ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ

ಎಸ್‌ಯುವಿ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ(Mahindra) ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳನ್ನು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಉನ್ನತೀಕರಿಸುತ್ತಿದ್ದು, ಕಂಪನಿಯು ಮುಂಬರುವ ಕೆಲವೇ ದಿನಗಳಲ್ಲಿ ಪ್ರಮುಖ ಕಾರುಗಳ ಹೊಸ ತಲೆಮಾರಿನ ಮಾದರಿಗಳನ್ನು ಬಿಡುಗಡೆ ಮಾಡಲಿದೆ.

ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ

ಮಹೀಂದ್ರಾ ಕಂಪನಿಯು ಥಾರ್ ಮತ್ತು ಎಕ್ಸ್‌ಯುವಿ700 ಮಾದರಿಗಳ ಬಿಡುಗಡೆಯ ನಂತರ ಇದೀಗ ಸ್ಕಾರ್ಪಿಯೋ ಮತ್ತು ಬೊಲೆರೊ ಕಾರುಗಳ ಹೊಸ ತಲೆಮಾರಿನ ಆವೃತ್ತಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಕಾರುಗಳು ಹಲವಾರು ಹೊಸ ಮಾದರಿಯ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗುತ್ತಿವೆ.

ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ

ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹೊಸ ಕಾರುಗಳು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಬೆಸ್ ಮಾದರಿಗಳಲ್ಲೂ ಹೆಚ್ಚಿನ ಮಟ್ಟದ ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳನ್ನು ಸೇರ್ಪಡೆಗೊಳಿಸಲಿದೆ.

ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ

ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಿರುವ ಥಾರ್ ಮತ್ತು ಎಕ್ಸ್‌ಯುವಿ700 ಕಾರು ಮಾದರಿಗಳಲ್ಲಿ ಈಗಾಗಲೇ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್ ಅಳವಡಿಸಿ ಗ್ರಾಹಕರಿಗೆ ಸುರಕ್ಷತೆ ಖಾತ್ರಿಪಡಿಸಿರುವ ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ ಮತ್ತು ಬೊಲೆರೊ ಮಾದಿರಗಳ ಬೆಸ್ ಮಾದರಿಗಳಲ್ಲೂ ಡ್ಯುಯಲ್ ಏರ್‌ಬ್ಯಾಗ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಪ್ರಮುಖ ಸೇಫ್ಟಿ ಫೀಚರ್ಸ್ ನೀಡಲಿದೆ.

ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ

ಮಹೀಂದ್ರಾ ಕಂಪನಿಯು ಹೊಸ ಸ್ಕಾರ್ಪಿಯೋ ಬಿಡುಗಡೆಯ ನಂತರವಷ್ಟೇ ಬೊಲೆರೊ ಕಾರು ಮಾದರಿಯನ್ನು ಬಿಡುಗಡೆ ಮಾಡಲಿದ್ದು, ಹೊಸ ಕಾರುಗಳು ಸೇಫ್ಟಿ ಫೀಚರ್ಸ್ ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಳಿಂತಲೂ ಹೆಚ್ಚು ಇಂಧನ ದಕ್ಷತೆ ಮತ್ತು ಅತಿ ಕಡಿಮೆ ಮಾಲಿನ್ಯ ಹೊರಸೂಸುವಿಕೆ ಸೌಲಭ್ಯ ಹೊಂದಿರಲಿವೆ.

ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ

ಕೇಂದ್ರ ಸರ್ಕಾರವು ಈ ವರ್ಷ ಏಪ್ರಿಲ್‌ನಿಂದ ಜಾರಿಗೆ ತರಲು ಹೊರಟಿರುವ ರಿಯಲ್ ಡ್ರೈವಿಂಗ್ ಎಮಿಷನ್(Real Driving Emissions) ನಿಯಮಾನುಸಾರವಾಗಿ ಹೊಸ ವಾಹನಗಳ ಎಂಜಿನ್ ಅಭಿವೃದ್ದಿಪಡಿಸುತ್ತಿರುವ ಮಹೀಂದ್ರಾ ಕಂಪನಿಯು ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಸುಧಾರಿತ ಹೈಬ್ರಿಡ್ ತಂತ್ರಜ್ಞಾನ ಬಳಕೆ ಮಾಡಲು ನಿರ್ಧರಿಸಿದೆ.

ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ

ಹೊಸ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವು CAFA (ಕಾರ್ಪೊರೇಟ್ ಸರಾಸರಿ ಇಂಧನ ಆರ್ಥಿಕತೆ) ಮಾನದಂಡವನ್ನು ಸಮರ್ಥವಾಗಿ ಪೂರೈಸಲಿದ್ದು, ಹೊಸ ಸ್ಕಾರ್ಪಿಯೋ ಮತ್ತು ಬೊಲೆರೊ ಕಾರುಗಳಲ್ಲಿ ಥಾರ್ ಕಾರಿನಲ್ಲಿರುವ ಎಂಜಿನ್ ಆಯ್ಕೆಯನ್ನೇ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಸೇರ್ಪಡೆಗೊಳಿಸಲಿದೆ.

ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ

ಇನ್ನು ಬೊಲೆರೊ ಕಾರು ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ದೀರ್ಘಕಾಲದಿಂದ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿರುವ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದ್ದು, ಹೊಸ ಎಸ್‍ಯುವಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಲ್ಯಾಡರ್-ಆನ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿ ನಿರ್ಮಾಣಗೊಳ್ಳಲಿದೆ.

ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ

ಇದು ಹೊಸ ಥಾರ್‌ಗೆ ಸಹ ಆಧಾರವಾಗಿದ್ದು, ನ್ಯೂ ಜನರೇಷನ್ ಸ್ಕಾರ್ಪಿಯೋ ಮತ್ತು 5-ಡೋರಿನ ಥಾರ್ ಎಸ್‍ಯುವಿಯನ್ನು ಕೂಡಾ ಇದೇ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿಗೊಳ್ಳುತ್ತಿದೆ.

ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ

ಹಾಗೆಯೇ ನವೀಕರಿಸಿದ ಮಾದರಿಯು ಸೂಕ್ಷ್ಮ ವಿನ್ಯಾಸ ಬದಲಾವಣೆಗಳು ಮತ್ತು ನವೀಕರಿಸಿದ ಇಂಟಿರಿಯರ್ ಅನ್ನು ಹೊಂದಿರಲಿದ್ದು, ನ್ಯೂ ಜನರೇಷನ್ ಬೊಲೆರೊ ಅದೇ ಆಕರ್ಷಕ ಬಾಕ್ಸ್ ವಿನ್ಯಾಸವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಬೊಲೆರೊ ಎಸ್‍ಯುವಿಯು ಸಣ್ಣ ನಗರಗಳಲ್ಲಿ ಮತ್ತು ಗ್ರಾಮಿಣ ಭಾಗಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ್ದು, ನ್ಯೂ ಜನರೇಷನ್ ಮಾದರಿಯಲ್ಲಿ ಮತ್ತಷ್ಟು ಹೊಸ ಪ್ರೀಮಿಯಂ ಫೀಚರ್ಸ್ ನೀಡಲಾಗುತ್ತಿದೆ.

ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ

ನ್ಯೂ ಜನರೇಷನ್ ಬೊಲೆರೊದಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ರೇರ್ ಎಸಿ ವೆಂಟ್ ಗಳೊಂದಿಗೆ ಹೊಸ ಎಸಿ ಯುನಿಟ್, ಪವರ್ ವಿಂಡೋಸ್, ಮಲ್ಟಿ-ಫಂಕ್ಷನಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಇತರೆ ಆಧುನಿಕ ವೈಶಿಷ್ಟ್ಯಗಳನ್ನು ಪಡೆಯುವ ನಿರೀಕ್ಷೆಯಿದೆ.

ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ

ಟಾಪ್-ಸ್ಪೆಕ್ ಮಾದರಿಯಲ್ಲಿ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನು ಮತ್ತು ಎಲ್ಇಡಿ ಟೈಲ್-ಲ್ಯಾಂಪ್ ಗಳನ್ನು ಸಹ ಪಡೆಯಬಹುದಾಗಿದ್ದು, ಇದು ಸ್ಕಿಡ್ ಪ್ಲೇಟ್, ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿರುವ ಒಆರ್‌ವಿಎಂಗಳು ಮತ್ತು ಹೊಸ ಫ್ರಂಟ್ ಗ್ರಿಲ್ ಪಡೆಯಲಿದೆ.

ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ

ಹೊಸ ಬೊಲೆರೊದಲ್ಲಿ ಹೊಸ ಸುರಕ್ಷತೆ ಮತ್ತು ಕ್ರ್ಯಾಶ್ ಪರೀಕ್ಷಾ ಮಾನದಂಡಗಳಿಗೆ ಅನುಗುಣವಾಗಿ ಅಭಿವೃದ್ದಿ ಹೊಂದಲಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಸೇರಿದಂತೆ ಎಬಿಎಸ್ ವಿಥ್ ಇಬಿಡಿ, ಡ್ರೈವರ್ ಮತ್ತು ಕೋ-ಡ್ರೈವರ್ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ಅಲರ್ಟ್ ಸಿಸ್ಟಮ್, ವೆಹಿಕಲ್ ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಸೆಂಟ್ರಲ್ ಲಾಕಿಂಗ್ ಸಿಸ್ಟಂಗಾಗಿ ಮ್ಯಾನ್ಯುವಲ್ ಓವರ್‌ರೈಡ್ ಅನ್ನು ಸ್ಟಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳಾಗಿ ಅಳವಡಿಸಲಾಗುತ್ತದೆ.

ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ

ಸದ್ಯ ಮಾರುಕಟ್ಟೆಯಲ್ಲಿರುವ ಬೊಲೆರೊ ಎಸ್‌ಯುವಿ ಕಾರು ಮಾದರಿಯು ಪ್ರಮುಖ ಮೂರು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, 1.5-ಲೀಟರ್ ಮ್ಯಾನುವಲ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮಾರಾಟಗೊಳ್ಳುತ್ತಿದೆ.

ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಬೊಲೆರೊ

ನ್ಯೂ ಜನರೇಷನ್ ಬೊಲೆರೊ ಹೊಸ 2.2-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಜೊತೆಗೆ 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಸಹ ಪಡೆಯಬಹುದಾಗಿದ್ದು, ನ್ಯೂ ಜನರೇಷನ್ ಎಸ್‍ಯುವಿಯು ಹೊಸ ಫೀಚರ್ಸ್ ಮತ್ತು ಕೆಲವು ವಿನ್ಯಾಸ ಬದಲಾವಣೆಗಳೊಂದಿಗೆ ಈ ವರ್ಷದ ಮಧ್ಯಂತರದಲ್ಲಿ ಬಿಡುಗಡೆಯಾಗಲಿದೆ.

Article Published On: Tuesday, January 4, 2022, 8:47 [IST]
English summary
New mahindra bolero will offer dual airbags as standards
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+