Just In
- 40 min ago
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- 1 hr ago
13 ಉದ್ಯೋಗಿಗಳಿಗೆ ಹೊಸ ಟೊಯೋಟಾ ಗ್ಲಾನ್ಜಾ ಕಾರುಗಳನ್ನು ಉಡುಗೊರೆಯಾಗಿ ನೀಡಿದ ಕಂಪನಿ
- 2 hrs ago
ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಿದ್ರೆ 50% ರಿಯಾಯಿತಿ: ರಾಜ್ಯ ಸರ್ಕಾರ ಆದೇಶ
- 3 hrs ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
Don't Miss!
- News
Bengaluru traffic police: ನೆಟ್ಟಿಗರ ಮನಗೆದ್ದ ಬೆಂಗಳೂರು ಟ್ರಾಫಿಕ್ ಪೊಲೀಸರ ನೃತ್ಯ
- Finance
Adani Stocks: ಅದಾನಿ ಸಂಸ್ಥೆ ಮೌಲ್ಯ ಅರ್ಧದಷ್ಟು ಇಳಿಕೆ, 108 ಬಿಲಿಯನ್ ಡಾಲರ್ ನಷ್ಟ
- Technology
ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್ಗಳು; ಮಹಿಳೆಯರಿಗಂತೂ ಅಗತ್ಯ!
- Sports
ಸ್ಪಿನ್ನರ್ಗಳ ವಿರುದ್ಧ ಪರದಾಡುವ ಕೊಹ್ಲಿಗೆ ಆಸಿಸ್ ಸರಣಿಗೂ ಮುನ್ನ ಪಠಾಣ್ 'ಆಕ್ರಮಣಕಾರಿ' ಸಲಹೆ!
- Movies
Jothe Jotheyali: ಅನುಳಿಂದ ಮತ್ತೆ ದೂರ ಆಗುತ್ತಾನಾ ಆರ್ಯ..?
- Lifestyle
ಗಂಡಾಗಿ ಬದಲಾಗಿದ್ದ ಮಂಗಳಮುಖಿ ಜಿಹಾದ್ ಈಗ ಗರ್ಭಿಣಿ: 8 ತಿಂಗಳ ಗರ್ಭಿಣಿ ಈ ಜಿಹಾದ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹ್ಯುಂಡೈ ಕ್ರೆಟಾಗೆ ಸೆಡ್ಡು ಹೊಡೆಯಲು ಬರುತ್ತಿದೆ ಹೊಸ ಹೋಂಡಾ ಎಸ್‍ಯುವಿ
ಹೋಂಡಾ ಕಾರ್ಸ್ ಇಂಡಿಯಾ ಮುಂದಿನ ಎರಡು ವರ್ಷಗಳಲ್ಲಿ ತನ್ನ ಎಸ್‍ಯುವಿ ಉತ್ಪನ್ನ ಪೋರ್ಟ್‌ಫೋಲಿಯೊವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಹೋಂಡಾ ಕಂಪನಿಯು ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಸುಜುಕಿ ಬ್ರೆಝಾಗೆ ಪೈಪೋಟಿಯಾಗಿ ಹೊಸ ಮಿಡ್ ಸೈಜ್ ಗಾತ್ರದ ಎಸ್‌ಯುವಿ ಮತ್ತು ಸಬ್ -4 ಮೀಟರ್ ಎಸ್‌ಯುವಿಯನ್ನು ಪ್ರಾರಂಭಿಸುವ ಯೋಜನೆಯನ್ನು ಹೊಂದಿದ್ದಾರೆ.
ಎರಡೂ ಮಾದರಿಗಳನ್ನು ಅಮೇಜ್ ವೇದಿಕೆಯಲ್ಲಿ ವಿನ್ಯಾಸಗೊಳಿಸಲಾಗುವುದು. ಹೊಸ ವರದಿಯ ಪ್ರಕಾರ, ಹೋಂಡಾದ ಹೊಸ ಮಧ್ಯಮ ಗಾತ್ರದ ಎಸ್‍ಯುವಿ (ಕೋಡ್ ನೇಮ್ - PF2) ಏಪ್ರಿಲ್ 2023ರ ವೇಳೆಗೆ ಶೋರೂಮ್‌ಗಳನ್ನು ತಲುಪಲಿದೆ. ಸುಮಾರು 4.2 ಮೀಟರ್ ಉದ್ದದ, ಹೊಸ ಹೋಂಡಾ ಎಸ್‍ಯುವಿ ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಹೋಂಡಾ ಕಂಪನಿಯು ಭಾರತದಲ್ಲಿ ಎಸ್‍ಯುವಿ ಮಾದರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿತಿಲ್ಲ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಎಸ್‍ಯುವಿ ಮಾದರಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ಇದರಿಂದ ಹೋಂಡಾ ಕಂಪನಿಯು ಹೊಸ ಎಸ್‍ಯುವಿ ಮಾದರಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ, ಕೆಲವು ವರದಿಗಳ ಪ್ರಕಾರ ಮಿಡ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಬಹುದು. ಭಾರತದಲ್ಲಿ ಬೆಳೆಯುತ್ತಿರುವ ಮತ್ತು ಹೆಚ್ಚು ಸ್ಪರ್ಧಾತ್ಮಕ ಎಸ್‍ಯುವಿ ವಿಭಾಗದಲ್ಲಿ ಹೋಂಡಾ ಹೆಚ್‍ಆರ್-ವಿ ಉತ್ತಮವಾದ ಫಿಟ್ ಆಗಿರಬಹುದು. ಇದಲ್ಲದೆ, ಹೊಸ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಯು ಬಿಡುಗಡೆಯಾಗುವ ಸಾಧ್ಯತೆಗಳಿದೆ ಎಂದು ಹೇಳಲಾಗುತ್ತಿದೆ. ಹೋಂಡಾ ಕಂಪನಿಯು ಇತ್ತೀಚೆಗೆ, ಯುಎಸ್ ಮಾರುಕಟ್ಟೆಯಲ್ಲಿ ಹೋಂಡಾ ಹೆಚ್‍ಆರ್-ವಿ ಎಸ್‍ಯುವಿ ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.
ಹೋಂಡಾ ಕಂಪನಿಯು ಎಸ್‍ಯುವಿ ವಿಭಾಗಕ್ಕೆ ಪ್ರಮುಖ ಮರು-ಪ್ರವೇಶಕ್ಕೆ ಸಜ್ಜಾಗಿದೆ. ಭಾರತದಲ್ಲಿ ಹೋಂಡಾದ ಪ್ರಸ್ತುತ ಉತ್ಪನ್ನ ಪೋರ್ಟ್‌ಫೋಲಿಯೋ ಹೋಂಡಾ ಅಮೇಜ್, ಹೋಂಡಾ ಸಿಟಿ (4ನೇ ಜನರೇಷನ್), ಹೋಂಡಾ ಸಿಟಿ (5ನೇ ಜನರೇಷನ್), ಹೋಂಡಾ ಜಾಝ್ ಮತ್ತು ಹೋಂಡಾ ಡಬ್ಲ್ಯುಆರ್-ವಿ ಒಳಗೊಂಡಿದೆ. ಹೋಂಡಾ ಇತ್ತೀಚೆಗೆ, ಯುಎಸ್ ಮಾರುಕಟ್ಟೆಯಲ್ಲಿ ಹೋಂಡಾ ಹೆಚ್‍ಆರ್-ವಿ ಎಸ್‍ಯುವಿ ಹೊಸ ನವೀಕರಣಗಳನ್ನು ಪಡೆದುಕೊಂಡಿದೆ. ವಿದೇಶಿ ಮಾರುಕಟ್ಟೆಯಲ್ಲಿ 2022ರ ಹೋಂಡಾ ಹೆಚ್‍ಆರ್-ವಿ ಎಸ್‍ಯುವಿ ಬಹು ಡ್ರೈವ್‌ಟ್ರೇನ್ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸಿತು.
ಈ ಹೈಬ್ರಿಡ್ ವ್ಯವಸ್ಥೆಯು ಭಾರತದಲ್ಲಿ ಹೊಸ ಹೋಂಡಾ ಸಿಟಿ ಇಹೆಚ್‌ಇವಿ ಹೈಬ್ರಿಡ್‌ನಲ್ಲಿ ಬರುವಂತೆಯೇ ಇರುತ್ತದೆ. 2022ರ ಹೋಂಡಾ ಹೆಚ್‍ಆರ್-ವಿ ಕ್ರಾಸ್ಒವರ್ ನವೀಕರಣಗಳಿಗೆ ಸಂಬಂಧಿಸಿದಂತೆ, ಹೊಸ ಮತ್ತು ಹೆಚ್ಚು ಆಧುನಿಕ ಮತ್ತು ಫ್ಯೂಚರಿಸ್ಟಿಕ್-ಕಾಣುವ ವಿನ್ಯಾಸಕ್ಕಾಗಿ ಹಳೆಯ ಬಾಹ್ಯ ಶೈಲಿಯನ್ನು ಹೊಂದಿದೆ. ಈ ವಾಹನದ ಮುಂಭಾಗವು ಹೊಸ ಬಾಡಿ ಬಣ್ಣದ ಮಲ್ಟಿ-ಸ್ಲೇಟೆಡ್ ಗ್ರಿಲ್ ಅನ್ನು ಪಡೆಯುತ್ತದೆ ಅದು ಸ್ವಲ್ಪಮಟ್ಟಿಗೆ ಇವಿ ಕಾರಿನಂತೆ ಕಾಣುತ್ತದೆ. ಇದು ಡಿಆರ್‌ಎಲ್‌ಗಳೊಂದಿಗೆ ನಯವಾದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.
ಇದರೊಂದಿಗೆ ಮೆಶ್‌ನೊಂದಿಗೆ ಮರುವಿನ್ಯಾಸಗೊಳಿಸಲಾದ ಲೋವರ್ ಬಂಪರ್ ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಸಹ ಹೊಂದಿದೆ, ಬದಿಗೆ ಚಲಿಸುವಾಗ, ನೋಟವು ಕೂಪ್ ಎಸ್‍ಯುವಿನಂತೆ ಕಾಣುತ್ತದೆ. ಈ ಎಸ್‍ಯುವಿ ಹಿಂಭಾಗದಲ್ಲಿ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಬಂಪರ್ ಮತ್ತು ಹೆಚ್ಚು ಸ್ಪಷ್ಟವಾದ ಸ್ಕಿಡ್ ಪ್ಲೇಟ್ ಜೊತೆಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಎಲ್ಇಡಿ ಟೈಲ್ ಲ್ಯಾಂಪ್‌ಗಳ ಸೆಟ್ ಅನ್ನು ಹೊಂದಿದೆ. ಈ ಎಸ್‍ಯುವಿ ಇತರ ಫೀಚರ್ಸ್ ಗಳು, ಹೋಂಡಾ ಸೆನ್ಸಿಂಗ್, ಮಧ್ಯದಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಮತ್ತು ಸ್ಟ್ಯಾಂಡರ್ಡ್ ಆಟೋಮ್ಯಾಟಿಕ್ ಎಲ್ಇಡಿ ಹೆಡ್‌ಲೈಟ್‌ಗಳನ್ನು ಒಳಗೊಂಡಿದೆ.
ಹೊಸ ಹೋಂಡಾ ಹೆಚ್‍ಆರ್-ವಿ ಎಸ್‍ಯುವಿ ಎಸ್,ಇ ಮತ್ತು ವಿ ಟ್ರಿಮ್ ಸಿಂಗಲ್ ಝೋನ್ ಕೂಲಿಂಗ್ ಅನ್ನು ಮಾತ್ರ ಹೊಂದಿದೆ. ಹಿಂಭಾಗದ ಎಸಿ ವೆಂಟ್‌ಗಳು ಎಲ್ಲಾ ಮಾದರಿಗಳಲ್ಲಿ ಸಹ ಸ್ಟ್ಯಾಂಡರ್ಡ್ ಆಗಿರುತ್ತದೆ. ಎರಡು ವಿಭಿನ್ನ ವ್ಹೀಲ್ ಆಯ್ಕೆಗಳಿವೆ. ಹೈ-ಸ್ಪೆಕ್ ಮತ್ತು ಆರ್‌ಎಸ್ ಟ್ರಿಮ್‌ಗಳು 18-ಇಂಚಿನ ವ್ಹೀಲ್ ಗಳನ್ನು ಹೊಂದಿದ್ದರೆ, ಲೋ ಸ್ಪೆಕ್ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಕೂಡ ಹೊಂದಿವೆ. ಈ ಹೊಸ ಹೆಚ್‍ಆರ್-ವಿ ಕ್ರಾಸ್ಒವರ್ ನಲ್ಲಿ ಹೈಬ್ರಿಡ್ ಸಿಟಿ ಇಹೆಚ್‌ಇವಿ ಸೆಡಾನ್‌ನಲ್ಲಿ ಬಳಸುತ್ತಿರುವ ಐ-ಎಂಎಂಡಿ ತಂತ್ರಜ್ಞಾನವನ್ನು ನಿಯೋಜಿಸಲಾಗಿದೆ.
ಎರಡು ಮೋಟಾರ್‌ಗಳೊಂದಿಗೆ ಜೋಡಿಸಲಾದ 1.5 ಲೀಟರ್ ನ್ಯಾಚುರಲ್ ಆಸ್ಪರಡ್ ಎಂಜಿನ್ ಮತ್ತು ಚ್ಚುವರಿ 1.5-ಲೀಟರ್ ಎಂಜಿನ್ ಆಯ್ಕೆಗಳನ್ನು ಸಹ ಹೊಂದಿದೆ. ಇದರಲ್ಲಿ 1.5 ಲೀಟರ್ ನ್ಯಾಚುರಲ್ ಆಸ್ಪರಡ್ ಎಂಜಿನ್ 131 ಬಿಹೆಚ್‍ಪಿ ಪವರ್ ಮತ್ತು 253 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕೆಲವು ವರದಿಗಳ ಪ್ರಕಾರ ಹೊಸ ಹೆಚ್‍ಆರ್-ವಿ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ ಭಾರತದಲ್ಲಿ ಎಲಿವೇಟ್ ಎಂಬ ಹೆಸರಿಗಾಗಿ ಟ್ರೇಡ್‌ಮಾರ್ಕ್ ನೋಂದಾಯಿಸಿದೆ.