2022ರ ಎರ್ಟಿಗಾ ಎಂಪಿವಿ ಕಾರು ಮಾದರಿಗಾಗಿ ಅಧಿಕೃತ ಬುಕಿಂಗ್ ಆರಂಭಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಹೊಸ ಎರ್ಟಿಗಾ ಎಂಪಿವಿ ಮಾದರಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಕಂಪನಿಯು ಹೊಸ ಕಾರು ಬಿಡುಗಡೆಗೂ ಮುನ್ನ ರೂ.11 ಸಾವಿರ ಮುಂಗಡದೊಂದಿಗೆ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

2022ರ ಎರ್ಟಿಗಾ ಎಂಪಿವಿ ಕಾರು ಮಾದರಿಗಾಗಿ ಅಧಿಕೃತ ಬುಕಿಂಗ್ ಆರಂಭಿಸಿದ ಮಾರುತಿ ಸುಜುಕಿ

ದೇಶಿಯ ಮಾರುಕಟ್ಟೆಯಲ್ಲಿ ಮಧ್ಯಮ ಕ್ರಮಾಂಕದ ಎಂಪಿವಿ ಕಾರುಗಳ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಎರ್ಟಿಗಾ ಮಾದರಿಯು 2022ರ ಮಾದರಿಯೊಂದಿಗೆ ಮತ್ತಷ್ಟು ಹೊಸ ಫೀಚರ್ಸ್ ಪಡೆದುಕೊಳ್ಳಲಿದ್ದು, ಮಾಹಿತಿಗಳ ಪ್ರಕಾರ ಹೊಸ ಕಾರು ಇದೇ ತಿಂಗಳು 15ರಂದು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

2022ರ ಎರ್ಟಿಗಾ ಎಂಪಿವಿ ಕಾರು ಮಾದರಿಗಾಗಿ ಅಧಿಕೃತ ಬುಕಿಂಗ್ ಆರಂಭಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಾರುಗಳ ಮಾರಾಟದಲ್ಲಿ ಸದ್ಯ ಉತ್ತಮ ಬೇಡಿಕೆ ಪಡೆದುಕೊಂಡಿರುವ ಎರ್ಟಿಗಾ ಮಾದರಿಯ ಪ್ರಮುಖ ಎರಡು ಮಾದರಿಯಲ್ಲಿ ಮಾರಾಟಗೊಳ್ಳುತ್ತಿದ್ದು, ಸಾಮಾನ್ಯ ಎರ್ಟಿಗಾ ಮಾದರಿಯು ಮಾರುತಿ ಸುಜುಕಿ ಅರೆನಾ ಮಾರಾಟ ಮಳಿಗೆಯಲ್ಲಿ ಪ್ರೀಮಿಯಂ ಆವತ್ತಿಯಾದ ಎಕ್ಸ್‌ಎಲ್ 6 ಮಾದರಿಯು ಮಾರುತಿ ನೆಕ್ಸಾ ಮಾರಾಟ ಮಳಿಗೆಗಳಲ್ಲಿ ಮಾರಾಟಗೊಳ್ಳುತ್ತಿದೆ.

2022ರ ಎರ್ಟಿಗಾ ಎಂಪಿವಿ ಕಾರು ಮಾದರಿಗಾಗಿ ಅಧಿಕೃತ ಬುಕಿಂಗ್ ಆರಂಭಿಸಿದ ಮಾರುತಿ ಸುಜುಕಿ

ಎರ್ಟಿಗಾ ಮಾದರಿಯಲ್ಲಿ ತುಸು ಹೆಚ್ಚುವರಿ ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ಹೊಂದಿರುವ ಎಕ್ಸ್‌ಎಲ್6 ಮಾದದರಿಯು ಕೂಡಾ ಉತ್ತಮ ಬೇಡಿಕೆ ಹೊಂದಿದ್ದು, ಇದೀಗ ಎರಡು ಮಾದರಿಗಳು ಸಹ 2022ರ ಮಾದರಿಯೊಂದಿಗೆ ಹಲವು ಹೊಸ ಫೀಚರ್ಸ್ ನೀಡುತ್ತಿದೆ.

2022ರ ಎರ್ಟಿಗಾ ಎಂಪಿವಿ ಕಾರು ಮಾದರಿಗಾಗಿ ಅಧಿಕೃತ ಬುಕಿಂಗ್ ಆರಂಭಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು 2022ರ ಪ್ರಮುಖ ಕಾರು ಮಾದರಿಗಳಲ್ಲಿ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್‌ಗಳನ್ನು ನೀಡುತ್ತಿದ್ದು, ಎರ್ಟಿಗಾ ಮಾದರಿಯ ಸಹ ಹೈ ಎಂಡ್ ಮಾದರಿಯಲ್ಲಿ 6 ಏರ್‌ಬ್ಯಾಗ್ ಮತ್ತು ಆಲ್‌ವ್ಹೀಲ್ ಡಿಸ್ಕ್ ಬ್ರೇಕ್ ಸೇರಿದಂತೆ ಇನ್ನು ಕೆಲವು ಪ್ರಮುಖ ಸೇಫ್ಟಿ ಫೀಚರ್ಸ್ ಹೊಂದಲಿದೆ.

2022ರ ಎರ್ಟಿಗಾ ಎಂಪಿವಿ ಕಾರು ಮಾದರಿಗಾಗಿ ಅಧಿಕೃತ ಬುಕಿಂಗ್ ಆರಂಭಿಸಿದ ಮಾರುತಿ ಸುಜುಕಿ

ಹಾಗಾಯೇ ಹೊಸ ಕಾರಿನ ಒಳಭಾಗದಲ್ಲೂ ಪ್ರಮುಖ ಬದಲಾವಣೆಗಳನ್ನು ಪರಿಚಯಿಸುವ ಸುಳಿವು ನೀಡಿರುವ ಮಾರುತಿ ಸುಜುಕಿ ಕಂಪನಿಯು ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೇರಿದಂತೆ ಆಂಬಿಯೆಂಟ್ ಲೈಟಿಂಗ್ ಆಯ್ಕೆಯು ಕಾರು ಪ್ರಯಾಣವನ್ನು ಮತ್ತಷ್ಟು ಸುಖಕರವಾಗಿಸಲಿದೆ.

2022ರ ಎರ್ಟಿಗಾ ಎಂಪಿವಿ ಕಾರು ಮಾದರಿಗಾಗಿ ಅಧಿಕೃತ ಬುಕಿಂಗ್ ಆರಂಭಿಸಿದ ಮಾರುತಿ ಸುಜುಕಿ

ಎಂಜಿನ್ ಮತ್ತು ಪರ್ಫಾಮೆನ್ಸ್

ಮಾರುತಿ ಸುಜುಕಿ ಕಂಪನಿಯು ಹೊಸ ಎರ್ಟಿಗಾ ಮಾದರಿಯಲ್ಲಿ ಈ ಬಾರಿ 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಬದಲಾಗಿ 1.5 ಲೀಟರ್ ಕೆ15ಸಿ ಡ್ಯುಯಲ್‌ಜೆಟ್ ಪೆಟ್ರೋಲ್ ಮಾದರಿಯನ್ನು ಅಳವಡಿಸುತ್ತಿದ್ದು, ಹೊಸ ಪೆಟ್ರೋಲ್ ಎಂಜಿನ್ ಮಾದರಿಯು ಹಳೆಯ ಮಾದರಿಗಿಂತಲೂ ಹೆಚ್ಚುವರಿಯಾಗಿ 10 ಬಿಎಚ್‌ಪಿ ಉತ್ಪಾದನೆಯೊಂದಿಗೆ ಇಂಧನದಲ್ಲೂ ಉತ್ತಮ ದಕ್ಷತೆ ಹೊಂದಿದೆ.

2022ರ ಎರ್ಟಿಗಾ ಎಂಪಿವಿ ಕಾರು ಮಾದರಿಗಾಗಿ ಅಧಿಕೃತ ಬುಕಿಂಗ್ ಆರಂಭಿಸಿದ ಮಾರುತಿ ಸುಜುಕಿ

ಇದರ ಜೊತೆಗೆ ಹೊಸ ಕಾರಿನಲ್ಲಿ ಮಾರುತಿ ಸುಜಕಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಬಹುದಾಗಿದೆ. ಕಂಪನಿಯು ಈ ಹಿಂದಿನ 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಮಾದರಿಯನ್ನು ಹಳೆಯ ಮಾದರಿಯಲ್ಲಿ ತೆಗೆದುಹಾಕಿದ್ದು, ಇದಕ್ಕಾಗಿಯೇ ಹೊಸ ಮಾದರಿಯು ಉತ್ತಮ ಎಂಜಿನ್ ದಕ್ಷತೆಯನ್ನು ಖಾತ್ರಿಪಡಿಸಲಿದೆ ಎನ್ನಬಹುದು.

2022ರ ಎರ್ಟಿಗಾ ಎಂಪಿವಿ ಕಾರು ಮಾದರಿಗಾಗಿ ಅಧಿಕೃತ ಬುಕಿಂಗ್ ಆರಂಭಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಬಿಎಸ್-6 ಜಾರಿ ನಂತರ ಕಂಪನಿಯು ಎಲ್ಲಾ ಕಾರು ಮಾದರಿಗಳಲ್ಲೂ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿದೆ.

2022ರ ಎರ್ಟಿಗಾ ಎಂಪಿವಿ ಕಾರು ಮಾದರಿಗಾಗಿ ಅಧಿಕೃತ ಬುಕಿಂಗ್ ಆರಂಭಿಸಿದ ಮಾರುತಿ ಸುಜುಕಿ

ಸದ್ಯಕ್ಕೆ ಪೆಟ್ರೋಲ್, ಪೆಟ್ರೋಲ್ ಮಾದರಿಗಳೊಂದಿಗೆ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಮತ್ತು ಸಿಎನ್‌ಜಿ ಆಯ್ಕೆಗಳನ್ನು ನೀಡುತ್ತಿದ್ದು, ಬಿಡುಗಡೆಯಾಗಲಿರುವ ಎರ್ಟಿಗಾ ಹೊಸ ಮಾದರಿಯಲ್ಲೂ ಕಂಪನಿಯು ಪೆಟ್ರೋಲ್ ಮಾದರಿಯ ಜೊತೆ ಸಿಎನ್‌ಜಿ ಮಾದರಿಯನ್ನು ಬಿಡುಗಡೆ ಮಾಡಲಿದೆ.

2022ರ ಎರ್ಟಿಗಾ ಎಂಪಿವಿ ಕಾರು ಮಾದರಿಗಾಗಿ ಅಧಿಕೃತ ಬುಕಿಂಗ್ ಆರಂಭಿಸಿದ ಮಾರುತಿ ಸುಜುಕಿ

ಎರ್ಟಿಗಾ ಕಾರಿನ ವಿಎಕ್ಸ್ಐ ಮತ್ತು ಜೆಎಕ್ಸ್ಐ ಮಾದರಿಗಳನ್ನು ಆಧರಿಸಿ ಎರ್ಟಿಗಾ ಸಿಎನ್‌ಜಿ ಖರೀದಿಗೆ ಲಭ್ಯವಿರಲಿದ್ದು, ಸಿಎನ್‌ಜಿ ಮಾದರಿಯು ಹೆಚ್ಚಿನ ಮಟ್ಟದ ಮೈಲೇಜ್ ಮೂಲಕ ವ್ಯಯಕ್ತಿಕ ಮತ್ತು ಕ್ಯಾಬ್ ಸೇವಾ ಮಾದರಿಗಳ ಆಯ್ಕೆಗೆ ಸಹಕಾರಿಯಾಗಿದೆ.

2022ರ ಎರ್ಟಿಗಾ ಎಂಪಿವಿ ಕಾರು ಮಾದರಿಗಾಗಿ ಅಧಿಕೃತ ಬುಕಿಂಗ್ ಆರಂಭಿಸಿದ ಮಾರುತಿ ಸುಜುಕಿ

ಇನ್ನು 2022ರ ಎರ್ಟಿಗಾ ಮಾದರಿಯಲ್ಲಿ ಕಂಪನಿಯು ಹೊರ ಭಾಗದಲ್ಲಿ ಮತ್ತು ಒಳಭಾಗದ ತಾಂತ್ರಿಕ ಸೌಲಭ್ಯದಲ್ಲೂ ಕೆಲವು ಬದಲಾವಣೆಗಳನ್ನು ಮಾಡಬಹುದಾಗಿದ್ದು, ಹೊಸ ಕಾರಿನ ಒಳಭಾದಲ್ಲಿ ಈ ಬಾರಿ ಹೊಸ 7 ಇಂಚಿನ ಹೊಸ ಸ್ಮಾರ್ಟ್‌ಪ್ಲೇ ಪ್ರೊ ಟಚ್‌ಸ್ಕ್ರೀನ್ ಸೌಲಭ್ಯವನ್ನು ನೀಡಲಿದೆ.

2022ರ ಎರ್ಟಿಗಾ ಎಂಪಿವಿ ಕಾರು ಮಾದರಿಗಾಗಿ ಅಧಿಕೃತ ಬುಕಿಂಗ್ ಆರಂಭಿಸಿದ ಮಾರುತಿ ಸುಜುಕಿ

ಹೊಸ ಕಾರಿನ ಚಾಲನೆಯನ್ನು ಮತ್ತಷ್ಟು ಸರಳವಾಗಿಸಲು ಕಂಪನಿಯು ಹೊಸ ಸುಜುಕಿ ಕನೆಕ್ಟ್ ಸರ್ಪೊಟ್ ಮಾಡುವ ಸ್ಮಾರ್ಟ್‌ಪ್ಲೇ ಪ್ರೊ ಟಚ್‌ಸ್ಕ್ರೀನ್ ನೀಡಲಾಗಿದ್ದು, ಹೊಸ ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.

2022ರ ಎರ್ಟಿಗಾ ಎಂಪಿವಿ ಕಾರು ಮಾದರಿಗಾಗಿ ಅಧಿಕೃತ ಬುಕಿಂಗ್ ಆರಂಭಿಸಿದ ಮಾರುತಿ ಸುಜುಕಿ

ಈ ಮೂಲಕ ಎರ್ಟಿಗಾ ಮಾದರಿಯು ಇದುವರೆಗೆ ಭಾರತದಲ್ಲಿ ಸುಮಾರು 7.50 ಲಕ್ಷ ಗ್ರಾಹಕರ ಹೊಂದಿರುವ ಪ್ರಮುಖ ಎಂಪಿವಿ ಮಾದರಿಯಾಗಿ ಹೊರಹೊಮ್ಮಿದ್ದು, ಅದು ವಿನೂತನ ಶೈಲಿ, ಸ್ಥಳಾವಕಾಶ, ತಂತ್ರಜ್ಞಾನ, ಸುರಕ್ಷತೆ, ಸೌಕರ್ಯ ಮತ್ತು ಒಟ್ಟಿಗೆ ಪ್ರಯಾಣಿಸುವ ಅನುಕೂಲತೆಯನ್ನು ಮರು ವ್ಯಾಖ್ಯಾನಿಸುತ್ತದೆ.

Most Read Articles

Kannada
English summary
New maruti suzuki ertiga pre bookings opens ahead of launch details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X