ಎಕ್ಸ್‌ಎಲ್6 ಹೊಸ ಫೀಚರ್ಸ್ ಮಾಹಿತಿಯುಳ್ಳ ವಿಡಿಯೋ ಹಂಚಿಕೊಂಡ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು 2022ರ ಎಕ್ಸ್ಎಲ್6 ಪ್ರೀಮಿಯಂ ಎಂಪಿವಿ ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ಈಗಾಗಲೇ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರಿನ ಕುರಿತಾಗಿ ಕಂಪನಿಯು ಇದೀಗ ಫೀಚರ್ಸ್ ಮಾಹಿತಿಯುಳ್ಳ ವಿಡಿಯೋ ಹಂಚಿಕೊಂಡಿದೆ.

ಎಕ್ಸ್‌ಎಲ್6 ಹೊಸ ಫೀಚರ್ಸ್ ಮಾಹಿತಿಯುಳ್ಳ ವಿಡಿಯೋ ಹಂಚಿಕೊಂಡ ಮಾರುತಿ ಸುಜುಕಿ

ಎರ್ಟಿಗಾ ಕಾರಿನ ಪ್ರೀಮಿಯಂ ಆವೃತ್ತಿಯಾಗಿರುವ ಎಕ್ಸ್‌ಎಲ್ ಮಾದರಿಯು 2022ರ ಆವೃತ್ತಿಯೊಂದಿಗೆ ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ವಿಡಿಯೋದಲ್ಲಿ ಕಾರಿನಲ್ಲಿರುವ ಪ್ರೀಮಿಯಂ ಫೀಚರ್ಸ್ ಮಾಹಿತಿಗಳನ್ನು ಪ್ರದರ್ಶಿಸಿರುವುದು ಮತ್ತಷ್ಟು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಎಕ್ಸ್‌ಎಲ್6 ಹೊಸ ಫೀಚರ್ಸ್ ಮಾಹಿತಿಯುಳ್ಳ ವಿಡಿಯೋ ಹಂಚಿಕೊಂಡ ಮಾರುತಿ ಸುಜುಕಿ

2022ರ ಎಕ್ಸ್ಎಲ್6 ಮಾದರಿಯು ಅಲ್ಫಾ, ಜೆಟಾ, ಅಲ್ಫಾ ಪ್ಲಸ್ ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಕಾರು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ರೂ. 11.29 ಲಕ್ಷದಿಂದ ಆರಂಭಗೊಂಡ ಟಾಪ್ ಎಂಡ್ ಮಾದರಿಗೆ ರೂ. 14.55 ಲಕ್ಷ ಬೆಲೆ ಹೊಂದಿದೆ.

ಎಕ್ಸ್‌ಎಲ್6 ಹೊಸ ಫೀಚರ್ಸ್ ಮಾಹಿತಿಯುಳ್ಳ ವಿಡಿಯೋ ಹಂಚಿಕೊಂಡ ಮಾರುತಿ ಸುಜುಕಿ

ಹೊಸ ಕಾರು ಮಾದರಿಯು ಮಹತ್ವದ ಬದಲಾವಣೆಗಳೊಂದಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರಿನಲ್ಲಿ ಉನ್ನತೀಕರಿಸಿದ ಕ್ರೋಮ್ ಗ್ರಿಲ್ ಮತ್ತು ಟೈಲ್ ಗೇಟ್, 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಮತ್ತು ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳು ಪ್ರಮುಖ ಆಕರ್ಷಣೆಯಾಗಿವೆ.

ಎಕ್ಸ್‌ಎಲ್6 ಹೊಸ ಫೀಚರ್ಸ್ ಮಾಹಿತಿಯುಳ್ಳ ವಿಡಿಯೋ ಹಂಚಿಕೊಂಡ ಮಾರುತಿ ಸುಜುಕಿ

ಹೊಸ ಕಾರಿನಲ್ಲಿ ಹೊಸ ಎರ್ಟಿಗಾ ಮಾದರಿಯಲ್ಲಿ ನೀಡಲಾಗಿರುವ ನವೀಕೃತ ಪೆಟ್ರೋಲ್ ಎಂಜಿನ್ ಮಾದರಿಯನ್ನೇ ಇದರಲ್ಲೂ ಅಳವಡಿಸಲಾಗಿದ್ದು, ಈ ಹಿಂದಿನ 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಬದಲಾಗಿ ಸ್ಟಾರ್ಟ್/ಸ್ಟಾಪ್ ಬಟನ್ ಮತ್ತು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.5 ಲೀಟರ್ ಕೆ15ಸಿ ಡ್ಯುಯಲ್‌ಜೆಟ್ ಪೆಟ್ರೋಲ್ ಮಾದರಿಯನ್ನು ಅಳವಡಿಸಲಾಗಿದೆ.

ಎಕ್ಸ್‌ಎಲ್6 ಹೊಸ ಫೀಚರ್ಸ್ ಮಾಹಿತಿಯುಳ್ಳ ವಿಡಿಯೋ ಹಂಚಿಕೊಂಡ ಮಾರುತಿ ಸುಜುಕಿ

ಹೊಸ ಪೆಟ್ರೋಲ್ ಎಂಜಿನ್ ಮಾದರಿಯು ಹಳೆಯ ಮಾದರಿಗಿಂತಲೂ ಹೆಚ್ಚು ಇಂಧನ ದಕ್ಷತೆ ಹೊಂದಿದ್ದು, ಹೊಸ ಎಂಜಿನ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 103 ಬಿಎಚ್‌ಪಿ ಮತ್ತು 136.8 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಎಕ್ಸ್‌ಎಲ್6 ಹೊಸ ಫೀಚರ್ಸ್ ಮಾಹಿತಿಯುಳ್ಳ ವಿಡಿಯೋ ಹಂಚಿಕೊಂಡ ಮಾರುತಿ ಸುಜುಕಿ

ಹೊಸ ಎಂಜಿನ್ ಆಯ್ಕೆಯೊಂದಿಗೆ ಎಕ್ಸ್ಎಲ್6 ಮಾದರಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ ಮ್ಯಾನುವಲ್ ಮಾದರಿಯು 20.97 ಕಿ.ಮೀ ಮತ್ತು ಆಟೋಮ್ಯಾಟಿಕ್ ಮಾದರಿಯು 20.27 ಕಿ.ಮೀ ಮೈಲೇಜ್ ನೀಡಲಿದ್ದು, ಆಟೋಮ್ಯಾಟಿಕ್ ಮಾದರಿಗಳಲ್ಲಿ ಪ್ಯಾಡಲ್ ಶಿಫ್ಟರ್ ಬಳಕೆ ಮಾಡಲಾಗಿದೆ.

ಹಾಗೆಯೇ ಹೊಸ ಕಾರಿನಲ್ಲಿ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್, 7 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸುಜುಕಿ ಕಾರ್ ಕೆನೆಕ್ಟ್, ಟೆಲಿಸ್ಕೋಫಿಕ್ ಅಡ್ಜೆಸ್ಮೆಂಟ್ ಹೊಂದಿರುವ ಸ್ಟೀರಿಂಗ್ ವ್ಹೀಲ್, ಆ್ಯಂಬಿಯೆಂಟ್ ಲೈಟಿಂಗ್ಸ್, ಹೊಸದಾಗಿ ಫ್ರಂಟ್ ಡೋರ್ ಲ್ಯಾಂಪ್ಸ್, ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟ್, ಆಟೋಮ್ಯಾಟಿಕ್ ಎಸಿ ಮತ್ತು ಮುಂಭಾಗದಲ್ಲಿ ವೆಂಟಿಲೆಟೆಡ್ ಸೀಟ್ ಹೊಂದಿದೆ.

ಎಕ್ಸ್‌ಎಲ್6 ಹೊಸ ಫೀಚರ್ಸ್ ಮಾಹಿತಿಯುಳ್ಳ ವಿಡಿಯೋ ಹಂಚಿಕೊಂಡ ಮಾರುತಿ ಸುಜುಕಿ

ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ 4 ಏರ್‌ಬ್ಯಾಗ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಇಎಸ್‌ಪಿ ಮತ್ತು ಹಿಲ್ ಹೋಲ್ಡ್ ಅಸಿಸ್ಟ್, 360 ಡಿಗ್ರಿ ವ್ಯೂ ಕ್ಯಾಮೆರಾ ಸೇರಿದಂತೆ ಪ್ರಮುಖ ಸುರಕ್ಷಾ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

ಎಕ್ಸ್‌ಎಲ್6 ಹೊಸ ಫೀಚರ್ಸ್ ಮಾಹಿತಿಯುಳ್ಳ ವಿಡಿಯೋ ಹಂಚಿಕೊಂಡ ಮಾರುತಿ ಸುಜುಕಿ

ಹೊಸ ಕಾರಿನಲ್ಲಿ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಹೊಸ ಕಾರಿನಲ್ಲಿ ಈ ಬಾರಿ ಸಿಲ್ವರ್, ಬ್ರೌನ್ ಮತ್ತು ರೆಡ್ ಬಣ್ಣಗಳಿಗೆ ಬ್ಲ್ಯಾಕ್ ರೂಫ್ ಡ್ಯುಯಲ್ ಟೋನ್ ಆಯ್ಕೆ ನೀಡಲಾಗಿದ್ದು, ಹೊಸ ಕಾರು ನಿಕಟ ಪ್ರತಿಸ್ಪರ್ಧಿಯಾದ ಕಿಯಾ ಕಾರೆನ್ಸ್ ಮಾದರಿಗೆ ಪೈಪೋಟಿಯಾಗಿ ಹೊಸ ಫೀಚರ್ಸ್ ಪಡೆದುಕೊಂಡಿದೆ.

ಎಕ್ಸ್‌ಎಲ್6 ಹೊಸ ಫೀಚರ್ಸ್ ಮಾಹಿತಿಯುಳ್ಳ ವಿಡಿಯೋ ಹಂಚಿಕೊಂಡ ಮಾರುತಿ ಸುಜುಕಿ

ಇದರ ಜೊತೆಗೆ ಕಂಪನಿಯು ಹೊಸ ಕಾರಿನ ಮಾಲೀಕತ್ವಕ್ಕಾಗಿ ಕಂಪನಿಯು ಎರಡು ಆಯ್ಕೆಗಳನ್ನು ನೀಡಿದ್ದು, ಒಂದು ಸ್ವಂತಕ್ಕಾಗಿ ಖರೀದಿ ಮಾಡುವುದು ಮತ್ತು ಮತ್ತೊಂದು ಚಂದಾದಾರಿಕೆಯ ಮೇಲೂ ಕಾರು ಮಾಲೀಕತ್ವಕ್ಕೆ ಅವಕಾಶ ನೀಡಿದೆ.

ಎಕ್ಸ್‌ಎಲ್6 ಹೊಸ ಫೀಚರ್ಸ್ ಮಾಹಿತಿಯುಳ್ಳ ವಿಡಿಯೋ ಹಂಚಿಕೊಂಡ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಈಗಾಗಲೇ ತನ್ನ ಪ್ರಮುಖ ಕಾರುಗಳನ್ನು ಚಂದಾದಾರಿಕೆ ಯೋಜನೆ ಅಡಿ ಆಸಕ್ತ ಗ್ರಾಹಕರಿಗೆ ಮಾಲೀಕತ್ವ ನೀಡುತ್ತಿದ್ದು, ಇದೀಗ ಹೊಸ ಎಕ್ಸ್ಎಲ್6 ಮಾದರಿಯು ಸಹ ಚಂದಾದಾರಿಕೆ ಯೋಜನೆ ಅಡಿ ಆಯ್ಕೆ ಲಭ್ಯವಿದೆ. ಹೊಸ ಕಾರಿನ ಚಂದಾದಾರಿಕೆಯು ಪ್ರತಿ ತಿಂಗಳು ರೂ.24,499 ರಿಂದ ಆರಂಭಗೊಳ್ಳಲಿದ್ದು, ಆಸಕ್ತ ಗ್ರಾಹಕರನ್ನು ಹೊಸ ಕಾರನ್ನು ಬೇಡಿಕೆಗೆ ಅನುಗುಣವಾಗಿ 12 ತಿಂಗಳು, 24 ತಿಂಗಳು, 36 ತಿಂಗಳು, 48 ತಿಂಗಳು ಆಯ್ಕೆ ಮಾಡಬಹುದು.

ಎಕ್ಸ್‌ಎಲ್6 ಹೊಸ ಫೀಚರ್ಸ್ ಮಾಹಿತಿಯುಳ್ಳ ವಿಡಿಯೋ ಹಂಚಿಕೊಂಡ ಮಾರುತಿ ಸುಜುಕಿ

ಚಂದಾದಾರಿಕೆ ಯೋಜನೆ ಅಡಿ ಖರೀದಿಸುವ ಕಾರುಗಳ ದರ, ನೋಂದಣಿ, ರಸ್ತೆ ತೆರಿಗೆ, ಇನ್ಸುರೆನ್ಸ್ ಮತ್ತು ನಿರ್ವಹಣೆಯ ವೆಚ್ಚಗಳನ್ನು ಒಳಗೊಂಡಿರಲಿದ್ದು, ಚಂದಾದಾರಿಕೆ ಯೋಜನೆ ಅಡಿ ಆಯ್ಕೆ ಮಾಡುವ ಪ್ರತಿ ಕಾರು ಮಾದರಿಯು ಸಹ ಹೊಸ ಮಾದರಿಗಳನ್ನೇ ನೀಡಲಾಗುತ್ತದೆ.

ಎಕ್ಸ್‌ಎಲ್6 ಹೊಸ ಫೀಚರ್ಸ್ ಮಾಹಿತಿಯುಳ್ಳ ವಿಡಿಯೋ ಹಂಚಿಕೊಂಡ ಮಾರುತಿ ಸುಜುಕಿ

ಹೀಗಾಗಿ ಹೊಸ ಕಾರು ಮಾಲೀಕತ್ವಕ್ಕೆ ಇದೀಗ ಚಂದಾದಾರಿಕೆ ಕೂಡಾ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದು, ಕಾರು ಅವಶ್ಯವಿದ್ದಾಗ ಮಾಲೀಕತ್ವ ಪಡೆದುಕೊಂಡು ಅವಶ್ಯವಿಲ್ಲವೆನಿಸಿದಾಗ ಹಿಂದಿರುಗಿಸಬಹುದಾಗಿದೆ.

Most Read Articles

Kannada
English summary
Maruti suzuki xl6 facelift new features video released
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X