2023ರ ಆಟೋ ಎಕ್ಸ್‌ಪೋದಲ್ಲಿ ಎಲೆಕ್ಟ್ರಿಕ್ ಸೇರಿದಂತೆ 16 ಕಾರುಗಳನ್ನು ಪ್ರದರ್ಶಿಸಲಿವೆ ಮಾರುತಿ ಸುಜುಕಿ
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಜನಪ್ರಿಯ ಮತ್ತು ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದೆ. ಮಾರುತಿ ಸುಜುಕಿ ಕಂಪನಿಯು ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರತಿ ಮಾಸಿಕ ಪ್ರಯಾಣಿಕ ಕಾರು ಮಾರಾಟ ಪಟ್ಟಿಯಲ್ಲಿ ಪ್ರಾಬಲ್ಯ ಹೊಂದಿದೆ.
ಎಲೆಕ್ಟ್ರಿಕ್ ವಾಹನಗಳಿಗಾಗಿ ವೇಗವಾಗಿ ಹೆಚ್ಚುತ್ತಿರುವ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಗುರುತಿಸುವ ಪ್ರಯತ್ನದಲ್ಲಿ, ಮಾರುತಿ ಸುಜುಕಿಯು ಆಟೋ ಎಕ್ಸ್‌ಪೋ 2023 ನಲ್ಲಿ ಆಲ್-ಎಲೆಕ್ಟ್ರಿಕ್ ಎಸ್‍ಯುವಿ ಕಾನ್ಸೆಪ್ಟ್ ಪೂರ್ವವೀಕ್ಷಣೆ ಮಾಡಲಿದೆ. ಹೊಸ ಎಲೆಕ್ಟ್ರಿಕ್ ಎಸ್‍ಯುವಿ ಕಾನ್ಸೆಪ್ಟ್ ಮಾರುತಿ ಸುಜುಕಿಯ ಶೋ-ಸ್ಟಾಪರ್‌ಗಳಲ್ಲಿ ಒಂದಾಗಿದೆ. ಎಕ್ಸ್‌ಪೋ ಮತ್ತು ಆಲ್-ಎಲೆಕ್ಟ್ರಿಕ್ ವಾಹನವನ್ನು ಅಭಿವೃದ್ಧಿಪಡಿಸುವಲ್ಲಿ ಕಾರು ತಯಾರಕರ ಮೊದಲ ಪ್ರಯತ್ನವಾಗಿದೆ. ಸದ್ಯಕ್ಕೆ YY8 ಎಂಬ ಕೋಡ್‌ನೇಮ್ ಹೊಂದಿರುವ ಈ ಆಲ್-ಎಲೆಕ್ಟ್ರಿಕ್ ಎಸ್‍ಯುವಿ ಮಾರುತಿ ಸುಜುಕಿ ಗ್ರಾಂಡ್ ವಿಟಾರಾದಷ್ಟು ದೊಡ್ಡದಾಗಿದೆ ಎಂದು ಹೇಳಲಾಗುತ್ತದೆ.

ಮಾರುತಿ ಸುಜುಕಿ ಕಂಪನಿಯು ಈ ಹೊಸ ಕಾನ್ಸೆಪ್ಟ್ ಆವೃತ್ತಿ ಉತ್ಪಾದನಾ ಆವೃತ್ತಿಯು 2025 ರಲ್ಲಿ ಹೊರಹೊಮ್ಮುವ ನಿರೀಕ್ಷೆಯಿದೆ. ಈ ಉತ್ಪಾದನಾ-ಸ್ಪೆಕ್ ಎಲೆಕ್ಟ್ರಿಕ್ ಎಸ್‍ಯುವಿ ಭಾರತದಲ್ಲಿ ಮಾರುತಿ ಸುಜುಕಿಯ ಮೊದಲ ಆಲ್-ಎಲೆಕ್ಟ್ರಿಕ್ ವಾಹನವಾಗಿದೆ, ಈ ಹೊಸ ಮಾದರಿಯು ನೆಕ್ಸಾನ್ ಇವಿ ಮ್ಯಾಕ್ಸ್ ಮತ್ತು ಮಹೀಂದ್ರಾ XUV400 ನಂತಹ ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಮಾರುತಿ ಸುಜುಕಿಯು ಎಲೆಕ್ಟ್ರಿಕ್ ಎಸ್‍ಯುವಿಯನ್ನು ಟೊಯೊಟಾ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಲಾಗುತ್ತದೆ.
ಗ್ರ್ಯಾಂಡ್ ವಿಟಾರಾ-ಅರ್ಬನ್ ಕ್ರೂಸರ್ ಹೈರೈಡರ್ ಅಸೋಸಿಯೇಷನ್‌ನಂತೆ, ಟೊಯೊಟಾ ಈ ಎಲೆಕ್ಟ್ರಿಕ್ ಎಸ್‍ಯುವಿಯ ಆವೃತ್ತಿಯನ್ನು ಸಹ ಹೊಂದಿರುತ್ತದೆ. YY8 ಅನ್ನು ಎಲೆಕ್ಟ್ರಿಕ್ ಸ್ಕೇಟ್‌ಬೋರ್ಡ್ ಆರ್ಕಿಟೆಕ್ಚರ್‌ನಲ್ಲಿ ಅಭಿವೃದ್ಧಿಪಡಿಸಲಾಗುವುದು, ಇದು ಮಾರುತಿ ಸುಜುಕಿಯಿಂದ ಭವಿಷ್ಯದ ಎಲ್ಲಾ ಎಲೆಕ್ಟ್ರಿಕ್ ವಾಹನಗಳ ಮೂಲವಾಗಿದೆ. YY8 ಜಾಗತಿಕ ಉತ್ಪನ್ನವಾಗಿದ್ದರೂ, ಅದರ ಉತ್ಪಾದನಾ ಆವೃತ್ತಿಯನ್ನು ಗುಜರಾತ್‌ನಲ್ಲಿರುವ ಸುಜುಕಿಯ ಉತ್ಪಾದನಾ ಘಟಕದಲ್ಲಿ ಸ್ಥಳೀಯವಾಗಿ ತಯಾರಿಸಲಾಗುತ್ತದೆ. ಈ ಸೌಲಭ್ಯವು ಆಲ್-ಎಲೆಕ್ಟ್ರಿಕ್ ಎಸ್‌ಯುವಿಯ ರಫ್ತಿಗೆ ಉತ್ಪಾದನಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ.
ಮಾರುತಿ ಸುಜುಕಿ YY8 ಆಲ್-ಎಲೆಕ್ಟ್ರಿಕ್ ಎಸ್‍ಯುವಿಯ ಉತ್ಪಾದನಾ ಆವೃತ್ತಿಯನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಇದು 48 kWh ಮತ್ತು 59 kWh ಆಗಿದೆ. ಇನ್ನು 48 kWh ಬ್ಯಾಟರಿ ಪ್ಯಾಕ್ ಆಯ್ಕೆಯು ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಮತ್ತು ಮಹೀಂದ್ರಾ XUV400 ನಂತಹ ಎಸ್‍ಯುವಿಗಳೊಂದಿಗೆ ಸ್ಪರ್ಧಿಸುತ್ತದೆ.ದೊಡ್ಡ 59 kWh ಬ್ಯಾಟರಿ ಪ್ಯಾಕ್ ಹೊಂದಿರುವ ಆವೃತ್ತಿಯು YY8 ಅನ್ನು ಹ್ಯುಂಡೈ ಕೋನಾ ಇವಿ ಮತ್ತು ಎಂಜಿ ಇವಿ ಯಂತಹ ಎಸ್‍ಯುವಿಗಳೊಂದಿಗೆ ಸ್ಪರ್ಧಿಸುವಂತೆ ಮಾಡುತ್ತದೆ.
ಈ ಎಲೆಕ್ಟ್ರಿಕ್ ಎಸ್‍ಯುವಿ ಬಿವೈಡಿಯಿಂದ LFP ಬ್ಲೇಡ್ ಸೆಲ್ ಬ್ಯಾಟರಿಗಳನ್ನು ಪಡೆಯುತ್ತದೆ ಎಂದು ಹೇಳಲಾಗುತ್ತಿದೆ. ಇದು ಇತ್ತೀಚೆಗೆ ಭಾರತದಲ್ಲಿ ಆಟ್ಟೋ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಬಿಡುಗಡೆ ಮಾಡಿದೆ. ಈ ಎರಡೂ ಬ್ಯಾಟರಿ ಪ್ಯಾಕ್‌ಗಳು. 59 kWh ಬ್ಯಾಟರಿ ಪ್ಯಾಕ್‌ನೊಂದಿಗೆ, 500 ಕಿ.ಮೀ ರೇಂಜ್ ಅನ್ನು ನೀಡುತ್ತದೆ ಎಂದು ನಿರೀಕ್ಷಿಸಬಹುದು, ಇದು 138 ಬಿಹೆಚ್‍ಪಿ ನಿಂದ 170 ಬಿಹೆಚ್ ಪವರ್ ವರೆಗೂ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ.
ಜನವರಿಯಲ್ಲಿ ಆಟೋ ಎಕ್ಸ್‌ಪೋದಲ್ಲಿ ಎರಡು ಹೊಸ ಮಾದರಿಗಳನ್ನು ಪ್ರದರ್ಶಿಸುತ್ತೇವೆ. ಈ ಎರಡು ವಾಹನಗಳು 2023-2024ರಲ್ಲಿ 2.5-3 ಲಕ್ಷ ವಾಹನಗಳ ಹೆಚ್ಚುವರಿ ಮಾರಾಟಕ್ಕ್ ತರುವ ಸಾಧ್ಯತೆಯಿದೆ. ಮಾರುತಿ ಸುಜುಕಿ ಕಂಪನಿಯು 2023ರ ಆಟೋ ಎಕ್ಸ್‌ಪೋದಲ್ಲಿ ಒಟ್ಟು 16 ವಾಹನಗಳನ್ನು ಪ್ರದರ್ಶಿಸಲಿದ್ದು, ಇದರಲ್ಲಿ ಹೊಸ YY8 ಎಲೆಕ್ಟ್ರಿಕ್ ಕಾನ್ಸೆಪ್ಟ್ ಎಸ್‌ಯುವಿ, 5-ಡೋರ್ ಜಿಮ್ನಿ ಮತ್ತು ಬಲೆನೊ ಆಧಾರಿತ ಕೂಪೆ ಎಸ್‌ಯುವಿ ಉತ್ಪಾದನಾ ಆವೃತ್ತಿಗಳು, ವ್ಯಾಗನ್ ಆರ್ ಫ್ಲೆಕ್ಸ್ ಫ್ಯುಯೆಲ್ ಪ್ರೊಟೊಟೈಪ್ ಮತ್ತು ಅದರ ಕಸ್ಟಮೈಸ್ ಮಾಡಿದ ಶ್ರೇಣಿಯ ಉತ್ಪನ್ನಗಳಿವೆ.
ಜೊತೆಗೆ ಗ್ರ್ಯಾಂಡ್ ವಿಟಾರಾ, XL6, ಸಿಯಾಜ್, ಎರ್ಟಿಗಾ, ಬ್ರೇಝಾ, ಬಲೆನೊ, ಸ್ವಿಫ್ಟ್ ಮತ್ತು ಮುಂತಾದವುಗಳು ಕೂಡ ಇವೆ. ಮಾರುತಿ ಸುಜುಕಿ ಕಂಪನಿಯು ಜಿಮ್ನಿಯ ಅಧಿಕೃತ ಅನಾವರಣಕ್ಕೆ ಮುಂಚಿತವಾಗಿ, ಕಂಪನಿಯು ದೇಶದಲ್ಲಿ ವಾಹನವನ್ನು ಪರೀಕ್ಷಿಸಲು ಪ್ರಾರಂಭಿಸಿದೆ. ಹೊಸ ಜಿಮ್ನಿಯನ್ನು ಲೈಫ್ ಸ್ಟೈಲ್ ಆಫ್-ರೋಡ್ ಎಸ್‌ಯುವಿಯಾಗಿ ಪರಿಚಯಿಸಲಾಗುತ್ತದೆ. ಇಂಡೋ-ಜಪಾನೀಸ್ ವಾಹನ ತಯಾರಕ ತನ್ನ ಹೊಸ ಶ್ರೇಣಿಯ ಮಾದರಿಗಳೊಂದಿಗೆ ಬೆಳೆಯುತ್ತಿರುವ ಸಿಎನ್‌ಜಿ ಮತ್ತು ಎಸ್‍ಯುವಿ ಮಾರುಕಟ್ಟೆಯನ್ನು ಟ್ಯಾಪ್ ಮಾಡುವ ಗುರಿಯನ್ನು ಹೊಂದಿದೆ.


Click it and Unblock the Notifications