ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಇಂಡಿಯಾ ತನ್ನ ನ್ಯೂ ಜನರೇಷನ್ ಟ್ಯೂಸಾನ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿ

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ವೆಬ್‌ಸೈಟ್‌ನಿಂದ ಪ್ರಸ್ತುತ ಜನರೇಷನ್ ಟ್ಯೂಸಾನ್ ಎಸ್‍ಯುವಿಯ ಹೆಸರನ್ನು ಇತ್ತೀಚೆಗೆ ತೆಗೆದುಹಾಕಿತ್ತು. ಇದೀಗ ಹ್ಯುಂಡೈ ಕಂಪನಿಯು ಭಾರತೀಯ ವೆಬ್‌ಸೈಟ್‌ನಲ್ಲಿ ಹೊಸ ಟ್ಯೂಸಾನ್ ಎಸ್‍ಯುವಿಯ ಹೆಸರನ್ನು ಪಟ್ಟಿ ಮಾಡಿದ್ದಾರೆ. ಪ್ರಸ್ತುತ ಜನರೇಷನ್ ಟ್ಯೂಸಾನ್ ಎಸ್‍ಯುವಿಯು ಕೊನೆಯದಾಗಿ ಜುಲೈ 2020 ರಲ್ಲಿ ನವೀಕರಿಸಲಾಗಿದೆ. ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ನ್ಯೂ ಜನರೇಷನ್ ಟ್ಯೂಸಾನ್ ಎಸ್‍ಯುವಿಯನ್ನು 2020 ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿತು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿ

ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಪ್ರಪಂಚದಾದ್ಯಂತ ಆಯ್ದ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಆದರೆ ಭಾರತೀಯ ಮಾರುಕಟ್ಟೆಯು ಇನ್ನೂ ಹಿಂದಿನ ಜನರೇಷನ್ ಮಾದರಿಯನ್ನು ಮಾರಾಟದಲ್ಲಿದೆ. ಇದೀಗ ಹ್ಯುಂಡೈ ಕಂಪನಿಯು ತನ್ನ ನ್ಯೂ ಜನರೇಷನ್ ಟ್ಯೂಸಾನ್ ಎಸ್‍ಯುವಿಯನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸಲಿದೆ ಎಂದು ಹೇಳಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿ

ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಹಲವಾರು ಹೊಸ ಅಪ್ದೇಟ್ ಗಳೊಂದಿಗೆ ಬಿಡುಗಡೆಯಾಗಲಿದೆ. ಪ್ರಸ್ತುತ ಅಂತಿಮ ಪರೀಕ್ಷೆಯ ಹಂತದಲ್ಲಿರುವ ಹ್ಯುಂಡೈ ಟ್ಯೂಸಾನ್ ಮಾದರಿಯು ಗಮನಾರ್ಹ ವಿನ್ಯಾಸ ಮತ್ತು ವೈಶಿಷ್ಟ್ಯದ ನವೀಕರಣಗಳನ್ನು ಪಡೆಯುತ್ತದೆ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿ

ಈ ಹೊಸ ಟ್ಯೂಸಾನ್ ಎಸ್‍ಯುವಿಯು ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.25 ಲಕ್ಷದಿಂದ ರೂ.35 ಲಕ್ಷದವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಎಸ್‍ಯುವಿಯನ್ನು ಸಿಕೆಡಿ (ಸಂಪೂರ್ಣವಾಗಿ ನಾಕ್ಡ್ ಡೌನ್) ಯುನಿಟ್ ಆಗಿ ಬರುತ್ತದೆ. ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಭಾರತದಲ್ಲಿ ಕಾಣಿಸಿಕೊಂಡ ಸ್ಪೈ ಚಿತ್ರಗಳು ಬಹಿರಂಗವಾಗಿತ್ತು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿ

ಈ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಮುಂಭಾಗ ಆಕರ್ಷಕ ಲುಕ್ ಅನ್ನು ಹೊಂದಿದ, ಈ ಹೊಸ ಎಸ್‍ಯುವಿಯು ಸ್ಪೋರ್ಟಿ ಲುಕ್ ನಲ್ಲಿ ಕಾಣುವಂತೆ ಅಗ್ರೇಸಿವ್ ವಿನ್ಯಾಸದಿಂದ ಕೂಡಿದೆ. ಈ ಹೂಸ ಎಸ್‍ಯುವಿಯ ಹೆಡ್‌ಲ್ಯಾಂಪ್ ಯುನಿಟ್ ಹೆಚ್ಚು ಆಕರ್ಷಕವಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿ

ಈ ಹೊಸ ಟ್ಯೂಸಾನ್ ಎಸ್‍ಯುವಿಯಲ್ಲಿ ಕ್ರೋಮ್ ಸ್ಟ್ರಿಪ್ ಅನ್ನು ಹೊಂದಿದೆ. ಈ ಎಸ್‍ಯುವಿಯ ಕೊನೆಯಲ್ಲಿ ವಿಶಿಷ್ಟವಾದ ಸಿ-ಪಿಲ್ಲರ್ ಆಕಾರವನ್ನು ರೂಪಿಸಿದೆ. ಈ ಹೊಸ ಎಸ್‍ಯುವಿಯ ಹಿಂದಿನ ಪ್ರೊಫೈಲ್‌ನಲ್ಲಿ ಉದ್ದವಾದ ಬೆಲ್ಟ್‌ಲೈನ್ಗಳಿವೆ. ಈ ಎಸ್‍ಯುವಿಯಲ್ಲಿ 19 ಇಂಚಿನ ವ್ಹೀಲ್ಸ್ ಅನ್ನು ಹೊಂದಿದೆ. ಈ ವ್ಹೀಲ್ ಗಳು ವಿಭಿನ್ನವಾದ ವಿನ್ಯಾಸವನ್ನು ಕೂಡ ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿ

ಈ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯಲ್ಲಿ ಶಾರ್ಕ್ ಫಿನ್ ಆಂಟೆನಾ, ಬಾಡಿ ಕಲರ್‌ನಲ್ಲಿ ರೂಫ್-ರೈಲ್ ಮತ್ತು ಫ್ಲೋಟಿಂಗ್ ರೂಫ್‌ಲೈನ್ ಹೊಂದಿದೆ. ಹಿಂಭಾಗದಲ್ಲಿ ಅಗಲವಾಗಿ ಉದ್ದಕೂ ರೆಡ್ ಎಲ್ಇಡಿ ಲೈಟ್ ಅನ್ನು ಅಳವಡಿಸಿದೆ. ಇದು ಟೈಲ್-ಲ್ಯಾಂಪ್‌ಗಳನ್ನು ಕನೆಕ್ಟ್ ಆಗಿದೆ. ಇನ್ನು ಟ್ಯೂಸನ್ ಎಸ್‍ಯುವಿಯಲಿರುವ ಟೈಲ್-ಲೈಟ್ ಕ್ರೆಟಾದ ಟೈಲ್-ಲ್ಯಾಂಪ್‌ನ ವಿಕಾಸಗೊಂಡ ಆವೃತ್ತಿಯಂತೆ ಕಾಣುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿ

ಈ ಹೊಸ ಎಸ್‍ಯುವಿಯ ಕೆಳಗಿನ ಬಂಪರ್ ಸಿಲ್ವರ್ ಸ್ಕಿಡ್ ಪ್ಲೇಟ್, ಸ್ಟಾಪ್ ಲ್ಯಾಂಪ್‌ಗಳು ಮತ್ತು ಏರ್ ವೆಂಟ್ಸ್ ಗಳನ್ನು ಹೊಂದಿರುತ್ತದೆ. ಇದು ಇಂಟಿಗ್ರೇಟೆಡ್ ಬ್ರೇಕ್ ಲೈಟ್ ಗಳೊಂದಿಗೆ ರೂಫ್ ಸ್ಪಾಯ್ಲರ್ ಅನ್ನು ಹೊಂದಿದೆ. ಈ ಹೊಸ ಟ್ಯೂಸಾನ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಹೊಂದಿರಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿ

ಇದರೊಂದಿಗೆ ಟ್ಯೂಸಾನ್ ಎಸ್‍ಯುವಿಯ ಎಸಿ ಮತ್ತು ಇತರ ಕಂಟ್ರೋಲ್ ಗಳಿಗಾಗಿ ಟಚ್-ಪ್ಯಾನೆಲ್‌ಗಳು, ಅನನ್ಯವಾಗಿ ವಿನ್ಯಾಸಗೊಳಿಸಲಾದ ಮಲ್ಟಿ-ಫಂಕ್ಷನಲ್ ಸ್ಟೀಯರಿಂಗ್ ವ್ಹೀಲ್, ಪಾರ್ಕಿಂಗ್ ಬ್ರೇಕ್, ಗೇರ್‌ಬಾಕ್ಸ್ ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿದೆ. ವೈರ್‌ಲೆಸ್ ಚಾರ್ಜಿಂಗ್ ಮತ್ತು ನೂತನ ಕನೆಕ್ಟಿವಿಟಿ ಫೀಚರ್ ಗಳನ್ನು ಕೂಡ ಹೊಂದಿರುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿ

ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯಲ್ಲಿ 2.0-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು ಟರ್ಬೊ-ಡೀಸೆಲ್ ಎಂಜಿನ್ ಆಯ್ಕೆಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಜೀಪ್ ಕಂಪಾಸ್, ಫೋಕ್ಸ್‌ವ್ಯಾಗನ್ ಟಿಗ್ವಾನ್ ಮತ್ತು ಸಿಟ್ರೊಯೆನ್ ಸಿ5 ಏರ್‌ಕ್ರಾಸ್‌ಗಳ ಎಸ್‍ಯುವಿಗಳಿಗೆ ಪೈಪೋಟಿಯನ್ನುನೀಡುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿ

ಹ್ಯುಂಡೈ ಕಂಪನಿಯು ತನ್ನ ಹೊಸ ಟ್ಯೂಸಾನ್ ಎಸ್‍ಯುವಿಯನ್ನು ಯುರೋ NCAP ಕ್ರ್ಯಾಶ್ ಟೆಸ್ಟ್‌ಗೆ ಇತ್ತೀಚೆಗೆ ಒಳಪಡಿಸಿತ್ತು. ಈ ಕ್ರ್ಯಾಶ್ ಟೆಸ್ಟ್‌ನಲ್ಲಿ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಯುರೋ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಟ್ಯೂಸಾನ್ ಎಸ್‍ಯುವಿಯು ವಯಸ್ಕ ಪ್ರಯಾಣಿಕರ ವಿಭಾಗದಲ್ಲಿ ಶೇ.86 ರಷ್ಟು ಮತ್ತು ಮಕ್ಕಳ ಸುರಕ್ಷತಾ ವಿಭಾಗದಲ್ಲಿ ಶೇ.87 ರಷ್ಟು ಅಂಕಗಳನ್ನು ಗಳಿಸಿದೆ. ಈ ಯುರೋ NCAP ಪ್ರಕಾರ, ಟ್ಯೂಸಾನ್ ಎಸ್‍ಯುವಿ ಮುಂಭಾಗದ ಆಫ್‌ಸೆಟ್ ಪರೀಕ್ಷೆಯಲ್ಲಿ ಸ್ಥಿರವಾಗಿತ್ತು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿ

ಈ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಈಗಾಗಲೇ ಹಲವು ವಿದೇಶಗಳಲ್ಲಿನ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ಇದೀಗ ಈ ಹೊಸ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯನ್ನು ಶೀಘ್ರದಲ್ಲೇ ಪ್ರವೇಶಿಸಲಿದೆ.

Article Published On: Saturday, May 28, 2022, 12:56 [IST]
English summary
New gen tuscon suv listed in hyundai indias official website before launch details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+