Just In
- 49 min ago
ಓಲಾ S1 ಮತ್ತು S1 Pro ನಡುವೆ ಗೊಂದಲವೇ?: ಬೆಲೆ, ಡಿಸೈನ್, ಫೀಚರ್ಸ್ ಬಗೆಗಿನ ಮಾಹಿತಿ ಇಲ್ಲಿದೆ
- 51 min ago
24.90 ಕಿ.ಮೀ ಮೈಲೇಜ್ ನೀಡುವ ಆಲ್ಟೋ ಕೆ10 ಕಾರಿನ ಟಿವಿಸಿ ಬಿಡುಗಡೆಗೊಳಿಸಿದ ಮಾರುತಿ ಸುಜುಕಿ
- 2 hrs ago
ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್ಜಿ
- 2 hrs ago
ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...
Don't Miss!
- Sports
ಧವನ್ ಹಾಗೂ ತೆಂಡೂಲ್ಕರ್ ನಡುವಿನ ಸಾಮ್ಯತೆ ವಿವರಿಸಿದ ಅಜಯ್ ಜಡೇಜಾ
- Movies
ನನಸಾಯ್ತು ಕಾಫಿನಾಡು ಚಂದು ಕನಸು, ಎಲ್ಲಾ ಶ್ರೇಯ ಅನುಶ್ರೀಗೆ
- News
ಕದ್ದ ಹಣದಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಹೈಟೆಕ್ ಕಳ್ಳಿ
- Technology
ವಿಶ್ವ ಛಾಯಾಗ್ರಹಣ ದಿನ: ಈ ಸ್ಮಾರ್ಟ್ಫೋನ್ಗಳು ಫೋಟೋಗ್ರಫಿಗೆ ಸೂಕ್ತ ಎನಿಸಲಿವೆ!
- Lifestyle
ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಕೆಲಸಕ್ಕಂತೂ ಅಲ್ಪ ವಿರಾಮ ನೀಡಲೇಬೇಕು..!
- Travel
ಮೋಜಿನ ವಾರಾಂತ್ಯದ ಪ್ರವಾಸಕ್ಕಾಗಿ ಇಲ್ಲಿಗೆ ಭೇಟಿ ನೀಡಿ
- Education
Karnataka High Court Recruitment 2022 : 129 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಫೋನ್ ಪೇ, ಗೂಗಲ್ ಪೇ, ಭೀಮ್ App ಬಳಕೆಗೆ ಪೇಮೆಂಟ್ ಶುಲ್ಕ?
ಬಲಿಷ್ಠ ಎಂಜಿನ್ ಜೊತೆ ಹಲವು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ 2022ರ ಮಾರುತಿ ಸುಜುಕಿ ಬ್ರೆಝಾ ಬಿಡುಗಡೆ
ಮಾರುತಿ ಸುಜುಕಿ ಕಂಪನಿಯು ತನ್ನ ಬಹುನೀರಿಕ್ಷಿತ ಬ್ರೆಝಾ ಕಂಪ್ಯಾಕ್ಟ್ ಎಸ್‌ಯುವಿಯ 2022ರ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 13.96 ಲಕ್ಷ ಬೆಲೆ ಹೊಂದಿದೆ.

ಬ್ರೆಝಾ ಕಾರು ಮಾದರಿಯು ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಇದುವರೆಗೆ ಇದು ದೇಶಿಯ ಮಾರುಕಟ್ಟೆಯಲ್ಲಿ ಸುಮಾರು 7.50 ಲಕ್ಷ ಯುನಿಟ್ ಮಾರಾಟ ದಾಖಲೆ ಹೊಂದಿದೆ. ಭಾರತದಲ್ಲಿ ಮೊದಲ ಬಾರಿಗೆ 2016ರಲ್ಲಿ ಬಿಡುಗಡೆಯಾಗಿದ್ದ ಬ್ರೆಝಾ ಕಾರು ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮಾರಾಟ ದಾಖಲೆ ಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ ಇದುವರೆಗೆ ಹಲವಾರು ಬದಲಾವಣೆಗಳೊಂದಿಗೆ ಸ್ಥಿರ ಮಾರುಕಟ್ಟೆ ಕಾಯ್ದುಕೊಂಡಿದೆ.

ಮಾರುತಿ ಸುಜುಕಿಯು 2022ರ ಮಾದರಿಯಲ್ಲಿ ಈ ಹಿಂದೆಂದಿಗಿಂತಲೂ ಹೆಚ್ಚಿನ ಬದಲಾವಣೆಗಳನ್ನು ಪರಿಚಯಿಸಿದ್ದು, ಹೊಸ ಕಾರು ಮಾದರಿಯ ಎಲ್ಎಕ್ಸ್‌ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ ವೆಂಟ್‌ಗಳನ್ನು ಹೊಂದಿದೆ.

ಹೊಸ ಕಾರು ಮಾದರಿಯು ಸುಧಾರಿತ ತಂತ್ರಜ್ಞಾನ ಪ್ರೇರಣೆಯಿಂದಾಗಿ ಈ ಹಿಂದಿನ ಆವೃತ್ತಿಗಿಂತಲೂ ತುಸು ದುಬಾರಿಯಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಮಾದರಿಯು ರೂ. 7.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.96 ಲಕ್ಷ ಬೆಲೆ ಪಡೆದುಕೊಂಡಿದೆ.

ಹೊಸ ಕಾರು ಮಾದರಿಯು ಈ ಬಾರಿ ಸಾಕಷ್ಟು ನವೀಕೃತ ಸೌಲಭ್ಯಗಳನ್ನು ಹೊಂದಿದ್ದು, ಒಂದೇ ಎಂಜಿನ್ ಆಯ್ಕೆ ಪಡೆದುಕೊಂಡಿದೆ. ಹೊಸ ಕಾರಿನಲ್ಲಿ ಕಂಪನಿಯು 2022ರ ಎರ್ಟಿಗಾ ಮತ್ತು ಎಕ್ಸ್‌ಎಲ್6 ಮಾದರಿಯಲ್ಲಿ ನೀಡಲಾಗಿರುವ 1.5 ಲೀಟರ್ ಕೆ15ಸಿ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಅನ್ನು ಜೋಡಣೆ ಮಾಡಿದೆ.

1.5 ಲೀಟರ್ ಕೆ15ಸಿ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಕಂಪನಿಯು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಬಳಕೆ ಮಾಡಿದ್ದು, ಇದು ಕಾರು ಚಾಲನೆ ಆರಂಭಕ್ಕೂ ಮುನ್ನ ಎಂಜಿನ್ ಆರಂಭಕ್ಕೆ ಶಕ್ತಿ ಪೂರೈಕೆ ಮೂಲಕ ಇಂಧನ ವ್ಯರ್ಥವಾಗುವುದನ್ನು ತಡೆದು ಮೈಲೇಜ್ ಪ್ರಮಾಣದಲ್ಲಿ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ.

ಮಾರುತಿ ಸುಜುಕಿಯು ತನ್ನ ಹೊಸ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಗಳನ್ನು ತೆಗೆದುಹಾಕಿದ ನಂತರ ಡೀಸೆಲ್ ಕಾರುಗಳಲ್ಲಿದ್ದ ಮೈಲೇಜ್ ಪ್ರಮಾಣವನ್ನು ಪೆಟ್ರೋಲ್ ಮಾದರಿಗಳಲ್ಲೂ ಕಾಯ್ದುಕೊಳ್ಳುವ ಉದ್ದೇಶದಿಂದ ಪೆಟ್ರೋಲ್ ಮಾದರಿಗಳಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಬಳಕೆ ಆರಂಭಿಸಿದೆ.

ಹಾಗೆಯೇ ಹೊಸ ಬ್ರೆಝಾ ಕಾರಿನಲ್ಲಿ ಕಂಪನಿಯು ಈ ಹಿಂದಿನ ಟಾರ್ಕ್ ಕನ್ವರ್ಟಕ್ ಗೇರ್‌ಬಾಕ್ಸ್ ಬದಲಾಗಿ 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಿದ್ದು, ಹೊಸ ಎಂಜಿನ್ ಮೂಲಕ ಕಾರು 104.6 ಬಿಎಚ್‌ಪಿ ಮತ್ತು 137 ಎನ್ಎಂ ಉತ್ಪಾದನೆ ಮೂಲಕ ಉತ್ತಮ ಇಂಧನ ದಕ್ಷತೆ ಕಾಯ್ದುಕೊಂಡಿದೆ.

ಕಂಪನಿಯ ಮಾಹಿತಿ ಪ್ರಕಾರ ಹೊಸ ಬ್ರೆಝಾ ಕಾರಿನ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್‌ಗೆ ಗರಿಷ್ಠ 19.80 ಕಿ.ಮೀ ಮೈಲೇಜ್ ನೀಡಿದರೆ, ಪೆಟ್ರೋಲ್ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ ಗರಿಷ್ಠ 20.15 ಕಿ.ಮೀ ಮೈಲೇಜ್ ಹಿಂದಿರುಗಿಸುವ ಭರವಸೆ ನೀಡಿದೆ.

ಹೊಸ ಕಾರಿನಲ್ಲಿ ಮತ್ತೊಂದು ಪ್ರಮುಖ ಬದಲಾವಣೆಯೆಂದರೆ ಈ ಹಿಂದಿನ ವಿಟಾರಾ ಬ್ರೆಝಾ ಬ್ಯಾಡ್ಜ್ ಬದಲಾಗಿ ಕಂಪನಿಯು ಇದೀಗ ಕೇವಲ ಬ್ರೆಝಾ ಬ್ಯಾಡ್ಜ್ ಮಾತ್ರ ಬಳಕೆ ಮಾಡಿದ್ದು, ಹೊಸ ಕಾರು ಈ ಹಿಂದಿನ ಮಾದರಿಗಿಂತ 45 ಎಂಎಂ ಹೆಚ್ಚುವರಿ ಎತ್ತರವನ್ನು ಹೊಂದಿದೆ.

ಇನ್ನುಳಿದಂತೆ ಹೊಸ ಕಾರು ಈ ಹಿಂದಿನಂತೆ 3,995 ಎಂಎಂ ಉದ್ದಳತೆ, 1,790 ಎಂಎಂ ಅಗಲ, 2,500 ವ್ಹೀಲ್‌ಬೆಸ್ ಹೊಂದಿದ್ದು, ಹೊಸ ಕಾರಿನ ಹೊರ ಮತ್ತು ಒಳ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಪಡೆದುಕೊಂಡಿದೆ.

ಹೊಸ ಕಾರಿನ ಮುಂಭಾಗದಲ್ಲಿ ನವೀಕೃತ ಫ್ಲಾಟ್-ಲುಕಿಂಗ್ ಕ್ಲಾಮ್‌ಶೆಲ್ ಬಾನೆಟ್ ನೀಡಲಾಗಿದ್ದು, ಸ್ಕ್ವಾರಿಶ್ ಡ್ಯುಯಲ್-ಎಲ್‌ಇಡಿ ಹೆಡ್‌ಲ್ಯಾಂಪ್ ವಿನ್ಯಾಸವು ಇದೀಗ ಗನ್‌ಮೆಟಲ್ ಶೆಡ್ ಹೊಂದಿರುವ ಗ್ರಿಲ್‌ನೊಂದಿಗೆ ಅಂದವಾಗಿ ವಿಲೀನಗೊಳಿಸಲಾಗಿದೆ. ಹಾಗೆಯೇ ಕಾಂಟ್ರಾಸ್ಟ್ ಬ್ಲ್ಯಾಕ್ ಕ್ಲಾಡಿಂಗ್ ಉತ್ತಮವಾಗಿದ್ದು, ಹಿಂಭಾಗದಲ್ಲಿನ ಟೈಲ್‌ಗೇಟ್ ವಿನ್ಯಾಸವನ್ನು ಸಹ ಪರಿಷ್ಕರಿಸಲಾಗಿದೆ.

ಹೊಸ ಮಾದರಿಯಲ್ಲಿ ಇದೀಗ ಟೈಲ್ ಲ್ಯಾಂಪ್ ಉತ್ತಮ ಹೊರನೋಟ ಹೊಂದಿದ್ದು, ಲೈಸೆನ್ಸ್ ಪ್ಲೇಟ್‌ನ ಮೇಲ್ಭಾಗದ ಮಧ್ಯದಲ್ಲಿ ಬ್ರೆಜ್ಜಾ ಬ್ಯಾಡ್ಜಿಂಗ್ ನೀಡಲಾಗಿದೆ. ಇದರೊಂದಿಗೆ ಹೊಸ ಕಾರಿನ ಬೆಸ್ ವೆರಿಯೆಂಟ್‌ಗಳಲ್ಲಿ ಫ್ಲೋಟಿಂಗ್ ರೂಫ್ ಎಫೆಕ್ಟ್‌ನೊಂದಿಗೆ ಡ್ಯುಯಲ್-ಟೋನ್ ಎಕ್ಸ್‌ಟೀರಿಯರ್ ಶೇಡ್‌ಗಳನ್ನು ಪಡೆಯಲಿದ್ದು, ಇವು ಕಾರಿನ ಉದ್ದಳತೆ ಹೆಚ್ಚು ಕಾಣುವಂತೆ ಮಾಡುತ್ತವೆ.

ಇನ್ನುದಂತೆ ಹೊಸ ಕಾರಿನಲ್ಲಿ 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ಚಕ್ರಗಳನ್ನು ನೀಡಲಾಗಿದ್ದು, ಹೊಸ ಕಾರಿನ ಇಂಟಿರಿಯರ್ ಕೂಡಾ ಇದೀಗ ಸಾಕಷ್ಟು ಹೊಸ ತಾಂತ್ರಿಕ ಅಂಶಗಳಿಂದ ಕೂಡಿದೆ.

ಹೊಸ ಕಾರಿನಲ್ಲಿ ಕಂಪನಿಯು 2022ರ ಬಲೆನೊ, ಎರ್ಟಿಗಾ ಮತ್ತು ಎಕ್ಸ್6 ಮಾದರಿಗಳಲ್ಲಿ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಂಡಿದ್ದು, ವಿವಿಧ ಸ್ವಿಚ್‌ಗೇರ್‌ಗಳು, ಸ್ಟೀರಿಂಗ್ ವೀಲ್ಹ್, ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಇನ್ಫೋಟೈನ್‌ಮೆಂಟ್ ಸಾಫ್ಟ್‌ವೇರ್ ಮತ್ತು ಇತರೆ ವೈಶಿಷ್ಟ್ಯಗಳನ್ನು ಪ್ರಮುಖ ಮಾದರಿಗಳೊಂದಿಗೆ ಹಂಚಿಕೊಳ್ಳಲಾಗಿದೆ.

ಹೊಸ ಕಾರಿನ ಡ್ಯಾಶ್‌ಬೋರ್ಡ್ ಮತ್ತು ಬಾಗಿಲುಗಳಲ್ಲಿ ಸಿಲ್ವರ್ ಆಕ್ಸೆಂಟ್ ಬಳಕೆ ಮಾಡಲಾಗಿದ್ದು, ಹೈ ಎಂಡ್ ಮಾದರಿಯಲ್ಲಿ ಕಂಪನಿಯು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸರ್ಪೊಟ್ ಹೊಂದಿರುವ 9.0-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಟಚ್‌ಸ್ಕ್ರೀನ್ ಅಳವಡಿಸಿದೆ.

ಇದರಲ್ಲದೆ ಹೊಸ ಕಾರಿನಲ್ಲಿ ಆರ್ಕಮಿಸ್ ಸೌಂಡ್ ಸಿಸ್ಟಂ, ವೈರ್‌ಲೆಸ್ ಚಾರ್ಜಿಂಗ್, ರಿಯರ್ ಎಸಿ ವೆಂಟ್‌ಗಳು, ವಾಯ್ಸ್ ಕಮಾಂಡ್ ಸಪೋರ್ಟ್, ಕನೆಕ್ಟ್ ಕಾರ್ ಟೆಕ್, ಹೆಡ್ಸ್-ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಸಿ ಕಂಟ್ರೊಲರ್, ಆಂಬಿಯೆಂಟ್ ಲೈಟಿಂಗ್ಸ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳು, ಕನೆಕ್ಟಿಂಗ್ ಕಾರ್ ಟೆಕ್ ಜೊತೆ ಅಲೆಕ್ಸಾ ವಾಯ್ಸ್ ಕಮಾಂಡ್ ಮತ್ತು ಸನ್‌ರೂಫ್ ಸೌಲಭ್ಯಗಳನ್ನು ನೀಡಿದೆ.

ಕಂಪನಿಯು ಹೊಸ ಕಾರಿನ ಮಧ್ಯಂತರ ವೆರಿಯೆಂಟ್‌ನಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಣೆ ಮಾಡಿದ್ದು, ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳ ಜೊತೆಗೆ ಇಎಸ್‌ಪಿ, ಇಬಿಡಿ ಜೊತೆಗೆ ಎಬಿಎಸ್, ಸೆಗ್ಮೆಂಟ್ ಫಸ್ಟ್ 360 ಡಿಗ್ರಿ ಕ್ಯಾಮೆರಾ, ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ಐಸೋಫಿಕ್ಸ್ ಚೈಲ್ದ್ ಸೀಟ್ ಮೌಂಟ್ ನೀಡಿದೆ.

ಈ ಮೂಲಕ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿರುವ ಹೊಸ ಕಾರಿನಲ್ಲಿ ಹೆಚ್ಚುವರಿ ಬಿಡಿಭಾಗಗಳಿಗಾಗಿ 'ಟೆರಾಸ್ಕೇಪ್' ಮತ್ತು 'ಮೆಟ್ರೋ ಸ್ಕೇಪ್' ಎಂಬ ಎರಡು ಹೊಸ ಆಕ್ಸೆಸರಿಸ್ ಪ್ಯಾಕೇಜ್‌ಗಳನ್ನು ಸಹ ಲಭ್ಯವಿದ್ದು, ಹೊಸ ಕಾರನ್ನು ಆಸಕ್ತ ಗ್ರಾಹಕರು ಚಂದಾದಾರಿಕೆ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ರೂ. 18,300 ಆರಂಭಿಕ ಬೆಲೆಯೊಂದಿಗೆ ಮಾಲೀಕತ್ವವನ್ನು ಸಹ ಪಡೆಯಬಹುದಾಗಿದೆ.

ಮಾರತಿ ಸುಜುಕಿ ಕಂಪನಿಯು ಈಗಾಗಲೇ ತನ್ನ ಪ್ರಮುಖ ಕಾರುಗಳನ್ನು ಚಂದಾದಾರಿಕೆ ಯೋಜನೆ ಅಡಿ ಆಸಕ್ತ ಗ್ರಾಹಕರಿಗೆ ಮಾಲೀಕತ್ವ ನೀಡುತ್ತಿದ್ದು, ಆಸಕ್ತ ಗ್ರಾಹಕರನ್ನು ಹೊಸ ಕಾರನ್ನು ಬೇಡಿಕೆಗೆ ಅನುಗುಣವಾಗಿ 12 ತಿಂಗಳು, 24 ತಿಂಗಳು, 36 ತಿಂಗಳು, 48 ತಿಂಗಳಿಗಳಿಗೆ ಮಾಲೀಕತ್ವವನ್ನು ಆಯ್ಕೆ ಮಾಡಬಹುದಾಗಿದೆ.