ಭಾರತದಲ್ಲಿ ಹೊಸ Lexus NX 350h ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಜಪಾನಿನ ಐಷಾರಾಮಿ ಕಾರು ತಯಾರಕರಾದ ಲೆಕ್ಸಸ್ ತನ್ನ ಹೊಸ ಎನ್ಎಕ್ಸ್ 350hಹೆಚ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಲೆಕ್ಸಸ್ ಕಂಪನಿಯು ಈ ಹೊಸ ಎನ್ಎಕ್ಸ್ 350ಹೆಚ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ.

ಭಾರತದಲ್ಲಿ ಹೊಸ Lexus NX 350h ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಈ ಹೊಸ ಲೆಕ್ಸಸ್ ಎನ್ಎಕ್ಸ್ 350ಹೆಚ್ ಎಸ್‍ಯುವಿಯು ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಇನ್ನು ಲೆಕ್ಸಸ್ ತನ್ನ ಎನ್ಎಕ್ಸ್ 350ಹೆಚ್ ಎಸ್‍ಯುವಿಯ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಎಸ್‍ಯುವಿ ಕಳೆದ ವರ್ಷ ಜೂನ್‌ನಲ್ಲಿ ತನ್ನ ಜಾಗತಿಕ ಚೊಚ್ಚಲ ಪ್ರವೇಶವನ್ನು ಮಾಡಿತು.ಹೊಸ ಲೆಕ್ಸಸ್ ಎನ್ಎಕ್ಸ್ 350ಹೆಚ್ ಎಸ್‍ಯುವಿ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್ (TNGA) ಪ್ಲಾಟ್‌ಫಾರ್ಮ್‌ನ GA-K ಆವೃತ್ತಿಯನ್ನು ಆಧರಿಸಿದೆ.

ಭಾರತದಲ್ಲಿ ಹೊಸ Lexus NX 350h ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಲೆಕ್ಸಸ್ ಇಂಡಿಯಾದ ಅಧ್ಯಕ್ಷ ನವೀನ್ ಸೋನಿ ಮಾತನಾಡಿ, ಲೆಕ್ಸಸ್ ಎನ್ಎಕ್ಸ್ ಅದರ ಚುರುಕುತನ, ವಿಶಾಲವಾದ ಕಾರ್ಯಚಟುವಟಿಕೆಗಳು ಮತ್ತು ಸ್ಪೋರ್ಟಿನೆಸ್‌ನಿಂದಾಗಿ, ಭಾರತದಲ್ಲಿನ ಗ್ರಾಹಕರು ಹೆಚ್ಚು ಇಷ್ಟಪಡುವ ಮಾದರಿಗಳಲ್ಲಿ ಒಂದಾಗಿದೆ. ಈ ಹೊಸ ಎನ್ಎಕ್ಸ್ ಅನ್ನು ಆದಷ್ಟು ಬೇಗ ಪ್ರಾರಂಭಿಸಲು ಉತ್ಸುಕರಾಗಿದ್ದೇವೆ ಮತ್ತು ಎನ್ಎಕ್ಸ್ ಐಷಾರಾಮಿ ಮಾರುಕಟ್ಟೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುವುದು ಖಚಿತ ಎಂಬ ವಿಶ್ವಾಸವಿದೆ.ಎಂದು ಹೇಳಿದರು.

ಭಾರತದಲ್ಲಿ ಹೊಸ Lexus NX 350h ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಹೊಸ ಲೆಕ್ಸಸ್ ಎನ್ಎಕ್ಸ್ 350ಹೆಚ್ ಎಸ್‍ಯುವಿಯು ಹೊಸ ಬ್ಲ್ಯಾಕ್ಡ್-ಔಟ್ ಸ್ಪಿಂಡಲ್ ಗ್ರಿಲ್ ಮತ್ತು ಎಲ್-ಆಕಾರದ DRL ಗಳನ್ನು ಒಳಗೊಂಡಿರುವ ನಯವಾದ ಹೆಡ್‌ಲ್ಯಾಂಪ್‌ಗಳೊಂದಿಗೆ ಅಗ್ರೇಸಿವ್ ಮುಂಭಾಗದ ವಿನ್ಯಾಸವನ್ನು ಹೊಂದಿದೆ. ಇದು ಎಸ್‍ಯುವಿಯ ಒಟ್ಟಾರೆ ನೋಟವನ್ನು ಒತ್ತಿಹೇಳುವ ಫಾಂಗ್ ಲ್ಯಾಂಪ್ ಸಿ-ಆಕಾರದ ಏರ್ ಇನ್ ಟೆಕ್ ಅನ್ನು ಪಡೆಯುತ್ತದೆ.

ಭಾರತದಲ್ಲಿ ಹೊಸ Lexus NX 350h ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಈ ಎಸ್‍ಯುವಿಯ ಹಿಂಭಾಗದಲ್ಲಿ, ಇದು ಉದ್ದವಾದ ಲೈಟ್ ಬಾರ್ ಅನ್ನು ಪಡೆಯುತ್ತದೆ, ಇದು ಸ್ವತಂತ್ರವಾಗಿ ಸ್ಥಾನದಲ್ಲಿರುವ ಎಲ್-ಆಕಾರದ ಟೈಲ್‌ಲ್ಯಾಂಪ್‌ಗಳೊಂದಿಗೆ ವಾಹನದ ಮಧ್ಯಭಾಗದಲ್ಲಿದೆ. ಇದಲ್ಲದೆ, ಕಂಪನಿಯ ಬ್ರ್ಯಾಂಡಿಂಗ್ ಅನ್ನು ಪರವಾನಗಿ ಫಲಕದ ಮೇಲೆ ಇರಿಸಲಾಗುತ್ತದೆ ಅದು ಮುಂದಿನ ತಲೆಮಾರಿನ ಲೆಕ್ಸಸ್ ಅನ್ನು ಸಂಕೇತಿಸುತ್ತದೆ.

ಭಾರತದಲ್ಲಿ ಹೊಸ Lexus NX 350h ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಈ ಹೊಸ ಲೆಕ್ಸಸ್ ಎನ್ಎಕ್ಸ್ 350ಹೆಚ್ ಎಸ್‍ಯುವಿಯು 4,661 ಎಂಎಂ ಉದ್ದ, 1,865 ಎಂಎಂ ಅಗಲ ಮತ್ತು 1,661 ಎಂಎಂ ಎತ್ತರವನ್ನು ಹೊಂದಿರುತ್ತದೆ. ಇನ್ನು ಈ ಎಸ್‍ಯುವಿಯು ವೀಲ್‌ಬೇಸ್ 2690 ಎಂಎಂ ಆಗಿರುತ್ತದೆ.

ಭಾರತದಲ್ಲಿ ಹೊಸ Lexus NX 350h ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಹೊಸ ಲೆಕ್ಸಸ್ ಎನ್ಎಕ್ಸ್ 350ಹೆಚ್ ಎಸ್‍ಯುವಿಯು ಒಳಭಾಗದಲ್ಲಿ Tazuna ಕಾನ್ಸೆಪ್ಟ್ ಆಧಾರದ ಮೇಲೆ ಅಂದವಾಗಿ ವಿನ್ಯಾಸದ ಕ್ಯಾಬಿನ್ ಅನ್ನು ಹೊಂದಿದೆ. ಇದು ಆಪ್ಲ ಕಾರ್ ಪ್ಲೇ ಮತ್ತ್ಯ್ ಆಂಡ್ರಾಯ್ಡ್ ಆಟೋ ಬೆಂಬಲದೊಂದಿಗೆ 9.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, 14-ಇಂಚಿನ ನ್ಯಾವಿಗೇಷನ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್, 10 ಸ್ಪೀಕರ್‌ಗಳೊಂದಿಗೆ ಲೆಕ್ಸಸ್ ಪ್ರೀಮಿಯಂ ಸೌಂಡ್ ಸಿಸ್ಟಮ್ ಮತ್ತು ಹೆಚ್ಚಿನವುಗಳೊಂದಿಗೆ ಬರುವ ಸಾಧ್ಯತೆಯಿದೆ.

ಭಾರತದಲ್ಲಿ ಹೊಸ Lexus NX 350h ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಸುರಕ್ಷತೆಗೆ ಸಂಬಂಧಿಸಿದಂತೆ, ಈ ಎಸ್‌ಯುವಿಯಲ್ಲಿ ಇ-ಲ್ಯಾಚ್ ಸಿಸ್ಟಮ್, ಸೇಫ್ ಎಕ್ಸಿಟ್ ಅಸಿಸ್ಟ್, ಪನೋರಮಿಕ್ ವ್ಯೂ ಮಾನಿಟರ್, ರಿಮೋಟ್ ಫಂಕ್ಷನ್‌ನೊಂದಿಗೆ ಸುಧಾರಿತ ಪಾರ್ಕ್‌ನೊಂದಿಗೆ ಸುಧಾರಿತ ಚಾಲಕ ನೆರವು ತಂತ್ರಜ್ಞಾನ, ಪ್ರೀ-ಕ್ರ್ಯಾಶ್ ಸೇಫ್ಟಿ, ಫ್ರಂಟ್ ಕ್ರಾಸ್ ಟ್ರಾಫಿಕ್‌ನಂತಹ ಸುಧಾರಿತ ಸುರಕ್ಷತಾ ತಂತ್ರಜ್ಞಾನಗಳನ್ನು ಹೊಂದಿದೆ.

ಭಾರತದಲ್ಲಿ ಹೊಸ Lexus NX 350h ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಇದರೊಂದಿಗೆ , ರಾಡಾರ್ ಕ್ರೂಸ್ ಕಂಟ್ರೋಲ್, ಲೇನ್ ನಿರ್ಗಮನ ಅಲರ್ಟ್, ಲೇನ್ ಬದಲಾವಣೆ ಅಸಿಸ್ಟ್, ಪೂರ್ವಭಾವಿ ಡ್ರೈವಿಂಗ್ ಅಸಿಸ್ಟ್, ಇಬಿಡಿ ಜೊತೆಗೆ ಎಬಿಎಸ್ ಟ್ರ್ಯಾಕ್ಷನ್ ಕಂಟ್ರೋಲ್, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಗಲು ಮತ್ತು ಇನ್ನಷ್ಟು ಫೀಚರ್ಸ್ ಗಳನ್ನು ಹೊಂದಿರಲಿದೆ.

ಭಾರತದಲ್ಲಿ ಹೊಸ Lexus NX 350h ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಜಾಗತಿಕವಾಗಿ, ಲೆಕ್ಸಸ್ ಎನ್ಎಕ್ಸ್ 350ಹೆಚ್ ಎಸ್‍ಯುವಿಯು ವ್ಯಾಪಕ ಶ್ರೇಣಿಯ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ. ಈ ಎಸ್‍ಯುವಿಯಲ್ಲಿ ಬ್ರ್ಯಾಂಡ್‌ನ ಎಲೆಕ್ಟ್ರಿಕ್ ಡ್ರೈವ್‌ನೊಂದಿಗೆ 2.5-ಲೀಟರ್, 4-ಸಿಲಿಂಡರ್ ಎಂಜಿನ್ ಅನ್ನು ಬಳಸುತ್ತದೆ. ಇದು 236 ಬಿಹೆಚ್‍ಪಿ ಪವರ್ ಉತ್ಪಾದಿಸುವ ಅದೇ ಘಟಕದಿಂದ ಚಾಲಿತವಾಗುವ ನಿರೀಕ್ಷೆಯಿದೆ. ಇಂಜಿನ್ ಎಲೆಕ್ಟ್ರಿಕಲ್ ನಿಯಂತ್ರಿತ ನಿರಂತರ ವೇರಿಯಬಲ್ ಟ್ರಾನ್ಸ್‌ಮಿಷನ್ (ECVT) ಮತ್ತು ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಎಲ್ಲಾ ಫ್ಹೋ ವ್ಹೀಲ್ ಗಳುಗೆ ಪವರ್ ಅನ್ನು ಕಳುಹಿಸುತ್ತದೆ.

ಭಾರತದಲ್ಲಿ ಹೊಸ Lexus NX 350h ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಇನ್ನು ಲೆಕ್ಸಸ್ ತನ್ನ ಎಲ್ಎಕ್ಸ್ 600 ಎಸ್‍ಯುವಿಯನ್ನು ಕಳೆದ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪರಿಚಯಿಸಿತು. ಇದು ಹೊಸ ರೂಪವನ್ನು ಪಡೆದುಕೊಂಡ ಮೂರನೇ ತಲೆಮಾರಿನ ಲೆಕ್ಸಸ್ ಎಲ್ಎಕ್ಸ್ 600 ಎಸ್‍ಯುವಿ ಮಾದರಿಯಾಗಿದೆ. ಟೊಯೊಟಾ ಲ್ಯಾಂಡ್ ಕ್ರೂಸರ್‌ಗೆ ಆಧಾರವಾಗಿರುವ ಅದೇ ಪ್ಲಾಟ್‌ಫಾರ್ಮ್ ಅನ್ನು ಹೊಸ ಲೆಕ್ಸಸ್ ಎಲ್ಎಕ್ಸ್ 600 ಎಸ್‍ಯುವಿಯು ಹಂಚಿಕೊಳ್ಳುತ್ತದೆ. ಹಿಂದಿನ ತಲೆಮಾರಿನವರಿಗಿಂತಲೂ 200 ಕೆಜಿಗಿಂತಲೂ ಕಡಿಮೆ ತೂಕವನ್ನು ಹೊಂದಿದೆ, ಸ್ಟೈಲಿಂಗ್ ಒಂದು ಲೆಕ್ಸಸ್‌ನ ವಿಶಿಷ್ಟವಾದ ಸೈಡ್ ಪ್ರೊಫೈಲ್‌ನೊಂದಿಗೆ ಎಲ್‌ಎಕ್ಸ್ 600 ಅದರ ಸಾಂಪ್ರದಾಯಿಕ ಟೊಯೊಟಾ ಸಮಾನ ಲ್ಯಾಂಡ್ ಕ್ರೂಸರ್ ಎಸ್‌ಯುವಿಗೆ ಸಂಬಂಧಿಸಿದೆ.

ಭಾರತದಲ್ಲಿ ಹೊಸ Lexus NX 350h ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಆರಂಭ

ಈ ಹೊಸ ಲೆಕ್ಸಸ್ ಎನ್ಎಕ್ಸ್ 350ಹೆಚ್ ಎಸ್‍ಯುವಿಯು ಸೆಲ್ಫೆ ಚಾರ್ಜಿಂಗ್ ಎಲೆಕ್ಟ್ರಿಕ್ ಮೋಟಾರ್ 145 kW ಪವರ್ ನೀಡುತ್ತದೆ. ಇನ್ನು ಈ ಎಸ್‍ಯುವಿಯು 9.2 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಎಸ್‍ಯುವಿಯ ಟಾಪ್ ಸ್ಪೀಡ್ 180 ಕಿ.ಮೀ ಆಗಿದೆ. ಇನ್ನು ಲೆಕ್ಸಸ್ ಕಂಪನಿಯು ದೇಶದಲ್ಲಿ ತನ್ನ ಎನ್ಎಕ್ಸ್ ಪೋರ್ಟ್‌ಫೋಲಿಯೊಗೆ ಹೆಚ್ಚಿನ ಆಕರ್ಷಣೆ ಮತ್ತು ಉತ್ಸಾಹವನ್ನು ಸೇರಿಸಲು ಲೆಕ್ಸಸ್ ಎನ್ಎಕ್ಸ್ 350ಹೆಚ್ ಎಸ್‍ಯುವಿಯನ್ನು ಪರಿಚಯಿಸಲು ಸಜ್ಜಾಗಿದೆ.

More from DriveSpark

Article Published On: Thursday, January 20, 2022, 10:28 [IST]
English summary
New lexus nx 350h suv pre bookings open in india ahead of launch details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+