ಹೊಸ ಮಾರುತಿ ಆಲ್ಟೋ ಕೆ10 ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಪೋರ್ಟ್ಫೋಲಿಯೊಗೆ ಆಲ್ಟೋ ಕೆ10 ಅನ್ನು ಮರಳಿ ತಂದಿದೆ. ಹಿಂದಿನ ಆಲ್ಟೊ ಕೆ10 ಮಾದರಿಯನ್ನು ಸುಮಾರು ಒಂದೆರಡು ವರ್ಷಗಳ ಹಿಂದೆ ಸ್ಥಗಿತಗೊಳಿಸಲಾಯಿತು. ಹೊಸ ನವೀಕರಣಗಳೊಂದಿಗೆ ಆಲ್ಟೋ ಕೆ10 ಹ್ಯಾಚ್‌ಬ್ಯಾಕ್‌ ಭಾರತೀಯ ಮಾರುಕಟ್ಟೆಯನ್ನು ಇತ್ತೀಚೆಗೆ ಪ್ರವೇಶಿಸಿದೆ.

ಹೊಸ ಮಾರುತಿ ಆಲ್ಟೋ ಕೆ10 ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಇದೀಗ ಮಾರುತಿ ಸುಜುಕಿ ಕಂಪನಿಯು ಹಬ್ಬದ ಸೀಸನ್‌ನಲ್ಲಿ ಆಲ್ಟೋ ಕೆ10 ಕಾರಿನ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಈ ಮಾರುತಿ ಆಲ್ಟೊ ಕೆ10 ಕಾರಿನ ಮೇಲೆ ಒಟ್ಟು 25,000 ರೂ, ವರೆಗಿನ ರಿಯಾಯಿತಿಯನ್ನು ನೀಡಲಾಗುತ್ತದೆ. ಇದಲ್ಲದೆ, ಮಾರುತಿ ಸುಜುಕಿ ಕಂಪನಿಯು ಇತರ ಮಾದರಿಗಳಲ್ಲಿಯೂ ಸಹ ಉತ್ತಮ ರಿಯಾಯಿತಿಗಳನ್ನು ನೀಡುತ್ತಿದ್ದಾರೆ. ಮಾರುತಿ ಸುಜುಕಿ ಆಲ್ಟೋ 800 ಕಾರಿನ ಮೇಲೆ ರೂ.29,000 ವರೆಗೆ ಪ್ರಯೋಜನಗಳನ್ನು ನೀಡುತ್ತಿದ್ದಾರೆ.

ಹೊಸ ಮಾರುತಿ ಆಲ್ಟೋ ಕೆ10 ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಇದರೊಂದಿಗೆ ಮಾರುತಿ ಸುಜುಕಿ ವ್ಯಾಗನ್ಆರ್ ಕಾರಿನ ಮೇಲೆ ರೂ.40,000 ವರೆಗಿನ ಪ್ರಯೋಜನಗಳನ್ನು ಪಡೆಯುತ್ತದೆ. ಇನ್ನು ಮಾರುತಿ ಸುಜುಕಿ ಸೆಲೆರಿಯೊ ಮತ್ತು ಮಾರುತಿ ಸುಜುಕಿ ಎಸ್-ಪ್ರೆಸ್ಸೊದಂತಹ ಮಾದರಿಗಳು 59,000 ರೂ, ವರೆಗಿನ ಆಕರ್ಷಕ ರಿಯಾಯಿತುಯನ್ನು ಪಡೆಯುತ್ತವೆ.

ಹೊಸ ಮಾರುತಿ ಆಲ್ಟೋ ಕೆ10 ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಮಾರುತಿ ಸುಜುಕಿ ಆಲ್ಟೋ ಕಳೆದ 22 ವರ್ಷಗಳಿಂದ ಭಾರತದಲ್ಲಿ ಹೆಚ್ಚಿನ ಜನರು ಇಷ್ಟಪಟ್ಟ ಮತ್ತು ಹೆಚ್ಚಿನ ಬೇಡಿಕೆಯ ಕಾರು ಮಾದರಿಯಾಗಿದೆ. ಮಾರುತಿ ಆಲ್ಟೋ ಈಗಾಗಲೇ 4.32 ಮಿಲಿಯನ್ (43.2 ಲಕ್ಷ) ಗ್ರಾಹಕರೊಂದಿಗೆ ಕುಟುಂಬದ ನೆಚ್ಚಿನ ಕಾರು ಮಾದರಿಯಾಗಿದ್ದು, ಇತ್ತೀಚೆಗೆ ಹೊಸ ನವೀಕರಣಗಳೊಂದಿಗೆ ಮತ್ತೊಮ್ಮೆ ಮಾರುಕಟ್ಟೆ ಪ್ರವೇಶಿಸಿತು.

ಹೊಸ ಮಾರುತಿ ಆಲ್ಟೋ ಕೆ10 ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಹೊಸ ಮಾರುತಿ ಆಲ್ಟೋ ಕೆ10 ಹೊಸ ಮಾದರಿಯು ಸುಧಾರಿತ ವಿನ್ಯಾಸ, ಹೆಚ್ಚು ಪ್ರೀಮಿಯಂ ಒಳಾಂಗಣ ಮತ್ತು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಹೊಸ ಆಲ್ಟೋ ಕೆ10 ಹ್ಯಾಚ್‌ಬ್ಯಾಕ್‌ 3,530 ಎಂಎಂ ಉದ್ದ, 1,490 ಎಂಎಂ ಅಗಲ ಮತ್ತು 1,520 ಎಂಎಂ ಎತ್ತರವನ್ನು ಹೊಂದಿದೆ.

ಹೊಸ ಮಾರುತಿ ಆಲ್ಟೋ ಕೆ10 ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಇನ್ನು ಈ ಕಾರು 2,380 ಎಂಎಂ ವ್ಹೀಲ್‌ಬೇಸ್ ಉದ್ದವನ್ನು ಹೊಂದಿದ್ದರೆ, ಈ ಕಾರಿನ ಒಟ್ಟು ತೂಕವು 1,150 ಕೆಜಿಯಾಗಿದೆ. ಈ ಹೊಸ ಹ್ಯಾಚ್‌ಬ್ಯಾಕ್‌ 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 177-ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ.

ಹೊಸ ಮಾರುತಿ ಆಲ್ಟೋ ಕೆ10 ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಈ ಹೊಸ ಆಲ್ಟೋ ಕೆ10 ಕಾರು 1.0-ಲೀಟರ್ K10C ಮೂರು-ಸಿಲಿಂಡರ್ ಡ್ಯುಯಲ್ ಜೆಟ್ ಡ್ಯುಯಲ್ ವಿವಿಟಿ ಪೆಟ್ರೋಲ್ ಎಂಜಿನ್ ಅನ್ನು ಐಡಲ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನದೊಂದಿಗೆ ಬಂದಿದೆ, ಈ ಎಂಜಿನ್ 67 ಬಿಹೆಚ್‍ಪಿ ಪವರ್ ಮತ್ತು 89 ಎನ್ಎಂ ಟಾರ್ಕ್ ಅನ್ನು ನೀಡುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‌ಬಾಕ್ಸ್‌ನಿಂದ ಆಯ್ಕೆಯನ್ನು ಹೊಂದಿದೆ, ಈ ಕಾರು 24.90 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಹೊಸ ಮಾರುತಿ ಆಲ್ಟೋ ಕೆ10 ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಹೊಸ ಮಾರುತಿ ಆಲ್ಟೋ ಕೆ10 ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದ ಫಾಸಿಕ ಕಪ್ಪು ಬಣ್ಣದ ಹನಿಕೊಬ್ ಮೆಷ್ ಮಾದರಿಯೊಂದಿಗೆ ಮರುವಿನ್ಯಾಸಗೊಳಿಸಲಾದ ಸಿಂಗಲ್-ಪೀಸ್ ಫ್ರಂಟ್ ಗ್ರಿಲ್ ಅನ್ನು ಒಳಗೊಂಡಿದೆ. ಸಿ-ಆಕಾರದ ಬಂಪರ್ ಫಿನಿಶ್, ಕಡಿಮೆ ಸೆಂಟ್ರಲ್ ಏರ್ ಇನ್‌ಟೇಕ್, ಸ್ವೆಪ್‌ಬ್ಯಾಕ್ ಹೆಡ್‌ಲ್ಯಾಂಪ್‌ಗಳು, ಸುಜುಕಿ ಬ್ಯಾಡ್ಜ್ ಹೊಸದಕ್ಕಿಂತ ಸ್ವಲ್ಪ ಕೆಳಗೆ ಇರಿಸಿದೆ.

ಹೊಸ ಮಾರುತಿ ಆಲ್ಟೋ ಕೆ10 ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಕಾರಿನಲ್ಲಿ ಹೊಸ ಬಾನೆಟ್ ಮತ್ತು ಮುಂಭಾಗದ ವಿಂಡ್‌ಶೀಲ್ಡ್ ಹೊಂದಿದೆ, ಇನ್ನು ಇತರ ಮುಖ್ಯಾಂಶಗಳೆಂದರೆ ಕವರ್‌ಗಳೊಂದಿಗೆ ಹೊಸ 13-ಇಂಚಿನ ಸ್ಟೀಲ್ ವ್ಹೀಲ್, ಚೌಕಾಕಾರದ ಟೈಲ್ ಲ್ಯಾಂಪ್‌ಗಳು, ಕಪ್ಪು ಮುಗಿದ ORVM ಗಳು, ಬಾಡಿಯ-ಬಣ್ಣದ ಡೋರ್ ಹ್ಯಾಂಡಲ್‌ಗಳು, ಹೊಸ ಹಿಂಭಾಗದ ಬಂಪರ್, ಟ್ವೀಕ್ ಮಾಡಿದ ಟೈಲ್‌ಗೇಟ್ ಇತ್ಯಾದಿ. ಕ್ಯಾಬಿನ್ ಹೆಚ್ಚು ಆಧುನಿಕ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನಗಳನ್ನು ಪಡೆದುಕೊಂಡಿದೆ ಮತ್ತು ಆಲ್ಟೊ 800 ಗಿಂತ ಹೆಚ್ಚು ವಿಶಾಲವಾಗಿದೆ ಎಂದು ಹೇಳಲಾಗುತ್ತಿದೆ.

ಹೊಸ ಮಾರುತಿ ಆಲ್ಟೋ ಕೆ10 ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಈ ಮಾರುತಿ ಸುಜುಕಿ ಆಲ್ಟೋ ಕೆ10 ಕಾರಿನಲ್ಲಿನ ಕೆಲವು ಪ್ರಮುಖ ವೈಶಿಷ್ಟ್ಯಗಳೆಂದರೆ Apple CarPlay ಮತ್ತು Android Auto ಸಂಪರ್ಕದೊಂದಿಗೆ ಏಳು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೊಸ ಅಪ್ಹೋಲ್ಸ್ಟರಿ, ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್, ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಮಲ್ಟಿಫಂಕ್ಷನಲ್ ಸ್ಟೀರಿಂಗ್ ವ್ಹೀಲ್ ಹೊಂದಿದೆ. ಇನ್ನು ನವೀಕರಿಸಿದ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಡ್ಯುಯಲ್. ಮುಂಭಾಗದ ಏರ್ ಬ್ಯಾಗ್ ಗಳು, ಇಬಿಡಿ ಜೊತೆಗೆ ಎಬಿಎಸ್, ಎಲೆಕ್ಟ್ರಿಕ್ ಚಾಲಿತ ORVM ಗಳು, ಎಲ್ಲಾ ನಾಲ್ಕು ಪವರ್ ವಿಂಡೋಗಳು ಮತ್ತು ಇತಾದಿ ವೈಶಿಷ್ಟ್ಯಗಳನ್ನು ಹೊಂದಿದೆ.

ಹೊಸ ಮಾರುತಿ ಆಲ್ಟೋ ಕೆ10 ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಈ ಹೊಸ ಹ್ಯಾಚ್‌ಬ್ಯಾಕ್‌ ಕಾರು ಎರಡು ಅಕ್ಸೆಸರೀಸ್ ಪ್ಯಾಕ್‌ಗಳು ಮತ್ತು ಬಹು ವೈಯಕ್ತಿಕ ಬಿಡಿಭಾಗಗಳೊಂದಿಗೆ ಲಭ್ಯವಿರುತ್ತದೆ. ಮೊದಲ ಪ್ಯಾಕ್ ಅನ್ನು 'ಗ್ಲಿಂಟೊ' ಎಂದು ಕರೆಯಲಾಗುತ್ತದೆ ಮತ್ತು ಈ ಪರಿಕರಗಳ ಪ್ಯಾಕ್ ಮುಂಭಾಗದ ಗ್ರಿಲ್ ಗಾರ್ನಿಶ್, ಹೆಡ್‌ಲೈಟ್ ಗಾರ್ನಿಶ್, ಟೈಲ್‌ಲೈಟ್ ಗಾರ್ನಿಶ್, ಫ್ರಂಟ್ ಮತ್ತು ರಿಯರ್ ಬಂಪರ್ ಗಾರ್ನಿಶ್, ವಿಂಡೋ ಫ್ರೇಮ್ ಕಿಟ್, ಡೋರ್ ವೈಸರ್ ಜೊತೆಗೆ ಕ್ರೋಮ್ ಇನ್‌ಸರ್ಟ್, ಕ್ವಿಲ್ಟೆಡ್ ಸೀಟ್ ಕವರ್‌ಗಳು ಮತ್ತು 3ಡಿ ಫ್ಲೋರ್ ಮ್ಯಾಟ್ ನಂತಹ ಅಕ್ಸೆಸರೀಸ್ ಗಳೊಂದಿಗೆ ಬರುತ್ತದೆ.

ಹೊಸ ಮಾರುತಿ ಆಲ್ಟೋ ಕೆ10 ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಇದಲ್ಲದೆ, Alto K10 ನ LXi ಟ್ರಿಮ್‌ನಲ್ಲಿರುವ ಗ್ಲಿಂಟೊ ಪ್ಯಾಕ್‌ನ ಬೆಲೆ ರೂ. 30,990 ಮತ್ತು VXi ಮತ್ತು VXi+ ಟ್ರಿಮ್ ಹಂತಗಳಲ್ಲಿ ರೂ. 25,590 ಆಗಿದೆ. ಈ ಹೊಸ ಆಲ್ಟೋ ಕೆ10 ಕಾರನ್ನು ಖರೀದಿಸುವ ಗ್ರಾಹಕರು ಈ ಪ್ಯಾಕ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಇನ್ನು ಮುಂದಿನ ಪ್ಯಾಕ್ 'ಇಂಪ್ಯಾಕ್ಟೋ', ಈ ಪ್ಯಾಕ್ ಆರೇಂಜ್/ಸಿಲ್ವರ್ ಮುಂಭಾಗದ ಸ್ಕಿಡ್ ಪ್ಲೇಟ್, ವೀಲ್ ಆರ್ಚ್ ಕ್ಲಾಡಿಂಗ್, ಆರೇಂಜ್/ಸಿಲ್ವರ್ ಫ್ರಂಟ್ ಬಂಪರ್ ಗಾರ್ನಿಶ್ ಮತ್ತು DRL, ಆರೇಂಜ್/ಸಿಲ್ವರ್ ORVM ಕವರ್, ಆರೇಂಜ್/ಸಿಲ್ವರ್ ಹಿಂಭಾಗದ ಬಂಪರ್ ಗಾರ್ನಿಶ್, ಮುಂತಾದ ಪರಿಕರಗಳನ್ನು ಒಳಗೊಂಡಿದೆಆರೇಂಜ್/ಸಿಲ್ವರ್ ಹಿಂಬದಿಯ ಸ್ಕೀಡ್ ಪ್ಲೇಟ್, ಸೀಟ್ ಕವರ್‌ಗಳು ಮತ್ತು ಆರೆಂಜ್ ಇಂಟೀರಿಯರ್ ಸ್ಟೈಲಿಂಗ್ ಕಿಟ್ ಅನ್ನು ಒಳಗೊಂಡಿದೆ.

ಹೊಸ ಮಾರುತಿ ಆಲ್ಟೋ ಕೆ10 ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕಟ್ಟುನಿಟ್ಟಾದ ಹೊರಸೂಸುವಿಕೆ ಮತ್ತು ಸುರಕ್ಷತಾ ಮಾನದಂಡಗಳ ಜೊತೆಗೆ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ವಿಭಾಗದ ಸ್ಥಿರ ಕುಸಿತವು 2020 ರಲ್ಲಿ ಆಲ್ಟೋ ಕೆ10 ಅನ್ನು ಮಾರುಕಟ್ಟೆಯಿಂದ ತೆಗೆದುಹಾಕಲು ಒಂದು ಕಾರಣವಾಗಿತ್ತು, ಮತ್ತೆ ಮಾರುತಿ ಸುಜುಕಿ ಕಂಪನಿಯು ಆಲ್ಟೋ ಕೆ10 ಕಾರನ್ನು ಹೊಸ ನವೀಕರಣಗಳೊಂದಿಗೆ ಇತ್ತೀಚೆಗೆ ಬಿಡುಗಡೆಗೊಳಿಸಿತು.

Most Read Articles

Kannada
English summary
New maruti suzuki alto k10 comes with 25k discount find here all details
Story first published: Friday, September 30, 2022, 11:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X