ಮಾರುತಿ, ಟೊಯೊಟಾ ಎಸ್‍ಯುವಿಗಳಿಗೆ ಸೆಡ್ಡು ಹೊಡೆಯಲು ಬರುತ್ತಿದೆ ಹೊಸ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್
ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಅತ್ಯಂತ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ಜನಪ್ರಿಯ ಮಾದರಿಯಾಗಿದೆ.

ಹೊಸ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯನ್ನು 2021ರ ಗೈಕಿಂಡೋ ಇಂಡೋನೇಷ್ಯಾ ಇಂಟರ್‌ನ್ಯಾಶನಲ್ ಆಟೋ ಶೋ (GIIAS) ನಲ್ಲಿ ಜಾಗತಿಕವಾಗಿ ಇತ್ತೀಚೆಗೆ ಹ್ಯುಂಡೈ ಕಂಪನಿಯು ಅನಾವರಣಗೊಳಿಸಿತ್ತು. 2022ರ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್(Hyundai Creta Facelift) ಎಸ್‍ಯುವಿಯು ಹೊಸ ನವೀಕರಣಗಳನ್ನು ಪಡೆದುಕೊಂಡಿದೆ. ಬ್ರ್ಯಾಂಡ್ ಈಗ ಕಾರಿನ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಈ ಕ್ಯಾಲೆಂಡರ್ ವರ್ಷದ ದ್ವಿತೀಯಾರ್ಧದಲ್ಲಿ ಕ್ರೆಟಾದ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಕ್ರೆಟಾದ ವಿನ್ಯಾಸವು ಚೀನಾದಲ್ಲಿ ಮಾರಾಟವಾದ iX25 ಅನ್ನು ಆಧರಿಸಿದೆ ಆದರೆ ನವೀಕರಿಸಿದ ಆವೃತ್ತಿಯು ಜಾಗತಿಕವಾಗಿ ಬ್ರ್ಯಾಂಡ್‌ನಿಂದ ಸಂಯೋಜಿಸಲ್ಪಟ್ಟ ಇತ್ತೀಚಿನ ಸೆನ್ಸುಯಸ್ ಸ್ಪೋರ್ಟಿನೆಸ್ ವಿನ್ಯಾಸ ತತ್ವವನ್ನು ಅನುಸರಿಸುತ್ತದೆ. ಹೀಗಾಗಿ ಮುಂಭಾಗದ ಫಾಸಿಕ ಸಂಪೂರ್ಣವಾಗಿ ವಿಭಿನ್ನವಾಗಿದೆ.

ಇಂಡಿಯಾ-ಸ್ಪೆಕ್ 2022ರ ಹ್ಯುಂಡೈ ಕ್ರೆಟಾವು ಇತ್ತೀಚೆಗೆ ಪ್ರದರ್ಶಿಸಲಾದ 2022ರ ಟ್ಯೂಸಾನ್ ನಂತೆಯೇ ಅದೇ ಶೈಲಿಯನ್ನು ಹೊಂದಿದೆ ಎಂದು ನಾವು ನಿರೀಕ್ಷಿಸುತ್ತೇವೆ ಹ್ಯುಂಡೈ ತನ್ನ ಮಿಡ್-ಲೈಫ್ ಪರಿಷ್ಕರಣೆಗಳಿಗೆ ಗಣನೀಯ ನವೀಕರಣಗಳನ್ನು ತರಲು ಹೆಸರುವಾಸಿಯಾಗಿದೆ ಮತ್ತು ಮುಂಬರುವ ಕ್ರೆಟಾವು ಅಸ್ತಿತ್ವದಲ್ಲಿರುವ ಮಾದರಿಯ ಯಶಸ್ಸಿನ ಮೇಲೆ ತಯಾರಿಸಲಾಗುತ್ತದೆ,

ಹೊಸ ನ್ಯೂ ಜನರೇಷನ್ ಟ್ಯೂಸಾನ್ ಮಾದರಿಯಂತೆ ಸ್ಪೋರ್ಟಿನೆಸ್ ವಿನ್ಯಾಸವನ್ನು ಕ್ರೆಟಾ ಫೇಸ್‌ಲಿಫ್ಟ್ ಪಡೆದುಕೊಂಡಿದೆ. ಹೆಚ್ಚು ಯುವ ಗ್ರಾಹಕರನ್ನು ಸೆಳೆಯುವಂತಿದೆ. ಅದರ ಮುಂಭಾಗವು ಹ್ಯುಂಡೈ ಕ್ರೆಟಾ ಗ್ರ್ಯಾಂಡ್ ಮಾದರಿಯಿಂದ ಎರವಲು ಪಡೆದುಕೊಂಡಿದೆ. 2022ರ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿ ಹೊಸ ಪ್ಯಾರಾಮೆಟ್ರಿಕ್ ಜ್ಯುವೆಲ್ ಪ್ಯಾಟರ್ನ್ ಗ್ರಿಲ್ ಅನ್ನು ಹೊಂದಿದ್ದು ಅದು ಎಲ್‌ಇಡಿ ಡಿಆರ್‌ಎಲ್ ಗಳನ್ನು ಸಂಯೋಜಿಸುತ್ತದೆ.

ಇದು ಎಸ್‍ಯುವಿಯನ್ನು ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿದೆ. ಇನ್ನು ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ತೆಳ್ಳನೆಯ ಏರ್ ಇನ್ ಟೆಕ್ ನೊಂದಿಗೆ ಪರಿಷ್ಕೃತ ಬಂಪರ್, ಸಿಲ್ವರ್ ಬಣ್ಣದ ಫಾಕ್ಸ್ ಸ್ಕಿಡ್ ಪ್ಲೇಟ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಫಾಗ್ ಲ್ಯಾಂಪ್ ಅಸೆಂಬ್ಲಿ ಅದರ ಸ್ಪೋರ್ಟಿಯರ್ ನೋಟವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ಎಸ್‍ಯುವಿಯಲ್ಲಿ ಹೊಸ, ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಅನ್ನು ಹೊಂದಿದೆ.

ಇದರ ಸೈಡ್ ಪ್ರೊಫೈಲ್ ಬದಲಾಗದೆ ಉಳಿಯುತ್ತದೆ. ಪ್ರಸ್ತುತ ಮಾದರಿಗಿಂತ ಭಿನ್ನವಾಗಿ, ಹೊಸ ಕ್ರೆಟಾದ ಫೇಸ್‌ಲಿಫ್ಟ್ ಎಸ್‍ಯುವಿಯು ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು ಟೈಲ್‌ಗೇಟ್‌ನ ಅಗಲದಲ್ಲಿ ಚಲಿಸುವ ಸಂಪರ್ಕಿಸುವ ಪಟ್ಟಿಯನ್ನು ತಪ್ಪಿಸುತ್ತದೆ. ಈ 2022ರ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಇಂಟಿರಿಯರ್ ವಿನ್ಯಾಸವು ಬದಲಾಗದೆ ಹಾಗೇ ಉಳಿದಿದೆ,

ಆದರೆ ಹೊಸ ಫೀಚರ್ಸ್ ಗಳನ್ನು ಪಡೆದುಕೊಂಡಿದೆ. ಈ ಎಸ್‍ಯುವಿಯು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ನೊಂದಿಗೆ ಬರುತ್ತದೆ. ಇದನ್ನು ಇಂಡಿಯಾ-ಸ್ಪೆಕ್ ಮಾದರಿಯಲ್ಲಿ ಸಹ ನೀಡಬಹುದು. ಹೊಸ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ನವೀಕರಿಸಿದ ಬ್ಲೂಲಿಂಕ್ ಕನೆಕ್ಟಿವಿಟಿಯ ಕಾರ್ ತಂತ್ರಜ್ಞಾನ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ಈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆಯುವ ನಿರೀಕ್ಷೆಯಿದೆ.

ಇದರಲ್ಲಿ ದೊಡ್ಡ ಸನ್‌ರೂಫ್, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ಕೂಲ್ಡ್ ಗ್ಲೋವ್‌ಬಾಕ್ಸ್, ರಿಯರ್ ಎಸಿ ವೆಂಟ್‌ಗಳು, ಸೆಂಟ್ರಲ್ ಆರ್ಮ್‌ರೆಸ್ಟ್ ಇತ್ಯಾದಿಗಳನ್ನು ನೀಡುವುದನ್ನು ಮುಂದುವರಿಸುತ್ತದೆ. ಇದರ ಜೊತೆಗೆ, ಫಿಟ್ ಮತ್ತು ಫಿನಿಶ್ ಮಟ್ಟಗಳು ಸಹ ಉತ್ತಮವಾಗಿರುತ್ತವೆ ಮತ್ತು ಕ್ರೆಟಾ ಇದೇ ರೀತಿಯ ಇನ್-ಕ್ಯಾಬಿನ್ ಅನುಭವವನ್ನು ನೀಡುವುದನ್ನು ಮುಂದುವರಿಸುತ್ತದೆ.

ಹೊಸ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ, ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಕದ್ದ ವಾಹನ ಟ್ರ್ಯಾಕಿಂಗ್ ಪೀಚರ್ ಅನ್ನು ಹೊಂದಿದೆ. ಕಾರು ಕಳ್ಳತನವಾದಗ ಪತ್ತೆಹಚ್ಚಲು ಈ ಫೀಚರ್ ಸಹಕಾರಿಯಾಗಿರುತ್ತದೆ. ಇದರೊಂದಿಗೆ ಲೇನ್ ಕೀಪ್ ಅಸಿಸ್ಟ್, ಆಟೋನೊಮಸ್ ಎಮರ್ಜ್ನಸಿ ಬ್ರೇಕಿಂಗ್, ಫಾರ್ವರ್ಡ್ ಕಲಿಷನ್ ಅವೆಡೈನ್ಸ್, ಹಿಂಬದಿಯ ಅಡ್ಡ-ಟ್ರಾಫಿಕ್ ಕಲಿಷನ್ ಅವೆಡೈನ್ಸ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ನೀಡಲಾಗಿರುವುದರಿಂದ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್ಸ್) ಸೇರಿದಂತೆ ಹೊಸ ವೈಶಿಷ್ಟ್ಯಗಳನ್ನು ಒಳಾಂಗಣವು ಹೊಂದಿದೆ.

ಇಂಡೋನೇಷ್ಯಾದ ಈ ಹೊಸ ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗುತ್ತದೆ. ಈ ಎಂಜಿನ್ 114 ಬಿಹೆಚ್‍ಪಿ ಪವರ್ ಮತ್ತು 142 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇನ್ನು ಇಂಡಿಯಾ-ಸ್ಪೆಕ್ ಮಾದರಿಯಲ್ಲಿ 1.4 ಲೀಟರ್ GDI ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 138 ಬಿಹೆಚ್‍ಪಿ ಪವರ್ ಮತ್ತು 242 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರ ಜೊತೆಗೆ 1.5 ಲೀಟರ್ CRDi ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ. ಇನ್ನು ಗೇರ್ ಬಾಕ್ಸ್ ಆಯ್ಕೆಗಳು ಪ್ರಸ್ತುತ ಮಾದರಿಯಂತೆ ಇರಬಹುದು ಎಂದು ನಿರೀಕ್ಷಿಸುತ್ತೇವೆ.

2022ರ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗಲಿರುವ ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ವಿಟಾರಾ ಮಾದರಿಗೆ ಪೈಪೋಟಿ ನೀಡುತ್ತದೆ. ಇದರೊಂದಿಗೆ ಕಿಯಾ ಸೆಲ್ಟೋಸ್ ಮತ್ತು ಮಾರುತಿ ಬ್ರೇಝಾ ಕಾಂಪ್ಯಾಕ್ಟ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಈ ಹೊಸ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯ ಅಧಿಕೃತ ಬಿಡುಗಡೆಯ ಟೈಮ್‌ಲೈನ್ ಅನ್ನು ಬಹಿರಂಗಪಡಿಸಿಲ್ಲ. ಇನ್ನು ಈ ಹೊಸ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಒಟ್ಟಾರೆಯಾಗಿ. ಹೊಸ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯು ಪ್ರಮುಖ ನವೀಕರಣಗಳನ್ನು ಪಡೆದುಕೊಂಡಿದೆ. ಪ್ರಮುಖವಾಗಿ ಸ್ಪೋರ್ಟಿ ವಿನ್ಯಾಸ ಮತ್ತು ಹೊಸ ಫೀಚರ್ಸ್ ಗಳನ್ನು ಪಡೆಯಲಿವೆ.


Click it and Unblock the Notifications