ಬಿಡುಗಡೆಗೂ ಮುನ್ನ ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಮಾರುತಿ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಇತ್ತೀಚೆಗೆ ಸಿಎನ್‌ಜಿ ಹಾಗೂ ಪೆಟ್ರೋಲ್/ಡೀಸೆಲ್ ನಡುವಿನ ಬೆಲೆಯ ಅಂತರ ಕಡಿಮೆಯಾಗಿದೆ, ಸಿಎನ್‌ಜಿ ಅಗ್ಗದ ಬೆಲೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ಸಿಎನ್‌ಜಿ ವಾಹನಗಳ ಮೈಲೇಜ್ ಅವುಗಳ ಪೆಟ್ರೋಲ್ ಅಥವಾ ಡೀಸೆಲ್-ಚಾಲಿತ ಕೌಂಟರ್‌ಪಾರ್ಟ್‌ಗಳಿಗಿಂತ ಹೆಚ್ಚು. ಒಟ್ಟಾರೆ ಸಿಎನ್‌ಜಿ ವಾಹನ ಬಳಕೆದಾರರಿಗೆ ಉಳಿತಾಯ ಹೆಚ್ಚು.

ಬಿಡುಗಡೆಗೂ ಮುನ್ನ ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಮಾರುತಿ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ದೇಶಿಯ ಮಾರುಕಟ್ಟೆಯಲ್ಲಿ ಕಾರು ತಯಾರಕರು ಹೊಸ ಸಿಎನ್‌ಜಿ ಮಾದರಿಗಳನ್ನು ಪರಿಚಯಿಸುವುದನ್ನು ಮುಂದುವರೆಸಿದ್ದಾರೆ. ಇದೀಗ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಎನ್‌ಜಿ-ಚಾಲಿತ ಬಲೆನೊವನ್ನು ಬಿಡುಗಡೆ ಮಾಡಿತು. ಮಾರುತಿ ಸುಜುಕಿ ಈಗ ತನ್ನ ಮುಂದಿನ ಜನಪ್ರಿಯ ಕೊಡುಗೆಯಾದ ಬ್ರೆಝಾ ಕಾಂಪ್ಯಾಕ್ಟ್ ಈಗ ಬ್ರೆಝಾ ಕಾಂಪ್ಯಾಕ್ಟ್ ಎಸ್‍ಯುವಿಯ ಸಿಎನ್‌ಜಿ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಬಿಡುಗಡೆಗೂ ಮುನ್ನ ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಮಾರುತಿ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಹೊಸ ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿಯನ್ನು ಇತ್ತೀಚೆಗೆ ಡೀಲರ್ ಸ್ಟಾಕ್‌ಯಾರ್ಡ್‌ನಲ್ಲಿ ಕಾಣಿಸಿಕೊಂಡಿದೆ. ಈ ಎಸ್‍ಯುವಿಯ ವಿಡಿಯೋವನ್ನು ರಿಯಲ್ ಗಾಡಿ ಅಪ್‌ಲೋಡ್ ಮಾಡಿದ ಯೂಟ್ಯೂಬ್ ವೀಡಿಯೊದಲ್ಲಿ ಬಹಿರಂಗಪಡಿಸಲಾಗಿದೆ. ಹೊಸ ಬ್ರೆಝಾ ಸಿಎನ್‌ಜಿ ಎಸ್‍ಯುವಿಯು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಬಿಡುಗಡೆಗೂ ಮುನ್ನ ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಮಾರುತಿ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಹೊಸ ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ ಪೆಟ್ರೋಲ್-ಚಾಲಿತ ಪ್ರತಿರೂಪಕ್ಕಿಂತ ಯಾವುದೇ ದೃಶ್ಯ ವ್ಯತ್ಯಾಸಗಳನ್ನು ಹೊಂದಿಲ್ಲ ಎಂದು ನಾವು ನೋಡಬಹುದು. ಹೊರಭಾಗದಲ್ಲಿ, ಇದು ಬ್ರೆಝಾದ ಸಾಮಾನ್ಯ ಆವೃತ್ತಿಯಂತೆಯೇ ಕಾಣುತ್ತದೆ,

ಬಿಡುಗಡೆಗೂ ಮುನ್ನ ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಮಾರುತಿ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಈ ಹೊಸ ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ ಎಸ್‍ಯುವಿಯು ನಯವಾದ-ಕಾಣುವ ಗ್ರಿಲ್, ಡ್ಯುಯಲ್ ಎಲ್-ಆಕಾರದ ಡೇಟೈಮ್ ರನ್ನಿಂಗ್ ಎಲ್ಇಡಿಗಳೊಂದಿಗೆ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಫಾಗ್ ಲ್ಯಾಂಪ್‌ಗಳು, ಮುಂಭಾಗ ಮತ್ತು ಹಿಂಭಾಗದ ಭಾರವಾದ ಬ್ಲ್ಯಾಕ್ ಕ್ಲಾಡಿಂಗ್, ಮತ್ತು ಮಸ್ಕರ್ ವಿನ್ಯಾಸವನ್ನು ಹೊಂದಿದೆ.

ಬಿಡುಗಡೆಗೂ ಮುನ್ನ ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಮಾರುತಿ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಹೊಸ ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ ನಾಲ್ಕು ರೂಪಾಂತರಗಳಲ್ಲಿ ನೀಡಲಾಗುವುದು ಎಂದು ವೀಡಿಯೊ ಬಹಿರಂಗಪಡಿಸುತ್ತದೆ. ಇದು LXI, VXI, ZXI ಮತ್ತು ZXI+ ಆಗಿದೆ. ಸ್ಟ್ಯಾಂಡರ್ಡ್ ಪೆಟ್ರೋಲ್-ಚಾಲಿತ ಪ್ರತಿರೂಪದಂತೆಯೇ. ಈ ಎಲ್ಲಾ ರೂಪಾಂತರಗಳು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತವೆ

ಬಿಡುಗಡೆಗೂ ಮುನ್ನ ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಮಾರುತಿ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಆದರೆ ZXI ಮತ್ತು ZXI+ ರೂಪಾಂತರಗಳಲ್ಲಿ ನೀಡಲಾಗುವ ಆಯ್ಜೆಯ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾರುತಿ ಸುಜುಕಿಗೆ ಗೇಮ್-ಚೇಂಜರ್ ಆಗಿರಬಹುದು. ಇದರೊಂದಿಗೆ, ಬ್ರೆಝಾ ಫ್ಯಾಕ್ಟರಿ ಫಿಟಡ್ ಅಳವಡಿಸಲಾಗಿರುವ ಸಿಎನ್‌ಜಿ ಕಿಟ್‌ನೊಂದಿಗೆ ಆಯ್ಕೆಯ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೀಡಲಾಗುವ ಭಾರತದಲ್ಲಿ ಮೊದಲ ವಾಹನವಾಗಿದೆ.

ಬಿಡುಗಡೆಗೂ ಮುನ್ನ ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಮಾರುತಿ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯ ಸ್ಟ್ಯಾಂಡರ್ಡ್ ರೂಪಾಂತರವು ಇದೇ ರೀತಿಯ ಎಂಜಿನ್ ಅನ್ನು ಹೊಂದಿದ್ದು, 103 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್‍ಯುವಿಯ ಸಿಎನ್‌ಜಿ ಆವೃತ್ತಿಯ ನಿರ್ವಹಣೆ ವೆಚ್ಚವು ಕಡಿಮೆಯಾಗಿರುತ್ತದೆ.

ಬಿಡುಗಡೆಗೂ ಮುನ್ನ ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಮಾರುತಿ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಚಾಲನೆಯ ವೆಚ್ಚದ ಬಗ್ಗೆ ಮಾತನಾಡುತ್ತಾ, ಸಬ್-4ಮೀಟರ್ ಎಸ್‍ಯುವಿಯ ಕಡಿಮೆ ಕರ್ಬ್ ತೂಕವನ್ನು ಹೊಂದಿದ್ದು, ಮಾರುತಿ ಸುಜುಕಿ ಬ್ರೆಝಾದ ಸಿಎನ್‌ಜಿ ಆವೃತ್ತಿಯು ಮಾರುತಿ ಸುಜುಕಿ ಎರ್ಟಿಗಾ ಎಂಯುವಿಯ ಸಿಎನ್‌ಜಿ ಆವೃತ್ತಿಗಿಂತ ಸ್ವಲ್ಪ ಹೆಚ್ಚು ಇಂಧನ-ಸಮರ್ಥವಾಗಿದೆ ಎಂದು ನಾವು ನಿರೀಕ್ಷಿಸುತ್ತೇವೆ.

ಬಿಡುಗಡೆಗೂ ಮುನ್ನ ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಮಾರುತಿ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಮಾರುತಿ ಸುಜುಕಿ ಬ್ರೆಝಾಗೆ ಹಿಂತಿರುಗಿ, ಸಬ್-4 ಮೀಟರ್ ಎಸ್‍ಯುವಿಯ 2022 ಪುನರಾವರ್ತನೆಯನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಹೊಸ ಮಾದರಿಯು ಬಾಹ್ಯ ಮತ್ತು ಆಂತರಿಕ ಎರಡರಲ್ಲೂ ಹಲವಾರು ಬದಲಾವಣೆಗಳೊಂದಿಗೆ ಬರುತ್ತದೆ.

ಬಿಡುಗಡೆಗೂ ಮುನ್ನ ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಮಾರುತಿ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಕಾರು ತಯಾರಕ ತನ್ನ ಎಸ್-ಸಿಎನ್ ಜಿ ವಾಹನಗಳನ್ನು ಅತ್ಯುತ್ತಮ ಕಾರ್ಯಕ್ಷಮತೆ, ಸುರಕ್ಷತೆ, ಎಂಜಿನ್ ಬಾಳಿಕೆ, ಅನುಕೂಲತೆ ಮತ್ತು ಮೈಲೇಜ್ ನೀಡಲು ವಿನ್ಯಾಸಗೊಳಿಸಲಾಗಿದೆ. ಮಾರುತಿ ವಿಟಾರಾ ಬ್ರೆಝಾ ಸಿಎನ್‌ಜಿ ಎಸ್‍ಯುವಿಯ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ.

ಬಿಡುಗಡೆಗೂ ಮುನ್ನ ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಮಾರುತಿ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಇತ್ತೀಚೆಗೆ ಮಾರುತಿ ಸುಜುಕಿಯು 2022ರ ಮಾದರಿಯಲ್ಲಿ ಈ ಹಿಂದೆಂದಿಗಿಂತಲೂ ಹೆಚ್ಚಿನ ಬದಲಾವಣೆಗಳೊಂದಿಗೆ ಸ್ಟ್ಯಾಂಡರ್ಡ್ ಮಾದರಿಯನ್ನು ಬಿಡುಗಡೆಗೊಳಿಸಲಾಗಿತ್ತು. ಈ ಹೊಸ ಎಸ್‍ಯುವಿ ಮಾದರಿಯ ಎಲ್ಎಕ್ಸ್‌ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ ರೂಪಾಂತರಗಳನ್ನು ಹೊಂದಿದೆ.

ಬಿಡುಗಡೆಗೂ ಮುನ್ನ ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಮಾರುತಿ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಈ ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿ ಹಿಂದಿನ ಮಾದರಿಗಿಂತ 45 ಎಂಎಂ ಹೆಚ್ಚುವರಿ ಎತ್ತರವನ್ನು ಹೊಂದಿದೆ. ಇನ್ನುಳಿದಂತೆ ಈ ಹೊಸ ಎಸ್‍ಯುವಿ ಈ ಹಿಂದಿನಂತೆ 3,995 ಎಂಎಂ ಉದ್ದಳತೆ, 1,790 ಎಂಎಂ ಅಗಲ, 2,500 ವ್ಹೀಲ್‌ಬೆಸ್ ಹೊಂದಿದ್ದು, ಹೊಸ ಕಾರಿನ ಹೊರ ಮತ್ತು ಒಳ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಹೊಂದಿದೆ.

ಬಿಡುಗಡೆಗೂ ಮುನ್ನ ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಮಾರುತಿ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಬ್ರೆಝಾ ಎಸ್‌ಯುವಿ ಮುಂಭಾಗದಲ್ಲಿ ನವೀಕೃತ ಫ್ಲಾಟ್-ಲುಕಿಂಗ್ ಕ್ಲಾಮ್‌ಶೆಲ್ ಬಾನೆಟ್ ನೀಡಲಾಗಿದ್ದು, ಸ್ಕ್ವಾರಿಶ್ ಡ್ಯುಯಲ್-ಎಲ್‌ಇಡಿ ಹೆಡ್‌ಲ್ಯಾಂಪ್ ವಿನ್ಯಾಸವು ಇದೀಗ ಗನ್‌ಮೆಟಲ್ ಶೆಡ್ ಹೊಂದಿರುವ ಗ್ರಿಲ್‌ನೊಂದಿಗೆ ಅಂದವಾಗಿ ನವೀಕರಿಸಿದೆ. ಇದರೊಂದಿಗೆ ಕಾಂಟ್ರಾಸ್ಟ್ ಬ್ಲ್ಯಾಕ್ ಕ್ಲಾಡಿಂಗ್‌ ಉತ್ತಮವಾಗಿದ್ದು, ಹಿಂಭಾಗದಲ್ಲಿನ ಟೈಲ್‌ಗೇಟ್ ವಿನ್ಯಾಸವನ್ನು ಸಹ ಪರಿಷ್ಕರಿಸಲಾಗಿದೆ.

ಬಿಡುಗಡೆಗೂ ಮುನ್ನ ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಮಾರುತಿ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಇನ್ನು ಟೈಲ್ ಲ್ಯಾಂಪ್ ಉತ್ತಮ ಹೊರನೋಟ ಹೊಂದಿದ್ದು, ಲೈಸೆನ್ಸ್ ಪ್ಲೇಟ್‌ನ ಮೇಲ್ಭಾಗದ ಮಧ್ಯದಲ್ಲಿ ಬ್ರೆಜ್ಜಾ ಬ್ಯಾಡ್ಜಿಂಗ್ ನೀಡಲಾಗಿದೆ. ಇದರೊಂದಿಗೆ ಹೊಸ ಕಾರಿನ ಬೆಸ್ ವೆರಿಯೆಂಟ್‌ಗಳಲ್ಲಿ ಫ್ಲೋಟಿಂಗ್ ರೂಫ್ ಎಫೆಕ್ಟ್‌ನೊಂದಿಗೆ ಡ್ಯುಯಲ್-ಟೋನ್ ಎಕ್ಸ್‌ಟೀರಿಯರ್ ಶೇಡ್‌ಗಳನ್ನು ಪಡೆಯಲಿದ್ದು, ಇವು ಕಾರಿನ ಉದ್ದಳತೆ ಹೆಚ್ಚು ಕಾಣುವಂತಿದೆ.

ಬಿಡುಗಡೆಗೂ ಮುನ್ನ ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಮಾರುತಿ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಇನ್ನು ಈ ಕಾರಿನಲ್ಲಿ 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ಚಕ್ರಗಳನ್ನು ನೀಡಲಾಗಿದ್ದು, ಹೊಸ ಕಾರಿನ ಇಂಟಿರಿಯರ್ ಕೂಡಾ ಇದೀಗ ಸಾಕಷ್ಟು ಹೊಸ ತಾಂತ್ರಿಕ ಅಂಶಗಳಿಂದ ಕೂಡಿದೆ. ಈ ಹೊಸ ಎಸ್‍ಯುವಿ ಕಂಪನಿಯು 2022ರ ಬಲೆನೊ, ಎರ್ಟಿಗಾ ಮತ್ತು ಎಕ್ಸ್6 ಮಾದರಿಗಳಲ್ಲಿ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಳ್ಳಲಾಗಿದೆ.

ಬಿಡುಗಡೆಗೂ ಮುನ್ನ ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಮಾರುತಿ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಇದರೊಂದಿಗೆ ಈ ಎಸ್‍ಯುವಿಯಲ್ಲಿ ಆರ್ಕಮಿಸ್ ಸೌಂಡ್ ಸಿಸ್ಟಂ, ವೈರ್‌ಲೆಸ್ ಚಾರ್ಜಿಂಗ್, ರಿಯರ್ ಎಸಿ ವೆಂಟ್‌ಗಳು, ವಾಯ್ಸ್ ಕಮಾಂಡ್ ಸಪೋರ್ಟ್, ಕನೆಕ್ಟ್ ಕಾರ್ ಟೆಕ್, ಹೆಡ್ಸ್-ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಸಿ ಕಂಟ್ರೊಲರ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳು, ಆಂಬಿಯೆಂಟ್ ಲೈಟಿಂಗ್ಸ್, ಕನೆಕ್ಟಿಂಗ್ ಕಾರ್ ಟೆಕ್ ಜೊತೆ ಅಲೆಕ್ಸಾ ವಾಯ್ಸ್ ಕಮಾಂಡ್ ಮತ್ತು ಸನ್‌ರೂಫ್ ಸೌಲಭ್ಯಗಳನ್ನು ಕೂಡ ಒಳಗೊಂಡಿದೆ.

ಬಿಡುಗಡೆಗೂ ಮುನ್ನ ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಮಾರುತಿ ಬ್ರೆಝಾ ಸಿಎನ್‌ಜಿ ಎಸ್‍ಯುವಿ

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ

ಪ್ರಸ್ತುತ, ಫ್ಯಾಕ್ಟರಿ ಫಿಟಡ್ ಸಿಎನ್‌ಜಿ ಕಿಟ್‌ನೊಂದಿಗೆ ಲಭ್ಯವಿರುವ ಯಾವುದೇ ಕಾಂಪ್ಯಾಕ್ಟ್ ಎಸ್‍ಯುವಿ ಇಲ್ಲ. ಸಿಎನ್‌ಜಿ-ಚಾಲಿತ ವಾಹನಗಳ ಜನಪ್ರಿಯತೆಯನ್ನು ಪರಿಗಣಿಸಿ, ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯನ್ನು ಸಿಎನ್‌ಜಿ ವರ್ಷನ್ ನಲ್ಲಿ ಬಿಡುಗಡೆಗೊಳಿಸುವ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
English summary
New maruti brezza cng suv caught in dealer stock yard details
Story first published: Friday, November 11, 2022, 11:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X