Just In
- 1 hr ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 15 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 17 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
- 17 hrs ago
ಭಾರತೀಯ ಕಾರುಗಳಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಳ: ಮೇ ತಿಂಗಳಲ್ಲಿ ಅತಿ ಹೆಚ್ಚು ರಫ್ತಾಗಿರುವ ಕಾರುಗಳಿವು!
Don't Miss!
- News
ಉಳಿತಾಯ ಮಾಡಿ ನಿಮ್ಮ ಹಣ ದ್ವಿಗುಣಗೊಳಿಸುವ ಯೋಜನೆ ಬಗ್ಗೆ ತಿಳಿಯಿರಿ
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್‌ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Finance
ಜೂನ್ 26: ಕಚ್ಚಾತೈಲ ದರ ಚೇತರಿಕೆ, ಭಾರತದಲ್ಲಿ ಇಂಧನ ದರ ಆಗಿಲ್ಲ ಏರಿಕೆ!
- Sports
Ind vs Eng: ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಕೊರೊನಾ ವೈರಸ್
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಬುಕಿಂಗ್ ಆರಂಭವಾದ ಮೊದಲ ದಿನವೇ 4,500 ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಂಡ ಹೊಸ ಮಾರುತಿ ಬ್ರೆಝಾ
ಇದೇ ತಿಂಗಳು 30ರಂದು ಮಾರುತಿ ಸುಜುಕಿ ಹೊಸ ಬ್ರೆಝಾ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಬಿಡುಗಡೆಯಾಗುತ್ತಿದ್ದು, ಹೊಸ ಕಾರು ಮಾದರಿಗಾಗಿ ಕಂಪನಿಯು ರೂ.11 ಸಾವಿರ ಮುಂಗಡದೊಂದಿಗೆ ಬುಕಿಂಗ್ ಆರಂಭಿಸಿದೆ.

ಹೊಸ ಬ್ರೆಝಾ ಕಾರು ಮಾದರಿಗೆ ಮಾರುತಿ ಸುಜುಕಿ ಕಂಪನಿಯು ಬುಕಿಂಗ್ ಆರಂಭಿಸಿದ 24 ಗಂಟೆಯೊಳಗೆ ಸುಮಾರು 4,500 ಗ್ರಾಹಕರು ಮುಂಗಡ ಪಾವತಿಸಿದ್ದು, ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಹೊಸ ಕಾರು ಮಾದರಿಯು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಬ್ರೆಝಾ ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿಯು ಈ ಹಿಂದಿನ ವಿಟಾರಾ ಬ್ರೆಝಾ ಬ್ಯಾಡ್ಜ್ ಬದಲಾಗಿ ಕೇವಲ ಬ್ರೆಝಾ ಬ್ಯಾಡ್ಜ್ ಮಾತ್ರ ಪಡೆದುಕೊಳ್ಳಲಿದ್ದು, ಹೊಸ ಕಾರು ಮಾದರಿಯು ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಗೆ ಅನುಗುಣವಾಗಿ ಎಲ್ಎಕ್ಸ್ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ ಪ್ಲಸ್ ವೆರಿಯೆಂಟ್‌ಗಳನ್ನು ಹೊಂದಿಲಿದೆ.

ಹೊಸ ಕಾರಿನಲ್ಲಿ ನವೀಕರಣಗೊಳಿಸಲಾದ ಎಂಜಿನ್ ಉನ್ನತೀಕರಣ ಸೇರಿದಂತೆ ಬದಲಾದ ಮುಂಭಾಗದ ವಿನ್ಯಾಸವು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದ್ದು, ನವೀಕರಿಸಲಾದ ಮುಂಭಾಗದ ವಿನ್ಯಾಸವು ಈ ಬಾರಿ ಸ್ಪೋರ್ಟಿಯಾಗಿ ಮತ್ತು ಹೆಚ್ಚು ಬಲಿಷ್ಠವಾಗಿ ಗಮನಸೆಳೆಯಲಿದೆ.

ಹೊಸ ಕಾರಿನಲ್ಲಿ ಕಂಪನಿಯು ಹೈ ಎಂಡ್ ಮಾದರಿಗಳಿಗಾಗಿ ಡ್ಯುಯಲ್ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಫಾಗ್ ಲ್ಯಾಂಪ್, ಆರಂಭಿಕ ಮಾದರಿಗಳಿಗಾಗಿ ಬಿ-ಹಾಲೊಜೆನ್ ಪ್ರೊಜೆಕ್ಟ್ ಹೆಡ್‌ಲ್ಯಾಂಪ್, ಸಂಪೂರ್ಣ ಕಪ್ಪು ಬಣ್ಣದ 16 ಇಂಚಿನ ಅಲಾಯ್ ವ್ಹೀಲ್ ಮತ್ತು ಬಾಡಿ ಕ್ಲಾಡಿಂಗ್ ನೀಡಲಾಗಿದೆ.

ಜೊತೆಗೆ ಹೊಸ ಕಾರಿನಲ್ಲಿ ಪ್ಯಾಡಲ್ ಶಿಫ್ಟರ್, ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ದೊಡ್ಡ ಟಚ್‌ಸ್ಕ್ರೀನ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಹೊಸ ಮಾದರಿಯ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ ಹೊಂದಿರಲಿದೆ.

ಇದರಲ್ಲದೆ 2022ರ ಬ್ರೆಝಾ ಹೆಚ್ಚು ಸುಧಾರಿತ ಕನೆಕ್ಟಿವಿಟಿ ಕಾರು ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಳ್ಳುತ್ತಿದ್ದು, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಕ್ಲೈಮೇಟ್ ಕಂಟ್ರೋಲ್ ಮತ್ತು ಹೆಡ್‌ಲೈಟ್ ಕಂಟ್ರೋಲ್‌ನಂತಹ ವೈಶಿಷ್ಟ್ಯತೆಗಳು ಪಡೆಯುವ ಸಾಧ್ಯತೆಗಳಿವೆ.

ಹೊಸ ಬ್ರೆಝಾದ ಒಳಭಾಗ ಮತ್ತು 2022 ಬಲೆನೊದ ಒಳಭಾಗದ ನಡುವೆ ಸಾಕಷ್ಟು ಹೋಲಿಕೆಗಳಿದ್ದು, ಹೊಸ ವಿಟಾರಾ ಬ್ರೆಝಾದಲ್ಲಿ ಫ್ಲಾಟ್-ಬಾಟಮ್ ಸ್ಟೀರಿಂಗ್ ವ್ಹೀಲ್, ಹಿಲ್ ಹೋಲ್ಡ್, ಕ್ರೂಸ್ ಕಂಟ್ರೋಲ್ ಮುಂತಾದ ವೈಶಿಷ್ಟ್ಯತೆಗಳೊಂದಿಗೆ 4 ಸ್ಟಾರ್ ಗ್ಲೋಬರ್ ಕ್ರ್ಯಾಶ್ ಟೆಸ್ಟಿಂಗ್ ರೇಟಿಂಗ್ಸ್ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಹೊಸ ಕಾರಿನಲ್ಲಿ ಕಂಪನಿಯು ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಿದ್ದು, ಹೊಸ ಕಾರಿನಲ್ಲಿ ಎಲೆಕ್ಟ್ರಿಕ್ ಸನ್‌ರೂಫ್, ಗರಿಷ್ಠ ಸುರಕ್ಷತೆಗಾಗಿ ಹೈ ಎಂಡ್ ಮಾದರಿಗಳಲ್ಲಿ 6 ಏರ್‌ಬ್ಯಾಗ್ ಜೋಡಣೆ ಹೊಂದಿದೆ.

ಇನ್ನು ಹೊಸ ಕಾರಿನಲ್ಲಿ ಕಂಪನಿಯು ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.5-ಲೀಟರ್ ಕೆ15ಸಿ ಪೆಟ್ರೋಲ್ ಎಂಜಿನ್ ಆಯ್ಕೆ ನೀಡುತ್ತಿದ್ದು, ಎಲ್ಎಕ್ಸ್ಐ ವೆರಿಯೆಂಟ್‌ನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಣೆ ಮಾಡಿದ್ದರೆ ಇನ್ನುಳಿದ ಎಲ್ಲಾ ವೆರಿಯೆಂಟ್‌ಗಳಲ್ಲೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳಿವೆ.

ಹೊಸ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.5-ಲೀಟರ್ ಕೆ15ಸಿ ಪೆಟ್ರೋಲ್ ಎಂಜಿನ್ ಅನ್ನು ಮಾರುತಿ ಸುಜುಕಿ ಕಂಪನಿಯು ಈಗಾಗಲೇ 2022ರ ಎರ್ಟಿಗಾ ಮತ್ತು ಎಕ್ಸ್‌ಎಲ್6 ಮಾದರಿಗಳಲ್ಲೂ ಅಳವಡಿಸಿದ್ದು, ಇದೀಗ ಹೊಸ ಎಂಜಿನ್ ಆಯ್ಕೆಯು ಬ್ರೆಝಾ ಮಾದರಿಯಲ್ಲೂ ಅಳವಡಿಸಲಾಗುತ್ತಿದೆ.

ಡ್ಯುಯಲ್ ಜೆಟ್ ವಿವಿಟಿ ಟೆಕ್ನಾಲಜಿ ಪ್ರೇರಣೆ ಹೊಂದಿರುವ ಹೊಸ 1.5-ಲೀಟರ್ ಕೆ15ಸಿ ಪೆಟ್ರೋಲ್ ಎಂಜಿನ್ ಮಾದರಿಯು 101.6 ಬಿಎಚ್‌ಪಿ ಮತ್ತು 136.8 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಇದು ಉತ್ತಮ ಎಂಜಿನ್ ಕಾರ್ಯಕ್ಷಮತೆಯೊಂದಿಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯುತ್ತದೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ 6 ಸಿಂಗಲ್ ಟೋನ್(ಪರ್ಲ್ ಆರ್ಟಿಕ್ ವೈಟ್, ಪರ್ಲ್ ಸಿಲ್ವರ್, ಮೆಟಾಲಿಕ್ ಮ್ಯಾಗ್ಮಾ ಗ್ರೇ, ಸಿಜ್ಲಿಂಗ್ ರೆಡ್, ಎಕ್ಸೂಬೆರೆಂಟ್ ಬ್ಲ್ಯೂ, ಪರ್ಲ್ ಬ್ರೇವ್ ಕಾಕಿ) ಮತ್ತು 3 ಡ್ಯುಯಲ್ ಟೋನ್ ಬಣ್ಣದ(ಸಿಜ್ಲಿಂಗ್ ರೆಡ್ ಮತ್ತು ಬ್ಲ್ಯಾಕ್, ವೈಟ್ ಮತ್ತು ಕಾಕಿ ಬ್ರೇವ್, ಬ್ಲ್ಯಾಕ್ ಮತ್ತು ಸಿಲ್ವರ್) ಆಯ್ಕೆ ನೀಡಲಾಗಿದೆ.

ಈ ಮೂಲಕ ಬ್ರೆಝಾ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.84 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ. 11.49 ಲಕ್ಷ ಬೆಲೆ ಹೊಂದಿರುವ ಬ್ರೆಝಾ ಕಾರು ಹೊಸ ತಲೆಮಾರಿನ ಆವೃತ್ತಿಯೊಂದಿಗೆ ತುಸು ದುಬಾರಿಯಾಗಿರಲಿದೆ.