ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ಮಹೀಂದ್ರಾ ಕಂಪನಿಯು ತನ್ನ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯನ್ನು ಅನಾವರಣಗೊಳಿಸಿ ಬಿಡುಗಡೆಗೆ ಸಿದ್ದವಾಗಿದ್ದು, ಹಲವಾರು ವಿಶೇಷ ಸೌಲಭ್ಯಗಳನ್ನು ಒಳಗೊಂಡಿರುವ ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುವ ತವಕದಲ್ಲಿದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣಕ್ಕೂ ಮುನ್ನ ಕಳೆದ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಲಾಗಿದ್ದ ಇಎಕ್ಸ್‌ಯುವಿ300 ಮಾದರಿಯನ್ನೇ ಬದಲಾವಣೆಯೊಂದಿಗೆ ಇದೀಗ ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ಕಾರು ಟಾಟಾ ಮೋಟಾರ್ಸ್ ಹೊಸ ನೆಕ್ಸಾನ್ ಇವಿ ಸೇರಿದಂತೆ ಪ್ರಮುಖ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ಹೊಸ ಎಕ್ಸ್‌ಯುವಿ400 ಕಾರು ಮಾದರಿಯು ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್, ಮೈಲೇಜ್, ಪರ್ಫಾಮೆನ್ಸ್, ಫೀಚರ್ಸ್ ಮತ್ತು ಗುಣಮಟ್ಟದ ಉತ್ಪಾದನೆಯಲ್ಲಿ ಪ್ರತಿಸ್ಪರ್ಧಿ ಮಾದರಿಯಾದ ಟಾಟಾ ನೆಕ್ಸಾನ್ ಇವಿ ಮಾದರಿಗೆ ನೇರ ಪೈಪೋಟಿಯಾಗಲಿದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ಮಹೀಂದ್ರಾ ಕಂಪನಿಯು ಸದ್ಯಕ್ಕೆ ಹೊಸ ಎಕ್ಸ್‌ಯುವಿ400 ಮಾದರಿಯ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರನ್ನು ಕಂಪನಿಯು 2023ರ ಜನವರಿಯಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಿ ಅದೇ ತಿಂಗಳು ವಿತರಣೆ ಆರಂಭಿಸಲಿದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ಹೊಸ ಕಾರು ಖರೀದಿಸುವ ಆಸಕ್ತ ಗ್ರಾಹಕರಿಗೆ ಮುಂಬರುವ ಡಿಸೆಂಬರ್‌ನಲ್ಲಿ ಟೆಸ್ಟ್ ಡ್ರೈವ್ ಲಭ್ಯವಿರಲಿದ್ದು, ಮೊದಲ ಹಂತವಾಗಿ ಕಂಪನಿಯು ದೇಶದ ಪ್ರಮುಖ 16 ನಗರಗಳಲ್ಲಿ ಹೊಸ ಕಾರನ್ನು ಮಾರಾಟ ಮಾಡಲಿದೆ. ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳು ಹೆಚ್ಚಿದಂತೆ ಇವಿ ಕಾರು ಮಾರಾಟವು ಇತರೆ ನಗರಗಳಿಗೂ ವಿಸ್ತರಣೆಯಾಗಲಿದ್ದು, ಹೊಸ ಕಾರಿನ ಮೂಲಕ ಕಂಪನಿಯು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ಎಕ್ಸ್‌ಯುವಿ400 ಮಾದರಿಯು 39.4 kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 100kW ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಂಡಿದ್ದು, ಇದು ಅತ್ಯುತ್ತಮ ಪರ್ಫಾಮೆನ್ಸ್‌ ಜೊತೆಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 456 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ಹೊಸ ಕಾರಿನಲ್ಲಿರುವ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ IP67 ಮಾನದಂಡ ಪೂರೈಸಿದ್ದು, ಇದು ಧೂಳು ಮತ್ತು ನೀರಿನಿಂದ ಸಂಪೂರ್ಣ ಸುರಕ್ಷತೆ ಹೊಂದಿದ್ದು, ಮಧ್ಯಮ ಕ್ರಮಾಂಕದ ಇವಿ ಕಾರುಗಳಲ್ಲಿಯೇ ಅತಿ ಹೆಚ್ಚು ವೇಗವರ್ಧನೆ(acceleration) ಹೊಂದಿದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ಇದು 147.5 ಬಿಎಚ್‌ಪಿ ಮತ್ತು 310ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಕೇವಲ 8.3 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಸಾಧಿಸುವುದರ ಜೊತೆಗೆ ಪ್ರತಿ ಗಂಟೆಗೆ ಗರಿಷ್ಠ 150 ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಳ್ಳುತ್ತದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ಹೊಸ ಕಾರಿನಲ್ಲಿ 39.4 kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಸ್ವದೇಶಿ ನಿರ್ಮಿತ ಲೀ ಅಯಾನ್ ಬ್ಯಾಟರಿ ಸೆಲ್ಸ್‌ನೊಂದಿಗೆ ಅಭಿವೃದ್ದಿಗೊಂಡಿದ್ದು, 50kW ಡಿಸಿ ಫಾಸ್ಟ್ ಚಾರ್ಜ್ ಮೂಲಕ ಕೇವಲ 50 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಆಗಲಿದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ಒಂದು ವೇಳೆ 7.2 kW ಸ್ಟ್ಯಾಂಡರ್ಡ್ ಚಾರ್ಜರ್ ಮೂಲಕ ಚಾರ್ಜ್ ಮಾಡಿದ್ದಲ್ಲಿ ಸೊನ್ನೆಯಿಂದ ಶೇ.100 ರಷ್ಟು ಚಾರ್ಜ್ ಆಗಲು 6 ಗಂಟೆ 30 ನಿಮಿಷ ಸಮಯ ತೆಗೆದುಕೊಳ್ಳಲಿದ್ದರೆ 3.3 kW ಹೋಂ ಚಾರ್ಜ್‌ನಲ್ಲಿ ಸೊನ್ನೆಯಿಂದ ನೂರರಷ್ಟು ಚಾರ್ಜ್ ಮಾಡಲು ಗರಿಷ್ಠ 13 ಗಂಟೆ ತೆಗೆದುಕೊಳ್ಳುತ್ತದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ಪ್ರತಿಸ್ಪರ್ಧಿ ಮಾದರಿಯ ನೆಕ್ಸಾನ್ ಇವಿ ಕೂಡಾ ಈಗಗಾಲೇ ಹಲವಾರು ಬದಲಾವಣೆಗಳೊಂದಿಗೆ ಪ್ರಬುದ್ದತೆ ಹೊಂದಿರುವ ಮಾದರಿಯಾದಿದ್ದು, ಇದು ಗ್ರಾಹಕರ ಬೇಡಿಕೆಯೆಂತೆ ಇದು ಸ್ಟ್ಯಾಂಡರ್ಡ್ ಮತ್ತು ಮ್ಯಾಕ್ಸ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯ ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಲಕ್ಸ್ ವೆರಿಯೆಂಟ್‌ಗಳಲ್ಲಿ ಕಂಪನಿಯು ಎರಡು ಮಾದರಿಯ ಚಾರ್ಜಿಂಗ್ ಆಯ್ಕೆಗಳನ್ನು ನೀಡಿದ್ದು, 3.3 kW ಮತ್ತು 7.2 kW AC ಫಾಸ್ಟ್ ಚಾರ್ಜಿಂಗ್ ಆಯ್ಕೆ ನೀಡಿದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

7.2 kW AC ಫಾಸ್ಟ್ ಚಾರ್ಜಿಂಗ್ ಆಯ್ಕೆ ಹೊಂದಿರುವ ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಲಕ್ಸ್ ವೆರಿಯೆಂಟ್‌ಗಳು ಸಾಮಾನ್ಯ ಮಾದರಿಗಿಂತಲೂ ತುಸು ಹೆಚ್ಚುವರಿ ಬೆಲೆ ಹೊಂದಿರಲಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದಾಗಿದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

3.3 kW ಚಾರ್ಜಿಂಗ್ ಆಯ್ಕೆ ಹೊಂದಿರುವ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯು ಸೊನ್ನೆಯಿಂದ ಶೇ.100 ರಷ್ಟು ಚಾರ್ಜ್ ಮಾಡಲು ಕನಿಷ್ಠ 14 ರಿಂದ 15 ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಂಡರೆ 7.2 kW AC ಫಾಸ್ಟ್ ಚಾರ್ಜಿಂಗ್ ಆಯ್ಕೆ ಹೊಂದಿರುವ ಮಾದರಿಯು ಪೂರ್ತಿಯಾಗಿ ಚಾರ್ಜ್ ಆಗಲು ಕನಿಷ್ಠ 5 ರಿಂದ 6 ಗಂಟೆಗಳ ಕಾಲ ಸಮಯಾವಕಾಶ ತೆಗದುಕೊಳ್ಳುತ್ತದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ಹೊಸ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಈ ಹಿಂದಿನ 30kWh ಬ್ಯಾಟರಿ ಪ್ಯಾಕ್ ಸ್ಥಾನಕ್ಕೆ ಹೊಸದಾಗಿ 40.5kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು ARAI ಸಂಸ್ಥೆಯು ಪ್ರಮಾಣೀಕರಿಸಿದಂತೆ ಪ್ರತಿ ಚಾರ್ಜ್‌ಗೆ ಗರಿಷ್ಠ 437 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯು ಇಕೋ ಮೋಡ್‌ನಲ್ಲಿ 437 ಕಿ.ಮೀ ಮೈಲೇಜ್ ಹೊಂದಿದ್ದರೂ ಅದು ವಿವಿಧ ಡ್ರೈವಿಂಗ್ ಮೋಡ್ ಮತ್ತು ರಸ್ತೆ ಸೌಲಭ್ಯಕ್ಕೆ ಅನುಗುಣವಾಗಿ ರಿಯಲ್ ವರ್ಲ್ಡ್ ಮೈಲೇಜ್ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗಲಿದ್ದು, ಇದು ವಿವಿಧ ಡ್ರೈವ್ ಮೋಡ್ ಮತ್ತು ರಸ್ತೆ ಸೌಲಭ್ಯಗಳಿಗೆ ಅನುಗುಣವಾಗಿ ಕನಿಷ್ಠ 300ರಿಂದ 320 ಕಿ.ಮೀ ಮೈಲೇಜ್ ಅನ್ನು ಅರಾಮವಾಗಿ ಪಡೆದುಕೊಳ್ಳಬಹುದಾಗಿದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ಸಿ-ಸೆಗ್ಮೆಂಟ್ ಇ-ಎಸ್‌ಯುವಿ ಮಾದರಿಗಳಲ್ಲಿಯೇ ಹೆಚ್ಚಿನ ಗಾತ್ರ ಹೊಂದಿರುವ ಹೊಸ ಕಾರು ಮಾದರಿಯು 4,200 ಎಂಎಂ ಉದ್ದಳತೆ, 1,634 ಎಂಎಂ ಎತ್ತರ, 1,821 ಎಂಎಂ ಅಗಲ, 370 ಲೀಟರ್‌ನಷ್ಟು ಬೂಟ್‌ಸ್ಪೆಸ್‌ನೊಂದಿಗೆ 2,600 ಎಂಎಂ ವ್ಹೀಲ್‌ಬೆಸ್ ಮೂಲಕ ಆರಾಮದಾಯಕ ಕಾರು ಪ್ರಯಾಣವನ್ನು ಖಾತ್ರಿಪಡಿಸುತ್ತದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ಹೊಸ ಕಾರಿನ ವಿನ್ಯಾಸವು ಸಾಮಾನ್ಯ ಎಕ್ಸ್‌ಯುವಿ300 ಶೈಲಿಯನ್ನು ಹೊಂದಿದ್ದರೂ ಎಲೆಕ್ಟ್ರಿಕ್ ಮಾದರಿಯಾಗಿ ಸಾಕಷ್ಟು ವಿಭಿನ್ನತೆ ನೀಡಲಾಗಿದ್ದು, ಆಕರ್ಷಕವಾಗಿರುವ ಗ್ರಿಲ್ ಮತ್ತು ಮುಂಭಾಗದ ಬಂಪರ್, ತಾಮ್ರ-ಬಣ್ಣದ ಮಹೀಂದ್ರಾ ಎಲೆಕ್ಟ್ರಿಫೈಡ್ ಟ್ವಿನ್ ಪೀಕ್ ಬ್ಯಾಡ್ಜ್, ಹೈ ಗ್ಲಾಸ್ ಮಿಶ್ರಲೋಹದ ಚಕ್ರಗಳು, ಡೈಮಂಡ್-ಕಟ್ ಹೈ-ಕಾಂಟ್ರಾಸ್ಟ್ ಹೊಂದಿರುವ 16 ಇಂಚಿನ ಟೈರ್ ನೀಡಲಾಗಿದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ಹಾಗೆಯೇ ಹೊಸ ಎಕ್ಸ್‌ಯುವಿ400 ಮಾದರಿಯ ಒಳಾಂಗಣ ವೈಶಿಷ್ಟ್ಯಗಳು ಗಮನಸೆಳೆಯಲಿದ್ದು, ದೊಡ್ಡದಾದ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆ 60 ಕ್ಕೂ ಹೆಚ್ಚು ಕನೆಕ್ಟಿವಿಟಿ ಸೌಲಭ್ಯಗಳಿರಲಿವೆ. ಇವುಗಳಲ್ಲಿ ಕೆಲವು ಹೊಸ ಸೌಲಭ್ಯಗಳು ಚಾಲನೆ ಸಂದರ್ಭ ಚಾರ್ಜಿಂಗ್ ನಿಲ್ದಾಣಗಳು ಮತ್ತು ಇತರೆ ಸೌಕರ್ಯಗಳ ಕುರಿತಾದ ನಿಖರ ಮಾಹಿತಿ ನೀಡಲಿದ್ದು, ಸಂಪರ್ಕಿತ ಕಾರ್ ಸೂಟ್ ಸೌಲಭ್ಯವು ಕಾರಿನ ತಾಂತ್ರಿಕ ಸೌಲಭ್ಯಗಳ ನಿರ್ವಹಣೆಯನ್ನು ಸುಲಭವಾಗಿಸುತ್ತದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ಆದರೆ ಪ್ರತಿಸ್ಪರ್ಧಿ ಮಾದರಿಯಾದ ನೆಕ್ಸಾನ್ ಇವಿ ಮಾದರಿಯು ಸ್ಟ್ಯಾಂಡರ್ಡ್ ನೆಕ್ಸಾನ್ ಮಾದರಿಯೆಂತೆ 3,993 ಎಂಎಂ ಉದ್ದಳತೆ ಹೊಂದಿದ್ದು, ಎಕ್ಸ್‌ಯುವಿ400 ಮಾದರಿಗಿಂತಲೂ ಕಡಿಮೆ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ಹೊಸ ಕಾರನ್ನು ಮಹೀಂದ್ರಾ ಕಂಪನಿಯು ಐದು ಅತ್ಯಾಕರ್ಷಕ ಬಣ್ಣಗಳಲ್ಲಿ ಪರಿಚಯಿಸುತ್ತಿದ್ದು, ಗ್ರಾಹಕರು ಆರ್ಕ್ಟಿಕ್ ಬ್ಲೂ, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನಪೋಲಿ ಬ್ಲಾಕ್ ಮತ್ತು ಇನ್ಫಿನಿಟಿ ಬ್ಲೂ ಸ್ಯಾಟಿನ್ ಕಾಪರ್ ಫಿನಿಶ್‌ನಲ್ಲಿ ಡ್ಯುಯಲ್-ಟೋನ್ ರೂಫ್ ನೀಡಲಾಗಿದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ಜೊತೆಗೆ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಫೀಚರ್ಸ್ ಹೊಂದಿರುವ ಹೊಸ ಎಕ್ಸ್‌ಯುವಿ400 ಮಾದರಿಯು ಹಲವಾರು ಸುರಕ್ಷಾ ಸೌಲಭ್ಯಗಳೊಂದಿಗೆ ಜೋಡಣೆಯಾಗಿದ್ದು, ಸಾಮಾನ್ಯ ಎಕ್ಸ್‌ಯುವಿ300 ಮಾದರಿಯಂತೆ ಗರಿಷ್ಠ ಸುರಕ್ಷತೆಯೊಂದಿಗೆ ಪ್ರಯಾಣಿಕರಿಗೆ ಸುರಕ್ಷತೆ ಖಾತ್ರಿಪಡಿಸುತ್ತದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ನೀರಿಕ್ಷಿತ ಬೆಲೆ

ಮಹೀಂದ್ರಾ ಕಂಪನಿಯು ಹೊಸ ಎಕ್ಸ್‌ಯುವಿ400 ಮಾದರಿಯನ್ನು ಹಲವಾರು ಮಾರುಕಟ್ಟೆ ಅಧ್ಯಯನದೊಂದಿಗೆ ಅಭಿವೃದ್ದಿಪಡಿಸಿದ್ದು, ಬೆಲೆ, ಮೈಲೇಜ್ ಮತ್ತು ತಾಂತ್ರಿಕ ಸೌಲಭ್ಯಗಳ ವಿಚಾರದಲ್ಲಿ ಹೊಸ ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ. ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ವಿವಿಧ ವೆರಿಯೆಂಟ್‌ಗಳೊಂದಿಗೆ ರೂ. 16 ಲಕ್ಷದಿಂದ ರೂ. 20 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ಈಗಾಗಲೇ ಇವಿ ಕಾರು ಮಾದರಿಗಳಲ್ಲಿ ಭಾರೀ ಬೇಡಿಕೆ ಹೊಂದಿರುವ ನೆಕ್ಸಾನ್ ಇವಿ ಮತ್ತು ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 14.99 ಲಕ್ಷದಿಂದ ರೂ. 20.04 ಲಕ್ಷ ಬೆಲೆ ಹೊಂದಿದೆ.

ಮಹೀಂದ್ರಾ ಎಕ್ಸ್‌ಯುವಿ400 vs ಟಾಟಾ ನೆಕ್ಸಾನ್ ಇವಿ.. ಯಾವುದು ಬೆಸ್ಟ್?

ಹೀಗಾಗಿ ಎರಡು ಮಾದರಿಗಳನ್ನು ಹೋಲಿಕೆ ಮಾಡಿದಾಗ ಸದ್ಯದ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ಇವಿ ಬಿಡುಗಡೆಯಾಗಲಿರುವ ಎಕ್ಸ್‌ಯುವಿ400 ಮಾದರಿಗಿಂತಲೂ ಫೀಚರ್ಸ್‌, ಮೈಲೇಜ್, ಬ್ಯಾಟರಿ ವಿಭಾಗಗಳಲ್ಲಿ ಹಿನ್ನಡೆ ಅನುಭವಿಸಲಿದ್ದು, ಬೆಲೆ ವಿಚಾರದಲ್ಲಿ ನೆಕ್ಸಾನ್ ಇವಿ ಮಾದರಿಗೆ ಪೈಪೋಟಿಯಾದರೆ ಮಾತ್ರ ಎರಡು ಮಾದರಿಗಳ ಆಯ್ಕೆಯಲ್ಲಿ ನಿಜವಾದ ಪೈಪೋಟಿ ಆಗ ಶುರುವಾಗಲಿದೆ.

Most Read Articles

Kannada
English summary
New mahindra xuv400 vs tata nexon ev detailed comparison
Story first published: Monday, September 12, 2022, 21:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X