ಮಾರುತಿ ವಿಟಾರಾ ಬ್ರೆಝಾದಲ್ಲಿ ಹೈಬ್ರಿಡ್ ಪವರ್‌ಟ್ರೈನ್ ವ್ಯವಸ್ಥೆ ಕಲ್ಪಿಸಲು ಕಂಪನಿಯ ಸಿದ್ದತೆ

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಪೋರ್ಟ್ ಫೋಲಿಯೊದಲ್ಲಿ ಕೆಲವು ಕಾರುಗಳನ್ನು ಸೌಮ್ಯ ಹೈಬ್ರಿಡ್ ವ್ಯವಸ್ಥೆಗಳೊಂದಿಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಇದೀಗ ಮಾರುತಿ ಸುಜುಕಿ ತನ್ನ ಹೊಸ ಕಾರು ಮಾದರಿಗಳಲ್ಲಿ ದೃಢವಾದ ಹೈಬ್ರಿಡ್ ಪವರ್‌ಟ್ರೈನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.

ಮಾರುತಿ ವಿಟಾರಾ ಬ್ರೆಝಾದಲ್ಲಿ ಹೈಬ್ರಿಡ್ ಪವರ್‌ಟ್ರೈನ್ ವ್ಯವಸ್ಥೆ ಕಲ್ಪಿಸಲು ಕಂಪನಿಯ ಸಿದ್ದತೆ

ಈ ಹೈಬ್ರಿಡ್ ಪವರ್ ಟ್ರೈನ್ ಅನ್ನು ಯುಕೆ-ಸ್ಪೆಕ್ ಸುಜುಕಿ ವಿಟಾರಾದಲ್ಲಿ ಬಳಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಮಾರುತಿ ಸುಜುಕಿಯ ಮುಂಬರುವ ಪ್ರತಿಸ್ಪರ್ಧಿ ಹುಂಡೈ ಕ್ರೆಟಾವನ್ನು ಭಾರತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಹಾಗಾಗಗಿ ಮಾರುತಿ ಸುಜುಕಿಯ ಪ್ರಸ್ತುತ ಸೌಮ್ಯ-ಹೈಬ್ರಿಡ್ ವ್ಯವಸ್ಥೆಯಾದ ಹೊಸ ಹೈಬ್ರಿಡ್ ಪವರ್ ಟ್ರೈನ್‌ನ ಅಭಿವೃದ್ಧಿ ಮಾಡಲಿಗಿದೆ ಎಂದು ಹೇಳಲಾಗುತ್ತಿದೆ.

ಮಾರುತಿ ವಿಟಾರಾ ಬ್ರೆಝಾದಲ್ಲಿ ಹೈಬ್ರಿಡ್ ಪವರ್‌ಟ್ರೈನ್ ವ್ಯವಸ್ಥೆ ಕಲ್ಪಿಸಲು ಕಂಪನಿಯ ಸಿದ್ದತೆ

ಕಂಪನಿಯು ಪ್ರಸ್ತುತ ಪವರ್ ಟ್ರೈನ್ ಅನ್ನು 1.5 ಲೀಟರ್ ನ್ಯಾಚುರಲ್-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಸಂಯೋಜಿಸಿ ಬಳಸಲಾಗಿದೆ. ಈ ಎಂಜಿನ್ ಅನ್ನು ಕೆ15ಸಿ ಎಂಜಿನ್ ಎಂದೂ ಕರೆಯಲಾಗುತ್ತದೆ, ಇದು 140ವಿ ಲಿಥಿಯಂ-ಅಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಎಲೆಕ್ಟ್ರಿಕ್ ಮೋಟರ್ ಅನ್ನು ಸಹ ನಿರ್ವಹಿಸುತ್ತದೆ. ಪ್ರಕಾಶ ಮತ್ತು ಹವಾಮಾನ ನಿಯಂತ್ರಣ ವ್ಯವಸ್ಥೆಗಳಂತಹ ಘಟಕಗಳಿಗೆ ಪವರ್ ನೀಡಲು 12ವಿ ಲಿಥಿಯಂ-ಅಯಾನ್ ಬ್ಯಾಟರಿ ಮತ್ತು 12ವಿ ಲೆಡ್-ಆಸಿಡ್ ಬ್ಯಾಟರಿಯನ್ನು ಬಳಸಲಾಗಿದೆ.

ಮಾರುತಿ ವಿಟಾರಾ ಬ್ರೆಝಾದಲ್ಲಿ ಹೈಬ್ರಿಡ್ ಪವರ್‌ಟ್ರೈನ್ ವ್ಯವಸ್ಥೆ ಕಲ್ಪಿಸಲು ಕಂಪನಿಯ ಸಿದ್ದತೆ

ಭಾರತೀಯ ಮಾರುಕಟ್ಟೆಯಲ್ಲಿ, ಮಾರುತಿ ಸುಜುಕಿ ಎಸ್-ಕ್ರಾಸ್, ಸಿಯಾಜ್, ಎಕ್ಸ್‌ಎಲ್ 6 ಮತ್ತು ಮಾರುತಿ ಎರ್ಟಿಗಾ 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತವೆ, ಅದರೊಂದಿಗೆ ಸೌಮ್ಯ-ಹೈಬ್ರಿಡ್ ತಂತ್ರಜ್ಞಾನವನ್ನು ನೀಡಲಾಗಿದೆ. ಹೊಸ ಎಂಜಿನ್ 115 ಬಿಎಚ್‌ಪಿ ಮತ್ತು 138 ಎನ್‌ಎಂ ಟಾರ್ಕ್ ಅನ್ನು ನೀಡುತ್ತದೆ.

ಮಾರುತಿ ವಿಟಾರಾ ಬ್ರೆಝಾದಲ್ಲಿ ಹೈಬ್ರಿಡ್ ಪವರ್‌ಟ್ರೈನ್ ವ್ಯವಸ್ಥೆ ಕಲ್ಪಿಸಲು ಕಂಪನಿಯ ಸಿದ್ದತೆ

ಇನ್ನು ಈ ವ್ಯವಸ್ಥೆಯಲ್ಲಿ ಕಂಡುಬರುವ ಎಲೆಕ್ಟ್ರಿಕ್ ಮೋಟರ್‌ನ ಔಟ್‌ಪುಟ್ 33 ಬಿಎಚ್‌ಪಿ ಮತ್ತು 60 ಎನ್‌ಎಂ ಟಾರ್ಕ್ ಅನ್ನು ಒದಗಿಸುತ್ತದೆ. ಮಾಹಿತಿಯ ಪ್ರಕಾರ, ಈ ಹೈಬ್ರಿಡ್ ವ್ಯವಸ್ಥೆಯನ್ನು ಇಲ್ಲಿಯವರೆಗೆ ಯುಕೆ-ಸ್ಪೆಕ್ ಸುಜುಕಿ ವಿಟಾರಾದಲ್ಲಿ ಮಾತ್ರ ನೀಡಲಾಗಿದೆ, ಇದು ಕೇವಲ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌‌ಬಾಕ್ಸ್‌ನೊಂದಿಗೆ ಬರುತ್ತದೆ.

ಮಾರುತಿ ವಿಟಾರಾ ಬ್ರೆಝಾದಲ್ಲಿ ಹೈಬ್ರಿಡ್ ಪವರ್‌ಟ್ರೈನ್ ವ್ಯವಸ್ಥೆ ಕಲ್ಪಿಸಲು ಕಂಪನಿಯ ಸಿದ್ದತೆ

ಮಾರುತಿ ಸುಜುಕಿಯ ಈ ಹೈಬ್ರಿಡ್ ಪವರ್‌ಟ್ರೈನ್‌ನ ಎಲೆಕ್ಟ್ರಿಕ್ ಅಂಶಗಳು ಎಂಜಿನ್‌ನ ಐಡಲ್ ಸ್ಟಾರ್ಟ್-ಸ್ಟಾಪ್ ಅನ್ನು ಸೇರಿಸುವ ಮತ್ತು ಹೆಚ್ಚುವರಿ ಟಾರ್ಕ್‌ನೊಂದಿಗೆ ವೇಗವರ್ಧನೆಗೆ ಸಹಾಯ ಮಾಡುವ ಸಾಮಾನ್ಯ ಕಾರ್ಯಕ್ಷಮತೆಯನ್ನು ಒದಗಿಸುತ್ತವೆ. ಯುಕೆ-ಸ್ಪೆಕ್ ವಿಟಾರಾ ಎಸ್‌ಯುವಿ ಫ್ರಂಟ್ ವೀಲ್ ಡ್ರೈವ್‌ನೊಂದಿಗೆ ಹೈಬ್ರಿಡ್ ಪವರ್‌ಟ್ರೈನ್‌ನಲ್ಲಿ 22.5 ಕಿ.ಮೀ ಮೈಲೇಜ್ ನೀಡುತ್ತದೆ.

ಮಾರುತಿ ವಿಟಾರಾ ಬ್ರೆಝಾದಲ್ಲಿ ಹೈಬ್ರಿಡ್ ಪವರ್‌ಟ್ರೈನ್ ವ್ಯವಸ್ಥೆ ಕಲ್ಪಿಸಲು ಕಂಪನಿಯ ಸಿದ್ದತೆ

ಮಾರುತಿ ತನ್ನ ಮುಂಬರುವ ಕಾಂಪ್ಯಾಕ್ಟ್‌ ಎಸ್‌ಯುವಿಯೊಂದಿಗೆ ಈ ಪವರ್‌ಟ್ರೈನ್ ಅನ್ನು ಪರಿಚಯಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಮಾರುತಿ ಸುಜುಕಿ ಈ ವರ್ಷ ಈ ಕಾರನ್ನು ಬಿಡುಗಡೆ ಮಾಡಬಹುದು, ಹೊಸ ಮಾರುತಿ ಸುಜುಕಿ ವಿಟಾರಾ ಬ್ರೆಜಾದ ಹೊಸ ಮಾದರಿಯನ್ನು ಈ ಹಿಂದೆ ಪರೀಕ್ಷಾ ಸಮಯದಲ್ಲಿ ನೋಡಲಾಗಿತ್ತು.

ಮಾರುತಿ ವಿಟಾರಾ ಬ್ರೆಝಾದಲ್ಲಿ ಹೈಬ್ರಿಡ್ ಪವರ್‌ಟ್ರೈನ್ ವ್ಯವಸ್ಥೆ ಕಲ್ಪಿಸಲು ಕಂಪನಿಯ ಸಿದ್ದತೆ

ಕಂಪನಿಯ ಎಸ್ ಯುವಿಯನ್ನು ಮಾರುತಿ ಸುಜುಕಿಯ ಪ್ರಸ್ತುತ ಎಸ್ ಯುವಿ ಮಾರುತಿ ಎಸ್-ಕ್ರಾಸ್ ಮೇಲೆ ಬಿಡುಗಡೆ ಮಾಡಲಾಗುವುದು ಮತ್ತು ಈ ಎಸ್ ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ವೋಕ್ಸ್ ವ್ಯಾಗನ್ ತೈಗುನ್ ಮತ್ತು ನಿಸ್ಸಾನ್ ಕಿಕ್ಸ್ ನಂತಹ ಕಾರುಗಳೊಂದಿಗೆ ಸ್ಪರ್ಧಿಸಲಿದೆ.

Article Published On: Monday, March 14, 2022, 19:59 [IST]
English summary
Maruti suzuki working on new hybrid system could use in vitara brezza
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+