ಬಹುನಿರೀಕ್ಷಿತ ಹೋಂಡಾ ಪ್ರೊಲೋಗ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಜಪಾನಿನ ಕಾರು ತಯಾರಕ ಕಂಪನಿಯಾದ ಹೋಂಡಾ ತನ್ನ ಹೊಸ ಪ್ರೊಲೋಗ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಹೊಸ ಹೋಂಡಾ ಪ್ರೋಲಾಗ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಜನರಲ್ ಮೋಟಾರ್ಸ್ ಅಲ್ಟಿಯಮ್ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಬಹುನಿರೀಕ್ಷಿತ ಹೋಂಡಾ ಪ್ರೊಲೋಗ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಅಲ್ಟಿಯಮ್ ಪ್ಲಾಟ್‌ಫಾರ್ಮ್‌ ಚೆವ್ರೊಲೆಟ್ ಬ್ಲೇಜರ್ ಇವಿ ಮತ್ತು ಕ್ಯಾಡಿಲಾಕ್ ಲೈರಿಕ್ ಮಾದರಿಗಳಿಗೆ ಆಧಾರವಾಗಿದೆ. ಹೊಸ ಹೋಂಡಾ ಪ್ರೋಲಾಗ್ ಎಲೆಕ್ಟ್ರಿಕ್ ಎಸ್‍ಯುವಿಯು ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 2 ವರ್ಷಗಳಲ್ಲಿ ಮಾರಾಟವಾಗಲಿದೆ. ಹೊಸ ಪ್ರೊಲೊಗ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಲಾಸ್ ಏಂಜಲೀಸ್‌ನಲ್ಲಿರುವ ಹೋಂಡಾ ಡಿಸೈನ್ ಸ್ಟುಡಿಯೋ ವಿನ್ಯಾಸಗೊಳಿಸಿದೆ. ಇದು ಸಿಆರ್-ವಿ ಮೇಲೆ ಮತ್ತು ಪಾಸ್‌ಪೋರ್ಟ್ ಎಸ್‍ಯುವಿಯ ಪಕ್ಕದಲ್ಲಿರುತ್ತದೆ. ಈ ಹೊಸ ಎಲೆಕ್ಟ್ರಿಕ್ ಎಸ್‍ಯುವಿ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಬಹುನಿರೀಕ್ಷಿತ ಹೋಂಡಾ ಪ್ರೊಲೋಗ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಈ ಹೊಸ ಹೋಂಡಾ ಎಲೆಕ್ಟ್ರಿಕ್ ಎಸ್‍ಯುವಿ ಬ್ಲೇಜರ್ ಇವಿ ಯೊಂದಿಗೆ ಪ್ಲಾಟ್‌ಫಾರ್ಮ್ ಅನ್ನು ಹಂಚಿಕೊಂಡರೂ ತನ್ನದೇ ಆದ ಗುರುತನ್ನು ಹೊಂದಿರುತ್ತದೆ. ಈ ಹೊಸ ಹೋಂಡಾ ಪ್ರೊಲೋಗ್ ಎಲೆಕ್ಟ್ರಿಕ್ ಎಸ್‍ಯುವಿ ಸಿಗ್ನೇಚರ್ ಫ್ರಂಟ್ ಗ್ರಿಲ್ ಮತ್ತು ಅಡ್ಡಲಾಗಿ ಇರಿಸಲಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಬರುತ್ತದೆ. ಹೊಸದಾಗಿ ವಿನ್ಯಾಸಗೊಳಿಸಲಾದ 21-ಇಂಚಿನ ವ್ಹೀಲ್ ಗಳನ್ನು ಹೊಂದಿರುತ್ತದೆ.

ಬಹುನಿರೀಕ್ಷಿತ ಹೋಂಡಾ ಪ್ರೊಲೋಗ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಈ ಹೊಸ ಎಲೆಕ್ಟ್ರಿಕ್ ಎಸ್‍ಯುವಿಯ ಹಿಂಭಾಗದಲ್ಲಿ ಸಾಂಪ್ರದಾಯಿಕ ಬ್ರ್ಯಾಂಡ್ ಲೋಗೋ ಬದಲಿಗೆ "ಹೋಂಡಾ" ಬ್ಯಾಡ್ಜ್ ಅನ್ನು ಪಡೆಯುತ್ತದೆ. ಇದು ಹಿಂಭಾಗದಲ್ಲಿ AWD ಬ್ಯಾಡ್ಜಿಂಗ್ ಅನ್ನು ಸಹ ಪಡೆಯುತ್ತದೆ. ಒಟ್ಟಾರೆಯಾಗಿ ಈ ಹೊಸ ಎಸ್‍ಯುವಿಯು ನೋಡುಗರ ಸೆಳೆಯುವಂತಹ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಬಹುನಿರೀಕ್ಷಿತ ಹೋಂಡಾ ಪ್ರೊಲೋಗ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಹೊಸ ಹೋಂಡಾ ಪ್ರೋಲಾಗ್ ಎಲೆಕ್ಟ್ರಿಕ್ ಎಸ್‍ಯುವಿಯ ಒಳಭಾಗದಲ್ಲಿ ಡ್ಯಾಶ್‌ಬೋರ್ಡ್‌ನಲ್ಲಿ ಡಿಜಿಟಲ್ ಡಿಸ್ ಪ್ಲೇಯನ್ನು ಪಡೆಯುತ್ತದೆ. ಈ ಎಸ್‍ಯುವಿಯಲ್ಲಿ 11-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ದೊಡ್ಡ 11.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತದೆ. ಕಂಪನಿಯು ಕಂಟ್ರೋಲ್ ಗಳಿಗಾಗಿ ಟಚ್ ಯೂನಿಟ್ ಬದಲಿಗೆ ಫಿಸಿಕಲ್ ಬಟನ್‌ಗಳನ್ನು ಆಯ್ಕೆ ಮಾಡಿದೆ.

ಬಹುನಿರೀಕ್ಷಿತ ಹೋಂಡಾ ಪ್ರೊಲೋಗ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಹೊಸ ಹೋಂಡಾ ಪ್ರೊಲಾಗ್ ಎಲೆಕ್ಟ್ರಿಕ್ ಎಸ್‍ಯುವಿಯು 3,094 ಮಿಲಿಮೀಟರ್‌ಗಳ ದೊಡ್ಡ ವೀಲ್‌ಬೇಸ್‌ನೊಂದಿಗೆ ಬರುತ್ತದೆ, ಇದು ಬ್ಲೇಜರ್ ಇವಿಯಂತೆ ಇದೆ. ಹೊಸ ಪ್ರೊಲೊಗ್‌ನ ವೀಲ್‌ಬೇಸ್ ಸಿಆರ್-ವಿ ಮತ್ತು ಪಾಸ್‌ಪೋರ್ಟ್‌ಗಿಂತ ಗಮನಾರ್ಹವಾಗಿ ದೊಡ್ಡದಾಗಿದೆ.

ಬಹುನಿರೀಕ್ಷಿತ ಹೋಂಡಾ ಪ್ರೊಲೋಗ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಈ ಹೋಂಡಾ ಎಲೆಕ್ಟ್ರಿಕ್ ಎಸ್‍ಯುವಿಯು 2,701 ಎಂಎಂ ವ್ಹೀಲ್‌ಬೇಸ್ ಹೊಂದಿದ್ದರೆ, ಪಾಸ್‌ಪೋರ್ಟ್ 2,820 ಎಂಎಂ ಉದ್ದದ ವೀಲ್‌ಬೇಸ್‌ನಲ್ಲಿ ಚಲಿಸುತ್ತದೆ. ಅನುಪಾತದಲ್ಲಿ, ಹೊಸ ಪ್ರೊಲೊಗ್ ಇವಿ 4,877 ಉದ್ದ, 1,989 ಎಂಎಂ ಅಗಲ ಮತ್ತು 1,643 ಎಂಎಂ ಎತ್ತರವನ್ನು ಹೊಂದಿದೆ.

ಬಹುನಿರೀಕ್ಷಿತ ಹೋಂಡಾ ಪ್ರೊಲೋಗ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಹೋಂಡಾ ಭಾರತೀಯ ಮಾರುಕಟ್ಟೆಗೆ ಸಿಟಿ ಸೆಡಾನ್ ಆಧಾರಿತ ಎಲ್ಲಾ-ಹೊಸ ಎಸ್‍ಯುವಿ ಸಿದ್ಧಪಡಿಸುತ್ತಿದೆ, ಇದು ಮುಂದಿನ ವರ್ಷದಲ್ಲಿ ಬಹಿರಂಗಗೊಳ್ಳಬಹುದು. ಬ್ರ್ಯಾಂಡ್ ಪ್ರಸ್ತುತ ಭಾರತದಲ್ಲಿ ಯಾವುದೇ ಎಸ್‍ಯುವಿಯನ್ನು ಮಾರಾಟ ಮಾಡುವುದಿಲ್ಲ.

ಬಹುನಿರೀಕ್ಷಿತ ಹೋಂಡಾ ಪ್ರೊಲೋಗ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಕಳೆದ ವರ್ಷ ಹೋಂಡಾ ಸರಣಿಯಿಂದ ಸಿಆರ್-ವಿ ಮಾದರಿಯನ್ನು ಸ್ಥಗಿತಗೊಳಿಸಲಾಗಿತ್ತು. ಹೋಂಡಾ ಕಂಪನಿಯು ಭಾರತದಲ್ಲಿ ಎಸ್‍ಯುವಿ ಮಾದರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿತಿಲ್ಲ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಎಸ್‍ಯುವಿ ಮಾದರಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ, ಇದರಿಂದ ಹೋಂಡಾ ಕಂಪನಿಯು ಹೊಸ ಎಸ್‍ಯುವಿ ಮಾದರಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ, ಕೆಲವು ವರದಿಗಳ ಪ್ರಕಾರ ಮಿಡ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ.

ಬಹುನಿರೀಕ್ಷಿತ ಹೋಂಡಾ ಪ್ರೊಲೋಗ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಭಾರತದಲ್ಲಿ ಬೆಳೆಯುತ್ತಿರುವ ಮತ್ತು ಹೆಚ್ಚು ಸ್ಪರ್ಧಾತ್ಮಕ ಎಸ್‍ಯುವಿ ವಿಭಾಗದಲ್ಲಿ ಹೋಂಡಾ ಹೆಚ್‍ಆರ್-ವಿ ಉತ್ತಮವಾದ ಫಿಟ್ ಆಗಿರಬಹುದು. ಇದಲ್ಲದೆ, ಹೋಂಡಾ ಇತ್ತೀಚೆಗೆ, ಯುಎಸ್ ಮಾರುಕಟ್ಟೆಯಲ್ಲಿ ಹೋಂಡಾ ಹೆಚ್‍ಆರ್-ವಿ ಎಸ್‍ಯುವಿ ಹೊಸ ನವೀಕರಣಗಳನ್ನು ಪಡೆದುಕೊಂಡಿದೆ. ವಿದೇಶಿ ಮಾರುಕಟ್ಟೆಯಲ್ಲಿ 2022ರ ಹೋಂಡಾ ಹೆಚ್‍ಆರ್-ವಿ ಎಸ್‍ಯುವಿ ಬಹು ಡ್ರೈವ್‌ಟ್ರೇನ್ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸಿತು.

ಬಹುನಿರೀಕ್ಷಿತ ಹೋಂಡಾ ಪ್ರೊಲೋಗ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಈ ಹೈಬ್ರಿಡ್ ವ್ಯವಸ್ಥೆಯು ಭಾರತದಲ್ಲಿ ಹೊಸ ಹೋಂಡಾ ಸಿಟಿ ಇಹೆಚ್‌ಇವಿ ಹೈಬ್ರಿಡ್‌ನಲ್ಲಿ ಬರುವಂತೆಯೇ ಇರುತ್ತದೆ. 2022ರ ಹೋಂಡಾ ಹೆಚ್‍ಆರ್-ವಿ ಕ್ರಾಸ್ಒವರ್ ನವೀಕರಣಗಳಿಗೆ ಸಂಬಂಧಿಸಿದಂತೆ, ಹೊಸ ಮತ್ತು ಹೆಚ್ಚು ಆಧುನಿಕ ಮತ್ತು ಫ್ಯೂಚರಿಸ್ಟಿಕ್-ಕಾಣುವ ವಿನ್ಯಾಸಕ್ಕಾಗಿ ಹಳೆಯ ಬಾಹ್ಯ ಶೈಲಿಯನ್ನು ಹೊಂದಿದೆ. ಈ ವಾಹನದ ಮುಂಭಾಗವು ಹೊಸ ಬಾಡಿ ಬಣ್ಣದ ಮಲ್ಟಿ-ಸ್ಲೇಟೆಡ್ ಗ್ರಿಲ್ ಅನ್ನು ಪಡೆಯುತ್ತದೆ ಅದು ಸ್ವಲ್ಪಮಟ್ಟಿಗೆ ಇವಿ ಕಾರಿನಂತೆ ಕಾಣುತ್ತದೆ. ಇದು ಡಿಆರ್‌ಎಲ್‌ಗಳೊಂದಿಗೆ ನಯವಾದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಮೆಶ್‌ನೊಂದಿಗೆ ಮರುವಿನ್ಯಾಸಗೊಳಿಸಲಾದ ಲೋವರ್ ಬಂಪರ್ ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಸಹ ಹೊಂದಿದೆ, ಬದಿಗೆ ಚಲಿಸುವಾಗ, ನೋಟವು ಕೂಪ್ ಎಸ್‍ಯುವಿನಂತೆ ಕಾಣುತ್ತದೆ.

ಬಹುನಿರೀಕ್ಷಿತ ಹೋಂಡಾ ಪ್ರೊಲೋಗ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಈ ಎಸ್‍ಯುವಿ ಹಿಂಭಾಗದಲ್ಲಿ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಬಂಪರ್ ಮತ್ತು ಹೆಚ್ಚು ಸ್ಪಷ್ಟವಾದ ಸ್ಕಿಡ್ ಪ್ಲೇಟ್ ಜೊತೆಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಎಲ್ಇಡಿ ಟೈಲ್ ಲ್ಯಾಂಪ್‌ಗಳ ಸೆಟ್ ಅನ್ನು ಹೊಂದಿದೆ. ಈ 2022ರ ಹೋಂಡಾ ಹೆಚ್‍ಆರ್-ವಿ ಎಸ್‍ಯುವಿ ಇತರ ಫೀಚರ್ಸ್ ಗಳು, ಹೋಂಡಾ ಸೆನ್ಸಿಂಗ್, ಮಧ್ಯದಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಮತ್ತು ಸ್ಟ್ಯಾಂಡರ್ಡ್ ಆಟೋಮ್ಯಾಟಿಕ್ ಎಲ್ಇಡಿ ಹೆಡ್‌ಲೈಟ್‌ಗಳನ್ನು ಒಳಗೊಂಡಿದೆ.

Article Published On: Saturday, October 8, 2022, 16:02 [IST]
English summary
New honda prologue electric suv revealed design details
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+