Just In
- 1 hr ago
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- 2 hrs ago
ಜುಲೈ ಎಲೆಕ್ಟ್ರಿಕ್ ಕಾರುಗಳ ನೋಂದಣಿಯಲ್ಲಿ ಶೇ 3.5 ರಷ್ಟು ಏರಿಕೆ: ಶೇ 90 ರಷ್ಟು ಪಾಲು ಟಾಟಾಗೆ
- 3 hrs ago
30.9 ಕಿ.ಮೀ ಮೈಲೇಜ್ನೊಂದಿಗೆ ಮಾರುತಿ ಸ್ವಿಫ್ಟ್ ಸಿಎನ್ಜಿ ಕಾರು ಬಿಡುಗಡೆ
- 3 hrs ago
ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ
Don't Miss!
- Sports
Asia Cup 2022: ಆಡುವ 11ರ ಬಳಗದಲ್ಲಿ ಕಾರ್ತಿಕ್, ಪಂತ್ ನಡುವೆ ಯಾರು ಆಯ್ಕೆ?
- Movies
ಆಮಿರ್ ಖಾನ್ v/s ಅಕ್ಷಯ್ ಕುಮಾರ್: ಬಾಕ್ಸ್ ಆಫೀಸ್ನಲ್ಲಿ ಗೆದ್ದವರು ಯಾರು?
- News
ಹೀಗೊಂದು ಸಮೀಕ್ಷೆ: Work From Home ಬಳಸಿ, ಬೆಂಗಳೂರು ಉಳಿಸಿ!
- Lifestyle
ನಿಯಮಿತವಾಗಿ ಅಣಬೆ ಸೇವನೆಯಿಂದ ಮಧುಮೇಹ ತಡೆಗಟ್ಟಬಹುದು
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಹೊಸ 5 ಫೀಚರ್ಸ್‌ಗಳೊಂದಿಗೆ ಹ್ಯುಂಡೈ ಕ್ರೆಟಾವನ್ನು ಸೆಡ್ಡುಹೊಡೆಯಲಿದೆ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ
ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ SUV ವಿಭಾಗದಲ್ಲಿ ಪ್ರಸ್ತುತ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, MG ಹೆಕ್ಟರ್‌ನಂತಹ ಉನ್ನತ ಮಾದರಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಇದೀಗ ಈ ವಿಭಾಗದಲ್ಲಿ ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ತನ್ನ ಹೊಸ ಮಾದರಿಯಾದ ಗ್ರಾಂಡ್ ವಿಟಾರದೊಂದಿಗೆ ಎಂಟ್ರಿಕೊಟ್ಟಿದೆ.

ಹೊಸ ಮಾರುತಿ ಸುಜುಕಿ ಗ್ರಾಂಡ್ ವಿಟಾರಾವನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅನಾವರಣಗೊಳಿಸಲಾಗಿದೆ. ಈ ಹೊಸ ಮಾದರಿಯು ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ನಂತಹ ಪ್ರಬಲ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಈಗಾಗಲೇ ಗ್ರಾಂಡ್ ವಿಟಾರಾ ತನ್ನ ವೈಶಿಷ್ಟ್ಯಗಳೊಂದಿಗೆ ಗ್ರಾಹಕರಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದು, ವೈಶಿಷ್ಟ್ಯಗಳ ವಿಷಯದಲ್ಲಿ ಹ್ಯುಂಡೈ ಕ್ರೆಟಾವನ್ನು ಮೀರಿಸುತ್ತಿದೆ.

ಮಾರುತಿ ಸುಜುಕಿಯ ಹೊಸ SUV ಅದರ ಹೈಬ್ರಿಡ್ ಪವರ್‌ಟ್ರೇನ್ ಮತ್ತು ವೈಶಿಷ್ಟ್ಯ-ಸಮೃದ್ಧ ಒಳಾಂಗಣಗಳಿಂದಾಗಿ ಹೆಚ್ಚಿನ ಗಮನವನ್ನು ಸೆಳೆಯುತ್ತಿದೆ. ಅಲ್ಲದೇ ಕ್ರೆಟಾದಲ್ಲಿಲ್ಲದ ಐದು ವೈಶಿಷ್ಟ್ಯಗಳನ್ನು ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಹೊಂದಿದ್ದು, ಆ ವೈಶಿಷ್ಟ್ಯಗಳನ್ನು ನಾವು ಇಲ್ಲಿ ಉಲ್ಲೇಖಿಸಿದ್ದೇವೆ.

ಆಲ್-ವೀಲ್-ಡ್ರೈವ್
ಆಯ್ದ ಖರೀದಿದಾರರು ತಮ್ಮ ಮಧ್ಯಮ ಗಾತ್ರದ SUV ಗಳಲ್ಲಿ AWD ಲೇಔಟ್‌ಗಳಿಗೆ ಬೇಡಿಕೆಯನ್ನು ಹೆಚ್ಚಿಸುತ್ತಿದ್ದಾರೆ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಆಫ್-ರೋಡ್ ಮೋಡ್‌ಗಳೊಂದಿಗೆ ಆಲ್-ವೀಲ್-ಡ್ರೈವ್ ಲೇಔಟ್‌ನ ಆಯ್ಕೆಯೊಂದಿಗೆ ಬರುವುದರಿಂದ, ಮಧ್ಯಮ ಘಾತ್ರದ ಎಸ್‌ಯುವಿಗಳಲ್ಲಿ AWD ವೈಶಿಷ್ಟ್ಯವನ್ನು ಪಡೆದುಕೊಂಡಿರುವ ಅತಿ ಕಡಿಮೆ ಎಸ್‌ಯುವಿಗಳಲ್ಲಿ ವಿಟಾರಾ ಸ್ಥಾನ ಪಡೆದುಕೊಡಿದೆ. ಇನ್ನು ಈ ವಿಭಾಗದಲ್ಲಿ ಹ್ಯುಂಡೈ ಕ್ರೆಟಾ ಸ್ಥಾನ ಪಡೆದುಕೊಂಡಿಲ್ಲ.

ಹೈಬ್ರಿಡ್ ಪವರ್ ಪ್ಲಾಂಟ್
ಮಾರುತಿ ಸುಜುಕಿಯ ಮಧ್ಯಮ ಗಾತ್ರದ SUV ಅದರ ವರ್ಗದಲ್ಲಿ ಹೆಚ್ಚು ಇಂಧನ-ಸಮರ್ಥ ವಾಹನವಾಗಿದೆ ಎಂದು ನಿರೀಕ್ಷಿಸಲಾಗಿದೆ. ಇದು ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತಿದ್ದು, ಸೌಮ್ಯ-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5L NA ಪೆಟ್ರೋಲ್ ಮತ್ತು ಬಲವಾದ-ಹೈಬ್ರಿಡ್ ಸೆಟಪ್‌ನೊಂದಿಗೆ 1.5L ಪೆಟ್ರೋಲ್ ಮೋಟಾರ್ ಅನ್ನು ಒಳಗೊಂಡಿದೆ.

360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ
ಬಿಗಿಯಾದ ಪಾರ್ಕಿಂಗ್ ಸ್ಥಳಗಳಲ್ಲಿ ಗ್ರ್ಯಾಂಡ್ ವಿಟಾರಾ ಚಾಲಕರಿಗೆ ಸಹಾಯ ಮಾಡಲು, ಮಾರುತಿ ಸುಜುಕಿ ತನ್ನ ಮತ್ತೊಂದು ಜನಪ್ರಿಯ ಮಾದರಿಯಾದ ಬ್ರೆಝಾನಂತೆಯೇ 360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ವಿಟಾರಾ SUV ಅನ್ನು ನೀಡಲಿದೆ. ಈ ವೈಶಿಷ್ಟ್ಯವು ಪ್ರಸ್ತುತ ಅನೇಕ ಮಾರುತಿ ಸುಜುಕಿ ವಾಹನಗಳಲ್ಲಿ ಲಭ್ಯವಿದ್ದರೂ, ಹ್ಯುಂಡೈ ಕ್ರೆಟಾ ಮಾತ್ರ ತನ್ನ ಮಾದರಿಗಳಲ್ಲಿ ಈ ವೈಶಿಷ್ಟ್ಯವನ್ನು ನೀಡಿಲ್ಲ.

ಹೆಡ್-ಅಪ್ ಡಿಸ್ಪ್ಲೇ
ಮುಂಬರುವ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾಗಾಗಿ ಹೊಸದಾಗಿ ಬಿಡುಗಡೆಯಾದ ಬ್ರೆಝಾದಿಂದ ಎರವಲು ಪಡೆದ ಮತ್ತೊಂದು ವೈಶಿಷ್ಟ್ಯವೆಂದರೆ ಹೆಡ್-ಅಪ್ ಡಿಸ್ಪ್ಲೇ. ಇದು ಮುಂಬರುವ SUV ಯ ಚಾಲನಾ ಅನುಭವವನ್ನು ಖಂಡಿತವಾಗಿಯೂ ಉನ್ನತೀಕರಿಸುವ ಒಂದು ವೈಶಿಷ್ಟ್ಯವಾಗಿದೆ.

ದೊಡ್ಡ ಪನೊರಮಿಕ್ ಸನ್‌ರೂಫ್
ಭಾರತೀಯ ಮಾರುಕಟ್ಟೆಯು ಹೆಚ್ಚಿನ ಪ್ರಮಾಣದಲ್ಲಿ ಸನ್‌ರೂಫ್‌ಗಳನ್ನು ಇಷ್ಟಪಡುತ್ತದೆ. ಈ ವೈಶಿಷ್ಟ್ಯದ ಕಡೆಗೆ ಬಾಂಧವ್ಯವು ತುಂಬಾ ಹೆಚ್ಚಿದ್ದು, ಗ್ರಾಂಡ್ ವಿಟಾರಾ ತನ್ನ ವಿಭಾಗದಲ್ಲಿ ಅತಿದೊಡ್ಡ ಸನ್‌ರೂಫ್ ಅನ್ನು ಹೊಂದಿರಲಿಕದೆ ಎಂದು ಮಾರುತಿ ಸುಜುಕಿ ಹೇಳಿಕೊಂಡಿದೆ.

ಗ್ರ್ಯಾಂಡ್ ವಿಟಾರಾ ಎಸ್‌ಯುವಿಯು ಮಾರುತಿ ಸುಜುಕಿ ಕಂಪನಿಯ ಇದುವರೆಗಿನ ಕಾರು ಮಾದರಿಗಳಲ್ಲಿಯೇ ಹಲವು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಇತ್ತೀಚೆಗೆ ಈ ಹೊಸ ಕಾರಿಗೆ ಮತ್ತಷ್ಟು ಐಷಾರಾಮಿ ಲುಕ್ ನೀಡಲು ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡ ಆಕ್ಸೆಸರಿಸ್ ಪ್ಯಾಕೇಜ್ ಸಿದ್ದಪಡಿಸಿದೆ.

ಹೊಸ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ಹಲವಾರು ಹೊಸ ಸ್ಟ್ಯಾಂಡರ್ಡ್ ವೈಷಿಶಿಷ್ಟ್ಯತೆಗಳೊಂದಿಗೆ ಎನಿಗ್ಮ್ಯಾಕ್ಸ್ ಎಕ್ಸ್ ಮತ್ತು ಎನಿಗ್ನ್ಯಾಕ್ಸ್ ಕಲೆಕ್ಷನ್ ಎನ್ನುವ ಎರಡು ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸುತ್ತಿದ್ದು, ಹೊಸ ಕಾರು ಮುಂಬರುವ ಸೆಪ್ಟೆಂಬರ್ ಕೊನೆಯಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಎನಿಗ್ನ್ಯಾಕ್ಸ್ ಕಲೆಕ್ಷನ್ ಆಕ್ಸೆಸರಿಸ್‌ನಲ್ಲಿ ಹೆಡ್‌ಲೈಟ್ ಸರೌಂಡ್‌ಗಳು, ಸೈಡ್ ಮೋಲ್ಡಿಂಗ್‌ಗಳು, ಫ್ರಂಟ್ ಮತ್ತು ರಿಯರ್ ಬಂಪರ್ ಗಾರ್ನಿಶ್‌ಗಳು, ರಿಯರ್ ಸ್ಕಿಡ್ ಪ್ಲೇಟ್ ಮತ್ತು ಡೋರ್ ವೈಸರ್‌ಳಲ್ಲಿ ಸ್ಮೊಕ್ಡ್-ಎಫೆಕ್ಟ್ ಕ್ರೋಮ್ ಟ್ರಿಮ್, ಮುಂಭಾಗದ ಸ್ಕೀಡ್ ಪ್ಲೇಟ್, ಎಲ್ಲಾ ಹವಾಮಾನಕ್ಕೂ ಒದಗಿಕೊಳ್ಳುವ 3ಡಿ ಮ್ಯಾಟ್‌ಗಳು, ರಿಫ್ಲೆಕ್ಟರ್ ಡೋರ್ ಸಿಲ್ ಗಾರ್ಡ್‌ಗಳು, ಪ್ರೀಮಿಯಂ ಕಾಪರ್ ಫಿನಿಶ್ ಸೀಟ್ ಕವರ್‌ಗಳು ಮತ್ತು ಮಾರ್ಬಲ್-ಟೆಕ್ಸ್ಚರ್ಡ್ ಡ್ಯಾಶ್‌ಬೋರ್ಡ್ ಟ್ರಿಮ್ ನೀಡಲಾಗುತ್ತದೆ.

ಎನಿಗ್ಮ್ಯಾಕ್ಸ್ ಎಕ್ಸ್ ಆಕ್ಸೆಸರಿಸ್‌ನಲ್ಲಿ ಕಪ್ಪು ಮತ್ತು ಕ್ರೋಮ್ ಸೈಡ್ ಮೋಲ್ಡಿಂಗ್‌ಗಳು ಮತ್ತು ರಿಯರ್ ಫಾಕ್ಸ್ ಸ್ಕಿಡ್ ಪ್ಲೇಟ್, ಕ್ರೋಮ್ ಟೈಲ್‌ಗೇಟ್ ಗಾರ್ನಿಶ್ ಮತ್ತು ಹೆಡ್‌ಲೈಟ್‌ಗಳು ಮತ್ತು ಹಿಂಭಾಗದ ಬಂಪರ್ ಲೈಟ್‌ಗಳಿಗಾಗಿ ಬ್ಲ್ಯಾಕ್ ಸರೌಂಡ್ ನೀಡಲಾಗಿದ್ದು, ಡೋರ್ ವೈಸರ್‌ಗಳು, ಕಪ್ಪು ಬಣ್ಣದ ರಿಯರ್ ವ್ಯೂ ಮಿರರ್ ಗಾರ್ನಿಶ್, ಕಪ್ಪು/ಕಂದು ಬಣ್ಣದ ಲೆಥೆರೆಟ್ ಸೀಟ್ ಕವರ್‌ಗಳು, ಕಾರ್ಪೆಟ್ ಮ್ಯಾಟ್ಸ್, ಡೋರ್ ಸಿಲ್ ಗಾರ್ಡ್‌ಗಳು ಮತ್ತು ಡ್ಯಾಶ್‌ಬೋರ್ಡ್ ಟ್ರಿಮ್ ಪೀಸ್‌ಗಳಲ್ಲಿ ಲಕ್ಸ್ ಡಾನ್ ವುಡ್ ಫಿನಿಶ್ ಅನ್ನು ಒಳಗೊಂಡಿರುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಇದೀಗ ಇದರ ಬುಕಿಂಗ್ ಆರಂಭದ ಬಳಿಕ ಅತಿ ಕಡಿಮೆ ಸಮಯದಲ್ಲೇ 20,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಗಳಿಸಿದೆ. ಈ ಮೂಲಕ ಶೇ 50ರಷ್ಟು ಬುಕಿಂಗ್‌ಗಳನ್ನು 1.5L ಇಂಟಲಿಜೆಂಟ್ ಎಲೆಕ್ಟ್ರಿಕ್ ಹೈಬ್ರಿಡ್ ರೂಪಾಂತರ ಪಡೆದುಕೊಂಡಿದೆ. ಇದು ಡ್ಯುಯಲ್ ಪವರ್ ಸಿಸ್ಟಮ್ - ಎಲೆಕ್ಟ್ರಿಕ್ ಮೋಟಾರ್ ಮತ್ತು ಆಂತರಿಕ ದಹನಕಾರಿ ಎಂಜಿನ್‌ನೊಂದಿಗೆ ಬರುತ್ತದೆ.