ಮಹೀಂದ್ರಾ ಥಾರ್ ಎಸ್‍ಯುವಿಗೆ ಪೈಪೋಟಿಯಾಗಿ ಮುಂದಿನ ವರ್ಷ ಬರಲಿದೆ ಮಾರುತಿ ಜಿಮ್ನಿ

ಅಂತರರಾಷ್ಟ್ರೀಯ ಮಾರುಕಟ್ಟೆಗಲ್ಲಿ ಭರ್ಜರಿ ಬೇಡಿಕೆಯೊಂದಿಗೆ ಸುಜುಕಿ ಜಿಮ್ನಿ(Suzuki Jimny) ಆಫ್-ರೋಡರ್ ಮಿನಿ-ಎಸ್‍ಯುವಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರಸ್ತುತ ತಲೆಮಾರಿನ ಸುಜುಕಿ ಜಿಮ್ನಿ ಮಿನಿ-ಎಸ್‍ಯುವಿಯು 2018ರಿಂದ ಮಾರಾಟವಾಗುತ್ತಿದೆ.

ಮಹೀಂದ್ರಾ ಥಾರ್ ಎಸ್‍ಯುವಿಗೆ ಪೈಪೋಟಿಯಾಗಿ ಮುಂದಿನ ವರ್ಷ ಬರಲಿದೆ ಮಾರುತಿ ಜಿಮ್ನಿ

ಮಾರುತಿ ಸುಜುಕಿ ಜಿಮ್ನಿ ಖಂಡಿತವಾಗಿಯೂ ಮುಂದಿನ ವರ್ಷಕ್ಕೆ ಯೋಜಿಸಲಾದ ಬಹುನಿರೀಕ್ಷಿತ ಹೊಸ ಕಾರುಗಳಲ್ಲಿ ಒಂದಾಗಿದೆ. ಕಂಪನಿಯು ಆಫ್-ರೋಡ್ ಎಸ್‌ಯುವಿಯ 5-ಡೋರಿನ ಆವೃತ್ತಿಯನ್ನು ತರಲಿದೆ, ಅದು ಮುಂಬರುವ 5-ಡೋರ್ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಹೊಸ ವರದಿಯ ಪ್ರಕಾರ, 5-ಡೋರಿನ ಮಾರುತಿ ಜಿಮ್ನಿ ಎರಡು ಸಾಲಿನ ಸೀಟುಗಳ ಸಂರಚನೆಗಳೊಂದಿಗೆ ನೀಡಲಾಗುತ್ತದೆ.

ಮಹೀಂದ್ರಾ ಥಾರ್ ಎಸ್‍ಯುವಿಗೆ ಪೈಪೋಟಿಯಾಗಿ ಮುಂದಿನ ವರ್ಷ ಬರಲಿದೆ ಮಾರುತಿ ಜಿಮ್ನಿ

ಈ ಮಾದರಿಯು ಫೆಬ್ರವರಿ 2023 ರಲ್ಲಿ ಉತ್ಪಾದನೆಗೆ ಪ್ರವೇಶಿಸಲು ನಿರ್ಧರಿಸಲಾಗಿತ್ತು. ಆದರೆ ಸೆಮಿ-ಕಂಡಕ್ಟರ್ ಕೊರತೆಯಿಂದಾಗಿ ಇದು ವಿಳಂಬವಾಗಿಬಹುದು, ಕಂಪನಿಯು ಜೂನ್ 2022 ರ ಅಂತ್ಯದ ವೇಳೆಗೆ ಜಿಮ್ನಿಯ ಪ್ರೀ-ಪ್ರೊಡಕ್ಷನ್ ಟ್ರೇಲ್ಸ್ ಅನ್ನು ಪ್ರಾರಂಭಿಸುತ್ತದೆ ಎಂದು ವರದಿಯಾಗಿದೆ.

ಮಹೀಂದ್ರಾ ಥಾರ್ ಎಸ್‍ಯುವಿಗೆ ಪೈಪೋಟಿಯಾಗಿ ಮುಂದಿನ ವರ್ಷ ಬರಲಿದೆ ಮಾರುತಿ ಜಿಮ್ನಿ

ಮೊದಲ ಹಂತದಲ್ಲಿ, ಮಾದರಿಯನ್ನು ಸುಮಾರು 70 ಪ್ರತಿಶತದಷ್ಟು ಸ್ಥಳೀಯವಾಗಿ ಮೂಲದ ಯುನಿಟ್ ಗಳೊಂದಿಗೆ ತಯಾರಿಸಲಾಗುವುದು. ಮಾರುತಿ ಸುಜುಕಿ ಕ್ರಮೇಣ ತನ್ನ ಸ್ಥಳೀಕರಣ ಮಟ್ಟವನ್ನು ಹೆಚ್ಚಿಸಲಿದೆ ಮತ್ತು ತನ್ನ ಆರಂಭಿಕ ವರ್ಷಗಳಲ್ಲಿ ಸುಮಾರು 75,000 ಯುನಿಟ್ ಗಳೊಂದಿಗೆ ಉತ್ಪಾದಿಸುವ ಗುರಿಯನ್ನು ಹೊಂದಿದೆ.

ಮಹೀಂದ್ರಾ ಥಾರ್ ಎಸ್‍ಯುವಿಗೆ ಪೈಪೋಟಿಯಾಗಿ ಮುಂದಿನ ವರ್ಷ ಬರಲಿದೆ ಮಾರುತಿ ಜಿಮ್ನಿ

ಇಂಡೋ-ಜಪಾನೀಸ್ ವಾಹನ ತಯಾರಕರು ಇನ್ನೂ ಡೀಸೆಲ್ ಜಿಮ್ನಿ ತಯಾರಿಸಲು ಮಂಡಳಿ ಮತ್ತು ಅಧಿಕಾರಿಗಳ ಅನುಮೋದನೆಯನ್ನು ಪಡೆದಿಲ್ಲ, ಆದರೆ ಅವರು ಅದರ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯು ಹೇಳುತ್ತದೆ. ಹೊಸ ಮಾರುತಿ ಜಿಮ್ನಿ 7-ಆಸನಗಳು ಮಹೀಂದ್ರ ಥಾರ್‌ಗೆ ಸವಾಲಾಗಿದ್ದರೂ, ಅದರ 5-ಆಸನಗಳ ಆವೃತ್ತಿಯು ಸಬ್-4 ಮೀಟರ್ ಉದ್ದವನ್ನು ಅಳೆಯುವ ಸಾಧ್ಯತೆಯಿದೆ. ಬೆಲೆಯ ವಿಷಯದಲ್ಲಿ, ಎರಡನೆಯದು ಥಾರ್‌ಗಿಂತ ಗಮನಾರ್ಹವಾಗಿ ಅಗ್ಗವಾಗಿರಲಿದೆ.

ಮಹೀಂದ್ರಾ ಥಾರ್ ಎಸ್‍ಯುವಿಗೆ ಪೈಪೋಟಿಯಾಗಿ ಮುಂದಿನ ವರ್ಷ ಬರಲಿದೆ ಮಾರುತಿ ಜಿಮ್ನಿ

ಪ್ರಸ್ತುತ ಬಾರತದಲ್ಲಿ ಕಂಪನಿಯು ತನ್ನ ಗುರುಗ್ರಾಮ್ ಸ್ಥಾವರದಲ್ಲಿ ಮೂರು-ಡೋರಿನ ಜಿಮ್ನಿಯನ್ನು ತಯಾರಿಸುತ್ತದೆ ಮತ್ತು ಮಧ್ಯಪ್ರಾಚ್ಯ ಮತ್ತು ಆಫ್ರಿಕನ್ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಿದೆ. ಈ ಸುಜುಕಿ ಜಿಮ್ನಿ ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಮಹೀಂದ್ರಾ ಥಾರ್ ಎಸ್‍ಯುವಿಗೆ ಪೈಪೋಟಿಯಾಗಿ ಮುಂದಿನ ವರ್ಷ ಬರಲಿದೆ ಮಾರುತಿ ಜಿಮ್ನಿ

ಈ ಹೊಸ ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ. ಇದು 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ. ಇದು ಕಠಿಣ ಭೂಪ್ರದೇಶಗಳಲ್ಲಿ ಸುಗಮವಾಗಿ ಸಾಗಲು ನೆರವಾಗುತ್ತದೆ. ಈ ಮಿನಿ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಮಹೀಂದ್ರಾ ಥಾರ್ ಎಸ್‍ಯುವಿಗೆ ಪೈಪೋಟಿಯಾಗಿ ಮುಂದಿನ ವರ್ಷ ಬರಲಿದೆ ಮಾರುತಿ ಜಿಮ್ನಿ

ಈ ಎಂಜಿನ್ 6,000 ಆರ್‌ಪಿಎಂನಲ್ಲಿ 101 ಬಿಹೆಚ್‌ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 130 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಅಥವಾ 4 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಮಿನಿ ಎಸ್‍‍ಯುವಿಯನ್ನು ಡೀಸೆಲ್ ಅಥವಾ ಹೈಬ್ರಿಡ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳು ಕಡಿಮೆಯಾಗಿದೆ.

ಮಹೀಂದ್ರಾ ಥಾರ್ ಎಸ್‍ಯುವಿಗೆ ಪೈಪೋಟಿಯಾಗಿ ಮುಂದಿನ ವರ್ಷ ಬರಲಿದೆ ಮಾರುತಿ ಜಿಮ್ನಿ

ಈ ಜಿಮ್ನಿ ಮಾದರಿಯು ಈ ಎಂಜಿನ್‌ನ ಟರ್ಬೋಚಾರ್ಜ್ಡ್ ಆವೃತ್ತಿಯನ್ನು ಪಡೆಯಬಹುದು; ಆದೆರೆ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಜಿಮ್ನಿ ಆಫ್-ರೋಡ್ ಎಸ್‍ಯುವಿಯಲ್ಲಿ 15 ಇಂಚಿನ ವ್ಹೀಲ್ ಅನ್ನು ಹೊಂದಿರುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ 3-ಡೋರಿನ ಅಥವಾ 5-ಡೋರ್ ಜಿಮ್ನಿಯನ್ನು ಬಿಡುಗಡೆಗೊಳಿಸಬಹುದು.

ಮಹೀಂದ್ರಾ ಥಾರ್ ಎಸ್‍ಯುವಿಗೆ ಪೈಪೋಟಿಯಾಗಿ ಮುಂದಿನ ವರ್ಷ ಬರಲಿದೆ ಮಾರುತಿ ಜಿಮ್ನಿ

ಒಂದು ವೇಳೆ ಭಾರತದಲ್ಲಿ ಜಿಮ್ನಿಯನ್ನು ಬಿಡುಗಡೆಗೊಳಿಸಿದರೆ, 5-ಡೋರ್ ಜಿಮ್ನಿ ಬಿಡುಗಡೆಯಾಗಬಹುದು. ಇದು ಐದು ಡೋರುಗಳ ಜಿಮ್ನಿ ಇನ್ನು ನಾಲ್ಕು ಮೀಟರ್ ಉದ್ದದ ಮಾದರಿಯಾಗಿದೆ. ಭಾರತದಲ್ಲಿ ಇದು ತೆರಿಗೆ ಪ್ರಯೋಜನಗಳನ್ನು ಪಡೆಯುತ್ತದೆ. 2,550 ಎಂಎಂ ವ್ಹೀಲ್ ಬೇಸ್ ಉದ್ದವು ಕಾಂಪ್ಯಾಕ್ಟ್ ಎಸ್‌ಯುವಿಗಳಿಗಿಂತ ಹೆಚ್ಚಿನದಾಗಿರುತ್ತದೆ.

ಮಹೀಂದ್ರಾ ಥಾರ್ ಎಸ್‍ಯುವಿಗೆ ಪೈಪೋಟಿಯಾಗಿ ಮುಂದಿನ ವರ್ಷ ಬರಲಿದೆ ಮಾರುತಿ ಜಿಮ್ನಿ

ಈ ಆಫ್-ರೋಡ್ ಎಸ್‍ಯುವಿಯು ಸುಮಾರು 2,500 ಎಂಎಂ ವ್ಹೀಲ್‌ಬೇಸ್ ಹೊಂದಿದೆ ಆದರೆ ಮಧ್ಯಮ ಗಾತ್ರದ ಎಸ್‍ಯುವಿಗಿಂತ ಚಿಕ್ಕದಾಗಿದೆ. ಇದರಿಂದ 5-ಡೋರ್ ಜಿಮ್ನಿ ಮಾದರಿಯು ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಮಧ್ಯಮ ಗಾತ್ರದ ಎಸ್‍ಯುವಿಯ ನಡುವಿನ ವಿಭಾಗದಲ್ಲಿ ಇರಿಸಬಹುದು. ಜಿಮ್ನಿ 5-ಡೋರ್ ಎಸ್‍ಯುವಿಯ ವ್ಹೀಲ್‌ಬೇಸ್ ಮಹೀಂದ್ರಾ ಥಾರ್‌ಗಿಂತ 100 ಎಂಎಂ ಉದ್ದವಾಗಿರುತ್ತದೆ.

ಮಹೀಂದ್ರಾ ಥಾರ್ ಎಸ್‍ಯುವಿಗೆ ಪೈಪೋಟಿಯಾಗಿ ಮುಂದಿನ ವರ್ಷ ಬರಲಿದೆ ಮಾರುತಿ ಜಿಮ್ನಿ

ಒಟ್ಟಾರೆ ಜಿಮ್ನಿ ಆಫ್-ರೋಡ್ ಎಸ್‍ಯುವಿಯು ಫ್ಹೋರ್ ವ್ಹೀಲ್ ಡ್ರೈವ್ ಸಿಸ್ಟಂ, ಅಗ್ರೇಸಿವ್ ಲುಕ್ ನೊಂದಿಗೆ ಸಾಟಿಯಿಲ್ಲದ ಆಫ್-ರೋಡ್ ಸಾಮರ್ಥ್ಯವನ್ನು ಕೂಡ ಹೊಂದಿರುತ್ತದೆ. ಈ ಸುಜುಕಿ ಜಿಮ್ನಿ ಎಸ್‍ಯುವಿಯು ಯುರೋಪಿಯನ್ ದೇಶಗಳಲ್ಲಿ ಬಹುಬೇಡಿಕೆಯನ್ನು ಪಡೆದುಕೊಂಡಿದೆ, ಅಲ್ಲದೇ ಸುಜುಕಿ ಜಿಮ್ನಿ ತವರು ಜಪಾನ್ ನಲ್ಲಿಯು ಬೇಡಿಕೆ ಹೆಚ್ಚಾಗಿದೆ.

ಮಹೀಂದ್ರಾ ಥಾರ್ ಎಸ್‍ಯುವಿಗೆ ಪೈಪೋಟಿಯಾಗಿ ಮುಂದಿನ ವರ್ಷ ಬರಲಿದೆ ಮಾರುತಿ ಜಿಮ್ನಿ

ಸುಜುಕಿ ಕಂಪನಿಯ ಜಪಾನ್ ನಲ್ಲಿರುವ ಕೊಸೈನ ಘಟಕದಲ್ಲಿ ಉತ್ಪಾದನೆಯನ್ನು ಗರಿಷ್ಠ ಪ್ರಮಾಣಕ್ಕೆ ಏರಿಸಿದೆ.ಆದರೂ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಐಕಾನಿಕ್ ಆಪ್-ರೋಡರ್ ಜಿಮ್ನಿ ಬೇಡಿಕೆಯು ಅಷ್ಟರ ಪ್ರಮಾಣಕ್ಕೆ ಇದೆ. ಇದರಿಂದ ಭಾರತದಲ್ಲಿ ಮಾರುತಿ ಸುಜುಕಿಯ ಗುರುಗಾಂವ್‌ನಲ್ಲಿರುವ ಘಟಕದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಿದ್ದಾರೆ. ಇನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಮೂರು ಡೋರಿನ ಸುಜುಕಿ ಜಿಮ್ನಿ ಮಾದರಿಯನ್ನು ಭಾರತದಿಂದ ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ ಮತ್ತು ಆಫ್ರಿಕನ್ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ.

ಮಹೀಂದ್ರಾ ಥಾರ್ ಎಸ್‍ಯುವಿಗೆ ಪೈಪೋಟಿಯಾಗಿ ಮುಂದಿನ ವರ್ಷ ಬರಲಿದೆ ಮಾರುತಿ ಜಿಮ್ನಿ

ಜಿಮ್ನಿಯನ್ನು ಮೆಕ್ಸಿಕೊದಲ್ಲಿ ಸುಜುಕಿ ಕಂಪನಿಯು ಬಿಡುಗಡೆಗೊಳಿಸಿತ್ತು. ಇದು ಕೇವಲ 72 ಗಂಟೆಗಳ ಅವಧಿಯಲ್ಲಿ ಸೋಲ್ಡ್ ಔಟ್ ಆಯ್ತು. ಇದೇ ರೀತಿ ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಹುಬೇಡಿಕೆಯ ಮಾದರಿಯಾಗಿದೆ. ಈ ಜಿಮ್ನಿ ಮಿನಿ ಎಸ್‍ಯುವಿಯನ್ನು 2018ರಲ್ಲಿ ಜಾಗತಿಕವಾಗಿ ಅನಾವರಣಗೊಂಡಿತು. ಜಾಗತಿಕವಾಗಿ ಅನಾವರಣಗೊಂಡು 1.5 ವರ್ಷಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಭಾರತದಲ್ಲಿ ಆಫ್-ರೋಡ್ ವಾಹನ ಎಂದು ಹೇಳಿದಾಗ ಮೊದಲು ಯೋಚನೆಗೆ ಬರುವುದು ಮಹೀಂದ್ರಾ ಥಾರ್ ಎಂದು ಹೇಳಬಹುದು. ಆದರೆ ಅದೇ ರೀತಿ ಉತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿರುವ ಜಿಮ್ನಿ ಭಾರತದಲ್ಲಿ ಒಂದು ವೇಳೆ ಬಿಡುಗಡೆಗೊಂಡರೆ ಥಾರ್ ಎಸ್‍ಯುವಿಗೆ ಪ್ರಬಲ ಎದುರಾಳಿ ಆಗುತ್ತದೆ.

ಮಹೀಂದ್ರಾ ಥಾರ್ ಎಸ್‍ಯುವಿಗೆ ಪೈಪೋಟಿಯಾಗಿ ಮುಂದಿನ ವರ್ಷ ಬರಲಿದೆ ಮಾರುತಿ ಜಿಮ್ನಿ

2020ರ ಆಟೋ ಎಕ್ಸ್‌ಪೋ ಸಂದರ್ಭದಲ್ಲಿ ಮಾರುತಿ ಸುಜುಕಿ ಭಾರತದಲ್ಲಿ ಜಿಮ್ನಿಯನ್ನು ಪ್ರದರ್ಶಿಸಿದಾಗ ಆಫ್-ರೋಡ್ ವಾಹನ ಪ್ರಿಯರಿಗೆ ಹೆಚ್ಚಿನ ಕುತೂಹಲ ಹುಟ್ಟು ಹಾಕಿತು. ಒಟ್ಟಿನಲ್ಲಿ ಭಾರತದಲ್ಲಿ ಬಿಡುಗಡೆಯಾದರೆ ಈ ಬಹುನಿರೀಕ್ಷಿತ ಸುಜುಕಿ 5-ಡೋರ್ ಜಿಮ್ನಿ ಮಿನಿ ಎಸ್‍‍ಯುವಿಯು 33 ವರ್ಷಗಳ ಕಾಲ ದೇಶದಲ್ಲಿ ಮಾರಾಟವಾಗಿದ್ದ ಜನಪ್ರಿಯ ಜಿಪ್ಸಿಯ ಉತ್ತರಾಧಿಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.

Article Published On: Thursday, May 26, 2022, 17:43 [IST]
English summary
Most awaited maruti jimny suv to launch in next year details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+