ಸಿಎನ್‌ಜಿ ಮಾದರಿಯಲ್ಲೂ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಮಾರುತಿ ಸುಜುಕಿ(Maruti Suzuki) ಕಂಪನಿಯು ಶೀಘ್ರದಲ್ಲೇ ತನ್ನ ಹೊಸ ಕಾರು ಉತ್ಪನ್ನಗಳ ಬಿಡುಗಡೆಯ ಸುಳಿವು ನೀಡಿದ್ದು, ಹೊಸ ಕಾರುಗಳ ಪಟ್ಟಿಯಲ್ಲಿ ನ್ಯೂ ಜನರೇಷನ್ ಮಾದರಿಗಳು ಸಹ ಭಾರೀ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ.

ಸಿಎನ್‌ಜಿ ಮಾದರಿಯಲ್ಲೂ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವಾರು ಕಾರು ಮಾದರಿಗಳ ಮಾರಾಟವನ್ನು ಹೊಂದಿರುವ ಮಾರುತಿ ಸುಜುಕಿಯು ಟಾಪ್ 10 ಕಾರುಗಳ ಮಾರಾಟ ಪಟ್ಟಿಯಲ್ಲಿ ಒಟ್ಟು 7 ಕಾರು ಮಾದರಿಗಳು ಮುಂಚೂಣಿಯಲ್ಲಿದ್ದು, ಮುಂದಿನ ಎರಡು ವರ್ಷಗಳ ಅವಧಿಗಾಗಿ ಮತ್ತಷ್ಟು ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆಗಾಗಿ ಸಿದ್ದತೆ ನಡೆಸುತ್ತಿದೆ. ಮಾಹಿತಿಗಳ ಪ್ರಕಾರ ಮಾರುತಿ ಕಂಪನಿಯು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಒಟ್ಟು ಆರು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಸಿಎನ್‌ಜಿ ಮಾದರಿಯಲ್ಲೂ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಪ್ರತಿ ಆರು ತಿಂಗಳಿಗೆ ಒಂದರಂತೆ ಹೊಸ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿರುವ ಮಾರುತಿ ಸುಜುಕಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ಕಿಯಾ ಸೆಲ್ಟೊಸ್ ಮತ್ತು ಹ್ಯುಂಡೈ ಕ್ರೆಟಾ ಕಾರಿಗೆ ಪೈಪೋಟಿಯಾಗಿ ಹೊಸ ವಿಟಾರಾ ಬ್ರೆಝಾ ಕಾರು ಮಾದರಿಯನ್ನು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಳಿಸುತ್ತಿದೆ.

ಸಿಎನ್‌ಜಿ ಮಾದರಿಯಲ್ಲೂ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿರುವ ಹೊಸ ವಿಟಾರಾ ಬ್ರೆಝಾ ಮಾದರಿಯು ಈ ವರ್ಷದ ಮಧ್ಯಂತರದಲ್ಲಿ ಬಿಡುಗಡೆಯಾಗಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಎಂಜಿನ್ ನವೀಕರಣದೊಂದಿಗೆ ಹೊಸ ಎಂಜಿನ್ ಆಯ್ಕೆಯನ್ನು ಸಹ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಸಿಎನ್‌ಜಿ ಮಾದರಿಯಲ್ಲೂ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಬಿಎಸ್-6 ಎಮಿಷನ್ ಜಾರಿ ನಂತರ ಹೊಸ ಕಾರುಗಳ ಮಾರಾಟದಲ್ಲಿ ಭಾರೀ ಬದಲಾವಣೆ ಪರಿಚಯಿಸಿರುವ ಮಾರುತಿ ಸುಜುಕಿಯು ಪ್ರಮುಖ ಕಾರುಗಳ ಮಾದರಿಗಳ ಮಾರಾಟದ ಮೇಲೆ ಹೆಚ್ಚು ಒತ್ತು ನೀಡುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.

ಸಿಎನ್‌ಜಿ ಮಾದರಿಯಲ್ಲೂ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಹೊಸ ತಲೆಮಾರಿನ ಕಾರುಗಳ ಪೈಕಿ ಆಲ್ಟೊ, ಬಲೆನೊ ಮತ್ತು ಸ್ವಿಫ್ಟ್ ಸೇರಿದಂತೆ ಹೊಚ್ಚ ಹೊಸ ಕಾರು ಮಾದರಿಯಾದ ವಿಟಾರಾ ಬ್ರೆಝಾ ಎಸ್‌ಯುವಿ ಕೂಡಾ ಒಂದಾಗಿದ್ದು, ಹೊಸ ತಲೆಮಾರಿನ ಮಾದರಿಯು ಕಿಯಾ ಸೆಲ್ಟೊಸ್ ಮತ್ತು ಹ್ಯುಂಡೈ ಕ್ರೆಟಾ ಕಾರು ಮಾದರಿಗಳಿಗೆ ಭರ್ಜರಿ ಪೈಟೋಟಿ ನೀಡಲಿದೆ.

ಸಿಎನ್‌ಜಿ ಮಾದರಿಯಲ್ಲೂ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಹೊಸ ಕಾರಿನ ಉತ್ಪಾದನಾ ಆವೃತ್ತಿಯನ್ನು ಈಗಾಗಲೇ ಭಾರತದಲ್ಲಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದ್ದು, ಹೊಸ ಕಾರಿನ ಡಿಸೈನ್‌ಗಳು ಎಸ್‌ಯುವಿ ಪ್ರಿಯರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸಿಎನ್‌ಜಿ ಮಾದರಿಯಲ್ಲೂ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಪ್ರಸ್ತುತ ಮಾರುಕಟ್ಟೆಯಲ್ಲಿ ವಿಟಾರಾ ಬ್ರೆಝಾ ಮಾದರಿಯಲ್ಲಿ ಮಾರುತಿ ಸುಜುಕಿ ಕಂಪನಿಯು ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.5-ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್‌ ಆಯ್ಕೆ ನೀಡುತ್ತಿದ್ದು, ಇದು ಉತ್ತಮ ಇಂಧನ ದಕ್ಷತೆ ಹೊಂದಿದೆ. ಹೊಸ ತಲೆಮಾರಿನ ಆವೃತ್ತಿಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಎಂಜಿನ್‌ನೊಂದಿಗೆ ಸಿಎನ್‌ಜಿ ಮಾದರಿಯನ್ನು ಪರಿಚಯಿಸಲಾಗುತ್ತಿದ್ದು, ಸಿಎನ್‌ಜಿ ಆಯ್ಕೆ ಹೊಂದಿರುವ ಮೊದಲ ಎಸ್‌ಯುವಿ ಮಾದರಿಯಾಗಲಿದೆ.

ಸಿಎನ್‌ಜಿ ಮಾದರಿಯಲ್ಲೂ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಜನಪ್ರಿಯ ಕಾರು ಮಾದರಿಗಳಾದ ಆಲ್ಟೊ, ವ್ಯಾಗನ್‌ಆರ್, ಸೆಲೆರಿಯೊ, ಎಸ್ ಪ್ರೆಸ್ಸೊ, ಇಕೋ ಮತ್ತು ಎರ್ಟಿಗಾ ಮಾದರಿಯಲ್ಲಿ ಸಿಎನ್‌ಜಿ ಮಾದರಿಗಳನ್ನು ಮಾರಾಟ ಮಾಡುತ್ತಿರುವ ಮಾರುತಿ ಸುಜುಕಿ ಕಂಪನಿಯು ಮೊದಲ ಬಾರಿಗೆ ಸಿಎನ್‌ಸಿ ಕಾರುಗಳ ಮಾರಾಟದಲ್ಲಿ ದೊಡ್ಡ ಮಟ್ಟದ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, 2020-21ರ ಅವಧಿಯ ಒಟ್ಟು ಕಾರು ಮಾರಾಟ ಪ್ರಮಾಣದಲ್ಲಿ ಸಿಎನ್‌ಜಿ ಕಾರುಗಳನ್ನು ಮಾರಾಟವು ಶೇ.30ರಷ್ಟು ಮುನ್ನಡೆ ಸಾಧಿಸಿದೆ.

ಸಿಎನ್‌ಜಿ ಮಾದರಿಯಲ್ಲೂ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಮಾಲಿನ್ಯ ತಗ್ಗಿಸುವ ಉದ್ದೇಶದಿಂದಾಗಿ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟವನ್ನು ತಗ್ಗಿಸಲಾಗುತ್ತಿದ್ದು, ಪರಿಸರಕ್ಕೆ ಪೂರಕರವಾದ ಸಿಎನ್‌ಜಿ, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಹೆಚ್ಚು ಅಭಿವೃದ್ದಿಗೊಳಿಸಲಾಗುತ್ತಿದೆ.

ಸಿಎನ್‌ಜಿ ಮಾದರಿಯಲ್ಲೂ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಇನ್ನು ಹೊಸ ಕಾರಿನಲ್ಲಿ ನವೀಕರಣಗೊಳಿಸಲಾದ ಮುಂಭಾಗದ ವಿನ್ಯಾಸದೊಂದಿಗೆ ಎಲೆಕ್ಟ್ರಿಕ್ ಸನ್‌ರೂಫ್, ಗರಿಷ್ಠ ಸುರಕ್ಷತೆಗಾಗಿ ಹೈ ಎಂಡ್ ಮಾದರಿಗಳಲ್ಲಿ 6 ಏರ್‌ಬ್ಯಾಗ್ ಜೋಡಣೆ ಹೊಂದಿರಲಿದ್ದು, ಹೊಸ ಕಾರು ಮಾರುತಿ ಸುಜುಕಿ ಕಂಪನಿಗೆ ಮತ್ತಷ್ಟು ಬೇಡಿಕೆ ತಂದುಕೊಡಲಿದೆ.

ಸಿಎನ್‌ಜಿ ಮಾದರಿಯಲ್ಲೂ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಜೊತೆಗೆ ಹೊಸ ಕಾರಿನಲ್ಲಿ ಪ್ಯಾಡಲ್ ಶಿಫ್ಟರ್, ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ದೊಡ್ಡ ಟಚ್‌ಸ್ಕ್ರೀನ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಹೊಸ ಮಾದರಿಯ ಮಲ್ಟಿ ಇನ್ಪಾಮೆಷನ್ ಡಿಸ್‌ಪ್ಲೇ ಹೊಂದಿರಲಿದೆ.

ಸಿಎನ್‌ಜಿ ಮಾದರಿಯಲ್ಲೂ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಇದರಲ್ಲದೆ 2022ರ ವಿಟಾರಾ ಬ್ರೆಝಾ ಹೆಚ್ಚು ಸುಧಾರಿತ ಕನೆಕ್ಟಿವಿಟಿ ಕಾರು ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಳ್ಳುತ್ತಿದ್ದು, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಕ್ಲೈಮೇಟ್ ಕಂಟ್ರೋಲ್ ಮತ್ತು ಹೆಡ್‌ಲೈಟ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳು ಪಡೆಯುವ ಸಾಧ್ಯತೆಗಳಿವೆ.

ಸಿಎನ್‌ಜಿ ಮಾದರಿಯಲ್ಲೂ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ವಿಟಾರಾ ಬ್ರೆಝಾ ಕಾರು ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.61 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 11.20 ಲಕ್ಷ ಬೆಲೆ ಪಡೆದುಕೊಂಡಿದ್ದು, ಹೊಸ ತಲೆಮಾರಿನ ಆವೃತ್ತಿಯು ಹಲವು ಹೊಸ ಬದಲಾವಣೆಗಳೊಂದಿಗೆ ತುಸು ದುಬಾರಿಯಾಗಿರಲಿದೆ.

ಸಿಎನ್‌ಜಿ ಮಾದರಿಯಲ್ಲೂ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಹೊಸ ಕಾರಿನಲ್ಲಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿದ ನಂತರವೂ ವಿಟಾರಾ ಬ್ರೆಝಾ ಖರೀದಿದಾರರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹೊಸ ತಲೆಮಾರಿನ ಆವೃತ್ತಿಯು ಹೊಸ ಬದಲಾವಣೆಗಳೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.

Article Published On: Tuesday, January 11, 2022, 11:31 [IST]
English summary
New gen maruti brezza to be company first cng suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+