India
YouTube

ಭಾರತದಲ್ಲಿ ಮಾರುತಿ ಬ್ರೆಝಾ ಮಿಂಚಿನ ಓಟ: 70 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಬ್ರೆಝಾ ಎಸ್‍ಯುವಿಯನ್ನು ಈ ವರ್ಷದ ಜೂನ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಈ ಹೊಸ ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯು 70,000ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ.

ಮಾರುತಿ ಬ್ರೆಝಾ ಮಿಂಚಿನ ಓಟ: 70 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಮಾರುತಿ ಸುಜುಕಿ ಬ್ರೆಝಾ ರಿಫ್ರೆಶ್ ಮಾಡಲಾದ ಕಾಂಪ್ಯಾಕ್ಟ್ ಎಸ್‍ಯುವಿ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ, ಬ್ರೆಝಾ ಕಾರು ಮಾದರಿಯು ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಇದುವರೆಗೆ ಇದು ದೇಶಿಯ ಮಾರುಕಟ್ಟೆಯಲ್ಲಿ ಸುಮಾರು 7.50 ಲಕ್ಷ ಯುನಿಟ್ ಮಾರಾಟ ದಾಖಲೆ ಹೊಂದಿದೆ. ಭಾರತದಲ್ಲಿ ಮೊದಲ ಬಾರಿಗೆ 2016ರಲ್ಲಿ ಬಿಡುಗಡೆಯಾಗಿದ್ದ ಬ್ರೆಝಾ ಕಾರು ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮಾರಾಟ ದಾಖಲೆ ಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ ಇದುವರೆಗೆ ಹಲವಾರು ಬದಲಾವಣೆಗಳೊಂದಿಗೆ ಸ್ಥಿರ ಮಾರುಕಟ್ಟೆ ಕಾಯ್ದುಕೊಂಡಿದೆ.

ಮಾರುತಿ ಬ್ರೆಝಾ ಮಿಂಚಿನ ಓಟ: 70 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಮಾರುತಿ ಸುಜುಕಿಯು 2022ರ ಮಾದರಿಯಲ್ಲಿ ಈ ಹಿಂದೆಂದಿಗಿಂತಲೂ ಹೆಚ್ಚಿನ ಬದಲಾವಣೆಗಳನ್ನು ಬಿಡುಗಡೆಗೊಳಿಸಿತ್ತು. ಈ ಹೊಸ ಎಸ್‍ಯುವಿ ಮಾದರಿಯ ಎಲ್ಎಕ್ಸ್‌ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ ವೆಂಟ್‌ಗಳನ್ನು ಹೊಂದಿದೆ.

ಮಾರುತಿ ಬ್ರೆಝಾ ಮಿಂಚಿನ ಓಟ: 70 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಹೊಸ ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿ ಮಾದರಿಯು ಈ ಬಾರಿ ಸಾಕಷ್ಟು ನವೀಕೃತ ಸೌಲಭ್ಯಗಳನ್ನು ಹೊಂದಿದೆ. ಇದು ಒಂದೇ ಎಂಜಿನ್ ಆಯ್ಕೆ ಪಡೆದುಕೊಂಡಿದೆ. ಹೊಸ ಕಾರಿನಲ್ಲಿ ಕಂಪನಿಯು 2022ರ ಎರ್ಟಿಗಾ ಮತ್ತು ಎಕ್ಸ್‌ಎಲ್6 ಮಾದರಿಯಲ್ಲಿ ನೀಡಲಾಗಿರುವ 1.5 ಲೀಟರ್ ಕೆ15ಸಿ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಮಾರುತಿ ಬ್ರೆಝಾ ಮಿಂಚಿನ ಓಟ: 70 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

1.5 ಲೀಟರ್ ಕೆ15ಸಿ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಕಂಪನಿಯು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಬಳಕೆ ಮಾಡಿದ್ದು, ಇದು ಕಾರು ಚಾಲನೆ ಆರಂಭಕ್ಕೂ ಮುನ್ನ ಎಂಜಿನ್ ಆರಂಭಕ್ಕೆ ಪವರ್ ಪೂರೈಕೆ ಮೂಲಕ ಇಂಧನ ವ್ಯರ್ಥವಾಗುವುದನ್ನು ತಡೆದು ಮೈಲೇಜ್ ಪ್ರಮಾಣದಲ್ಲಿ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ.

ಮಾರುತಿ ಬ್ರೆಝಾ ಮಿಂಚಿನ ಓಟ: 70 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಮಾರುತಿ ಸುಜುಕಿಯು ತನ್ನ ಹೊಸ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಗಳನ್ನು ತೆಗೆದುಹಾಕಿದ ನಂತರ ಡೀಸೆಲ್ ಕಾರುಗಳಲ್ಲಿದ್ದ ಮೈಲೇಜ್ ಪ್ರಮಾಣವನ್ನು ಪೆಟ್ರೋಲ್ ಮಾದರಿಗಳಲ್ಲೂ ಕಾಯ್ದುಕೊಳ್ಳುವ ಉದ್ದೇಶದಿಂದ ಪೆಟ್ರೋಲ್ ಮಾದರಿಗಳಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಬಳಕೆ ಆರಂಭಿಸಿದೆ.

ಮಾರುತಿ ಬ್ರೆಝಾ ಮಿಂಚಿನ ಓಟ: 70 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಈ ಹೊಸ ಬ್ರೆಝಾ ಕಾರಿನಲ್ಲಿ ಕಂಪನಿಯು ಈ ಹಿಂದಿನ ಟಾರ್ಕ್ ಕನ್ವರ್ಟಕ್ ಗೇರ್‌ಬಾಕ್ಸ್ ಬದಲಾಗಿ 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಿದೆ. ಈ ಹೊಸ ಎಂಜಿನ್ ಮೂಲಕ ಕಾರು 104.6 ಬಿಎಚ್‌ಪಿ ಮತ್ತು 137 ಎನ್ಎಂ ಉತ್ಪಾದನೆ ಮೂಲಕ ಉತ್ತಮ ಇಂಧನ ದಕ್ಷತೆ ಕಾಯ್ದುಕೊಂಡಿದೆ.

ಮಾರುತಿ ಬ್ರೆಝಾ ಮಿಂಚಿನ ಓಟ: 70 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಇನ್ನು ಕಂಪನಿಯ ಮಾಹಿತಿ ಪ್ರಕಾರ ಹೊಸ ಬ್ರೆಝಾ ಕಾರಿನ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್‌ಗೆ ಗರಿಷ್ಠ 19.80 ಕಿ.ಮೀ ಮೈಲೇಜ್ ನೀಡಿದರೆ, ಪೆಟ್ರೋಲ್ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ ಗರಿಷ್ಠ 20.15 ಕಿ.ಮೀ ಮೈಲೇಜ್ ಒದಗಿಸುತ್ತದೆ. ಈ ಹೊಸ ಕಾರಿನಲ್ಲಿ ಮತ್ತೊಂದು ಪ್ರಮುಖ ಬದಲಾವಣೆಯೆಂದರೆ ಈ ಹಿಂದಿನ ವಿಟಾರಾ ಬ್ರೆಝಾ ಬ್ಯಾಡ್ಜ್ ಬದಲಾಗಿ ಕಂಪನಿಯು ಇದೀಗ ಕೇವಲ ಬ್ರೆಝಾ ಬ್ಯಾಡ್ಜ್ ಮಾತ್ರ ಬಳಕೆ ಮಾಡಿದೆ.

ಮಾರುತಿ ಬ್ರೆಝಾ ಮಿಂಚಿನ ಓಟ: 70 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಈ ಹೊಸ ಎಸ್‍ಯುವಿ ಹಿಂದಿನ ಮಾದರಿಗಿಂತ 45 ಎಂಎಂ ಹೆಚ್ಚುವರಿ ಎತ್ತರವನ್ನು ಹೊಂದಿದೆ. ಇನ್ನುಳಿದಂತೆ ಈ ಹೊಸ ಎಸ್‍ಯುವಿ ಈ ಹಿಂದಿನಂತೆ 3,995 ಎಂಎಂ ಉದ್ದಳತೆ, 1,790 ಎಂಎಂ ಅಗಲ, 2,500 ವ್ಹೀಲ್‌ಬೆಸ್ ಹೊಂದಿದ್ದು, ಹೊಸ ಕಾರಿನ ಹೊರ ಮತ್ತು ಒಳ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಪಡೆದುಕೊಂಡಿದೆ.

ಮಾರುತಿ ಬ್ರೆಝಾ ಮಿಂಚಿನ ಓಟ: 70 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಹೊಸ ಬ್ರೆಝಾ ಎಸ್‌ಯುವಿ ಮುಂಭಾಗದಲ್ಲಿ ನವೀಕೃತ ಫ್ಲಾಟ್-ಲುಕಿಂಗ್ ಕ್ಲಾಮ್‌ಶೆಲ್ ಬಾನೆಟ್ ನೀಡಲಾಗಿದ್ದು, ಸ್ಕ್ವಾರಿಶ್ ಡ್ಯುಯಲ್-ಎಲ್‌ಇಡಿ ಹೆಡ್‌ಲ್ಯಾಂಪ್ ವಿನ್ಯಾಸವು ಇದೀಗ ಗನ್‌ಮೆಟಲ್ ಶೆಡ್ ಹೊಂದಿರುವ ಗ್ರಿಲ್‌ನೊಂದಿಗೆ ಅಂದವಾಗಿ ವಿಲೀನಗೊಳಿಸಲಾಗಿದೆ. ಹಾಗೆಯೇ ಕಾಂಟ್ರಾಸ್ಟ್ ಬ್ಲ್ಯಾಕ್ ಕ್ಲಾಡಿಂಗ್‌ ಉತ್ತಮವಾಗಿದ್ದು, ಹಿಂಭಾಗದಲ್ಲಿನ ಟೈಲ್‌ಗೇಟ್ ವಿನ್ಯಾಸವನ್ನು ಸಹ ಪರಿಷ್ಕರಿಸಲಾಗಿದೆ.

ಮಾರುತಿ ಬ್ರೆಝಾ ಮಿಂಚಿನ ಓಟ: 70 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಈ ಹೊಸ ಮಾದರಿಯಲ್ಲಿ ಇದೀಗ ಟೈಲ್ ಲ್ಯಾಂಪ್ ಉತ್ತಮ ಹೊರನೋಟ ಹೊಂದಿದ್ದು, ಲೈಸೆನ್ಸ್ ಪ್ಲೇಟ್‌ನ ಮೇಲ್ಭಾಗದ ಮಧ್ಯದಲ್ಲಿ ಬ್ರೆಜ್ಜಾ ಬ್ಯಾಡ್ಜಿಂಗ್ ನೀಡಲಾಗಿದೆ. ಇದರೊಂದಿಗೆ ಹೊಸ ಕಾರಿನ ಬೆಸ್ ವೆರಿಯೆಂಟ್‌ಗಳಲ್ಲಿ ಫ್ಲೋಟಿಂಗ್ ರೂಫ್ ಎಫೆಕ್ಟ್‌ನೊಂದಿಗೆ ಡ್ಯುಯಲ್-ಟೋನ್ ಎಕ್ಸ್‌ಟೀರಿಯರ್ ಶೇಡ್‌ಗಳನ್ನು ಪಡೆಯಲಿದ್ದು, ಇವು ಕಾರಿನ ಉದ್ದಳತೆ ಹೆಚ್ಚು ಕಾಣುವಂತೆ ಮಾಡುತ್ತವೆ. ಇನ್ನುದಂತೆ ಹೊಸ ಕಾರಿನಲ್ಲಿ 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ಚಕ್ರಗಳನ್ನು ನೀಡಲಾಗಿದ್ದು, ಹೊಸ ಕಾರಿನ ಇಂಟಿರಿಯರ್ ಕೂಡಾ ಇದೀಗ ಸಾಕಷ್ಟು ಹೊಸ ತಾಂತ್ರಿಕ ಅಂಶಗಳಿಂದ ಕೂಡಿದೆ.

ಮಾರುತಿ ಬ್ರೆಝಾ ಮಿಂಚಿನ ಓಟ: 70 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಈ ಹೊಸ ಎಸ್‍ಯುವಿ ಕಂಪನಿಯು 2022ರ ಬಲೆನೊ, ಎರ್ಟಿಗಾ ಮತ್ತು ಎಕ್ಸ್6 ಮಾದರಿಗಳಲ್ಲಿ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಂಡಿದ್ದು, ವಿವಿಧ ಸ್ವಿಚ್‌ಗೇರ್‌ಗಳು, ಸ್ಟೀರಿಂಗ್ ವೀಲ್ಹ್, ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಇನ್ಫೋಟೈನ್‌ಮೆಂಟ್ ಸಾಫ್ಟ್‌ವೇರ್ ಮತ್ತು ಇತರೆ ವೈಶಿಷ್ಟ್ಯಗಳನ್ನು ಪ್ರಮುಖ ಮಾದರಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಹೊಸ ಎಸ್‍ಯುವಿ ಡ್ಯಾಶ್‌ಬೋರ್ಡ್ ಮತ್ತು ಬಾಗಿಲುಗಳಲ್ಲಿ ಸಿಲ್ವರ್ ಆಕ್ಸೆಂಟ್ ಬಳಕೆ ಮಾಡಲಾಗಿದ್ದು, ಹೈ ಎಂಡ್ ಮಾದರಿಯಲ್ಲಿ ಕಂಪನಿಯು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸರ್ಪೊಟ್ ಹೊಂದಿರುವ 9.0-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಟಚ್‌ಸ್ಕ್ರೀನ್‌ ಅಳವಡಿಸಿದೆ.

ಮಾರುತಿ ಬ್ರೆಝಾ ಮಿಂಚಿನ ಓಟ: 70 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಇದರಲ್ಲದೆ ಹೊಸ ಎಸ್‍ಯುವಿಯಲ್ಲಿ ಆರ್ಕಮಿಸ್ ಸೌಂಡ್ ಸಿಸ್ಟಂ, ವೈರ್‌ಲೆಸ್ ಚಾರ್ಜಿಂಗ್, ರಿಯರ್ ಎಸಿ ವೆಂಟ್‌ಗಳು, ವಾಯ್ಸ್ ಕಮಾಂಡ್ ಸಪೋರ್ಟ್, ಕನೆಕ್ಟ್ ಕಾರ್ ಟೆಕ್, ಹೆಡ್ಸ್-ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಸಿ ಕಂಟ್ರೊಲರ್, ಆಂಬಿಯೆಂಟ್ ಲೈಟಿಂಗ್ಸ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳು, ಕನೆಕ್ಟಿಂಗ್ ಕಾರ್ ಟೆಕ್ ಜೊತೆ ಅಲೆಕ್ಸಾ ವಾಯ್ಸ್ ಕಮಾಂಡ್ ಮತ್ತು ಸನ್‌ರೂಫ್ ಸೌಲಭ್ಯಗಳನ್ನು ನೀಡಿದೆ.

ಮಾರುತಿ ಬ್ರೆಝಾ ಮಿಂಚಿನ ಓಟ: 70 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಕಂಪನಿಯು ಈ ಎಸ್‍ಯುವಿಯ ಮಧ್ಯಂತರ ವೆರಿಯೆಂಟ್‌ನಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಣೆ ಮಾಡಿದ್ದು, ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳ ಜೊತೆಗೆ ಇಎಸ್‌ಪಿ, ಇಬಿಡಿ ಜೊತೆಗೆ ಎಬಿಎಸ್, ಸೆಗ್ಮೆಂಟ್ ಫಸ್ಟ್ 360 ಡಿಗ್ರಿ ಕ್ಯಾಮೆರಾ, ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ಐಸೋಫಿಕ್ಸ್ ಚೈಲ್ದ್ ಸೀಟ್ ಮೌಂಟ್ ಅನ್ನು ನೀಡಿದೆ.

Most Read Articles

Kannada
English summary
New maruti suzuki brezza suv booking crossed 70000 units in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X