ಹೆಚ್ಚು ಮೈಲೇಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ Maruti Celerio CNG ವರ್ಷನ್ ಕಾರು

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಕಂಪನಿಯು ಭಾರತದಲ್ಲಿ ತನ್ನ ಹೊಸ ಸೆಲೆರಿಯೊ (Celerio) ಹ್ಯಾಚ್‌ಬ್ಯಾಕ್ ಕಾರ್ ಅನ್ನು ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಮಾರುತಿ ಸುಜುಕಿ ಕಂಪನಿಯು ಹೊಸ ಸೆಲೆರಿಯೊ ಕಾರ್ ಅನ್ನು ಸಿ‌ಎನ್‌ಜಿ ಮಾದರಿಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಹೆಚ್ಚು ಮೈಲೇಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ Maruti Celerio CNG ವರ್ಷನ್ ಕಾರು

ಮಾರುತಿ ಸುಜುಕಿ ಸೆಲೆರಿಯೊ ಸಿ‌ಎನ್‌ಜಿ ಕಾರರು ಇದೇ ತಿಂಗಳು ಬಿಡುಗಡೆಯಾಗಲಿದೆ ಎಂದು ವರದಿಗಳಾಗಿದೆ. ಅದರೆ ಮಾರುತಿ ಸುಜುಕಿ ಕಂಪನಿಯು ಈ ಕಾರಿನ ಬಿಡುಗಡೆಯ ಅಧಿಕೃತ ದಿನಾಂಕವನ್ನು ಬಹಿರಂಗಪಡಿಸಿಲ್ಲ. 2022ರ ಮಾರುತಿ ಸೆಲೆರಿಯೊ ಸಿ‌ಎನ್‌ಜಿ ಕಾರು 1.0 ಲೀಟರ್ 3-ಸಿಲಿಂಡರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಜೊತೆಗೆ ಫ್ಯಾಕ್ಟರಿ-ಫಿಟ್ಡ್ ಸಿ‌ಎನ್‌ಜಿ ಕಿಟ್‌ನೊಂದಿಗೆ ಬರುತ್ತದೆ. ಇದರೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಆನ್ನು ಜೋಡಿಸಲಾಗುತ್ತದೆ.

ಹೆಚ್ಚು ಮೈಲೇಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ Maruti Celerio CNG ವರ್ಷನ್ ಕಾರು

ಸಾಮಾನ್ಯ ಮಾದರಿಗೆ ಹೋಲಿಸಿದರೆ, 2022ರ ಮಾರುತಿ ಸೆಲೆರಿಯೊ ಸಿಎನ್‌ಜಿ ಆವೃತ್ತಿಯು ಹೆಚ್ಚು ಮೈಲೇಜ್ ಅನ್ನು ಹೊಂದಿರುತ್ತದೆ. ಈ ಸಿಎನ್‌ಜಿ ಆವೃತ್ತಿಯು 30 ಕಿ.ಮೀ ಗಿಂತಲೂ ಹೆಚ್ಚು ಮೈಲೇಜ್ ಅನ್ನು ನೀಡುತ್ತದೆ. ನಿಮಗೆ ತಿಳಿದಿರುವಂತೆ, ಹೊಸ ಮಾರುತಿ ಸೆಲೆರಿಯೊ ಪ್ರಸ್ತುತ ದೇಶದಲ್ಲಿ ಹೆಚ್ಚು ಮೈಲೇಜ್ ಹೊಂದಿರುವ ಪೆಟ್ರೋಲ್ ಕಾರ್ ಆಗಿದೆ. ಇದು 26.68 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ.

ಹೆಚ್ಚು ಮೈಲೇಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ Maruti Celerio CNG ವರ್ಷನ್ ಕಾರು

ಹ್ಯಾಚ್‌ಬ್ಯಾಕ್ ಹೊಸ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು ಪ್ರತಿ ಸಿಲಿಂಡರ್‌ಗೆ ಎರಡು ಇಂಧನ ಇಂಜೆಕ್ಟರ್‌ಗಳನ್ನು ಹೊಂದಿದೆ, ಹೆಚ್ಚಿನ ಕಂಪ್ರೆಷನ್ ಅನುಪಾತ, ಎಂಜಿನ್ ಆಟೋಮ್ಯಾಟಿಕ್ ಸ್ಟಾಪ್ ಸ್ಟಾರ್ಟ್ ಸಿಸ್ಟಮ್ ಮತ್ತು ಕೂಲ್ಡ್ ಎಕ್ಸಾಸ್ಟ್ ಗ್ಯಾಸ್ ರಿಸರ್ಕ್ಯುಲೇಷನ್ ಸಿಸ್ಟಮ್ ಅನ್ನು ಒಳಗೊಂಡಿದೆ,

ಹೆಚ್ಚು ಮೈಲೇಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ Maruti Celerio CNG ವರ್ಷನ್ ಕಾರು

2022ರ ಮಾರುತಿ ಸೆಲೆರಿಯೊ ಸಿಎನ್‌ಜಿ ರೂಪಾಂತರಗಳಿಗೆ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ. ಸಾಮಾನ್ಯ ಸೆಲೆರಿಯೊ ಕಾರ್ ಅನ್ನು ಹಲವು ಹೊಸ ಹಾಗೂ ಅಪ್ ಡೇಟ್ ಮಾಡಲಾದ ಫೀಚರ್ ಗಳೊಂದಿಗೆ ಬಿಡುಗಡೆಗೊಳಿಸಲಾಗಿದೆ.

ಹೆಚ್ಚು ಮೈಲೇಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ Maruti Celerio CNG ವರ್ಷನ್ ಕಾರು

ಮಾರುತಿ ಸುಜುಕಿ ಕಂಪನಿಯು ಹೊಸ ಸೆಲೆರಿಯೊ ಕಾರ್ ಅನ್ನು ಸಿಲ್ಕಿ ಸಿಲ್ವರ್, ಗ್ಲಿಸ್ಟರಿಂಗ್ ಗ್ರೇ, ಆರ್ಕ್ಟಿಕ್ ವೈಟ್, ಕೆಫೀನ್ ಬ್ರೌನ್ ಜೊತೆಗೆ ಎರಡು ಹೊಸ ಬಣ್ಣಗಳಾದ ಫೈರ್ ರೆಡ್ ಹಾಗೂ ಸ್ಪೀಡಿ ಬ್ಲೂ ಎಂಬ ಆರು ಬಣ್ಣಗಳಲ್ಲಿ ಮಾರಾಟಗೊಳಿಸುತ್ತಿದೆ, ಈ ಕಾರ್ ಅನ್ನು 4 ಟ್ರಿಮ್‌ ಹಾಗೂ 7 ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಹೆಚ್ಚು ಮೈಲೇಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ Maruti Celerio CNG ವರ್ಷನ್ ಕಾರು

ಹೊಸ ಸೆಲೆರಿಯೊ ಕಾರು ಭಾರತದಲ್ಲಿರುವ ಇತರ ಕಾರು ತಯಾರಕ ಕಂಪನಿಗಳು ಮಾರಾಟ ಮಾಡುವ ಎಲ್ಲಾ ಕಾರುಗಳಿಗಿಂತ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ ಎಂದು ಮಾರುತಿ ಸುಜುಕಿ ಹೇಳಿಕೊಂಡಿದೆ. ಮಾರುತಿ ಸುಜುಕಿ ಕಂಪನಿಯು ಈ ಸೆಲೆರಿಯೊ ಕಾರಿನಲ್ಲಿ 1.0 ಲೀಟರ್ ಕೆ 10ಸಿ ಸರಣಿಯ 3 ಸಿಲಿಂಡರ್ ಡ್ಯೂಯಲ್ ಜೆಟ್ ಪೆಟ್ರೋಲ್ ಎಂಜಿನ್ ಅಳವಡಿಸಿದೆ.

ಹೆಚ್ಚು ಮೈಲೇಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ Maruti Celerio CNG ವರ್ಷನ್ ಕಾರು

ಈ ಎಂಜಿನ್ ಗರಿಷ್ಠ 65 ಬಿ‌ಹೆಚ್‌ಪಿ ಪವರ್ ಹಾಗೂ 89 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಸೆಲೆರಿಯೊ ಐದು ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್‌ನೊಂದಿಗೆ ಸ್ವಯಂಚಾಲಿತ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಸಹ ಪಡೆಯುತ್ತದೆ.

ಹೆಚ್ಚು ಮೈಲೇಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ Maruti Celerio CNG ವರ್ಷನ್ ಕಾರು

ಹೊಸ ಮಾರುತಿ ಸೆಲೆರಿಯೊ ಕಾರು ಸಹ ಸ್ವಿಫ್ಟ್ ಹಾಗೂ ಬಲೆನೊ ಕಾರುಗಳಂತೆ ಸುಜುಕಿಯ ಹಾರ್ಟೆಕ್ಟ್ ಪ್ಲಾಟ್‌ಫಾರಂ ಅನ್ನು ಆಧರಿಸಿದೆ. ಹೊಸ ಮಾದರಿಯು ಹಳೆಯ ಮಾದರಿಗಿಂತ ಹೆಚ್ಚು ಉದ್ದ ಹಾಗೂ ಅಗಲವಾಗಿದೆ. ಇದರ ವ್ಹೀಲ್‌ಬೇಸ್ ಸಹ ಮೊದಲಿಗಿಂತ ಉದ್ದವಾಗಿದ್ದು, ಕಾರಿನೊಳಗೆ ಮೊದಲಿಗಿಂತ ಹೆಚ್ಚು ಸ್ಪೇಸ್ ಅನ್ನು ಒಳಗೊಂಡಿದೆ,

ಹೆಚ್ಚು ಮೈಲೇಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ Maruti Celerio CNG ವರ್ಷನ್ ಕಾರು

ಈ ಹೊಸ ಸೆಲೆರಿಯೊ ಕಾರಿನಲ್ಲಿ ಆಕರ್ಷಕ ಗ್ರಿಲ್, ಹೊಸ ಅಲಾಯ್ ವ್ಹೀಲ್, ಫಾಗ್ ಲೈಟ್‌ಗಳನ್ನು ಹೊಂದಿದೆ. ಈ ಕಾರಿನ ಇಂಟಿರಿಯರ್ ನಲ್ಲಿ ಹೊಸ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಕಾಲ್ ಹಾಗೂ ಮ್ಯೂಸಿಕ್ ಅಸಿಸ್ಟ್‌ ಹೊಂದಿರುವ ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಸಿಂಗಲ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಸರ್ಕ್ಯುಲರ್ ಡಿಜಿಟಲ್ ಸ್ಕ್ರೀನ್ ಅನ್ನು ಒಳಗೊಂಡಿದೆ.

ಹೆಚ್ಚು ಮೈಲೇಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ Maruti Celerio CNG ವರ್ಷನ್ ಕಾರು

ಈ ಕಾರಿನ ಹೆಡ್‌ಲೈಟ್‌ ವಿನ್ಯಾಸವನ್ನು ಅಪ್ ಡೇಟ್ ಮಾಡಲಾಗಿದೆ. ಇದರ ಜೊತೆಗೆ ಈ ಕಾರು ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಸಂಪರ್ಕ ಹೊಂದಿರುವ ಸ್ಮಾರ್ಟ್‌ಪ್ಲೇ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನಂತಹ ಹಲವಾರು ಹೊಸ ಹಾಗೂ ಅಪ್ ಡೇಟ್ ಮಾಡಲಾದ ಫೀಚರ್ ಗಳನ್ನು ಪಡೆದುಕೊಂಡಿದೆ. ಇದರ ಹೊರತಾಗಿ ಈ ಕಾರಿನಲ್ಲಿ ಐಡಲ್ ಸ್ಟಾರ್ಟ್/ಸ್ಟಾಪ್ ಫಂಕ್ಷನ್ ಜೊತೆಗೆ ಪುಶ್ ಸ್ಟಾರ್ಟ್/ಸ್ಟಾಪ್ ಬಟನ್ ಫೀಚರ್ ಸಹ ನೀಡಲಾಗಿದೆ.

ಹೆಚ್ಚು ಮೈಲೇಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ Maruti Celerio CNG ವರ್ಷನ್ ಕಾರು

ಹೊಸ ಸೆಲೆರಿಯೊದಲ್ಲಿ ಡೋರ್ ರಿಕ್ವೆಸ್ಟ್ ಸ್ವಿಚ್ ಕೂಡ ನೀಡಲಾಗಿದೆ. ಹೊಸ ಮಾರುತಿ ಸೆಲೆರಿಯೊದಲ್ಲಿ ಬೂಟ್ ಸ್ಪೇಸ್ ಅನ್ನು ಈಗ 313 ಲೀಟರ್‌ಗಳಿಗೆ ಹೆಚ್ಚಿಸಲಾಗಿದೆ. ಕಂಪನಿಯು ಹೊಸ ಸೆಲೆರಿಯೊ ಕಾರಿನಲ್ಲಿ ಸುರಕ್ಷತಾ ಫೀಚರ್ ಗಳಿಗೆ ಹೆಚ್ಚು ಆದ್ಯತೆ ನೀಡಿದೆ. ಹೊಸ ಸೆಲೆರಿಯೊ ಕಾರಿನಲ್ಲಿ ಡ್ರೈವರ್ ಹಾಗೂ ಫ್ರಂಟ್ ಸೀಟ್ ಪ್ಯಾಸೆಂಜರ್ ಏರ್‌ಬ್ಯಾಗ್‌, ಸೀಟ್ ಬೆಲ್ಟ್ ರಿಮೈಂಡರ್, ಎಬಿಎಸ್-ಇಬಿಡಿ, ಇಂಜಿನ್ ಇಮೊಬಿಲೈಜರ್, ಹಿಂಭಾಗದ ಬಾಗಿಲುಗಳಲ್ಲಿ ಚೈಲ್ಡ್ ಪ್ರೂಫ್ ಲಾಕ್, ಸ್ಪೀಡ್ ಅಲರ್ಟ್ ಸಿಸ್ಟಂ, ಹಿಲ್ ಹೋಲ್ಡ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವಾರು ಸುರಕ್ಷತಾ ಫೀಚರ್ ಗಳನ್ನು ಕೂಡ ಒಳಗೊಂಡಿದೆ,

Most Read Articles

Kannada
English summary
New maruti suzuki celerio cng launch soon find here more details
Story first published: Wednesday, January 5, 2022, 12:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X