದೆ. ಸಾಮಾನ್ಯ ಗ್ರಾಹಕರು ತಮ್ಮ ವೈಯಕ್ತಿಕ ಬಳಕೆಗಾಗಿ ಈ ಹೊಸ ಮಾರುತಿ ಸುಜುಕಿ ವ್ಯಾಗನ್ಆರ್ ಟೂರ್ H3 ಅನ್ನು ಖರೀದಿಸಲು ಸಾಧ್ಯವಿದಿಲ್ಲ ಎಂಬುದನ್ನು ಗಮನಿಸಬೇಕು.

ಹೆಚ್ಚುವರಿ ಏರ್‌ಬ್ಯಾಗ್‌ಗಳ ನಿಯಮ: ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆಯಾಗುವ ಸಾಧ್ಯತೆ

ಇದು ವಾಣಿಜ್ಯ ಬಳಕೆಗೆ ಮಾತ್ರ ಲಭ್ಯವಿದೆ. ವೈಯಕ್ತಿಕ ಬಳಕೆ ಕಂಪನಿಯು ಹೊಸ 2022 ಮಾಡೆಲ್ ವ್ಯಾಗನ್ಆರ್ ಅನ್ನು ಎರಡು ಎಂಜಿನ್ ಕಾನ್ಫಿಗರೇಶನ್‌ಗಳೊಂದಿಗೆ 11 ರೂಪಾಂತರಗಳಲ್ಲಿ ಮಾರಾಟ ಮಾಡುತ್ತಿದೆ. ಹೊಸ 2022 ಮಾರುತಿ ಸುಜುಕಿ ವ್ಯಾಗನ್ಆರ್ ಗ್ಯಾಲಂಟ್ ರೆಡ್ ಮತ್ತು ಮ್ಯಾಗ್ಮಾ ಗ್ರೇ ಎಂಬ ಎರಡು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.

Article Published On: Tuesday, April 5, 2022, 19:00 [IST]
English summary
Maruti suzuki to hike prices soon for extra airbags
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+