ಆಗಸ್ಟ್‌ನಲ್ಲಿ ಮಾರುತಿ ಹ್ಯಾಚ್‌ಬ್ಯಾಕ್‌ಗಳ ಅಬ್ಬರ: 1.65 ಲಕ್ಷ ಯೂನಿಟ್‌ ದಾಟಿದ ಒಟ್ಟಾರೆ ಮಾರಾಟ

ಭಾರತದಲ್ಲಿ ಪ್ರತಿ ತಿಂಗಳು ಇತರ ಕಾರು ತಯಾರಕರಿಗಿಂತಲು ಅತಿಹೆಚ್ಚು ಮಾರಾಟ ದಾಖಲಿಸುವ ಮಾರುತಿ ಸುಜುಕಿ ಇಂಡಿಯಾ ಆಗಸ್ಟ್‌ ತಿಂಗಳಿನಲ್ಲಿಯು ಉತ್ತಮ ಮಾರಾಟವನ್ನು ದಾಖಲಿಸಿದೆ.

Recommended Video

ಅತ್ಯಧಿಕ ಮೈಲೇಜ್ ನೀಡುವ Tata Nexon EV Max ಕನ್ನಡ ರಿವ್ಯೂ | Regen Modes, Single-Foot Driving, New Features

ಎಲೆಕ್ಟ್ರಿಕ್ ಘಟಕಗಳ ಕೊರತೆಯ ನಡುವೆಯೂ ಮಾರುತಿ ಸುಜುಕಿ ಕಳೆದ ತಿಂಗಳ ಮಾರಾಟದಲ್ಲಿ ಸುಧಾರಣೆಯನ್ನು ಕಂಡಿದೆ. ಆಗಸ್ಟ್‌ನಲ್ಲಿ ಒಟ್ಟು 1,65,173 ಯುನಿಟ್‌ಗಳು ಮಾರಾಟವಾಗಿದ್ದು, ಇದರಲ್ಲಿ 1,37,537 ಯುನಿಟ್‌ಗಳು ದೇಶೀಯವಾಗಿ ಮಾರಾಟವಾಗಿದ್ದರೇ, 6,155 ಯುನಿಟ್‌ಗಳು ಇತರ ಒಇಎಂಗಳಿಗೆ ಮಾರಾಟವಾಗಿದೆ.

ಆಗಸ್ಟ್‌ನಲ್ಲಿ ಮಾರುತಿ ಹ್ಯಾಚ್‌ಬ್ಯಾಕ್‌ಗಳ ಅಬ್ಬರ: 1.65 ಲಕ್ಷ ಯೂನಿಟ್‌ ದಾಟಿದ ಒಟ್ಟರೆ ಮಾರಾಟ

21,481 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಎಲೆಕ್ಟ್ರಾನಿಕ್ ಘಟಕಗಳ ಕೊರತೆಯು ವಾಹನಗಳ ಉತ್ಪಾದನೆಯ ಮೇಲೆ ಅಲ್ಪ ಪ್ರಮಾಣದ ಪರಿಣಾಮ ಬೀರಿದೆ ಎಂದು ಮಾರುತಿ ಬಿಎಸ್‌ಇ ಫೈಲಿಂಗ್‌ನಲ್ಲಿ ತಿಳಿಸಿದೆ. ಕಂಪನಿಯು ಪರಿಣಾಮವನ್ನು ಕಡಿಮೆ ಮಾಡಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಆಗಸ್ಟ್‌ನಲ್ಲಿ ಮಾರುತಿ ಹ್ಯಾಚ್‌ಬ್ಯಾಕ್‌ಗಳ ಅಬ್ಬರ: 1.65 ಲಕ್ಷ ಯೂನಿಟ್‌ ದಾಟಿದ ಒಟ್ಟರೆ ಮಾರಾಟ

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಗಮನಾರ್ಹ ಜಿಗಿತವೆಂದೇ ಹೇಳಬಹುದು. ಆಗಸ್ಟ್ 2021 ರಲ್ಲಿ, ಮಾರುತಿ ಸುಜುಕಿ 1,30,699 ಯುನಿಟ್‌ಗಳನ್ನು ಮಾರಾಟಮಾಡಿದ್ದು, ಇದರಲ್ಲಿ 1,05,775 ಯುನಿಟ್‌ಗಳನ್ನು ದೇಶೀಯವಾಗಿ ಮಾರಾಟ ಮಾಡಿದ್ದರೆ, 4,305 ಯುನಿಟ್‌ಗಳನ್ನು ಇತರ ಒಇಎಂಗಳಿಗೆ ಮಾರಾಟ ಮಾಡಿದ್ದು, 20,619 ವಾಹನಗಳನ್ನು ರಫ್ತು ಮಾಡಲಾಗಿದೆ.

ಆಗಸ್ಟ್‌ನಲ್ಲಿ ಮಾರುತಿ ಹ್ಯಾಚ್‌ಬ್ಯಾಕ್‌ಗಳ ಅಬ್ಬರ: 1.65 ಲಕ್ಷ ಯೂನಿಟ್‌ ದಾಟಿದ ಒಟ್ಟರೆ ಮಾರಾಟ

ಈ ವರ್ಷದ ಆಗಸ್ಟ್‌ನ ದೇಶೀಯ ಮಾರಾಟದಲ್ಲಿ, ಮಾರುತಿ ಸುಜುಕಿ ಮಿನಿ ವಿಭಾಗದಲ್ಲಿ 22,162 ಕಾರುಗಳನ್ನು ಮಾರಾಟ ಮಾಡಿದೆ, ಇದರಲ್ಲಿ ಆಲ್ಟೊ ಮತ್ತು ಎಸ್-ಪ್ರೆಸ್ಸೊದಂತಹ ಕೊಡುಗೆಗಳು ಸೇರಿವೆ. ಮಾರುತಿ ಸುಜುಕಿ ಕಾಂಪ್ಯಾಕ್ಟ್ ವಿಭಾಗದಲ್ಲಿ ಗರಿಷ್ಠ ಮಾರಾಟವನ್ನು ಕಂಡಿದೆ.

ಆಗಸ್ಟ್‌ನಲ್ಲಿ ಮಾರುತಿ ಹ್ಯಾಚ್‌ಬ್ಯಾಕ್‌ಗಳ ಅಬ್ಬರ: 1.65 ಲಕ್ಷ ಯೂನಿಟ್‌ ದಾಟಿದ ಒಟ್ಟರೆ ಮಾರಾಟ

ಬಲೆನೊ, ಸೆಲೆರಿಯೊ, ಡಿಜೈರ್, ಇಗ್ನಿಸ್, ಸ್ವಿಫ್ಟ್, ಟೂರ್ ಎಸ್, ವ್ಯಾಗನ್‌ಆರ್‌ನಂತಹ ಕಾರುಗಳನ್ನು ಒಳಗೊಂಡಿರುವ ಈ ವಿಭಾಗದಲ್ಲಿ ಕಾರು ತಯಾರಕರು 71,557 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ಪ್ರಯಾಣಿಕ ವಾಹನ ವಿಭಾಗದಲ್ಲಿ ಕಾರು ಮಾರಾಟವು ಕಳೆದ ವರ್ಷ ಆಗಸ್ಟ್‌ನಲ್ಲಿ 68,184 ಯುನಿಟ್‌ಗಳಿಂದ ಈ ವರ್ಷದ ಆಗಸ್ಟ್‌ನಲ್ಲಿ 95,235 ಯುನಿಟ್‌ಗಳಿಗೆ ಏರಿಕೆಯಾಗಿದೆ.

ಆಗಸ್ಟ್‌ನಲ್ಲಿ ಮಾರುತಿ ಹ್ಯಾಚ್‌ಬ್ಯಾಕ್‌ಗಳ ಅಬ್ಬರ: 1.65 ಲಕ್ಷ ಯೂನಿಟ್‌ ದಾಟಿದ ಒಟ್ಟರೆ ಮಾರಾಟ

ಮಧ್ಯಮ ಗಾತ್ರದ ವಿಭಾಗದಲ್ಲಿ, ಕಂಪನಿಯು ಸಿಯಾಜ್ ಸೆಡಾನ್‌ನ 1,516 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಯುಟಿಲಿಟಿ ವಾಹನಗಳ ವಿಭಾಗದಲ್ಲಿ ಬ್ರೆಝಾ, ಎರ್ಟಿಗಾ, ಎಸ್-ಕ್ರಾಸ್, ಎಕ್ಸ್‌ಎಲ್ 6 ನಂತಹ 26,932 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.

ಆಗಸ್ಟ್‌ನಲ್ಲಿ ಮಾರುತಿ ಹ್ಯಾಚ್‌ಬ್ಯಾಕ್‌ಗಳ ಅಬ್ಬರ: 1.65 ಲಕ್ಷ ಯೂನಿಟ್‌ ದಾಟಿದ ಒಟ್ಟರೆ ಮಾರಾಟ

ಆಟೋ ದೈತ್ಯ ವ್ಯಾನ್ ವಿಭಾಗದಲ್ಲಿ 11,999 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಕಂಪನಿಯ ಏಕೈಕ Eeco MPV ಮಾರಾಟವಾಗುತ್ತಿದ್ದು, ಇದು ಕಂಪನಿಯ ಒಟ್ಟು ದೇಶೀಯ ಪ್ರಯಾಣಿಕ ವಾಹನಗಳ ಮಾರಾಟ (ಪ್ರಯಾಣಿಕ ವಾಹನಗಳು) 134,166 ಯುನಿಟ್‌ಗಳಷ್ಟಿದೆ.

ಆಗಸ್ಟ್‌ನಲ್ಲಿ ಮಾರುತಿ ಹ್ಯಾಚ್‌ಬ್ಯಾಕ್‌ಗಳ ಅಬ್ಬರ: 1.65 ಲಕ್ಷ ಯೂನಿಟ್‌ ದಾಟಿದ ಒಟ್ಟರೆ ಮಾರಾಟ

ಸೂಪರ್ ಕ್ಯಾರಿಯನ್ನು ಒಳಗೊಂಡಿರುವ ಲೈಟ್ ಕಮರ್ಷಿಯಲ್ ವೆಹಿಕಲ್ಸ್ (LCV) ಕಳೆದ ತಿಂಗಳು 3,371 ಯುನಿಟ್‌ಗಳ ಮಾರಾಟವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಭಾರತೀಯ ಕಾರು ಮಾರುಕಟ್ಟೆಯಲ್ಲಿ ಎಸ್‌ಯುವಿಗಳ ಪಾಲನ್ನು ಹೆಚ್ಚಿಸಿದ ನಂತರವೂ ಕಂಪನಿಯ ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟವು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾರುತಿ ನಂಬಿದೆ.

ಆಗಸ್ಟ್‌ನಲ್ಲಿ ಮಾರುತಿ ಹ್ಯಾಚ್‌ಬ್ಯಾಕ್‌ಗಳ ಅಬ್ಬರ: 1.65 ಲಕ್ಷ ಯೂನಿಟ್‌ ದಾಟಿದ ಒಟ್ಟರೆ ಮಾರಾಟ

ಮಾರುತಿ ಸುಜುಕಿ ಇಂಡಿಯಾದ ಸಿಇಒ ಹಿಸಾಶಿ ಟೇಕುಚಿ ಅವರು ಭಾರತದಲ್ಲಿ ಎಸ್‌ಯುವಿಗಳಿಗಿಂತ ಸಣ್ಣ ಕಾರುಗಳಿಗೆ ಆದ್ಯತೆ ನೀಡುವ ಅನೇಕ ಗ್ರಾಹಕರಿದ್ದಾರೆ ಎಂದು ನಂಬಿದ್ದಾರೆ. ಹೀಗಾಗಿ ಕಂಪನಿಯು ಮಾರುಕಟ್ಟೆಯಲ್ಲಿ ಸಣ್ಣ ಕಾರುಗಳನ್ನು ನೀಡುವುದನ್ನು ಮುಂದುವರಿಸಲಿದೆ.

ಆಗಸ್ಟ್‌ನಲ್ಲಿ ಮಾರುತಿ ಹ್ಯಾಚ್‌ಬ್ಯಾಕ್‌ಗಳ ಅಬ್ಬರ: 1.65 ಲಕ್ಷ ಯೂನಿಟ್‌ ದಾಟಿದ ಒಟ್ಟರೆ ಮಾರಾಟ

ಮಾರುತಿ ವ್ಯಾಗನ್ಆರ್, ಆಲ್ಟೊ, ಎಸ್-ಪ್ರೆಸ್ಸೊ, ಸ್ವಿಫ್ಟ್, ಬಲೆನೊ, ಇಗ್ನಿಸ್ ಕಂಪನಿಯ ಕೆಲವು ಉತ್ತಮ ಮಾರಾಟವಾದ ಕಾರುಗಳಾಗಿವೆ. ಮಾರುತಿ ಸುಜುಕಿಯು ಹೊಸ ಆಲ್ಟೊ ಕೆ10 (ಮಾರುತಿ ಸುಜುಕಿ ಆಲ್ಟೊ ಕೆ10) ಅನ್ನು ಭಾರತದಲ್ಲಿ ಆಗಸ್ಟ್ 18 ರಂದು ಬಿಡುಗಡೆ ಮಾಡಿದೆ.

ಆಗಸ್ಟ್‌ನಲ್ಲಿ ಮಾರುತಿ ಹ್ಯಾಚ್‌ಬ್ಯಾಕ್‌ಗಳ ಅಬ್ಬರ: 1.65 ಲಕ್ಷ ಯೂನಿಟ್‌ ದಾಟಿದ ಒಟ್ಟರೆ ಮಾರಾಟ

ಹೊಸ K10 ಸರಣಿಯ ಪೆಟ್ರೋಲ್ ಎಂಜಿನ್ ಹೊಂದಿರುವ ಆಲ್ಟೊ K10 ಅನ್ನು ಮಾರುಕಟ್ಟೆಯಲ್ಲಿ ರೂ. 3.99 ಲಕ್ಷದ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ (ಎಕ್ಸ್ ಶೋ ರೂಂ). ಹೊಸ ಆಲ್ಟೊದ ಟಾಪ್ ರೂಪಾಂತರದ ಬೆಲೆ 5.83 ಲಕ್ಷ ರೂ. ಇದೆ.

ಆಗಸ್ಟ್‌ನಲ್ಲಿ ಮಾರುತಿ ಹ್ಯಾಚ್‌ಬ್ಯಾಕ್‌ಗಳ ಅಬ್ಬರ: 1.65 ಲಕ್ಷ ಯೂನಿಟ್‌ ದಾಟಿದ ಒಟ್ಟರೆ ಮಾರಾಟ

ಹೊಸ ಮಾರುತಿ ಆಲ್ಟೊ ಕೆ10 ಅನ್ನು ಸಂಪೂರ್ಣವಾಗಿ ಸುಧಾರಿಸಿ ಹೊಸ ವಿನ್ಯಾಸದಲ್ಲಿ ಪರಿಚಯಿಸಲಾಗಿದೆ. ಇದು ಈಗ ಆಲ್ಟೊ 800 ಗಿಂತ ದೊಡ್ಡದಾಗಿ ಮತ್ತು ಹೆಚ್ಚು ಸೊಗಸಾದವಾಗಿ ಕಾಣುತ್ತದೆ. ಆಲ್ಟೊ ಕೆ10 ವಿನ್ಯಾಸವು ಹೊಸ ಸೆಲೆರಿಯೊದಿಂದ ಸ್ಫೂರ್ತಿ ಪಡೆದಿದೆ.

ಆಗಸ್ಟ್‌ನಲ್ಲಿ ಮಾರುತಿ ಹ್ಯಾಚ್‌ಬ್ಯಾಕ್‌ಗಳ ಅಬ್ಬರ: 1.65 ಲಕ್ಷ ಯೂನಿಟ್‌ ದಾಟಿದ ಒಟ್ಟರೆ ಮಾರಾಟ

ಅದರ ಕೆಲವು ವಿನ್ಯಾಸ ಅಂಶಗಳು ಸೆಲೆರಿಯೊವನ್ನು ಹೋಲುತ್ತವೆ. ಆಲ್ಟೊ ಕೆ10 ಮೊದಲಿಗಿಂತ ದೊಡ್ಡ ಬೀಹೈವ್ ಗ್ರಿಲ್ ಅನ್ನು ಪಡೆಯುತ್ತದೆ. ಇದಲ್ಲದೇ, ಹೊಸದಾಗಿ ವಿನ್ಯಾಸಗೊಳಿಸಲಾದ ಓವಲ್ ಹೆಡ್‌ಲೈಟ್ ಮತ್ತು ಟೈಲ್ ಲೈಟ್ ಅನ್ನು ನೀಡಲಾಗಿದೆ.

ಆಗಸ್ಟ್‌ನಲ್ಲಿ ಮಾರುತಿ ಹ್ಯಾಚ್‌ಬ್ಯಾಕ್‌ಗಳ ಅಬ್ಬರ: 1.65 ಲಕ್ಷ ಯೂನಿಟ್‌ ದಾಟಿದ ಒಟ್ಟರೆ ಮಾರಾಟ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಪ್ರಯಾಣಿಕ ವಾಹನಗಳನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೈಗೆಟುಕುವ ಬೆಲೆಯಲ್ಲಿ ನೀಡುತ್ತಿದೆ. ಹಾಗಾಗಿಯೇ ದೇಶದಲ್ಲಿ ಮಾರುತಿ ವಾಹನಗಳಿಗೆ ಬೇಡಿಕೆ ಹಚ್ಚಾಗಿದ್ದು, ಪ್ರತಿ ತಿಂಗಳು ದಾಖಲೆಯ ಮಾರಾಟವನ್ನು ದಾಖಲಿಸುತ್ತದೆ. ಮಾರುತಿಯಿಂದ ಮುಂಬರುವ ದಿನಗಳಲ್ಲಿ ಇನ್ನೂ ಹಲವು ಹೊಸ ಮಾದರಿಗಳು ಬಿಡುಗಡೆಯಾಗಬೇಕಿದ್ದು, ಮಾರುಕಟ್ಟೆಯ ಮೇಲೆ ಯಾವ ರೀತಿ ಹಿಡಿತ ಸಾಧಿಸಲಿದೆ ಕಾದುನೋಡಬೇಕಿದೆ.

Article Published On: Thursday, September 1, 2022, 18:50 [IST]
English summary
Maruti suzuki Total sales cross 1 65 lakh units
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+