ಪ್ರತಿ ಚಾರ್ಜ್‌ಗೆ 500ಕಿ.ಮೀ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ-ಟೊಯೊಟಾ ನಿರ್ಮಾಣದ ಹೊಸ ಇವಿ ಕಾರು

ಮಾರುತಿ ಸುಜುಕಿ ಮತ್ತು ಟೊಯೊಟಾ ಪಾಲುದಾರಿಕೆಯಲ್ಲಿ ಮೊದಲ ಬಾರಿಗೆ ಮಧ್ಯಮ ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯು ಅಭಿವೃದ್ದಿಗೊಳ್ಳುತ್ತಿದ್ದು, ಹೊಸ ಕಾರು ಮಧ್ಯಮ ಗಾತ್ರದ ಇವಿ ಕಾರು ಮಾದರಿಗಳಲ್ಲಿಯೇ ವಿಶೇಷ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್‌ನೊಂದಿಗೆ ಬಿಡುಗಡೆಯಾಗಲಿದೆ.

ಪ್ರತಿ ಚಾರ್ಜ್‌ಗೆ 500ಕಿ.ಮೀ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ-ಟೊಯೊಟಾ ನಿರ್ಮಾಣದ ಇವಿ ಕಾರು

ಪಾಲುದಾರಿಕೆ ಯೋಜನೆ ಅಡಿ ನಿರ್ಮಾಣಗೊಳ್ಳುತ್ತಿರುವ ಮಾರುತಿ ಸುಜುಕಿ-ಟೊಯೊಟಾ ನಿರ್ಮಾಣದ ಹೊಸ ಕಾರು ಪ್ರತಿ ಚಾರ್ಜ್‌ಗೆ ಕನಿಷ್ಠ 500 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಹೊಸ ಕಾರು 2025ರ ವೇಳೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ. ಹೊಸ ಎಸ್‌ಯುವಿ (SUV) ಗಾಗಿ ಎರಡೂ ಕಂಪನಿಗಳು ವಿಭಿನ್ನ ಶೈಲಿಯಲ್ಲಿ ವಿನ್ಯಾಸಗೊಳಿಸಲು ಹಾಗೂ ಭವಿಷ್ಯದ ಟೆಕ್ನಾಲಜಿಗೆ ಸರಿಹೊಂದುವಂತೆ ನಿರ್ಮಾಣಮಾಡಲು ಚಿಂತನೆ ನಡೆಸಿವೆ.

ಪ್ರತಿ ಚಾರ್ಜ್‌ಗೆ 500ಕಿ.ಮೀ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ-ಟೊಯೊಟಾ ನಿರ್ಮಾಣದ ಇವಿ ಕಾರು

ವರದಿಯ ಪ್ರಕಾರ ಪ್ರಸ್ತುತವಿರುವ ಕಾರು ವಿನ್ಯಾಸಕ್ಕೆ ಹೊಸ ಕಾರಿನ ವಿನ್ಯಾಸವು ಸಂಪೂರ್ಣ ಭಿನ್ನವಾಗಿರಲಿದೆ. ಸದ್ಯ ಈ ಮಾಡಲ್‌ಗೆ ವೈವೈ8 (YY8) ಎಂದು ಕೋಡ್‌ನೇಮ್ ಇಡಲಾಗಿದೆ. ಟೊಯೊಟಾದ ಎಸ್‌ಯುವಿ ಆವೃತ್ತಿಯು ಬಿಜೆಡ್4ಎಕ್ಸ್ ಇವಿ (BZ4X EV) ಮಾದರಿಯಂತೆ ವಿನ್ಯಾಸಗೊಳಿಸುವ ನಿರೀಕ್ಷೆ ಕೂಡಾ ಇದೆ.

ಪ್ರತಿ ಚಾರ್ಜ್‌ಗೆ 500ಕಿ.ಮೀ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ-ಟೊಯೊಟಾ ನಿರ್ಮಾಣದ ಇವಿ ಕಾರು

ಹೊಸ ಎಲೆಕ್ಟ್ರಿಕ್ ಕಾರನ್ನು ಗುಜರಾತ್‌ನಲ್ಲಿರುವ ಸುಜುಕಿಯ ಕಾರ್ಯಗಾರದಲ್ಲಿ ತಯಾರಾಗುತ್ತಿದ್ದು, ಹೊಸ ಇವಿ ಅನ್ನು ಭಾರತದಲ್ಲಿ ಮಾರಾಟ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೂ ರಫ್ತು ಮಾಡುವ ಉದ್ದೇಶವಿದೆ.

ಪ್ರತಿ ಚಾರ್ಜ್‌ಗೆ 500ಕಿ.ಮೀ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ-ಟೊಯೊಟಾ ನಿರ್ಮಾಣದ ಇವಿ ಕಾರು

ಹೊಸ ಎಸ್‌ಯುವಿ ಸ್ಕೇಟ್ ‌ಬೋರ್ಡ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಗಾತ್ರದಲ್ಲಿ ಪ್ರಸ್ತುತದ ಹ್ಯುಂಡೈ ಕ್ರೆಟಾದೊಂದಿಗೆ ಸ್ಪರ್ಧಿಸುವಷ್ಟು ದೊಡ್ಡದಾಗಿದೆ. ವೈವೈ8 ಎಸ್‌ಯುವಿ 4,275 ಮಿ.ಮೀ ಉದ್ದ, 1,880 ಮಿ.ಮೀ ಅಗಲ ಮತ್ತು 1,640 ಮಿ.ಮೀ ಉದ್ದವನ್ನು ಹೊಂದಿರಲಿದೆ.

ಪ್ರತಿ ಚಾರ್ಜ್‌ಗೆ 500ಕಿ.ಮೀ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ-ಟೊಯೊಟಾ ನಿರ್ಮಾಣದ ಇವಿ ಕಾರು

ಹೊಸ ಕಾರಿನ ವೀಲ್ ಬೇಸ್ 2,700 ಮೀ.ಮೀ ನಷ್ಟು ದೊಡ್ಡದಾಗಿರಲಿದೆ. ಹೊಸ ಎಸ್‌ಯುವಿ ತನ್ನ ಆಲ್-ವೀಲ್ ಡ್ರೈವ್ ಸಿಸ್ಟಂನೊಂದಿಗೆ 1,728 ಕೆ.ಜಿ ಇರಲಿದೆ. ಟೊಯೊಟಾ ರೂಪಾಂತರದ ವಿನ್ಯಾಸದಲ್ಲಿನ ಬದಲಾವಣೆಯ ಭಾಗವಾಗಿ ಜಪಾನೀಸ್ ಬ್ರಾಂಡ್‌ನ ಈವಿ ಗಾತ್ರದಲ್ಲಿ ಸ್ವಲ್ಪ ಬದಲಾಗಬಹುದಾಗಿದ್ದು, ಉಳಿದಂತೆ ವೀಲ್ ಬೇಸ್‌ ಹಾಗೇ ಉಳಿಯುವ ನಿರೀಕ್ಷೆಯಿದೆ.

ಪ್ರತಿ ಚಾರ್ಜ್‌ಗೆ 500ಕಿ.ಮೀ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ-ಟೊಯೊಟಾ ನಿರ್ಮಾಣದ ಇವಿ ಕಾರು

ಹೊಸ ಎಲೆಕ್ಟ್ರಿಕ್ ಎಸ್‌ಯುವಿಯ ಆರ್ಕಿಟೆಕ್ಚರ್ 27ಪಿಎಲ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, 27PL ಟೊಯೊಟಾದ ಜಾಗತಿಕ 40PL ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರಲಿದೆ. ಇದನ್ನು ಸಣ್ಣ ಎಲೆಕ್ಟ್ರಿಕ್ ವಾಹನಗಳಿಗಾಗಿ ಉದ್ದೇಶಿಸಲಾಗಿದ್ದು, ಸಂಪೂರ್ಣ ಎಲೆಕ್ಟ್ರಿಕ್ ವಿನ್ಯಾಸೊಂದಿಗೆ ರೂಪುಗೊಳ್ಳಲಿರುವ ಇಂಟಿರಿಯರ್, ಪ್ರಸ್ತುತ ಇರುವ ಮಾರುತಿ ಮತ್ತು ಟೊಯೊಟಾ ಕಾರುಗಳಿಂತಲೂ ಭಿನ್ನವಾಗಿರಲಿದೆ.

ಪ್ರತಿ ಚಾರ್ಜ್‌ಗೆ 500ಕಿ.ಮೀ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ-ಟೊಯೊಟಾ ನಿರ್ಮಾಣದ ಇವಿ ಕಾರು

ವೈವೈ8 ಅನ್ನು ಟೂ-ವೀಲ್ ಡ್ರೈವ್ ಮತ್ತು ಆಲ್-ವೀಲ್ ಡ್ರೈವ್ ಮಾದರಿಯಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಲಾಗಿದ್ದು, ಸಾಮಾನ್ಯ ಟೂ-ವೀಲ್ ಡ್ರೈವ್ ಆವೃತ್ತಿಯು 48kWh ಬ್ಯಾಟರಿ ಪ್ಯಾಕ್‌ಗೆ ಜೋಡಿಸಲಾದ ಒಂದೇ ಎಲೆಕ್ಟ್ರಿಕ್ ಮೋಟರ್ ‌ನಿಂದ ಪವರ್‌ ಪಡೆಯುತ್ತದೆ.

ಪ್ರತಿ ಚಾರ್ಜ್‌ಗೆ 500ಕಿ.ಮೀ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ-ಟೊಯೊಟಾ ನಿರ್ಮಾಣದ ಇವಿ ಕಾರು

ಈ ಎಲೆಕ್ಟ್ರಿಕ್ ಮೋಟಾರ್ 137 ಬಿಎಚ್‌ಪಿ ಪ್ರೇರಣೆ ಹೊಂದಿರಲಿದ್ದು , ಹೊಸ ಇದು ಬ್ಯಾಟರಿ ಪ್ಯಾಕ್‌ನೊಂದಿಗೆ ಸಂಯೋಜನೆಗೊಂಡಾಗ ಟೆಸ್ಟಿಂಗ್ ಕಂಡಿಷನ್ ಗಳಲ್ಲಿ 400 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಪ್ರತಿ ಚಾರ್ಜ್‌ಗೆ 500ಕಿ.ಮೀ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ-ಟೊಯೊಟಾ ನಿರ್ಮಾಣದ ಇವಿ ಕಾರು

ಡ್ಯುಯಲ್-ಮೋಟಾರ್ ಮತ್ತು ಆಲ್-ವೀಲ್ ಡ್ರೈವ್ ಆವೃತ್ತಿಯು 170ಬಿಎಚ್‌ಪಿ‌ ವರೆಗೆ ಬೇಕಾದ ಶಕ್ತಿಯನ್ನು ಹೆಚ್ಚಿಸಲಿದ್ದು, ಈ ಮೂಲಕ 59 kWh ನಿಂದ ಬೇಕಾದ ಪವರ್‌ ಅನ್ನು ಪಡೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ದೊಡ್ಡ ಬ್ಯಾಟರಿ ಪ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿಯ ರೇಂಜ್ ಅನ್ನು 500 ಕಿ.ಮೀಗೆ ವಿಸ್ತರಿಸುತ್ತದೆ ಎಂದು ವರದಿ ತಿಳಿಸಿದೆ.

ಪ್ರತಿ ಚಾರ್ಜ್‌ಗೆ 500ಕಿ.ಮೀ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ-ಟೊಯೊಟಾ ನಿರ್ಮಾಣದ ಇವಿ ಕಾರು

ಭಾರತದಲ್ಲಿ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ಗಳನ್ನು ತಯಾರಿಸುವ ಸುಜುಕಿ, ಡೆನ್ಸೊ ಮತ್ತು ತೋಷಿಬಾದ ಜಂಟಿ ಎಲೆಕ್ಟ್ರಿಕ್ ಉದ್ಯಮವಾಗಿರುವ ಟಿಡಿಎಸ್‌ಜಿ ನಿಂದ ಎಲೆಕ್ಟ್ರಿಕ್ ಎಸ್‌ಯುವಿ ತಯಾರಿಗೆ ಬೇಕಾದ ಬ್ಯಾಟರಿಗಳನ್ನು ಪಡೆಯಲಿದ್ದು, ಇದರ ಬ್ಯಾಟರಿ ತಯಾರಿಗೆ ಬೇಕಾದ ಲಿಥಿಯಂ-ಐಯಾನ್ ಕೋಶಗಳನ್ನು ಚೀನೀ ಇವಿ ತಯಾರಕ ಬಿವೈಡಿ ನಿಂದ ಪಡೆಯಲಾಗುತ್ತದೆ.

ಪ್ರತಿ ಚಾರ್ಜ್‌ಗೆ 500ಕಿ.ಮೀ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ-ಟೊಯೊಟಾ ನಿರ್ಮಾಣದ ಇವಿ ಕಾರು

ಮಾರುತಿ ಸುಜುಕಿಯಿಂದ ಬಿಡುಗಡೆಯಾಗಲಿರುವ ಅತ್ಯಾಧುನಿಕ ಎಲೆಕ್ಟ್ರಿಕ್ ಎಸ್‌ಯುವಿ ನ ಬೆಲೆ ತುಸು ಹೆಚ್ಚಾಗಿರಲಿದ್ದು, ಸುಮಾರು ರೂ. 13 ಲಕ್ಷದಿಂದ ರೂ. 15 ಲಕ್ಷ ರೂ. ವರೆಗೆ ಬೆಲೆಯನ್ನು ನಿಗದಿ ಪಡಿಸಬಹುದೆಂದು ಎಂದು ಹೇಳಲಾಗುತ್ತದೆ. ಈ ಬೆಲೆಯು ಪ್ರಸ್ತುತ ಭಾರತದಲ್ಲಿ ಉತ್ತಮವಾಗಿ ಮಾರಾಟವಾಗುತ್ತಿರುವ ಟಾಟಾ ನೆಕ್ಸಾನ್ ಸೇರಿದಂತೆ ಪ್ರಮುಖ ಮಾದರಿಗಳಿಗೆ ಪೈಪೋಟಿಯಾಗಬಹುದಾಗಿದೆ.

ಪ್ರತಿ ಚಾರ್ಜ್‌ಗೆ 500ಕಿ.ಮೀ ಮೈಲೇಜ್ ನೀಡಲಿದೆ ಮಾರುತಿ ಸುಜುಕಿ-ಟೊಯೊಟಾ ನಿರ್ಮಾಣದ ಇವಿ ಕಾರು

ಮುಂದಿನ ದಿನಗಳಲ್ಲಿ ಭಾರತದಲ್ಲಿ ಮಾರುತಿ ಸುಜುಕಿ/ಟೊಯೊಟಾ ಟೈಅಪ್ ನಲ್ಲಿ ಬರಲಿರುವ ಎಲೆಕ್ಟ್ರಿಕ್ ಎಸ್‌ಯುವಿ ಒಂದು ಗೇಮ್ ಚೇಂಜರ್ ಆಗುವ ಭರವಸೆಯಿದ್ದು, ಎರಡು ಕಂಪನಿಗಳು ಉದ್ದೇಶಿತ ಬೆಲೆಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದರೆ ಇವಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಉಂಟಾಗಬಹದು ಎನ್ನಲಾಗಿದೆ.

More from DriveSpark

Article Published On: Wednesday, February 23, 2022, 21:40 [IST]
English summary
Maruti suzuki toyota electric suv set for 2025 debut
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+