ಭಾರತದಲ್ಲಿ ಅನಾವರಣವಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಎಸ್‍ಯುವಿ!

ಫ್ರೆಂಚ್ ವಾಹನ ತಯಾರಕ ಕಂಪನಿಯಾದ ರೆನಾಲ್ಟ್ ತನ್ನ ಡಸ್ಟರ್ ಎಸ್‍ಯುವಿಯನ್ನು ಭಾರತದಲ್ಲಿ 2012ರಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು. ಈ ಹೊಸ ರೆನಾಲ್ಟ್ ಡಸ್ಟರ್ ಮಿಡ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಪ್ರಾರಂಭದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು.

ಭಾರತದಲ್ಲಿ ಅನಾವರಣವಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಎಸ್‍ಯುವಿ!

ರೆನಾಲ್ಟ್ ಡಸ್ಟರ್ ಎಸ್‍ಯುವಿ ಮಾದರಿಯು ಭಾರತದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಗ್ರಾಹಕರ ಗಮನಸೆಳೆಯಲು ಯಶಸ್ವಿಯಾಗಿತ್ತು. ಈ ಎಸ್‍ಯುವಿಯು 2014ರಲ್ಲಿ ಎಡಬ್ಲ್ಯೂಡಿ ರೂಪಾಂತವನ್ನು ಪಡೆದುಕೊಂಡಿತ್ತು. ನಂತರ 2016ರಲ್ಲಿ ಎಎಂಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಹೊಸ ನವೀಕರಣವನ್ನು ಪಡೆದುಕೊಂಡಿತು. ಇನ್ನು 2017ರ ಅಂತ್ಯದಲ್ಲಿ ರೆನಾಲ್ಟ್ ಕಂಪನಿಯು ಎರಡನೇ ತಲೆಮಾರಿನ ಡಸ್ಟರ್ ಮಾದರಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಆದರೆ ಈ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿಲ್ಲ.

ಭಾರತದಲ್ಲಿ ಅನಾವರಣವಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಎಸ್‍ಯುವಿ!

2019ರಲ್ಲಿ ರೆನಾಲ್ಟ್ ಕಂಪನಿಯು ಡಸ್ಟರ್ ಎಸ್‍ಯುವಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟವಾಗುವ ಮಾದರಿಯಂತೆಯೇ ವಿನ್ಯಾಸ ಪರಿಷ್ಕರಣೆಗಳೊಂದಿಗೆ ಫೇಸ್ ಲಿಫ್ಟ್ ಮಾದರಿಯಾಗಿ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಆದರೆ ನಂತರದಲ್ಲಿ ಹ್ಯುಂಡೈ ಕ್ರೆಟಾ, ಮತ್ತು ಕಿಯಾ ಸೆಲ್ಟೋಸ್ ನಂತಹ ಎಸ್‍ಯುವಿಗಳ ಮಾದರಿಗಳ ಬಿಡುಗಡೆಯೊಂದಿಗೆ ಪೈಪೋಟಿ ಹೆಚ್ಚಾಯ್ತು.

ಭಾರತದಲ್ಲಿ ಅನಾವರಣವಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಎಸ್‍ಯುವಿ!

ಅತ್ಯಾಧುನಿಕ ಕಿಯಾ ಸೆಲ್ಟೋಸ್ ಮತ್ತು ಹ್ಯುಂಡೈ ಕ್ರೆಟಾ ಎಸ್‍ಯುವಿಗಳ ಮುಂದೆ ಡಸ್ಟರ್ ತನ್ನ ಆಕರ್ಷಣೆಯನ್ನು ಕಳೆದುಕೊಂಡಿತ್ತು. ಇದರಿಮ್ದ ಕಂಪನಿಯು ಭಾರತದಲ್ಲಿ ಡಸ್ಟರ್ ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿತು. ಆದರೆ ಹೊಸ ವರದಿಗಳ ಪ್ರಕಾರ, ರೆನಾಲ್ಟ್ ಕಂಪನಿಯು ತನ್ನ ನ್ಯೂ ಜನರೇಷನ್ ಡಸ್ಟರ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಭಾರತದಲ್ಲಿ ಅನಾವರಣವಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಎಸ್‍ಯುವಿ!

ಕಂಪನಿಯು ಪ್ರಸ್ತುತ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಎಸ್‍ಯುವಿಯ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡಿದೆ. ಈ ನ್ಯೂ ಜನರೇಷನ್ ರೆನಾಲ್ಟ್ ಎಸ್‍ಯುವಿಯು 2024ರಲ್ಲಿ ಅನವರಣವಾಗಲಿದೆ. ಈ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಎಸ್‍ಯುವಿಯು ಹೊಸ ಫ್ಲಾಟ್ ಫಾರ್ಮ್ ಅನ್ನು ಆಧರಿಸಿದೆ.

ಭಾರತದಲ್ಲಿ ಅನಾವರಣವಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಎಸ್‍ಯುವಿ!

ಇನ್ನು ಈ ನ್ಯೂ ಜನರೇಷನ್ ಮಾದರಿಯು ಒರಟಾದ ವಿನ್ಯಾಸ ಮತ್ತು ಹೊಸ ಎಂಜಿನ್ ಆಯ್ಕೆಗಳನ್ನು ಹೊಂದಿರಲಿವೆ. ಈ ಹೊಸ ಡಸ್ಟರ್ ಮಾದರಿಯಲ್ಲಿ ಕಾಸ್ಮೆಟಿಕ್ ಮತ್ತು ತಾಂತ್ರಿಕ ದೃಷ್ಟಿಕೋನದಿಂದ ಪ್ರಮುಖ ಬದಲಾವಣೆಗಳನ್ನು ತರಲಿದೆ.

ಭಾರತದಲ್ಲಿ ಅನಾವರಣವಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಎಸ್‍ಯುವಿ!

ಇನ್ನು ಎರಡನೇ ತಲೆಮಾರಿನ ಡಸ್ಟರ್ ಬಿಒ ಪ್ಲಾಟ್ ಫಾರ್ಮ್ ಅನ್ನು ಆಧರಿಸಿದ್ದರೆ, ನ್ಯೂ ಜನರೇಷನ್ ಡಸ್ಟರ್ ಎಸ್‍ಯುವಿಯು ರೆನಾಲ್ಟ್-ನಿಸ್ಸಾನ್ ಅಲೈಯನ್ಸ್ ಸಿಎಂಎಫ್-ಬಿ ಮಾಡ್ಯುಲರ್ ಪ್ಲಾಟ್ ಫಾರ್ಮ್ ಅನ್ನು ಆಧರಿಸಿದೆ. ಇದು ಪ್ರಸ್ತುತ ಲೋಗನ್ ಮತ್ತು ಸ್ಯಾಂಡರೊ ಎಸ್‍ಯುವಿ ಮಾದರಿಗಳನ್ನು ಇದೇ ಪ್ಲಾಟ್ ಫಾರ್ಮ್ ನಲ್ಲಿ ಅಭಿವೃದ್ದಿಪಡಿಸಲಾಗಿದೆ.

ಭಾರತದಲ್ಲಿ ಅನಾವರಣವಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಎಸ್‍ಯುವಿ!

ಈ ಹೊಸ ಪ್ಲಾಟ್ಫಾರ್ಮ್ ಸುರಕ್ಷತೆ ಮತ್ತು ಚಾಲನಾ ಸಾಮರ್ಥ್ಯವನ್ನು ಗಮನಾರ್ಗವಾಗಿ ಸುಧಾರಣೆ ನೀಡುತ್ತದೆ. ಇದರೊಂದಿಗೆ ಎಲೆಕ್ಟ್ರಿಕ್ ಮೋಟಾರ್ ಅನ್ನು ನೀಡಬಹುಉದು. ವರದಿಗಳ ಪ್ರಕಾರ, ನ್ಯೂ ಜನರೇಷನ್ ಹೈಬ್ರಿಡ್ ಮಾದರಿಯಾಗಿರುತ್ತದೆ. ಇದು ಹೊಸ ಇ-ಟೆಕ್ ಮಾದರಿಯು ಹೈಬ್ರಿಡ್ ಸೆಟಪ್ ಅನ್ನು ಕೂಡ ಸ್ವೀಕರಿಸುತ್ತದೆ.

ಭಾರತದಲ್ಲಿ ಅನಾವರಣವಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಎಸ್‍ಯುವಿ!

ರೆನಾಲ್ಟ್ ಕಂಪನಿಯು ಕ್ಲಿಯೊ ಮತ್ತು ಕ್ಯಾಪ್ಚರ್ ಮಾದರಿಗಳನ್ನು ಇದೇ ರೀತಿಯ ಹೈಬ್ರಿಡ್ ಸೆಟಪ್ ನೊಂದಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಹೊಸ ರೆನಾಲ್ಟ್ ಡಸ್ಟರ್ ಎಸ್‍ಯುವಿಯು 1.6 ಲೀಟರ್ ಪೆಟ್ರೋಲ್ ಎಂಜಿನ್ ಬದಲಿಗೆ 1.8 ಲೀಟರ್ ಎಂಜಿನ್ ಅನ್ನು ಪಡೆದುಕೊಳ್ಳಬಹುದು. 1.6 ಲೀಟರ್ ಪೆಟ್ರೋಲ್ ಎಂಜಿನ್ ಬದಲು 1.8 ಎಂಜಿನ್ ಲೀಟರ್ ಎಂಜಿನ್ ಹೆಚ್ಚು ಸೂಕ್ತ ಎಂದು ಹೇಳಲಾಗುತ್ತಿದೆ. ಇನ್ನು ಸಂಪೂರ್ಣ ಹೈಬ್ರಿಡ್ ಸೆಟ್ ಅನ್ನು ರೂಪಿಸಲು ಎರಡೂ ಎಲೆಕ್ಟ್ರಿಕ್ ಮೋಟಾರ್ ಗಳನ್ನು ಸಹ ನೀಡಲಾಗುತ್ತದೆ.

ಭಾರತದಲ್ಲಿ ಅನಾವರಣವಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಎಸ್‍ಯುವಿ!

ಈ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ವಿನ್ಯಾಸವು ಬಿಗ್ ಸ್ಟರ್ ಎಸ್‍ಯುವಿ ಕಾನ್ಸೆಪ್ಟ್ ನಿಂದ ಸ್ಪೂರ್ತಿ ಪಡೆದಿದೆ. ಈ ಕಾನ್ಸೆಪ್ಟ್ ಮಾದರಿಯನ್ನು ಕಳೆದ ವರ್ಷ ಕಂಪನಿಯು ಅನಾವರಣಗೊಳಿಸಲಾಗಿತ್ತು. ಈ ಎಸ್‍ಯುವಿಯು ಅಗ್ರಿಸಿವ್ ಆಗಿ ಕಾಣುವ ಆಗಲವಾದ ಗ್ರಿಲ್ ಮತ್ತು ಡೆಸಿಯಾದ ವೈ-ಆಕಾರದ ಸಿಗ್ನೇಚರ್ ಹೆಡ್ ಲೈಟ್ ಅನ್ನು ಇತ್ತೀಚಿನ ಆವೃತ್ತಿಯನ್ನು ಕೂಡ ಹೊಂದಿರುತ್ತದೆ. ಈ ಎಸ್‌ಯುವಿಯು ಎಲ್ಇಡಿ ಲ್ಯಾಂಪ್ ಗಳನ್ನು ಪಡೆಯುತ್ತದೆ.

ಭಾರತದಲ್ಲಿ ಅನಾವರಣವಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಎಸ್‍ಯುವಿ!

ಇನ್ನು ರೆನಾಲ್ಟ್ ಕಂಪನಿಯು ನವೀಕರಿಸಿದ ಡಸ್ಟರ್ ಫೇಸ್‌ಲಿಫ್ಟ್ ಮಾದರಿಯನ್ನು ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಈ ಮಾದರಿಯು ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಈ ಮಾದರಿಯಲ್ಲಿ ಆಧುನಿಕ ದಿನಗಳಲ್ಲಿ ಬೇಡಿಕೆಗಳಿಗೆ ಅನುಗುಣವಾಗಿ ಕ್ಯಾಬಿನ್ ಒಳಗೆ ಹಲವು ಅತ್ಯಾಧುನಿಕ ಫೀಚರ್ಸ್ ಗಳನ್ನು ನೀಡಲಾಗಿದೆ. ಇನ್ನು ರೆನಾಲ್ಟ್ ಕಂಪನಿಯು ಇತ್ತೀಚೆಗೆ ಆಸ್ಟ್ರಲ್ ಎಂಬ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಮುಂಬರುವ ಎಸ್‍ಯುವಿ ಸಂಪೂರ್ಣವಾಗಿ ಹೊಸ ಬಾಡಿ ಶೈಲಿಯನ್ನು ಪಡೆಯುತ್ತದೆ. ಈ ಹೊಸ ಎಸ್‌ಯುವಿಯು ಸಿಎಂಎಂ-ಸಿಡಿ ಎಂಬ ಪ್ಲಾಟ್ ಫಾರ್ಮ್ ಅನ್ನು ಆಧರಿಸಿದೆ.

ಭಾರತದಲ್ಲಿ ಅನಾವರಣವಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಎಸ್‍ಯುವಿ!

ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಎಸ್‍ಯುವಿಯು ಮೊದಲು ಯುರೋಪ್ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಬಹುದು. ನಂತರದಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.. ಯಾಕೆಂದರೆ ರೆನಾಲ್ಟ್ ಕಂಪನಿಗೆ ದೊಡ್ಡ ಯಶಸ್ಸನ್ನು ತಂಡುಕೊಂಡ ಮಾದರಿ ಡಸ್ಟರ್ ಆಗಿದೆ. ಇದರಿಂದ ಡಸ್ಟರ್ ಮಾದರಿಯ ನ್ಯೂ ಜನರೇಷ ಆವೃತ್ತಿಯನ್ನು ಬಿಡುಗಡೆಗೊಳಿಸಬಹುದು.

Article Published On: Monday, March 14, 2022, 10:38 [IST]
English summary
New generation renault duster suv could be launch in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+