ಬುಕ್ಕಿಂಗ್ ಆರಂಭವಾದ ಮೊದಲ ವಾರವೇ 25 ಸಾವಿರ ಯುನಿಟ್ ಬುಕ್ಕಿಂಗ್ ಪಡೆದುಕೊಂಡ ಹೊಸ ಬಲೆನೊ

ಮಾರುತಿ ಸುಜುಕಿ ತನ್ನ ಬಲೆನೊ ಹ್ಯಾಚ್‌ಬ್ಯಾಕ್ ಮಾದರಿಯ 2022ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರಿನ ಬುಕ್ಕಿಂಗ್ ಆರಂಭವಾಗಿ ಒಂದೇ ವಾರದಲ್ಲಿ ಬರೋಬ್ಬರಿ 25 ಸಾವಿರ ಯುನಿಟ್‌ಗಳಿಗೆ ಬೇಡಿಕೆ ಪಡೆದುಕೊಂಡಿದೆ.

ಬುಕ್ಕಿಂಗ್ ಆರಂಭವಾದ ಮೊದಲ ವಾರವೇ 25 ಸಾವಿರ ಯುನಿಟ್ ಬುಕ್ಕಿಂಗ್ ಪಡೆದುಕೊಂಡ ಹೊಸ ಬಲೆನೊ

ಹೊಸ ಬಲೆನೊ ಮಾದರಿಯು ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಗೊಂಡಿದ್ದು, ಹೊಸ ಕಾರು ಆಕರ್ಷಕ ಬೆಲೆಯೊಂದಿಗೆ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ. ಹೊಸ ಬಲೆನೊ ಹ್ಯಾಚ್‌ಬ್ಯಾಕ್ ಕಾರು ಮಾದರಿಯು ಪ್ರಮುಖ ನಾಲ್ಕು ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.35 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.49 ಲಕ್ಷ ಬೆಲೆ ಹೊಂದಿದೆ.

ಬುಕ್ಕಿಂಗ್ ಆರಂಭವಾದ ಮೊದಲ ವಾರವೇ 25 ಸಾವಿರ ಯುನಿಟ್ ಬುಕ್ಕಿಂಗ್ ಪಡೆದುಕೊಂಡ ಹೊಸ ಬಲೆನೊ

ಹೊಸ ಕಾರು ಮಾದರಿಯು ಈ ಹಿಂದಿನ ಮಾದರಿಯಲ್ಲಿರುವಂತೆ ಎಂಜಿನ್ ಆಯ್ಕೆ ಹೊಂದಿದ್ದರೂ ಪ್ರೀಮಿಯಂ ಫೀಚರ್ಸ್ ಮತ್ತು ಬದಲಾವಣೆಗೊಳಿಸಲಾದ ವಿನ್ಯಾಸವು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದ್ದು, ಸಿಗ್ಮಾ, ಡೆಲ್ಟಾ, ಜೆಟಾ ಮತ್ತು ಅಲ್ಫಾ ಎಂಬ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಬುಕ್ಕಿಂಗ್ ಆರಂಭವಾದ ಮೊದಲ ವಾರವೇ 25 ಸಾವಿರ ಯುನಿಟ್ ಬುಕ್ಕಿಂಗ್ ಪಡೆದುಕೊಂಡ ಹೊಸ ಬಲೆನೊ

ಬಲೆನೊ ಹೊಸ ಮಾದರಿಯು ನೆಕ್ಸಾವೆವ್ ಹನಿಕೊಂಬ್ ಗ್ರಿಲ್, ಫ್ಲಾಟರ್ ಕ್ಲಾಮ್‌ಶೆಲ್ ಬಾನೆಟ್ ಮತ್ತು ಪರಿಷ್ಕೃತ ಮುಂಭಾಗದ ಬಂಪರ್ ಜೊತೆಗೆ ದೊಡ್ಡ ಫಾಗ್ ಲ್ಯಾಂಪ್ ಹೌಸಿಂಗ್‌ಗಳನ್ನು ಹೊಂದಿದ್ದು ಸೈಡ್ ಪ್ರೊಫೈಲ್ ಹಿಂದಿನ ಮಾದರಿಯಂತೆಯೇ ಕಂಡರೂ ಕ್ರೋಮ್ ಸ್ಟ್ರಿಪ್ ಅನ್ನು ಹೊರತುಪಡಿಸಿ ಈಗ ಕೆಳಗಿನ ವಿಂಡೋ ಲೈನ್‌ನಿಂದ ಹಿಂದಿನ ಕ್ವಾರ್ಟರ್ ಗ್ಲಾಸ್‌ಗೆ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಬುಕ್ಕಿಂಗ್ ಆರಂಭವಾದ ಮೊದಲ ವಾರವೇ 25 ಸಾವಿರ ಯುನಿಟ್ ಬುಕ್ಕಿಂಗ್ ಪಡೆದುಕೊಂಡ ಹೊಸ ಬಲೆನೊ

ಹೊಸ ಬಲೆನೊ ಹಿಂಬದಿಯಲ್ಲಿ ಹೊಸ ಟೈಲ್‌ಗೇಟ್ ವಿನ್ಯಾಸ, ಹೊಸ ಸಿ-ಆಕಾರದ ಎಲ್‌ಇಡಿ ಟೈಲ್-ಲೈಟ್‌ಗಳು ಮತ್ತು ರಿಪ್ರೊಫೈಲ್ಡ್ ರಿಯರ್ ಬಂಪರ್‌ನೊಂದಿಗೆ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕದೊಂದಿಗೆ 9.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹಿಂದಿನ ಮಾದರಿಗಳಿಂತೆ ಎಸಿ ವೆಂಟ್‌ಗಳು, ಫಾಸ್ಟ್ ಚಾರ್ಜಿಂಗ್ ಯುಎಸ್‌ಬಿ ಪೋರ್ಟ್‌, ಹೆಡ್ ಅಪ್ ಡಿಸ್ಪ್ಲೇ(ಎಚ್‌ಯುಡಿ) ಅನ್ನು ಒಳಗೊಂಡಿದೆ.

ಬುಕ್ಕಿಂಗ್ ಆರಂಭವಾದ ಮೊದಲ ವಾರವೇ 25 ಸಾವಿರ ಯುನಿಟ್ ಬುಕ್ಕಿಂಗ್ ಪಡೆದುಕೊಂಡ ಹೊಸ ಬಲೆನೊ

ಹೊಸ ಹ್ಯಾಚ್‌ಬ್ಯಾಕ್‌ ಮಾದರಿಯಲ್ಲಿ ಮಾರುತಿ ಸುಜುಕಿಯು ಈ ಬಾರಿ ಹೆಚ್ಚಿನ ಸುರಕ್ಷತೆಗೆ ಒತ್ತು ನೀಡಿದ್ದು, ಹೊಸ ಸುರಕ್ಷತಾ ವೈಶಿಷ್ಟ್ಯಗಳಲ್ಲಿ 6 ಏರ್‌ಬ್ಯಾಗ್, ಹಿಲ್ ಹೋಲ್ಡ್ ಅಸಿಸ್ಟ್, ಕ್ರೂಸ್ ಕಂಟ್ರೋಲ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಎಬಿಎಸ್, ಕೀ ಲೆಸ್ ಎಂಟ್ರಿ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಇಎಸ್‌ಪಿ ಮತ್ತು ಇಬಿಡಿ ಸಹ ಸೇರ್ಪಡೆಯಾಗಲಿದ್ದು, ಸುಜುಕಿ ಕಾರ್ ಕನೆಕ್ಟ್ ತಂತ್ರಜ್ಞಾನದಲ್ಲೂ ಸಹ ಸುಧಾರಿತ ವೈಶಿಷ್ಟ್ಯತೆಗಳನ್ನು ಸೇರ್ಪಡೆಗೊಳಿಸಿದೆ.

ಬುಕ್ಕಿಂಗ್ ಆರಂಭವಾದ ಮೊದಲ ವಾರವೇ 25 ಸಾವಿರ ಯುನಿಟ್ ಬುಕ್ಕಿಂಗ್ ಪಡೆದುಕೊಂಡ ಹೊಸ ಬಲೆನೊ

ಹಾಗೆಯೇ ಮಾರುತಿ ಸುಜುಕಿ ಕಂಪನಿಯ ಹೊಸ ಕಾರಿನಲ್ಲಿ ಸುಜುಕಿ ಕನೆಕ್ಟ್ ಟೆಕ್ನಾಲಜಿ ಮೂಲಕ ಒಂದೇ ಸೂರಿನಡಿ 40ಕ್ಕೂ ಹೆಚ್ಚು ತಾಂತ್ರಿಕ ಸೌಲಭ್ಯಗಳನ್ನು ಒದಗಿಸುವ ಕನೆಕ್ಟೆಡ್ ಫೀಚರ್ಸ್ ನೀಡಿದ್ದು, ಸ್ಮಾರ್ಟ್‌ಫೋನ್ ಮೂಲಕವೇ ನಿರ್ವಹಣೆ ಮಾಡಬಹುದಲ್ಲದೆ ಅಮೆಜಾನ್ ಅಲೆಕ್ಸಾ ವಾಯ್ಸ್ ಕಮಾಂಡ್ ಮೂಲತ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದು.

ಬುಕ್ಕಿಂಗ್ ಆರಂಭವಾದ ಮೊದಲ ವಾರವೇ 25 ಸಾವಿರ ಯುನಿಟ್ ಬುಕ್ಕಿಂಗ್ ಪಡೆದುಕೊಂಡ ಹೊಸ ಬಲೆನೊ

ಜೊತೆಗೆ ತುರ್ತುಸೇವೆಗಳಿಗಾಗಿ ಸುಧಾರಿತ ಟೆಲಿಮ್ಯಾಟಿಕ್ಸ್ ಪರಿಹಾರಗಳನ್ನು ಒಳಗೊಂಡಿರಲಿದ್ದು, ಸುಜುಕಿ ಕಾರ್ ಕನೆಕ್ಟ್ ಫೀಚರ್ಸ್‍ಗಳನ್ನು ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ಮೂಲಕ ಇಂಧನ ಲಭ್ಯತೆ, ಸಾಗಬಹುದಾದ ದೂರ, ಓಡೋಮೀಟರ್, ಕಾರ್ ಡಯಾಗ್ನೋಸಿಸ್, ಒಳಗೊಂಡಂತೆ ವಿವಿಧ ಮಾಹಿತಿಗಳ ಸಂಪೂರ್ಣ ಡೇಟಾ ಪಡೆದುಕೊಳ್ಳಬಹುದು.

ಬುಕ್ಕಿಂಗ್ ಆರಂಭವಾದ ಮೊದಲ ವಾರವೇ 25 ಸಾವಿರ ಯುನಿಟ್ ಬುಕ್ಕಿಂಗ್ ಪಡೆದುಕೊಂಡ ಹೊಸ ಬಲೆನೊ

ಕನೆಕ್ಟೆಡ್ ಕಾರ್ ಟೆಕ್ ವೈಶಿಷ್ಟ್ಯದ ಜೊತೆಗೆ ಮಾರುತಿ ಕಂಪನಿಯು ಹೊಸ ಬಲೆನೊದಲ್ಲಿ 9-ಇಂಚಿನ ಡಿಜಿಟಲ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 360 ಡಿಗ್ರಿ ವ್ಯೂ ಕ್ಯಾಮೆರಾ ಸೇರಿದಂತೆ ಈ ವಿಭಾಗದ ಮೊದಲ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ.

ಬುಕ್ಕಿಂಗ್ ಆರಂಭವಾದ ಮೊದಲ ವಾರವೇ 25 ಸಾವಿರ ಯುನಿಟ್ ಬುಕ್ಕಿಂಗ್ ಪಡೆದುಕೊಂಡ ಹೊಸ ಬಲೆನೊ

ಹೊಸ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು 1.2 ಲೀಟರ್ ಡ್ಯುಯಲ್ ಜೆಟ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, 1.2 ಲೀಟರ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 90 ಬಿಎಚ್‌ಪಿ ಮತ್ತು 115 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬುಕ್ಕಿಂಗ್ ಆರಂಭವಾದ ಮೊದಲ ವಾರವೇ 25 ಸಾವಿರ ಯುನಿಟ್ ಬುಕ್ಕಿಂಗ್ ಪಡೆದುಕೊಂಡ ಹೊಸ ಬಲೆನೊ

ಹೊಸ ಕಾರಿನಲ್ಲಿ ಮಾರುತಿ ಸುಜುಕಿ ಈ ಬಾರಿ 4 ಸ್ಪೀಡ್ ಆಟೋ ಕನ್ವರ್ಟ್ ಗೇರ್‌ಬಾಕ್ಸ್ ಬದಲಾಗಿ 5-ಸ್ಪೀಡ್ ಆಟೋಮ್ಯಾಟಿಕ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಿದ್ದು, ಹೊಸ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ 22.35 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಬುಕ್ಕಿಂಗ್ ಆರಂಭವಾದ ಮೊದಲ ವಾರವೇ 25 ಸಾವಿರ ಯುನಿಟ್ ಬುಕ್ಕಿಂಗ್ ಪಡೆದುಕೊಂಡ ಹೊಸ ಬಲೆನೊ

ಇದರ ಜೊತೆಗೆ ಹೊಸದಾಗಿ ಹೊಸ ಸಸ್ಷೆಷನ್ ಸೆಟಪ್‌ನೊಂದಿಗೆ ಹೈ ಎಂಡ್ ಮಾದರಿಯಲ್ಲಿ 14 ಇಂಚಿನ ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಜೋಡಿಸಿದ್ದು, 16 ಇಂಚಿನ ಅಲಾಯ್ ವ್ಹೀಲ್, ಅರ್ಕಾಮಿಸ್ ಸರೌಂಡ್ ಸೌಂಡ್ ಸಿಸ್ಟಂ ಸೌಲಭ್ಯವು ಕಾರು ಚಾಲನೆಯನ್ನು ಮತ್ತಷ್ಟು ಅರಾಮದಾಯಕಗೊಳಿಸುತ್ತದೆ.

ಬುಕ್ಕಿಂಗ್ ಆರಂಭವಾದ ಮೊದಲ ವಾರವೇ 25 ಸಾವಿರ ಯುನಿಟ್ ಬುಕ್ಕಿಂಗ್ ಪಡೆದುಕೊಂಡ ಹೊಸ ಬಲೆನೊ

ಇದರೊಂದಿಗೆ ಹೊಸ ಕಾರು ಪರ್ಲ್ ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಗ್ರಾಂಡ್ಯೂರ್ ಗ್ರೇ, ಸೆಲೆಸ್ಟಿಯಲ್ ಬ್ಲೂ, ಓಪ್ಯುಲೆಂಟ್ ರೆಡ್ ಮತ್ತು ಲಕ್ಸ್ ಬೀಜ್ ಎನ್ನುವ ಆರು ಬಣ್ಣಗಳ ಆಯ್ಕೆ ಹೊಂದಿದ್ದು, ಮಾರುತಿ ಸುಜುಕಿ ಕಂಪನಿಯು ಈ ಬಾರಿ ಹೊಸ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಮಾದರಿಯಲ್ಲಿ ಹೆಚ್ಚಿನ ಸುರಕ್ಷತೆಗೆ ಒತ್ತು ನೀಡಿರುವ ಮಹತ್ವದ ಬದಲಾಣೆಯಾಗಿದೆ.

Most Read Articles

Kannada
English summary
New maruti suzuki baleno hatchback 25000 units booked details
Story first published: Thursday, February 24, 2022, 0:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X