Just In
Don't Miss!
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಬಿಡುಗಡೆಗೆ ಸಜ್ಜಾದ ಅಧಿಕ ಮೈಲೇಜ್ ನೀಡುವ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ ತನ್ನ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಏಪ್ರಿಲ್ 14 ರಂದು ಅನಾವರಣಗೊಳಿಸಲಾಗಿತ್ತು. ಈ ಹೊಸ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರು 2022ರ ಮೇ ತಿಂಗಳಿನ 4ರಂದು ಬಿಡುಗಡೆಯಾಗಲಿದೆ.

ಹೋಂಡಾ ಕಂಪನಿಯು ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಸಿಟಿ ಹೈಬ್ರಿಡ್‌ಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಈ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.21,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹೋಂಡಾ ಸಿಟಿಯ ಹೈಬ್ರಿಡ್ ಆವೃತ್ತಿಯಾಗಿದ್ದು, ಶೇಕಡಾ 40 ರಷ್ಟು ಉತ್ತಮ ಇಂಧನ ದಕ್ಷತೆ ಮತ್ತು 74 ಶೇಕಡಾ ಉತ್ತಮ ಟಾರ್ಕ್ ಉತ್ಪಾದನೆಯನ್ನು ಹೊಂದಿದೆ. ಇದು ಸೆಡಾನ್‌ನ ಟಾಪ್-ಸ್ಪೆಕ್ 'ZX' ಟ್ರಿಮ್ ಅನ್ನು ಆಧರಿಸಿದೆ, ಈ ಕಾರು ಹೆಚ್ಚಿನ ಸುರಕ್ಷತಾ ಫೀಚರ್ಸ್ ಗಳೊಂದಿಗೆ ಹೆಚ್ಚುವರಿ ಸಾಧನಗಳೊಂದಿಗೆ ಬಿಡುಗಡೆಯಾಗಲಿದೆ.

ಈ ಹೊಸ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರಿನಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಎರಡು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಸಂಯೋಜಿಸುವ ಹೈಬ್ರಿಡ್ ಪವರ್‌ಟ್ರೇನ್ ಸೆಟಪ್ ಅನ್ನು ಹೊಂದಿದೆ. ಈ 1.5-ಲೀಟರ್ ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್ 5,600 ಮತ್ತು 6,400 ಆರ್‌ಪಿಎಂ ನಡುವೆ 97 ಬಿಹೆಚ್‍ಪಿ ಪವರ್ ಮತ್ತು 4,500 ಮತ್ತು 5,000 ಆರ್‌ಪಿಎಂ ನಡುವೆ 127 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದರ ಪೆಟ್ರೋಲ್ ಎಂಜಿನ್‌ಗೆ ಸಹಾಯ ಮಾಡುವುದು ಎರಡು ಮೋಟಾರ್‌ಗಳ ಒಂದು ಸೆಟ್ ಆಗಿದೆ. ಈ ಮೋಟಾರ್‌ಗಳಲ್ಲಿ ಒಂದು ಸಂಯೋಜಿತ ಸ್ಟಾರ್ಟರ್ ಜನರೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಎರಡನೇ ಮೋಟಾರು ಮುಂಭಾಗದ ಆಕ್ಸಲ್ ಮೇಲೆ ಕುಳಿತು 3,500 ಮತ್ತು 8,000 ಆರ್‌ಪಿಎಂ ನಡುವೆ 108 ಬಿಹೆಚ್‍ಪಿ ಪವರ್ ಮತ್ತು 253 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಹೋಂಡಾ ಸಿಟಿ ಇ:ಹೆಚ್‌ಇವಿ ಕಾರಿನ ಎಲೆಕ್ಟ್ರಿಕ್ ಮೋಟಾರುಗಳು ತಮ್ಮ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ರೀಚಾರ್ಜ್ ಮಾಡುತ್ತವೆ, ಇದು ಬಾಹ್ಯ ಚಾರ್ಜಿಂಗ್ ಅಗತ್ಯವನ್ನು ನಿವಾರಿಸುತ್ತದೆ. ಮಾಲೀಕರು ಪ್ಯಾಡಲ್ ಶಿಫ್ಟರ್‌ಗಳ ಸಹಾಯದಿಂದ ಬ್ರೇಕ್ ಎನರ್ಜಿ ರಿಕಪರೇಶನ್ ಸಿಸ್ಟಂನ ಸಾಮರ್ಥ್ಯವನ್ನು ತಿರುಚಬಹುದು. ಈ ಹೋಂಡಾ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಮೇಲೆ 8 ವರ್ಷಗಳ ವಾರಂಟಿಯನ್ನು ಕಂಪನಿಯು ನೀಡುತ್ತಿದೆ.

ಹೊಸ ಹೋಂಡಾ ಸಿಟಿ ಹೈಬ್ರಿಡ್ ಪವರ್‌ಟ್ರೇನ್ ಎಲೆಕ್ಟ್ರಿಕಲ್ ನಿರಂತರವಾಗಿ ವೇರಿಯಬಲ್ ಟ್ರಾನ್ಸ್‌ಮಿಷನ್ (ಇ-ಸಿವಿಟಿ) ಮೂಲಕ ಮುಂಭಾಗದ ವ್ಹೀಲ್ ಗಳಿಗೆ ಪವರ್ ಕಳುಹಿಸುತ್ತದೆ. ಹೋಂಡಾ ಇ:ಹೆಚ್‌ಇವಿ 26.5 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಹೋಂಡಾ ಸಿಟಿ ಇ:ಹೆಚ್‌ಇವಿ ಪ್ಯೂರ್ ಎಲೆಕ್ಟ್ರಿಕ್ ಇವಿ, ಹೈಬ್ರಿಡ್ ಮತ್ತು ಎಂಜಿನ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿವೆ.

ಈ ಡ್ರೈವಿಂಗ್ ಮೋಡ್‌ಗಳನ್ನು ಸಿಟಿ ಇಹೆಚ್‌ಇವಿಯ ಆನ್‌ಬೋರ್ಡ್ ಎಲೆಕ್ಟ್ರಾನಿಕ್ಸ್ ಸೂಟ್‌ನಿಂದ ಆಟೋಮ್ಯಾಟಿಕ್ ಆಗಿ ನಿಯಂತ್ರಿಸಲಾಗುತ್ತದೆ. ಈ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಸೆಡಾನ್‌ನ ಸುರಕ್ಷತೆಯನ್ನು ಹೆಚ್ಚಿಸುವುದರ ಮೇಲೆ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಹೋಂಡಾ ಸಿಟಿ ಇಹೆಚ್‌ಇವಿ ತನ್ನ ಹೋಂಡಾ ಸೆನ್ಸಿಂಗ್ ಸಿಸ್ಟಂ ಭಾಗವಾಗಿ ಹಲವಾರು ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿದೆ.

ಈ ಸಿಟಿ ಇಹೆಚ್‌ಇವಿ ಕಾರಿನ ಸುರಕ್ಷತಾ ಫೀಚರ್ಸ್ ಗಳಲ್ಲಿ ಕಾಲಿಷನ್ ಮೆಟಿಗೇಷನ್ ಬ್ರೇಕಿಂಗ್, ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ರೋಡ್ ಡಿಪರ್ಚರ್ ಮೆಟಿಗೇಷನ್ ಒಳಗೊಂಡಿವೆ. ಹೋಂಡಾ ಸೆನ್ಸಿಂಗ್ ಸೂಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋ ಹೈ ಬೀಮ್ ಅಸಿಸ್ಟ್ ಹೊಂದಿದೆ.

ಇದರೊಂದಿಗೆ ಹಿಲ್ ಸ್ಟಾರ್ಟ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ಅಗೈಲ್ ಹ್ಯಾಂಡ್ಲಿಂಗ್ ಅಸಿಸ್ಟ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಸೇರಿವೆ. ಸಿಟಿ ಇಹೆಚ್‌ಇವಿ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಈ ಹೋಂಡಾ ಸಿಟಿ ಇಹೆಚ್‌ಇವಿ ಕೆಲವು ವಿಶಿಷ್ಟ ವಿನ್ಯಾಸದ ವೈಶಿಷ್ಟ್ಯಗಳನ್ನು ಹೊಂದಿದೆ, ಅದು ತನ್ನ ಸಾಮಾನ್ಯ ಒಡಹುಟ್ಟಿದವರಿಗಿಂತ ಅದನ್ನು ಪ್ರತ್ಯೇಕಿಸಲು ಸಹಾಯ ಮಾಡುತ್ತದೆ. ಇವುಗಳಲ್ಲಿ ಫುಲ್ ಎಲ್ಇಡಿ ಹೆಡ್‌ಲೈಟ್‌ಗಳು, ಎರಡು-ಟೋನ್ 16-ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳು, ಪರಿಷ್ಕೃತ ಗ್ರಿಲ್ ಮತ್ತು ಬೂಟ್ ಲಿಪ್ ಸ್ಪಾಯ್ಲರ್ ಅನ್ನು ಒಳಗೊಂಡಿವೆ.

ಈ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರಿನ ಒಳಭಾಗದಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ, ಇದು Apple CarPlay ಮತ್ತು Android Auto ಅನ್ನು ಕನೆಕ್ಟಿವಿಟಿಯನ್ನು ಹೊಂದಿದೆ. ಇನ್ನು ಸರೌಂಡ್ ಸೌಂಡ್ ಸ್ಪೀಕರ್ ಸಿಸ್ಟಂ ಅನ್ನು ಸಹ ಹೊಂದಿದೆ. ಇತರ ವೈಶಿಷ್ಟ್ಯಗಳು ಸ್ಮಾರ್ಟ್ ಕೀ ಸಿಸ್ಟಮ್ ಅನ್ನು ಹೊಂದಿರುತ್ತದೆ.

ಅದು ಬಟನ್ ಒತ್ತುವುದರೊಂದಿಗೆ ಸಿಟಿ ಇಹೆಚ್‌ಇವಿಯ ಪವರ್‌ಟ್ರೇನ್ ಅನ್ನು ಪ್ರಾರಂಭಿಸಬಹುದು. ಹೋಂಡಾದ ಸ್ಮಾರ್ಟ್ ಕನೆಕ್ಟ್ ಅಪ್ಲಿಕೇಶನ್ ನೀಡುವ ಸ್ಮಾರ್ಟ್ ವಾಚ್ ಅನ್ನು ಹೊಂದಿದೆ, ಈ ಹೊಸ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರು ಬಿಡುಗಡೆಗೆ ಮುಂಚಿತವಾಗಿ, ಅಕ್ಸೆಸರೀಸ್ ಮಾಹಿತಿಗಳು ಬಹಿರಂಗವಾಗಲಿದೆ.

ಈ ಹೊಸ ಸಿಟಿ ಹೈಬ್ರಿಡ್ ಸೆಡಾನ್ ಕ್ರೋಮ್‌ನೊಂದಿಗೆ ಡೋರ್ ವೈಸರ್, ಸ್ಟೆಪ್ ಇಲ್ಯುಮಿನೇಷನ್ ಲೈಟ್‌ಗಳು, ವಿಂಡೋ ಕ್ರೋಮ್ ಮೋಲ್ಡಿಂಗ್, ರೂಫ್ ಎಂಡ್ ವೈಸರ್ ಮತ್ತು ಸ್ಮಾರ್ಟ್‌ಫೋನ್ ಹೋಲ್ಡರ್‌ನೊಂದಿಗೆ ವೈರ್‌ಲೆಸ್ ಚಾರ್ಜರ್‌ನಂತಹ ಕಸ್ಟಮೈಸ್ ಆಯ್ಕೆಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಕಂಪನಿಯು ಮೂರು ವಿಭಾಗಗಳಲ್ಲಿ ಅಕ್ಸೆಸರೀಸ್ ಗಳನ್ನು ನೀಡುತ್ತದೆ. ಇದು ಬೆಸಿಕ್ ಕಿಟ್, ಕ್ರೋಮ್ ಪ್ಯಾಕೇಜ್ ಮತ್ತು ಯುಟಿಲಿಟಿ ಪ್ಯಾಕೇಜ್ ಆಗಿದೆ.

ಇದರಲ್ಲಿ ಯುಟಿಲಿಟಿ ಪ್ಯಾಕೇಜ್‌ನಲ್ಲಿರುವ ವೈಶಿಷ್ಟ್ಯದ ಪಟ್ಟಿಯು ಮುಂಭಾಗ ಮತ್ತು ಹಿಂಭಾಗಕ್ಕೆ ಬಂಪರ್ ಪ್ರೊಟೆಕ್ಟರ್, ಡೋರ್ ಹ್ಯಾಂಡಲ್ ಪ್ರೊಟೆಕ್ಟರ್, ಡೋರ್ ಎಡ್ಜ್ ಗಾರ್ನಿಶ್ ಮತ್ತು ಬಾಡಿ ಸೈಡ್ ಮೋಲ್ಡಿಂಗ್‌ಗಳನ್ನು ಒಳಗೊಂಡಿದೆ. ಇನ್ನು ಕ್ರೋಮ್ ಪ್ಯಾಕೇಜ್ ಮುಂಭಾಗದ ಬಂಪರ್ ಸೈಡ್ ಗಾರ್ನಿಶ್, ಟ್ರಂಕ್ ಗಾರ್ನಿಶ್, ಟೈಲ್ ಲ್ಯಾಂಪ್ ಗಾರ್ನಿಶ್ ಮತ್ತು ಡೋರ್ ಲೋವರ್ ಗಾರ್ನಿಶ್ ಅನ್ನು ಒಳಗೊಂಡಿದೆ. ಬೇಸಿಕ್ ಕಿಟ್ ಬಕೆಟ್ ಮ್ಯಾಟ್, ಫ್ಲೋರ್ ಮ್ಯಾಟ್, ಕುಶನ್ಗಳು, ಕೀ ಚೈನ್, ಎಮರ್ಜನ್ಸಿ ಎಮರ್ ಮತ್ತು ಮೈಕ್ರೋಫೈಬರ್ ಬಟ್ಟೆಯಂತಹ ಅಗತ್ಯ ವಸ್ತುಗಳನ್ನು ಹೊಂದಿದೆ.

ಇವುಗಳ ಹೊರತಾಗಿ, ಬಿಡುಗಡೆಯ ನಂತರದ ಗ್ರಾಹಕರು ಕಾರ್ ಬಾಡಿ ಕವರ್, ಸಿಟಿ ಲೋಗೋ ಪ್ರೊಜೆಕ್ಟರ್, ಲೆಗ್‌ರೂಮ್ ಲ್ಯಾಂಪ್ ಮತ್ತು ಮುಂಭಾಗದ ಬಂಪರ್ ಸೆಂಟರ್ ಅಲಂಕರಿಸಲು ಸಹ ಆಯ್ಕೆ ಮಾಡಬಹುದು. ಹೋಂಡಾ ಸಿಟಿ ಇಹೆಚ್‌ಇವಿ ಹೈಬ್ರಿಡ್ ಜಪಾನಿನ ಕಾರು ತಯಾರಕರು ಅಂತಿಮವಾಗಿ ತನ್ನ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬಿಡುಗಡೆಗೊಳಿಸಲು ಮುಂದಾಗಿದೆ. ಈ ಬಹುನಿರೀಕ್ಷಿತ ಹೊಸ ಹೋಂಡಾ ಸಿಟಿ ಇಹೆಚ್‌ಇವಿ ಹೈಬ್ರಿಡ್ ಕಾರು ಭಾರತೀಯ ಗ್ರಾಹಕರನ್ನು ಎಷ್ಟರ ಮಟ್ಟಿಗೆ ಸೆಳೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.