Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ 2022ರ ಮಾರುತಿ ಬ್ರೆಝಾ
ಜನಪ್ರಿಯ ಮತ್ತು ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯಲ್ಲಿ 2016ರ ಆರಂಭದಿಂದಲೂ ವಿಟಾರಾ ಬ್ರೆಝಾವನ್ನು ಮಾರಾಟ ಮಾಡುತ್ತಿದೆ. ಈ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮರಾಟವಾಗುವ ಕಾಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಒಂದಾಗಿದೆ.

2016ರ ಆರಂಭದಲ್ಲಿ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗದಲ್ಲಿ ಪ್ರಬಲ್ಯವನ್ನು ಸಾಧಿಸುತಿದ್ದ ಫೋರ್ಡ್ ಇಕೋಸ್ಪೋರ್ಟ್ ಅನ್ನು ಸೋಲಿಸುವ ಮೂಲಕ ವಿಟಾರಾ ಬ್ರೆಝಾ ನಿಜವಾಗಿಯೂ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ದೇಶದ ಅತಿದೊಡ್ಡ ಕಾರು ತಯಾರಕರು ಹೊಸ ಬ್ರೆಝಾವನ್ನು ನವೀಕರಿಸಲಾಗುತ್ತಿದೆ. ಹೊಸ ಮಾರುತಿ ಸುಜುಕಿ ಬ್ರೆಝಾ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಆದರೆ ಇದರ ಅಧಿಕೃತ ಬಿಡುಗಡೆಯ ದಿನಾಂಕ ಮತ್ತು ವಿವರಗಳನ್ನು ಇನ್ನೂ ಬಹಿರಂಗಪಡಿಸಬೇಕಾಗಿದೆ.

ಹೊಸ ಮಾರುತಿ ಬ್ರೆಝಾ ಎಸ್‍ಯುವಿ ಕಾಸ್ಮೆಟಿಕ್ ನಲ್ಲಿ ಬದಲಾವಣೆಗಳನ್ನು ಪಡೆಯಲಿದೆ, ಅಲ್ಲದೇ 2022ರ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಹೊಸ ಫೀಚರ್ಸ್ ಗಳೊಂದಿಗೆ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೆವೆ ಈ ಹೊಸ ಎಸ್‍ಯುವಿ ಮಾರುತಿ ಬ್ರೆಝಾ ಎಂಬ ಹೆಸರಿನಲ್ಲಿ ಬಿಡುಗಡೆಯಾಗಲಿದೆ.

ಇನ್ನು ಈ ಹೊಸ ಸ್ಪೈ ಚಿತ್ರಗಳ ಪ್ರಕಾರ, ಮಾರುತಿ ಸುಜುಕಿ ಬ್ರೆಝಾ ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ಹೊಂದಿದೆ. ಇದು ಟಾಪ್-ಎಂಡ್ ರೂಪಾಂತರಕ್ಕೆ ಸೀಮಿತವಾಗಿರುತ್ತದೆ. ವಿಟಾರಾ ಬ್ರೆಝಾ ಪ್ರತಿಸ್ಪರ್ಧಿಗಳಾದ ಟಾಟಾ ನೆಕ್ಸಾನ್, ಮಹೀಂದ್ರಾ XUV300, ಕಿಯಾ ಸೊನೆಟ್ ಮತ್ತು ಹ್ಯುಂಡೈ ವೆನ್ಯೂ ಕಾರುಗಳಲ್ಲಿ ಈ ಫೀಚರ್ ಅನ್ನು ಹೊಂದಿದೆ.

ಇದು ಮಾರುತಿಗೆ ಮೊದಲನೆಯದು. ಅದೇ 2022ರ ಬ್ರೆಝಾ ಪ್ಯಾಡಲ್ ಶಿಫ್ಟರ್‌ಗಳನ್ನು ಸಹ ಅಳವಡಿಸಲಾಗಿದೆ. ಸದ್ಯಕ್ಕೆ, ಅವುಗಳು ಸಬ್-4 ಮೀಟರ್ ಎಸ್‍ಯುವಿ ವಿಭಾಗದಲ್ಲಿ ಕಿಯಾ ಸೋನೆಟ್‌ನಲ್ಲಿ ಮಾತ್ರ ಕಂಡುಬರುತ್ತವೆ. ಇದು ಬಹಳ ಮುಖ್ಯವಾದ ಫೀಚರ್ ವಲ್ಲದಿದ್ದರೂ, ಅದರ ಸೇರ್ಪಡೆಯು ಮಾರುತಿ ಕಾಂಪ್ಯಾಕ್ಟ್ ಯುಟಿಲಿಟಿ ವಾಹನಕ್ಕೆ ಸ್ಪೋರ್ಟಿ ಸ್ಪರ್ಶವನ್ನು ನೀಡುತ್ತದೆ.

ಹೊಸ ಮಾರುತಿ ಬ್ರೆಝಾವನ್ನು ಫ್ರೀ-ಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ನೋಡಬಹುದು ಮತ್ತು ಇದು ಪ್ರಸ್ತುತಕ್ಕಿಂತ ದೊಡ್ಡದಾಗಿದೆ. 7-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಇನ್ಫೋಟೈನ್‌ಮೆಂಟ್ ಸೆಟಪ್‌ನಲ್ಲಿ ಹೊಸ ಸಿಸ್ಟಮ್ ಉತ್ತಮ ಅಪ್‌ಗ್ರೇಡ್ ಹೊಂದಿರುತ್ತದೆ.

ಹೊಸ ಬ್ರೆಝಾ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಗಾಗಿ ವೈರ್‌ಲೆಸ್ ಕನೆಕ್ಟಿವಿಟಿ ಪಡೆಯುವ ನಿರೀಕ್ಷೆಯಿದೆ, ಇದು ಪ್ರಸ್ತುತ ಹೆಚ್ಚು ಟ್ರೆಂಡಿಂಗ್ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಅಪ್‌ಡೇಟ್ ಮಾಡಲಾದ ಮಾಡೆಲ್‌ನ ಹೆಚ್ಚಿನ ವಿಶೇಷತೆಯ ರೂಪಾಂತರಗಳಿಗೆ ಇದನ್ನು ಇನ್ನೂ ನಿರ್ಬಂಧಿಸಬಹುದು ಎಂದು ಅದು ಹೇಳಿದೆ. ಈ 2022ರ ವಿಟಾರಾ ಬ್ರೆಝಾ ಹೆಚ್ಚು ಸುಧಾರಿತ ಕನೆಕ್ಟಿವಿಟಿ ಕಾರು ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸುವ ನಿರೀಕ್ಷೆಯಿದೆ.

ಇದರೊಂದಿಗೆ ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಕ್ಲೈಮೇಟ್ ಕಂಟ್ರೋಲ್ ಮತ್ತು ಹೆಡ್‌ಲೈಟ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳು ಪಡೆಯುವ ಸಾಧ್ಯತೆಗಳಿದೆ. ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆಯಲಿದೆ. ಇದು ಡಿಜಿಟಲ್ ಯುನಿಟ್ ನಂತೆ ಕಾಣುತ್ತಿಲ್ಲ. ಬದಲಿಗೆ ಎಸ್-ಕ್ರಾಸ್ ಮತ್ತು ಸಿಯಾಜ್‌ನಂತೆಯೇ ಇರುತ್ತದೆ. ಇದು ವ್ಯಾಪಕವಾದ ಮಾಹಿತಿಯನ್ನು ತೋರಿಸುವ ದೊಡ್ಡದಾದ ಬಣ್ಣದ MID ಸಿಸ್ಟಂ ಅನ್ನು ಪಡೆಯುತ್ತದೆ.

ಇನ್ನು ಈ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಮಾರುತಿ ಸುಜುಕಿ ಕಂಪನಿಯು ಹೆಚ್ಚಿನ ಸುರಕ್ಷತೆಗಾಗಿ, ಹೆಚ್ಚಿನ ಏರ್‌ಬ್ಯಾಗ್‌ಗಳನ್ನು (ಪ್ರಸ್ತುತ ಮಾದರಿಯು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಮಾತ್ರ ಪಡೆಯುವುದರಿಂದ) ನೀಡಬಹುದು. 2022ರ ಬ್ರೆಝಾವನ್ನು ಸುಜುಕಿ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸುವ ಸಾಧ್ಯತೆಯಿದೆ, ಇದು ನಾಲ್ಕು ಸ್ಟಾರ್‌ಗಳ ಪ್ರಸ್ತುತ ಗ್ಲೋಬಲ್ ಎನ್‌ಸಿಎಪಿ ಸುರಕ್ಷತಾ ರೇಟಿಂಗ್ ಅನ್ನು ಇನ್ನಷ್ಟು ಸುಧಾರಿಸುತ್ತದೆ.

ಇನ್ನು ಕಳೆದ ವರ್ಷದ ಜನವರಿ ತಿಂಗಳಿನಲ್ಲಿ ವಿಟಾರಾ ಬ್ರೆಝಾ ಮಾದರಿಯು ಕೇವಲ 1.3-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಲಭ್ಯವಿತ್ತು. ಇನ್ನು 1.5-ಲೀಟರ್ ಪೆಟ್ರೋಲ್ ಎಂಜಿನ್ ಪಡೆಯುವ ಫೇಸ್‌ಲಿಫ್ಟ್ ಆವೃತ್ತಿಯು ಫೆಬ್ರವರಿ 2020ರಲ್ಲಿ ಪಚಯಿಸಿದ್ದರು. ಆದರೆ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವಾಗ 1.3-ಲೀಟರ್ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಿದ್ದರು. ಡೀಸೆಲ್ ವಾಹನವು ಸ್ಥಗಿತಗೊಂಡ ನಂತರವೂ ಖರೀದಿದಾರರಲ್ಲಿ ಭಾರಿ ಜನಪ್ರಿಯತೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದೇ ಎಂಜಿನ್ ಅನ್ನು ಮುಂದುವರೆಸುವ ಸಾಧ್ಯತೆಗಳಿದೆ, ಇ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗಿದೆ. ಈ ನಡುವೆಯು ತಿಂಗಳಿಗೆ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯ ಸರಾಸರಿ 15,000 ಯುನಿಟ್‌ಗಳು ಮಾರಾಟವಾಗುತ್ತಿದೆ. ಈ ಮಾರುತಿ ವಿಟಾರಾ ಬ್ರೆಝಾ 2020ರ ಆರಂಭದಲ್ಲಿ ಐದು ಲಕ್ಷ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ ಮತ್ತು ಕಳೆದ ಎರಡು ವರ್ಷಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ನೋಂದಾಯಿಸಲಾಗಿದೆ.

ನ್ಯೂ ಜನರೇಷನ್ ಮಾರುತಿ ವಿಟಾರಾ ಬ್ರೆಝಾ ಕಾಂಪ್ಯಾಕ್ಟ್ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಕಾರುಗಳಿಗೆ ಪೈಪೋಟಿ ನೀಡುವುದು ಮುಂದುವರೆಸಲಿದೆ.